Vastu Tips: ಆರ್ಥಿಕ ಮುಗ್ಗಟ್ಟು, ಪ್ರಗತಿ ಕಾಣದಿರಲು ಇವೇ ಕಾರಣ!
ಎಷ್ಟೇ ಪ್ರಯತ್ನಪಟ್ಟರೂ ಜೀವನದಲ್ಲಿ ಸಮಸ್ಯೆಗಳು ತಲೆದೋರುತ್ತಲೇ ಇದ್ದರೆ, ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇದ್ದರೆ ಅದಕ್ಕೆ ಗ್ರಹಚಾರಗಳು ಮಾತ್ರ ಕಾರಣವಾಗಿರುವುದಿಲ್ಲ. ಅದಕ್ಕೆ ನಿಮ್ಮ ಕೆಲವು ತಪ್ಪುಗಳೂ ಇರುತ್ತವೆ. ಮನೆಯಲ್ಲಿ ನಾವು ಪ್ರತಿ ನಿತ್ಯ ಒಂದಿಲ್ಲೊಂದು ತಪ್ಪುಗಳನ್ನು ಮಾಡುತ್ತಲಿರುತ್ತೇವೆ. ಹೀಗಾಗಿ ವಾಸ್ತು ಶಾಸ್ತ್ರದ ಅನುಸಾರ ಕೆಲವು ನಿಯಮ ಪಾಲಿಸಿದರೆ ಆರ್ಥಿಕ ತೊಂದರೆಯಿಂದ ಪಾರಾಗಬಹುದು.
ಎಲ್ಲರಿಗೂ ಜೀವನದಲ್ಲಿ (Life) ಮುಂದೆ ಬರಬೇಕು, ತಮ್ಮದೇ ಆದ ಆರ್ಥಿಕ ಭದ್ರತೆಯನ್ನು (Financial Security) ಹೊಂದಬೇಕು, ಎಲ್ಲರಿಗಿಂತಲೂ ಉತ್ತಮವಾಗಿ ಬಾಳಬೇಕು ಎಂದು ಬಯಸುವುದು ಸಾಮಾನ್ಯ. ಇದಕ್ಕಾಗಿ ಅವರು ವರ್ಷವಿಡೀ ಶ್ರಮವನ್ನು ಹಾಕುತ್ತಾರೆ, ಹಾಕುತ್ತಲೂ ಇರುತ್ತಾರೆ. ಜೊತೆಗೆ ತಮ್ಮ ಮನೆಯವರನ್ನು ಸುಖದ ಸುಪ್ಪತ್ತಿಗೆತಲ್ಲಿಡಬೇಕು, ಅವರು ಕೇಳಿದ್ದನ್ನೆಲ್ಲ ಕೊಡಿಸಬೇಕು ಎಂಬ ಮನಸ್ಥಿತಿಯನ್ನೂ ಮನೆಯ ಯಜಮಾನ/ಯಜಮಾನಿ ಹೊಂದಿರುತ್ತಾರೆ. ಆದರೆ, ಈ ಕನಸುಗಳು ಈಡೇರಬೇಕೆಂದರೆ ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿರಬೇಕಾಗುತ್ತದೆ. ಆದರೆ, ಏನೇ ಮಾಡಿದರೂ, ಎಷ್ಟೇ ಪ್ರಯತ್ನಪಟ್ಟರೂ ಇದರಲ್ಲಿ ಪ್ರಗತಿಯನ್ನು ಕಾಣಲು ಆಗುವುದಿಲ್ಲ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳೂ ಕಾರಣವಾಗುತ್ತವೆ. ಮನೆಯಲ್ಲಿ (Home) ಕೆಲವು ನಿಯಮಗಳನ್ನು ಅನುಸರಿಸಿದರೆ ಇವುಗಳಿಂದ ಪಾರಾಗಬಹುದಾಗಿದೆ. ನಮಗೆ ಸಕಾರಾತ್ಮಕ (Possitive) ಶಕ್ತಿ ಹರಿದಾಡಬೇಕೆಂದರೆ, ಎಲ್ಲ ರೀತಿಯಲ್ಲೂ ನಾವು ಪ್ರಗತಿಯನ್ನು (Progress) ಸಾಧಿಸಬಹುದಾಗಿದೆ. ಹಾಗಾದರೆ ಅದಕ್ಕೇನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ...
ಪೊರಕೆ (Broom)
ಹಿಂದೂ ಧರ್ಮದಲ್ಲಿ (Hindu Religion) ಪೊರಕೆಯನ್ನು ಲಕ್ಷ್ಮೀ ಮಾತೆ (Goddess Laxmi) ಎಂದು ಪರಿಗಣಿಸಲಾಗಿದೆ. ಲಕ್ಷ್ಮೀ ಮಾತೆಯೆಂದರೆ ಸುಖ, ಸಂಪತ್ತು, ಸಮೃದ್ಧಿ, ಐಶ್ವರ್ಯವನ್ನು ದಯಪಾಲಿಸುವ ಅಧಿದೇವತೆ. ಹೀಗಾಗಿ ಪೊರಕೆಯನ್ನು ಆರ್ಥಿಕ ಪರಿಸ್ಥಿತಿಗೆ ಸಂಬಂಧಪಟ್ಟಂತೆ ಬಹು ಮುಖ್ಯ ವಸ್ತು ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ (Vastu) ಅನುಸಾರ ಪೊರಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಹಲವು ನೀತಿ ನಿಯಮಗಳು ಇವೆ. ಅಂದರೆ, ಮನೆಯಲ್ಲಿ ಯಾರ ಕಣ್ಣಿಗೂ ಬೀಳದಂತೆ ಪೊರಕೆಯನ್ನು ಇಡಬೇಕು. ಅದು ನೇರವಾಗಿ ಯಾರ ದೃಷ್ಟಿಗೂ ಬೀಳಕೂಡದು. ಮನೆಯಲ್ಲಿ ಪೊರಕೆಯನ್ನು ನಿಲ್ಲಿಸಿ ಇಡಬಾರದು. ಇದರಿಂದ ಸಂಕಷ್ಟ ಎದುರಾಗುತ್ತದೆ. ಅಲ್ಲದೆ, ಸಂಜೆ ವೇಳೆಗೆ ಮನೆಯನ್ನು ಯಾವುದೇ ಕಾರಣಕ್ಕೂ ಗುಡಿಸಬಾರದು. ಈ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ಎಂದಿಗೂ ಯಾವುದೇ ಆರ್ಥಿಕ ಸಮಸ್ಯೆ ಎದುರಾಗದು.
ಪಾರಿವಾಳದ ಗೂಡು (Pigeon's nest)
ವಾಸ್ತು ಶಾಸ್ತ್ರದ ಪ್ರಕಾರ ಪಾರಿವಾಳದ ಗೂಡನ್ನು ಮನೆಯಲ್ಲಿ ನಿರ್ಮಿಸಲೇಬಾರದು. ಹೀಗೆ ಮಾಡಿದರೆ ನಿಮ್ಮ ಸಂಕಷ್ಟಕ್ಕೆ (Problems) ನೀವೇ ಕಾರಣರಾಗುತ್ತೀರಿ. ಇದು ಆರ್ಥಿಕ ತೊಂದರೆಯ ಸೂಚಕ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾರಿವಾಳವನ್ನು ರಾಹುವಿನ (Rahu) ಸಂಕೇತವೆಂದು ಪರಿಗಣಿಸಲಾಗಿದೆ.
ಇದನ್ನು ಓದಿ: ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..
ಮುಳ್ಳು ಸಸ್ಯಗಳು (Thorny plants)
ಮನೆ ಎಂದ ಮೇಲೆ ಹೂವಿಗೆ ಸಂಬಂಧಿಸಿದ ಗಿಡಗಳ ಸಹಿತ, ಶೋ ಗಿಡಗಳನ್ನು ಬೆಳೆಸಲಾಗುತ್ತದೆ. ಇದು ಆ ಮನೆಯ ಸಂತೋಷ, ಸಮೃದ್ಧಿಯ (Prosperity) ಪ್ರತೀಕವಾದರೂ ಕೆಲವು ಗಿಡಗಳನ್ನು ಮನೆಯಲ್ಲಿ ಬೆಳೆಯಲೇ ಬಾರದು. ವಾಸ್ತುವಿನ ಪ್ರಕಾರ, ಮನೆಯಲ್ಲಿ ಮುಳ್ಳಿನ ಸಸ್ಯಗಳನ್ನು ಬೆಳೆಸಿದ್ದರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ.
ಬಲೆಗಳು (Nets) ಮತ್ತು ಕಸ (Garbage) ಇರಬಾರದು
ಮನೆ ಶುಚಿಯಾಗಿದ್ದರೆ ಅಲ್ಲಿ ಎಂಥವರಿಗೂ ಖುಷಿ (Happy) ಕೊಡುತ್ತದೆ. ಹೀಗೆ ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸುತ್ತಾಳೆ. ಜೊತೆಗೆ ಸಂಪತ್ತಿನ ಒಡೆಯ ಕುಭೇರನ ಆಶೀರ್ವಾದ (Blessings) ಇರುತ್ತದೆ ಎಂದು ಹಿಂದೂ ಧರ್ಮಶಾಸ್ತ್ರದಲ್ಲಿ ಉಲ್ಲೇಖವಿದೆ. ಹೀಗಾಗಿ ಮನೆಯು ಶುಚಿಯಾಗಿರಬೇಕು. ಹೀಗಾಗಿ ಕಸ ಇಲ್ಲವೇ ಬಲೆಗಳು ಮನೆಯಲ್ಲಿ ಇರಲೇಬಾರದು. ಇವುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಹೀಗಾಗಿ ಕಾಲ ಕಾಲಕ್ಕೆ ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛ ಮಾಡಿ ಬಲೆಗಳನ್ನು ಸಹ ತೆಗೆದು ಹಾಕುವುದು ಉತ್ತಮ. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಾಣಬಹುದು.
ಇದನ್ನು ಓದಿ: ಈ 5 ರಾಶಿಯವರ ಉದ್ಯೋಗ, ವ್ಯಾಪಾರಕ್ಕೆ ಈಗ ಶುಕ್ರದೆಸೆ!
ಗೋಡೆಗಳು ಬಿರುಕು (Wall Crack) ಮೂಡಬಾರದು
ಮನೆಯ ಗೋಡೆಗಳು ಯಾವುದೇ ಕಾರಣಕ್ಕೂ ಬಿರುಕು ಬಿಟ್ಟಿರಬಾರದು. ಹೀಗಿದ್ದರೆ ಅಲ್ಲಿ ಲಕ್ಷ್ಮಿಯು ವಾಸ ಮಾಡಲು ಸಾಧ್ಯವೇ ಇಲ್ಲ. ಇದಲ್ಲದೆ, ನೀರನ್ನು (Water) ಸಂಪತ್ತಿನ ಸೂಚಕವೆಂದು ಪರಿಗಣಿಸಲಾಗಿದ್ದು, ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ನಲ್ಲಿಯಿಂದ ನೀರು ಸೋರುತ್ತಿದ್ದರೆ ಅಥವಾ ಸೀಲಿಂಗ್‌ನಲ್ಲಿ ನೀರು ಸೋರುತ್ತಿದ್ದರೆ ಅಂಥವರು ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮನೆಯನ್ನು ಸರಿಯಾಗಿಟ್ಟುಕೊಂಡು ಆರ್ಥಿಕ ಪರಿಸ್ಥಿತಿಯನ್ನು ಸರಿಮಾಡಿಕೊಳ್ಳಬಹುದಾಗಿದೆ.