Asianet Suvarna News Asianet Suvarna News

ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..

Astrology tips in Kannada: ಇದೇ ಮೇ 23ರಂದು ಶುಕ್ರ ಗ್ರಹ ಮೇಷ ರಾಶಿಗೆ ಪರಿವರ್ತನೆ ಹೊಂದಲಿದೆ. ಈ ಗೋಚಾರದಿಂದ ಅನೇಕ ರಾಶಿಗಳಿಗೆ ಶುಭ ಫಲ ದೊರಕಲಿದೆ. ಭೌತಿಕ ಸುಖ ಕಾರಕ ಗ್ರಹವಾಗಿರುವ ಶುಕ್ರ ಗ್ರಹದ ಗೋಚಾರದಿಂದ ಯಾವ್ಯಾವ ರಾಶಿಗೆ ಶುಭ ಫಲ ದೊರೆಯಲಿದೆ ಎಂಬುದನ್ನು ತಿಳಿಯೋಣ. 

Venus transit will give luck to these zodiac sign
Author
Bangalore, First Published May 11, 2022, 12:51 PM IST

ಗ್ರಹಗಳ (Planet) ಗೋಚಾರ ಸಹಜವಾದದ್ದು. ಗ್ರಹಗಳು ಅವುಗಳ ನಿಶ್ಚಿತ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪರಿವರ್ತನೆ ಹೊಂದುತ್ತಲೆ ಇರುತ್ತವೆ. ಈ ಗ್ರಹಗಳ ರಾಶಿ ಪರಿವರ್ತನೆ ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮವನ್ನು (Effect) ಉಂಟುಮಾಡುತ್ತದೆ. ಶುಕ್ರ (Venus) ಗ್ರಹವು ಸುಖ ಸಂತೋಷ ಐಷಾರಾಮಿ (Luxury) ಜೀವನದ ಕಾರಕ ಗ್ರಹವಾಗಿದೆ.

ಇದೇ ಮೇ 23ರಂದು ಶುಕ್ರ ಗ್ರಹವು ಮೀನ ರಾಶಿಯಿಂದ ಮೇಷ (Aries) ರಾಶಿಗೆ ಪ್ರವೇಶಿಸಲಿದೆ. ಶುಕ್ರ ಗ್ರಹವು ಐಷಾರಾಮಿ ಜೀವನವನ್ನು ನಡೆಸುವಂತೆ ಮಾಡುವ, ಭೌತಿಕ ಸುಖ ಕಾರಕ ಗ್ರಹವಾಗಿದೆ. ಹಾಗಾಗಿ ಈ ಗ್ರಹದ ಕೃಪೆ ಇದ್ದಾಗ ಎಲ್ಲಾ ವ್ಯಕ್ತಿಗಳು ಸುಖ ಮತ್ತು ಉತ್ತಮವಾದ ಜೀವನವನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೇ ದಾಂಪತ್ಯ ಜೀವನದಲ್ಲಿ ಮತ್ತುಷ್ಟು ಮಧುರತೆ ಉಂಟಾಗಲು ಶುಕ್ರ ಗ್ರಹವೇ ಕಾರಣವಾಗಿದೆ. ಈ ಬಾರಿ ಮೇಷ ರಾಶಿಗೆ ಪರಿವರ್ತನೆ ಹೊಂದುವ ಶುಕ್ರ ಗ್ರಹದಿಂದಾಗಿ ಈ ಐದು ರಾಶಿಯವರಿಗೆ ಶುಭಫಲ ದೊರೆಯಲಿದೆ. ಹಾಗಾದರೆ ಆ ರಾಶಿಗಳು (Zodiac sign) ಯಾವುವು ಎಂಬುದರ ಬಗ್ಗೆ ತಿಳಿಯೋಣ...

ಮೇಷ ರಾಶಿ (Aries)
ಈ ರಾಶಿಯ ಲಗ್ನ ಭಾವದಲ್ಲಿ ಗೋಚಾರವಾಗುವ ಶುಕ್ರ ಗ್ರಹವು ಉತ್ತಮವಾದ ಪ್ರಭಾವವನ್ನು ಬೀರಲಿದೆ. ಈ ಅವಧಿಯಲ್ಲಿ ಹೊಸ ಅವಕಾಶಗಳು (Opportunities) ಸಿಗಲಿದ್ದು, ಮಹತ್ವಾಕಾಂಕ್ಷೆಗಳು ಈಡೇರಲಿವೆ.  ಸುತ್ತಮುತ್ತಲಿನವರ ಬಗ್ಗೆ ಸಂವೇದನಾ ಗುಣವನ್ನು ಹೊಂದುತ್ತೀರಿ. ಅಷ್ಟೇ ಅಲ್ಲದೆ ಅವರಾಡುವ ಮಾತುಗಳನ್ನು ಸಹನೆಯಿಂದ ಕೇಳಿಸಿಕೊಳ್ಳುವ ಸ್ವಭಾವ ಈ ಅವಧಿಯಲ್ಲಿ ಹೆಚ್ಚು ಕಂಡು ಬರಲಿದೆ. ಕುಟುಂಬ (Family) ಮತ್ತು ಸ್ನೇಹಿತರ (Friend) ಜತೆ ಉತ್ತಮ ಬಾಂಧವ್ಯ ಹೊಂದಲಿದ್ದು, ಅವರ ಕಾಳಜಿಯ (Care) ಬಗ್ಗೆ ಹೆಚ್ಚಿನ ಗಮನವಿರಲಿದೆ. ಈ ರಾಶಿಯ ವ್ಯಕ್ತಿಗಳ ದಾಂಪತ್ಯ ಜೀವನ ಮತ್ತಷ್ಟು ಮಧುರವಾಗಿತ್ತು ದಂಪತಿಗಳಲ್ಲಿ ಪ್ರೇಮಭಾವ ಹೆಚ್ಚಲಿದೆ. ಪ್ರೇಮ ವಿವಾಹಕ್ಕೂ ಈ ಸಮಯ ಅನುಕೂಲಕರವಾಗಿದೆ.

ಮಿಥುನ ರಾಶಿ (Gemini)
ಶುಕ್ರಗ್ರಹದ ಗೋಚಾರದಿಂದ ಈ ರಾಶಿಯವರಿಗೆ ಆದಾಯ (Income) ಹೆಚ್ಚಲಿದ್ದು ಹಣಕಾಸಿನ (Finance) ಲಾಭ ಉಂಟಾಗಲಿದೆ. ಈ ರಾಶಿಯವರಿಗೆ ಒಂದಕ್ಕಿಂತ ಹೆಚ್ಚಿನ ಕಡೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಸಾಮಾಜಿಕವಾಗಿ ಹೆಚ್ಚು ಸಕ್ರಿಯರಾಗಿದ್ದು ಹೊಸ ಹೊಸ ಸ್ನೇಹಿತರನ್ನು ಪಡೆಯಲಿದ್ದಾರೆ. ಸಂತಾನಕ್ಕಾಗಿ ಅಪೇಕ್ಷಿಸುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದಲ್ಲದೆ (Spend) ಅವರ ಇಷ್ಟ ಕಷ್ಟಗಳನ್ನು ತಿಳಿಯುವಂತಾಗುತ್ತದೆ. ಈ ಅವಧಿಯು ಕೌಟುಂಬಿಕ ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ತರಲಿದೆ.

ಇದನ್ನು ಓದಿ: ಈ 5 ರಾಶಿಯವರ ಉದ್ಯೋಗ, ವ್ಯಾಪಾರಕ್ಕೆ ಈಗ ಶುಕ್ರದೆಸೆ!

ಸಿಂಹ ರಾಶಿ (Leo)
ಶುಕ್ರ ಗ್ರಹವು ಈ ರಾಶಿಯವರ ಭಾಗ್ಯ ಭಾವದಲ್ಲಿ ಗೋಚರವಾಗಲಿದೆ. ಹಾಗಾಗಿ ಈ ರಾಶಿಯವರಿಗೆ ಶುಕ್ರಗ್ರಹದ ಕೃಪೆಯಿಂದ ಕುಟುಂಬದಲ್ಲಿ ಅನೇಕ ಅನುಕೂಲಗಳು ಆಗುತ್ತವೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ  ದಕ್ಷತೆಯನ್ನು (Effiency) ತೋರಿಸಲು ಅನೇಕ ಅವಕಾಶಗಳು ಸಿಗುತ್ತವೆ. ಇದರಿಂದ ಹೆಚ್ಚಿನ ಪ್ರಶಂಸೆಗಳು ದೊರಕುತ್ತವೆ. ವೃತ್ತಿ ಜೀವನದಲ್ಲಿ ಮತ್ತಷ್ಟು ಮುಂದುವರಿಯಲು ಈ ಅವಧಿಯು ಅತ್ಯಂತ ಪ್ರಶಸ್ತ ವಾಗಿರಲಿದೆ. ಹೊಸ ಉದ್ಯೋಗಕ್ಕಾಗಿ ಪ್ರೊಮೋಷನ್‌ಗಾಗಿ (Promotion) ಇಚ್ಚಿಸುತ್ತಿರುವವರಿಗೆ ತುಂಬ ಅನುಕೂಲಕರವಾಗಿದೆ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಮಯವನ್ನು ಕಳೆಯಲು ಶುಕ್ರ ಗ್ರಹದ ಗೋಚಾರವು  ಉತ್ತಮವಾಗಿದೆ. ಈ ಅವಧಿಯಲ್ಲಿ ಹಣ ಮತ್ತು ಸಂಪತ್ತು ದೊರಕುವ ಸಾಧ್ಯತೆಯೂ ಹೆಚ್ಚಿದೆ.

ಮಕರ ರಾಶಿ (Capricorn)
ಶುಕ್ರ ಗ್ರಹವು ಈ ರಾಶಿಯವರ ಚತುರ್ಥ ಭಾವದಲ್ಲಿ ಸ್ಥಿತವಾಗಿರಲಿದೆ. ಶುಕ್ರಗ್ರಹದ ಈ ವಿಚಾರವು ಮಕರ ರಾಶಿಯವರಿಗೆ ಜೀವನದ ಪ್ರತಿ ಹಂತದಲ್ಲೂ ಸಕಾರಾತ್ಮಕ (Positive) ಪರಿಣಾಮವನ್ನು ಬೀರುತ್ತದೆ. ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ಸಿಗಲಿದೆ . ಶುಕ್ರಗ್ರಹದ ಗೋಚಾರದ ಈ ಅವಧಿಯಲ್ಲಿ ವಾಹನ ಖರೀದಿಸುವ ಯೋಗವೂ ಸಹ ಇದೆ. ಪ್ರೇಮ ವಿವಾಹವಾಗುವವರಿಗೆ ಈ ಸಮಯ ಅತ್ಯಂತ ಅನುಕೂಲಕರವಾಗಿದೆ. ವಿವಾಹ ಆಗಿರುವವರಿಗೆ ಈ ಸಮಯವು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. 

ಇದನ್ನು ಓದಿ: ರುದ್ರಾಕ್ಷಿಯಿಂದ ಸುಖ – ಸಂಪತ್ತು ಆರೋಗ್ಯ.. ಯಾವ ವಿಧ ನಿಮಗೆ ಒಳ್ಳೆಯದು?

ಕುಂಭ ರಾಶಿ (Aquarius)
ಶುಕ್ರ ಗ್ರಹವು ಈ ರಾಶಿಯವರ ತೃತೀಯ ಭಾವದಲ್ಲಿ ಗೋಚಾರವಾಗಲಿದೆ. ಈ ಅವಧಿಯಲ್ಲಿ (Time) ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೆಸರು ಗಳಿಸುವುದಲ್ಲದೆ ಪದೋನ್ನತಿ ಯಾಗುವ ಸಾಧ್ಯತೆಯೂ ಇರುತ್ತದೆ. ಮಾಧ್ಯಮಗಳಲ್ಲಿ (Media) ಕೆಲಸ ಮಾಡುತ್ತಿರುವವರಿಗೆ ಈ ಸಮಯದಲ್ಲಿ ಹೆಚ್ಚಿನ ಮನ್ನಣೆ ಸಿಗಲಿದೆ. ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಯಾತ್ರೆಗೆ ತೆರಳುವ ಸಾಧ್ಯತೆಯೂ ಇದೆ. ಅಣ್ಣ ತಂಗಿಯರೊಂದಿಗಿನ ಸಂಬಂಧ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಈ ರಾಶಿಯವರು ಕಮ್ಯೂನಿಕೇಷನ್ ತುಂಬಾ ಚೆನ್ನಾಗಿರಲಿದೆ. ಹಾಗಾಗಿ ಸುತ್ತಮುತ್ತಲಿನವರ ಮನಸ್ಸನ್ನು ಗೆಲ್ಲಲು ಸಹಾಯಕವಾಗುತ್ತವೆ.

Follow Us:
Download App:
  • android
  • ios