ಕಾಗೆ ಕಣ್ಣು, ಗೂಬೆ ಕಣ್ಣು ಮಕ್ಕಳ ಮೇಲೆ ಬೀಳುತ್ತೆ, ದೃಷ್ಟಿ ತೆಗೆಯಬೇಕು ಅಷ್ಟೇ!
ಅನೇಕ ಬಾರಿ ಮಕ್ಕಳು ಇದ್ದಕ್ಕಿದ್ದಂತೆ ಹುಷಾರಿ ತಪ್ಪುತ್ತವೆ. ಮಕ್ಕಳ ಗಲಾಟೆ ಜಾಸ್ತಿಯಾಗಿರುತ್ತದೆ. ಏನು ಮಾಡಿದ್ರೂ ಮಕ್ಕಳ ಹಠ ನಿಯಂತ್ರಣಕ್ಕೆ ಬರ್ತಿರೋದಿಲ್ಲ. ಇದಕ್ಕೆ ಮಕ್ಕಳ ಮೇಲೆ ಕೆಟ್ಟ ಕಣ್ಣು ಬಿದ್ದಿರೋದು ಕಾರಣವಾಗಿರಬಹುದು.
ನಮ್ಮ ಸುತ್ತ ಎರಡು ರೀತಿಯ ಶಕ್ತಿಗಳಿವೆ. ಒಂದು ಸಕಾರಾತ್ಮಕ ಶಕ್ತಿ ಮತ್ತೊಂದು ನಕಾರಾತ್ಮಕ ಶಕ್ತಿ. ಮಗು ಅಥವಾ ಹಿರಿಯರು ನಕಾರಾತ್ಮಕ ಶಕ್ತಿಯಲ್ಲಿ ಮೇಲುಗೈ ಸಾಧಿಸಿದಾಗ ಅದನ್ನು ದೃಷ್ಟಿ ಬೀಳುವುದು ಎನ್ನುತ್ತಾರೆ. ದೃಷ್ಟಿ ಬಿದ್ದಾಗ ಚಿಕ್ಕ ಮಕ್ಕಳು ಹೆಚ್ಚು ಅಳಲು ಶುರು ಮಾಡುತ್ತಾರೆ. ಕೆಲ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕೆಲವು ಮಕ್ಕಳು ಕಿರಿಕಿರಿ ಅನುಭವಿಸುತ್ತಾರೆ. ಮಕ್ಕಳು ಯಾಕೆ ಅಳ್ತಿದ್ದಾರೆ ಎಂಬುದು ಪಾಲಕರಿಗೆ ತಿಳಿಯುವುದಿಲ್ಲ. ಮಕ್ಕಳ ಅಳು ನಿಲ್ಲಿಸಲು ಅಥವಾ ಬೇರೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಮತ್ತೆ ಕೆಲವರು ದೃಷ್ಟಿ ಬಿದ್ದಿದೆ ಎಂಬ ಕಾರಣಕ್ಕೆ ತಮ್ಮದೆ ಉಪಾಯ ಮಾಡ್ತಾರೆ. ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಜ್ಯೋತಿಷ್ಯಶಾಸ್ತ್ರದಲ್ಲಿ ದೃಷ್ಟಿ ಬೀಳುವುದಕ್ಕೆ ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ. ನಿಮ್ಮ ಮನೆಯಲ್ಲಿ ಮಕ್ಕಳಿಗೆ ದೃಷ್ಟಿ ಬಿದ್ದಿದ್ದರೆ ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.
ಮಕ್ಕಳಿ (Children) ಗೆ ದೃಷ್ಟಿ ಬಿದ್ದರೆ ಹೀಗೆ ಮಾಡಿ :
ಒಣ ಮೆಣಸು (Dry Pepper), ಸಾಸಿವೆ (Mustard) : ಚಿಕ್ಕ ಮಕ್ಕಳು ಬಹುಬೇಗ ದೃಷ್ಟಿ ದೋಷಕ್ಕೆ ಬಲಿಯಾಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಮಕ್ಕಳು ಮುದ್ದಾಗಿರುವ ಕಾರಣ ಎಲ್ಲರ ದೃಷ್ಟಿ ಅವರ ಮೇಲೆ ಹೋಗುತ್ತದೆ. ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎನ್ನಿಸಿದ್ರೆ ಎರಡು ಒಣ ಮೆಣಸಿನಕಾಯಿ, ಸ್ವಲ್ಪ ಉಪ್ಪು, ಸ್ವಲ್ಪ ಸಾಸಿವೆಯನ್ನು ತೆಗೆದುಕೊಂಡು, ಪರಿಹಾರ ಕಂಡುಕೊಳ್ಳಬಹುದು, ಮೆಣಸಿನ ಕಾಯಿ, ಸಾಸಿವೆ ಮತ್ತು ಉಪ್ಪನ್ನು ಕೈನಲ್ಲಿ ಹಿಡಿದು ಮುಗಿನಿ ತಲೆಯಿಂದ ಕಾಲಿನವರೆಗೆ ಮೂರು ಸುತ್ತು ಹಾಕಿ. ನಂತ್ರ ಇದನ್ನು ಬೆಂಕಿಯಲ್ಲಿ ಸುಡಬೇಕು. ಒಂದೊಂದೇ ಪದಾರ್ಥ ಸುಡ್ತಾ ಬಂದಂತೆ ಮಗುವಿನ ಮೇಲೆ ಬಿದ್ದಿರುವ ದೃಷ್ಟಿ ಕಡಿಮೆಯಾಗ್ತಾ ಬರುತ್ತದೆ.
ಹತ್ತಿ ಬತ್ತಿ : ಮಕ್ಕಳಿಗೆ ದುಷ್ಟಿ ಬಿದ್ದಿದ್ದರೆ ಅದರಿಂದ ರಕ್ಷಿಸಲು ಹತ್ತಿ ಬತ್ತಿಯನ್ನು ಸಾಸಿವೆ ಎಣ್ಣೆಯಲ್ಲಿ ಅದ್ದಿ. ನಂತರ ಆ ಬತ್ತಿಯನ್ನು ಮಗುವಿನ ಮೇಲಿನಿಂದ ಕೆಳಗಿನವರೆಗೆ ಮೂರು ಬಾರಿ ಸುತ್ತು ಹಾಕಿ. ನಂತ್ರ ಬತ್ತಿಯನ್ನು ಸುಡಿ. ಬತ್ತಿ ಸಂಪೂರ್ಣವಾಗಿ ಉರಿದರೆ ದೃಷ್ಟಿ ದೋಷ ಕಡಿಮೆಯಾಯ್ತು ಎಂದರ್ಥ.
ಶ್ರಾವಣ ಮಾಸದಲ್ಲಿ ಈ ಐದು ರಾಶಿಗಳ ಮೇಲೆ ಶಿವನ ಕೃಪೆ ಇರಲಿದೆ..
ದೃಷ್ಟಿ ಬಳಿಯಲು ಇದು ಒಳ್ಳೆ ಸಮಯ : ದೃಷ್ಟಿ ಬಳಿಯಲು ಸರಿಯಾದ ಸಮಯ ರಾತ್ರಿ ಎಂಬುದನ್ನು ನೆನಪಿನಲ್ಲಿಡಿ. ಯಾವುದೇ ಪಾರ್ಟಿ, ಫಂಕ್ಷನ್ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಿ ಬಂದರೂ ಮನೆಗೆ ಬಂದ ತಕ್ಷಣ ಮಕ್ಕಳಿಗೆ ದೃಷ್ಟಿ ತೆಗೆಯಿರಿ. ಇದರಿಂದ ಮಕ್ಕಳು ತೊಂದರೆ ಅನುಭವಿಸುವುದು ತಪ್ಪುತ್ತದೆ.
ವ್ಯಾಪಾರಕ್ಕೆ ಕಣ್ಣು ಬಿದ್ರೆ ಹೀಗೆ ಮಾಡಿ : ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರ ಇದ್ದಕ್ಕಿದ್ದಂತೆ ಸ್ಥಗಿತಗೊಂಡರೆ ನಿಂಬೆ ಹಣ್ಣು ಮತ್ತು ಮೆಣಸುಗಳನ್ನು ಅಂಗಡಿಯಲ್ಲಿ ನೇತುಹಾಕಬೇಕು. ದೃಷ್ಟಿಯ ಜೊತೆಗೆ ಅಲ್ಲಿರುವ ವಾಸ್ತು ದೋಷಗಳೂ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಟ್ರಿಕ್ ಅನ್ನು ಮಂಗಳವಾರ ಮತ್ತು ಶನಿವಾರ ಮಾತ್ರ ಮಾಡಬೇಕು.
ಇದಲ್ಲದೆ, ವ್ಯವಹಾರದಲ್ಲಿನ ದೋಷವನ್ನು ತೆಗೆದುಹಾಕಲು, ನಾಲ್ಕು ಕಬ್ಬಿಣದ ಮೊಳೆಗಳನ್ನು ತೆಗೆದುಕೊಂಡು ಕೆಲಸದ ಸ್ಥಳದಲ್ಲಿ ಸುತ್ತಿಗೆಯಿಂದ ಹೊಡೆಯಿರಿ. ಇದರೊಂದಿಗೆ ಕೆಟ್ಟ ಕಣ್ಣಿನ ಸಮಸ್ಯೆ ಕೊನೆಗೊಳ್ಳುತ್ತದೆ.
ಚಾಣಕ್ಯ ನೀತಿ: ಈ ನಾಲ್ಕು ತಪ್ಪುಗಳಿಂದ ದೂರವಿದ್ರೆ ಯಶಸ್ಸು ನಿಮ್ಮದೇ..
ಗರ್ಭಿಣಿಯರು ಏನು ಮಾಡ್ಬೇಕು ? : ಮಕ್ಕಳು, ವ್ಯಾಪಾರ ಮಾತ್ರವಲ್ಲದೆ ಅನೇಕ ಬಾರಿ ಗರ್ಭಿಣಿಯರ ಮೇಲೆ ಕಣ್ಣು ಬೀಳುತ್ತದೆ. ಗರ್ಭಿಣಿಗೆ ದೃಷ್ಟಿ ಬಿದ್ದಿದೆ ಎಂದಾದರೆ ಹಸುವಿನ ಸಗಣಿಯ ದೀಪವನ್ನು ತಯಾರಿಸಿ. ಅದರ ಮೇಲೆ ಬೆಲ್ಲದ ಚೂರನ್ನು ಹಾಕಿ, ಹತ್ತಿಯ ಬತ್ತಿಯಲ್ಲಿ ದೀಪವನ್ನು ಹಚ್ಚಿ. ಅದನ್ನು ಬಾಗಿಲಿನ ಬಳಿ ಇರಿಸಿ. ಹೀಗೆ ಮಾಡುವುದರಿಂದ ದೃಷ್ಟಿ ಸಮಸ್ಯೆ ಕಡಿಮೆಯಾಗುತ್ತದೆ.