Asianet Suvarna News Asianet Suvarna News

ಚಾಣಕ್ಯ ನೀತಿ: ಈ ನಾಲ್ಕು ತಪ್ಪುಗಳಿಂದ ದೂರವಿದ್ರೆ ಯಶಸ್ಸು ನಿಮ್ಮದೇ..

ಚಾಣಕ್ಯ ನೀತಿಯಲ್ಲಿ ಜೀವನ ಪಾಠಗಳು ಸಾಕಷ್ಟಿವೆ. ಅದರಲ್ಲಿ ಯಶಸ್ಸು ಗಳಿಸಲು ಬೇಕಾದ ಚಾಕಚಕ್ಯತೆ, ಗುಣಗಳನ್ನು ಕೂಡಾ ಹೇಳಲಾಗಿದೆ. ಅಂದ ಹಾಗೆ ಯಶಸ್ಸು ಬೇಕಂದ್ರೆ ಜೀವನದಲ್ಲಿ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. 

Chanakya Niti To get success in your life never do these mistakes skr
Author
Bangalore, First Published Jul 27, 2022, 12:58 PM IST

ಇಂದಿನ ಬದುಕಿನ ಓಟದಲ್ಲಿ ಎಲ್ಲರೂ ಬಿರುಸಿನಿಂದ ಮುನ್ನಡೆಯಲು ಬಯಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಸುತ್ತಲಿನವರಿಗಿಂತ ಮುಂದೆ ಸಾಗಲು ಬಯಸುತ್ತಾರೆ. ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಬಯಸುತ್ತಾರೆ. ಇದಕ್ಕಾಗಿ ಪ್ರಯತ್ನ ಮಾಡಿಯೂ ವೈಫಲ್ಯ ಎದುರಾದಾಗ ಎಲ್ಲಿ ಎಡವಿದೆವು ಎಂದು ಯೋಚಿಸುತ್ತಾರೆ. ಪ್ರತಿಯೊಂದು ಸೋಲು ಕೂಡಾ ವೈಯಕ್ತಿಕ ತಪ್ಪುಗಳಿಂದಲೇ ಉಂಟಾಗುತ್ತದೆ ಎಂಬುದನ್ನು ಹೆಚ್ಚಿನವರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಆದರೆ, ಅದೇ ಸತ್ಯ. 

ನಮ್ಮ ಕೆಲವು ತಪ್ಪುಗಳಿಂದ ಮಾತ್ರ ನಾವು ವೈಫಲ್ಯವನ್ನು ಎದುರಿಸುತ್ತೇವೆ ಎನ್ನುತ್ತಾರೆ ಚಾಣಕ್ಯ. ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಲು ಬಯಸುತ್ತಾರೆ. ಅವರು ತಮ್ಮ ಕನಸುಗಳನ್ನು ನನಸಾಗಿಸಲು ಅವಿರತವಾಗಿ ಪ್ರಯತ್ನಿಸುತ್ತಾರೆ. ಆದಾಗ್ಯೂ, ಪ್ರತಿಯೊಬ್ಬರೂ ಯಶಸ್ಸನ್ನು ಪಡೆಯುವುದಿಲ್ಲ ಮತ್ತು ಈ ಕಾರಣದಿಂದಾಗಿ, ನಿರಾಶೆ ಉಂಟಾಗುತ್ತದೆ. ಆದರೆ ತಿಳಿಯದೆ ತಪ್ಪು ಮಾಡಿದ್ದೇವೆ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಇದು ಯಶಸ್ಸಿನ ಹಾದಿಯಲ್ಲಿ ಅಡ್ಡಿಯಾಗುತ್ತದೆ. ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗಲು ಬಯಸಿದರೆ, ಚಾಣಕ್ಯನ ನೀತಿಗಳನ್ನು ಅನುಸರಿಸಿ. ಅದರಂತೆ ಯಶಸ್ಸಿಗೆ ಹತ್ತಿರಾಗಲು ಈ ನಾಲ್ಕು ತಪ್ಪುಗಳಿಂದ(Mistakes) ದೂರವಿರಿ. 

ಅಳುಕಿನಿಂದ ದೂರವಿರಿ
ನಾವು ಯಶಸ್ವಿಯಾಗಬೇಕಾದರೆ ನಮ್ಮ ಮನಸ್ಸನ್ನು ನಾವು ಸಂಪೂರ್ಣವಾಗಿ ಯಶಸ್ಸಿನ ಕಡೆಗೆ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ಅಳುಕನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾನೆ. ನಿಮ್ಮ ಮನಸ್ಸಿನಲ್ಲಿ ವೈಫಲ್ಯ(failure)ದ ಭಯವಿದ್ದರೆ, ನೀವು ಎಂದಿಗೂ ನಿಮ್ಮ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಿಲ್ಲ. ಯಶಸ್ವಿ(Successful) ವ್ಯಕ್ತಿಯಾಗಲು, ನಿಮ್ಮ ಮನಸ್ಸಿನಲ್ಲಿರುವ ಭಯವನ್ನು ಮೊದಲು ತೆಗೆದು ಹಾಕಬೇಕು. ಅದರ ನಂತರ, ನೀವು ಯಶಸ್ವಿಯಾಗಲು ಬೇಕಾದ ಪೂರ್ಣ ಪರಿಶ್ರಮವನ್ನು ಹಾಕಬೇಕು. ಆಗ ನಿಮ್ಮ ಯಶಸ್ಸು ಖಚಿತ. ನೀವು ಕಷ್ಟಪಟ್ಟು ಕೆಲಸವನ್ನೇ ಮಾಡದಿದ್ದರೆ, ಹೇಗೆ ತಾನೇ ಯಶಸ್ವಿಯಾಗುತ್ತೀರಿ?

Nag Panchami 2022: ನಾಗರ ಹಾವಿನ ಕುರಿತ ಮೂಢನಂಬಿಕೆಗಳು ಒಂದೆರಡಲ್ಲ..

ಯೋಚಿಸದೇ ಮುನ್ನುಗ್ಗಬೇಡಿ
ಹೊಸದನ್ನು ಪ್ರಾರಂಭಿಸುವ ಮೊದಲು ನೀವು ಅದನ್ನು ಮಾಡಬಹುದೇ ಅಥವಾ ಇಲ್ಲವೇ ಎಂದು ಯಾವಾಗಲೂ ನಿಮ್ಮನ್ನು ಕೇಳಿಕೊಳ್ಳಿ. ಬೇರೆ ಯಾರೋ ಮಾಡಿದ್ದಾರೆಂದು ನೀವೂ ಮಾಡಲು ಹೋಗಬೇಡಿ. ಒಬ್ಬೊಬ್ಬರ ಪ್ರತಿಭೆ(talent), ಕೌಶಲ್ಯ ಒಂದೊಂದಿರುತ್ತದೆ. ಒಬ್ಬರಿಗೆ ಸುಲಭವಾದದ್ದು ಮತ್ತೊಬ್ಬರಿಗೆ ಕಷ್ಟವಾಗಬಹುದು. ಹಾಗಾಗಿ, ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ನಾನು ಈ ಕೆಲಸವನ್ನು ಮಾಡಬಹುದೇ, ನಾನು ಈ ಕೆಲಸವನ್ನು ಏಕೆ ಮಾಡುತ್ತಿದ್ದೇನೆ ಮತ್ತು ಫಲಿತಾಂಶ ಏನಾಗುತ್ತದೆ, ನಾನು ಈ ಕೆಲಸದಲ್ಲಿ ಯಶಸ್ವಿಯಾಗುತ್ತೇನೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ. ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಪರವಾಗಿ ಉತ್ತರವನ್ನು ನೀವು ಪಡೆದರೆ, ನೀವು ಕೆಲಸವನ್ನು ಪ್ರಾರಂಭಿಸಬಹುದು. ಯೋಚಿಸದೆ ಕೆಲಸ ಮಾಡುವುದು ಜೀವನದಲ್ಲಿ ಸೋಲನ್ನೇ ತರುತ್ತದೆ.

ಅರ್ಧಕ್ಕೆ ಬಿಡಬೇಡಿ
ನೀವು ಹೊಸ ಕೆಲಸವನ್ನು ಪ್ರಾರಂಭಿಸಿದಾಗ ಅದನ್ನು ಅಪೂರ್ಣವಾಗಿ ಬಿಡಬೇಡಿ. ಒಬ್ಬ ವ್ಯಕ್ತಿಯು ಯಾವಾಗಲೂ ತಪ್ಪುಗಳಿಂದ ಕಲಿಯುತ್ತಾನೆ ಮತ್ತು ಭವಿಷ್ಯದಲ್ಲಿ ಆ ತಪ್ಪುಗಳನ್ನು ಎಂದಿಗೂ ಪುನರಾವರ್ತಿಸದಂತೆ ಜಾಗರೂಕತೆ ವಹಿಸಬೇಕು. ನಾವು ಎಂದಿಗೂ ನಮ್ಮ ತಪ್ಪುಗಳಿಂದ ಓಡಿ ಹೋಗಬಾರದು. ತಪ್ಪಾಯಿತೆಂದು ಅರ್ಧಕ್ಕೇ ನಿಲ್ಲಿಸಬಾರದು. ಅವುಗಳಿಂದ ಕಲಿಯಬೇಕು. ಯಶಸ್ಸನ್ನು ಸಾಧಿಸಲು ತಪ್ಪನ್ನು ತಿದ್ದಿಕೊಂಡು ಮುಂದುವರಿಯುವುದು ಮುಖ್ಯ. ಯಾವ ವ್ಯಕ್ತಿ ಕೆಲಸಗಳನ್ನು ಅಪೂರ್ಣವಾಗಿ ಬಿಡುತ್ತಿರುತ್ತಾನೋ, ಆ ವ್ಯಕ್ತಿಯು ಜೀವನದಲ್ಲಿ ತನ್ನ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ.

Jyotirlinga Series: ವಿಂಧ್ಯಾಚಲನ ಭಕ್ತಿಗೆ ಮೆಚ್ಚಿ ದ್ವಿರೂಪದಲ್ಲಿ ಪ್ರಕಟವಾದ ಪರಮೇಶ್ವರ ಲಿಂಗ!

ಗುಟ್ಟಾಗಿಡಿ
ನೀವು ಹೊಸ ಕೆಲಸವನ್ನು ಪ್ರಾರಂಭಿಸಿದಾಗ, ಯೋಜನೆ ಸಿದ್ಧಪಡಿಸಿ. ಮತ್ತು ಆ ಯೋಜನೆ ಹಾಗೂ ಕಾರ್ಯತಂತ್ರಗಳನ್ನು ಯಾರಿಗೂ ಬಹಿರಂಗಪಡಿಸಬಾರದು. ನೀವು ಹಂಚಿಕೊಂಡರೆ, ಇತರ ವ್ಯಕ್ತಿಯು ಯಶಸ್ವಿಯಾಗಲು ನಿಮ್ಮ ತಂತ್ರವನ್ನು ಕದಿಯಲು ಅವಕಾಶವನ್ನು ಪಡೆಯುತ್ತಾನೆ. ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗಿದ್ದರೆ, ಆ ಯಶಸ್ಸಿನ ರಹಸ್ಯವನ್ನು ಯಾರಿಗೂ ಹೇಳಬೇಡಿ. ನಿಮ್ಮ ಯಶಸ್ಸಿನ ರಹಸ್ಯವನ್ನು ಹೇಳಲು ನೀವು ಸಿದ್ಧರಿದ್ದರೆ, ನಿಮ್ಮ ವೈಫಲ್ಯವು ಖಚಿತವಾಗಿರುತ್ತದೆ ಮತ್ತು ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ಹತಾಶತೆಯ ಭಾವನೆ ಉಂಟಾಗುತ್ತದೆ.

Follow Us:
Download App:
  • android
  • ios