ಮುದ್ದಾದ ಮಗು ಬೇಕಾ? ಗರ್ಭಿಣಿಯರು ಫಾಲೋ ಮಾಡಬೇಕಾದ ವಾಸ್ತು ಟಿಪ್ಸ್
ಗರ್ಭಿಣಿಯರಿಗೆ ಒಂದು ಕಡೆ ಸಂತೋಷವಿದ್ರೆ ಇನ್ನೊಂದು ಕಡೆ ಸದಾ ಆತಂಕ ಮನೆ ಮಾಡಿರುತ್ತದೆ. ಹುಟ್ಟುವ ಮಗುವಿನ ಬಗ್ಗೆ ಚಿಂತೆಯಿರುತ್ತದೆ. ಹುಟ್ಟುವ ಮಗು ಆರೋಗ್ಯಕರವಾಗಿ, ಸುಂದರವಾಗಿ, ಬುದ್ಧಿವಂತನಾಗಿ ಜನಿಸಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ?
ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ತುಂಬಾ ವಿಶೇಷವಾಗಿರುತ್ತದೆ. ಗರ್ಭಿಣಿಯಾದವರು ತಮ್ಮ ಬಗ್ಗೆ, ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯು ಸರಿಯಾಗಿ ನಡೆಯುತ್ತದೆ. ವಾಸ್ತು ಪ್ರಕಾರ, ಮಗು ಹೊಟ್ಟೆಯಲ್ಲಿದ್ದಾಗಲೂ ನಮ್ಮ ಸುತ್ತಲಿನ ವಿಷಯಗಳು ಮಗುವಿನ ಮೇಲೂ ಪರಿಣಾಮ ಬೀರುತ್ತವೆ. ಗರ್ಭಿಣಿ ಮಗುವಿನ ಮೇಲೆ ಸಕಾರಾತ್ಮಕ ಪರಿಣಾಂ ಬೀರುವ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಳ್ಳಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಕೆಲ ವಸ್ತುಗಳನ್ನು ಗರ್ಭಿಣಿ ಜೊತೆಯಲ್ಲಿಟ್ಟುಕೊಂಡರೆ ಮಗು ಆರೋಗ್ಯವಂತ, ಸುಸಂಸ್ಕೃತ ಮತ್ತು ಸಂತೋಷದಿಂದ ಕೂಡಿರುತ್ತದೆ. ವಾಸ್ತು ಪ್ರಕಾರ, ಗರ್ಭಿಣಿಯರ ಕೋಣೆ ಹೇಗಿರಬೇಕು ಎಂಬುದನ್ನು ಹೇಳ್ತೇವೆ.
ಗರ್ಭಿಣಿ ಕೋಣೆ (Pregnant Room) ಹೇಗಿರಬೇಕು ? :
ನಗು (Smile) ತ್ತಿರುವ ಮಗು (Child) ವಿನ ಫೋಟೋ : ಗರ್ಭಿಣಿ ತನ್ನ ರೂಮಿನಲ್ಲಿ ನಗುತ್ತಿರುವ ಮಗುವಿನ ಚಿತ್ರವನ್ನು ಹಾಕಬೇಕು. ಈ ಫೋಟೋ ಮೇಲೆ ಗರ್ಭಿಣಿ ಕಣ್ಣು ಮತ್ತೆ ಮತ್ತೆ ಬೀಳುತ್ತಿರಬೇಕು. ನಗುತ್ತಿರುವ ಮಗುವಿನ ಫೋಟೋ, ಗರ್ಭಿಣಿ ಆತಂಕವನ್ನು ಕಡಿಮೆ ಮಾಡುತ್ತದೆ. ಮುಖದಲ್ಲಿ ನಗು ಮೂಡಿಸುತ್ತದೆ. ಗರ್ಭಿಣಿ ಸಂತೋಷವಾಗಿರಲು ಇದು ಕಾರಣವಾಗುತ್ತದೆ. ತಾಯಿ ಸಂತೋಷವಾಗಿದ್ರೆ ಹೊಟ್ಟೆಯಲ್ಲಿರುವ ಮಗು ಕೂಡ ಸಂತೋಷವಾಗಿರುತ್ತದೆ.
ಕೃಷ್ಣ (Krishna) ನ ಫೋಟೋ : ವಾಸ್ತು (Vastu) ಪ್ರಕಾರ, ಗರ್ಭಿಣಿ ತನ್ನ ಕೋಣೆಯಲ್ಲಿ ಬಾಲ ಗೋಪಾಲನ ಫೋಟೋ ಅಥವಾ ವಿಗ್ರಹವನ್ನು ಇಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಗರ್ಭಿಣಿ ಅದನ್ನು ನೋಡಬೇಕು. ಹೀಗೆ ಮಾಡುವುದರಿಂದ ಮಹಿಳೆಯ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಮಗುವಿನ ಮೇಲೂ ಉತ್ತಮ ಪರಿಣಾಮ ಬೀರುತ್ತದೆ.
ತಾಮ್ರ : ಗರ್ಭಿಣಿಯರು ತಾಮ್ರದ ಲೋಹದಿಂದ ಮಾಡಿದ ಯಾವುದಾದರೂ ವಸ್ತುವನ್ನು ಕೋಣೆಯಲ್ಲಿ ಇಟ್ಟುಕೊಳ್ಳಬೇಕು. ಇದು ಕೋಣೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಗರ್ಭಿಣಿ ಮತ್ತು ಮಗವಿಗೆ ಯಾವುದೇ ದುಷ್ಟ ಕಣ್ಣು ಬೀಳುವುದಿಲ್ಲ.
ಚಾಣಕ್ಯ ನೀತಿ: ಈ ನಾಲ್ಕು ತಪ್ಪುಗಳಿಂದ ದೂರವಿದ್ರೆ ಯಶಸ್ಸು ನಿಮ್ಮದೇ..
ಗರ್ಭಿಣಿ ಕೋಣೆಯಲ್ಲಿರಲಿ ಈ ವಸ್ತು : ಗರ್ಭಿಣಿ ಕೋಣೆಯಲ್ಲಿ ಇನ್ನೂ ಕೆಲ ವಸ್ತುಗಳನ್ನು ಇಡುವುದ್ರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನೀವು ಗರ್ಭಿಣಿ ಕೋಣೆಯಲ್ಲಿ ಶ್ರೀಕೃಷ್ಣನ ಕೊಳಲು ಮತ್ತು ಶಂಖವನ್ನು ಸಹ ಇಡಬಹುದು.ಇದು ಮಗು ಶಾಂತ ಮತ್ತು ಹರ್ಷಚಿತ್ತದಿಂದ ಇರಲು ನೆರವಾಗುತ್ತದೆ.
ಗಂಡ – ಹೆಂಡತಿ ಫೋಟೋ : ವಾಸ್ತು ಶಾಸ್ತ್ರದ ಪ್ರಕಾರ, ಗರ್ಭಿಣಿ ಕೋಣೆಯಲ್ಲಿ, ಪತಿ, ಪತ್ನಿ ನಗುತ್ತಿರುವ ಫೋಟೋವನ್ನು ಹಾಕಿರಬೇಕು. ಹೀಗೆ ಮಾಡಿದ್ರೆ ಮಗು ತನ್ನ ಹೆತ್ತವರಿಗೆ ತುಂಬಾ ಹತ್ತಿರವಾಗಿರುತ್ತದೆ. ಅಲ್ಲದೆ ಗರ್ಭಿಣಿ ಯಾವಾಗಲೂ ಸಕಾರಾತ್ಮಕ ಭಾವನೆಯನ್ನು ಹೊಂದಿರುತ್ತಾಳೆ. ಹುಟ್ಟಲಿರುವ ಮಗು ಕೂಡ ಆರೋಗ್ಯಕರವಾಗಿರುತ್ತದೆ.
ಆತ್ಮವಿಶ್ವಾಸದ ಕೊರತೆನಾ? ಈ Vastu Tips ಪಾಲಿಸಿ..
ಗರ್ಭಿಣಿ ಕೋಣೆಯಲ್ಲಿ ಬೇಡ ಇವು : ಗರ್ಭಿಣಿಯರ ಕೋಣೆಯಲ್ಲಿ ಮಹಾಭಾರತದ ಫೋಟೋ, ಪುಸ್ತಕ, ಚಾಕು, ಹರಿತಾದ ವಸ್ತುಗಳನ್ನು ಹಾಕಬೇಡಿ. ಗರ್ಭಿಣಿ ಸೂಜಿ ದಾರದ ಕೆಲಸವನ್ನೂ ಮಾಡಬಾರದು. ಇದು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ನಂಬಿಕೆ. ಹಾಗೆಯೇ ಗರ್ಭಿಣಿ ಕೋಣೆ ಹಾಗೂ ಆಕೆ ಧರಿಸುವ ಬಟ್ಟೆ ಯಾವಾಗ್ಲೂ ತಿಳಿ ನೀಲಿ, ಹಳದಿ, ಬಿಳಿ ಮತ್ತು ತಿಳಿ ಗುಲಾಬಿಯಂತಹ ತಿಳಿ ಬಣ್ಣಗಳನ್ನು ಹೊಂದಿರಬೇಕು. ಕೆಂಪು, ಕಪ್ಪು ಮತ್ತು ಕಿತ್ತಳೆಯಂತಹ ಗಾಢ ಬಣ್ಣಗಳನ್ನು ಬಳಸಬಾರದು.
ಹಾಗೆಯೇ ಗರ್ಭಿಣಿ ಕೋಣೆಯಲ್ಲಿ ನಕಾರಾತ್ಮಕತೆ ತಪ್ಪಿಸಲು ಇಡೀ ಮನೆಗೆ ಹಳದಿ ಅಕ್ಕಿಯನ್ನು ಸಿಂಪಡಿಸಬೇಕು. ಜ್ಯೋತಿಷ್ಯದಲ್ಲಿ ಹಳದಿ ಅಕ್ಕಿಯನ್ನು ಮಂಗಳದ ಸೂಚಕವೆಂದು ಪರಿಗಣಿಸಲಾಗುತ್ತದೆ.
ನವಿಲು ಗರಿ ಶ್ರೀಕೃಷ್ಣನಿಗೆ ಸಂಬಂಧಿಸಿದೆ. ದೇವರ ಮನೆ ಅಥವಾ ಗರ್ಭಿಣಿ ಕೋಣೆಯಲ್ಲಿ ನವಿಲು ಗರಿಗಳನ್ನು ಇಡುವುದು ತಾಯಿ ಮತ್ತು ಮಗುವಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.