ಆತ್ಮವಿಶ್ವಾಸದ ಕೊರತೆನಾ? ಈ Vastu Tips ಪಾಲಿಸಿ..

ಎಲ್ಲ ಕಡೆ ನಿಮ್ಮ ಗೆಲುವಿಗೆ ಆತ್ಮವಿಶ್ವಾಸದ ಕೊರತೆಯೇ ಅಡ್ಡಗಾಲು ಹಾಕುತ್ತಿದೆಯೇ? ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ವಾಸ್ತು ಸಲಹೆಗಳ ಸಹಾಯವನ್ನು ತೆಗೆದುಕೊಳ್ಳಿ, ನೀವು ಖಂಡಿತಾ ಯಶಸ್ಸನ್ನು ಪಡೆಯುತ್ತೀರಿ. 

Take The Help Of These Vastu Tips To Increase Self-Confidence skr

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಬಯಸುತ್ತಾರೆ ಮತ್ತು ಅದನ್ನು ನೋಡಿದ ನಂತರ ಎಲ್ಲರೂ ಮೆಚ್ಚುವಂಥ ಸ್ಥಾನವನ್ನು ಸಾಧಿಸಲು ಬಯಸುತ್ತಾರೆ. ಈ ಯಶಸ್ಸನ್ನು ಸಾಧಿಸಲು, ಕಠಿಣ ಪರಿಶ್ರಮದ ಅಗತ್ಯವಿದೆ. ಜೊತೆಗೆ ಇದಕ್ಕಾಗಿ ನಿಮ್ಮ ಆತ್ಮವಿಶ್ವಾಸ ಅಗತ್ಯ. ಆತ್ಮವಿಶ್ವಾಸವಿಲ್ಲದಿದ್ದರೆ ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯುವುದು ಕಷ್ಟ. ಯಶಸ್ವಿ ವ್ಯಕ್ತಿಯ ಅಡಿಪಾಯವು ಅವನ ಸಾಮರ್ಥ್ಯ, ಜ್ಞಾನ, ಆಲೋಚನೆಗಳು ಮತ್ತು ಆತ್ಮವಿಶ್ವಾಸದ ಮೇಲೆ ನಿಂತಿದೆ. ಅಂಥ ಪರಿಸ್ಥಿತಿಯಲ್ಲಿ, ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತರುವುದು ಅವಶ್ಯಕ. ಇಂದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲವು ವಾಸ್ತು ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಇದರಿಂದ ನಿಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

  • ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿದಿನ ಬೆಳಿಗ್ಗೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಮತ್ತು ಐದು ನಿಮಿಷಗಳ ಕಾಲ ಎರಡೂ ಕೈಗಳನ್ನು ಮಡಚಿ ಉದಯಿಸುವ ಸೂರ್ಯನನ್ನು ಧ್ಯಾನಿಸಿ. ನಿಯಮಿತವಾಗಿ 'ಆದಿತ್ಯ ಹೃದಯ ಸ್ತೋತ್ರ' ಪಠಿಸಿ. ಇದು ನಿಮ್ಮ ಆತ್ಮವಿಶ್ವಾಸ(Confidence)ವನ್ನು ತ್ವರಿತವಾಗಿ ಹೆಚ್ಚಿಸುತ್ತದೆ ಮತ್ತು ನಿಮ್ಮ ಗುರಿಯನ್ನು ನೀವು ಸಾಧಿಸಲು ಸಾಧ್ಯವಾಗುತ್ತದೆ.

    Vastu for Kitchen: ಉಪ್ಪು ತೆರೆದಿಟ್ಟರೆ ಹೆಚ್ಚುತ್ತೆ ಸಾಲ.. ಅಡುಗೆಮನೆಯಲ್ಲಿ ಈ ಮಿಸ್ಟೇಕ್ಸ್ ಮಾಡ್ಬೇಡಿ
     
  • ಭಾನುವಾರ ಬೆಳಗ್ಗೆ ಎದ್ದು ಸೂರ್ಯ ದೇವರಿಗೆ ನಮಸ್ಕರಿಸಿ ಮನೆಯ ಹಿರಿಯರ ಆಶೀರ್ವಾದ ಪಡೆದು ಸಿಹಿ ತಿನ್ನಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಕೋಣೆಯನ್ನು ಉದಯಿಸುವ ಸೂರ್ಯ ಅಥವಾ ಓಡುವ ಕುದುರೆಯ ಚಿತ್ರದಿಂದ ಅಲಂಕರಿಸಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮನೆಯಿಂದ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಚಿತ್ರದಲ್ಲಿರುವ ಕುದುರೆ ಒಳಮುಖವಾಗಿ ಓಡುತ್ತಿರಬೇಕು ಎಂಬುದು ಗಮದಲ್ಲಿರಲಿ. 
  • ಖಾಲಿ ಗೋಡೆಗೆ ಎದುರಾಗಿ ಕುಳಿತುಕೊಳ್ಳಬೇಡಿ. ಏಕೆಂದರೆ ಅದು ನಿಮ್ಮ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು.
  • ವಾಸ್ತು ಪ್ರಕಾರ ನಿಮ್ಮ ಮನೆಯ ಕಿಟಕಿಗಳನ್ನು ತೆರೆದಿಡಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಹರಡುತ್ತದೆ. ಕಿಟಕಿ(window)ಯ ಮುಂದೆ ನೇರವಾಗಿ ನಿಮ್ಮ ಬೆನ್ನು ಹಾಕಿ ಕುಳಿತುಕೊಳ್ಳಬೇಡಿ. ಏಕೆಂದರೆ ಇದು ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.
  • ಸೂರ್ಯಕಾಂತಿ ಸಸ್ಯವನ್ನು ಪೂರ್ವ ದಿಕ್ಕಿನಲ್ಲಿ ಇರಿಸಿ, ಅದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಕಾಂತಿ ಗಿಡವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನೆಡುವುದು ಆತ್ಮವಿಶ್ವಾಸವನ್ನು ಬಲಪಡಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
  • ವಾಸ್ತು ಪ್ರಕಾರ, ಮನೆಯಲ್ಲಿ ಕನಿಷ್ಠ ಎರಡು ಗೋಲ್ಡ್ ಫಿಷ್‌ಗಳನ್ನು ಹೊಂದಿರುವ ಫಿಶ್ ಅಕ್ವೇರಿಯಂನ್ನು ಇರಿಸಿ. ಅವುಗಳಿಗೆ ನಿಯಮಿತವಾಗಿ ಆಹಾರವನ್ನು ನೀಡುತ್ತಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಬಹಳ ಮಟ್ಟಿಗೆ ಹೆಚ್ಚಿಸುತ್ತದೆ.

    Vastu tips: ಮನೆಯಲ್ಲಿ ಈ ವಸ್ತುಗಳಿಟ್ರೆ, ಸಮೃದ್ಧಿ ಸಿದ್ಧಿಯಾಗೋದ್ರಲ್ಲಿ ಡೌಟೇ ಇಲ್ಲ!
     
  • ಪ್ರತಿ ಬೆಳಿಗ್ಗೆ ಗಾಯತ್ರಿ ಮಂತ್ರವನ್ನು ಪಠಿಸಿ. ನಿಮ್ಮ ಕುರ್ಚಿಯ ಹಿಂದೆ ಪರ್ವತ(Mountain)ದ ಚಿತ್ರವನ್ನು ಹಾಕಿ. ಸಕಾರಾತ್ಮಕ ಶಕ್ತಿಯಿಂದ ತುಂಬಿರುವ ಜನರೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ ಮತ್ತು ಇತರರಲ್ಲಿ ತಪ್ಪುಗಳನ್ನು ಕಂಡುಕೊಳ್ಳುವ ಜನರಿಂದ ದೂರವಿರಿ.
  • ಶನಿ ಯಂತ್ರವನ್ನು ನಿಮ್ಮ ಮನೆಯಲ್ಲಿ ಇರಿಸಿ. ಇದಲ್ಲದೆ ನಿಂಬೆ ಮತ್ತು ಹಸಿರು ಮೆಣಸಿನಕಾಯಿಯನ್ನು ಮನೆಯ ದ್ವಾರದಲ್ಲಿ ನೇತು ಹಾಕಿ. ನಿಂಬೆ ಒಣಗಿದರೆ, ಅದನ್ನು ಶನಿವಾರ ಮಾತ್ರ ಬದಲಾಯಿಸಿ.
  • ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ಮತ್ತು ಉತ್ತರ ದಿಕ್ಕುಗಳು ಆಹಾರ ಸೇವನೆಗೆ ಮಂಗಳಕರ. ಈ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವುದರಿಂದ ನಿಮ್ಮ ಆತ್ಮಸ್ಥೈರ್ಯ ಬಲಗೊಳ್ಳುತ್ತದೆ. ಏಕೆಂದರೆ ಈ ದಿಕ್ಕನ್ನು ಬೆಂಕಿಯ ಸ್ಥಳವೆಂದು ಪರಿಗಣಿಸಲಾಗುತ್ತದೆ.
  • ಬಲಗೈಯ ಉಂಗುರ ಬೆರಳಿಗೆ ಚಿನ್ನದ ಉಂಗುರ(Gold ring)ವನ್ನು ಧರಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಗುರಿಯನ್ನು ನೀವು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ.
  • ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ನೀವು ನಿಯಮಿತವಾಗಿ ನಿಮ್ಮ ಮನೆಯ ಛಾವಣಿಯ ಮೇಲೆ ಪಕ್ಷಿಗಳಿಗೆ ಮೇವನ್ನು ಹಾಕಬೇಕು ಮತ್ತು ಅದರಲ್ಲಿ ನೀರು ತುಂಬಿಸಿ ಇಡಬೇಕು.
Latest Videos
Follow Us:
Download App:
  • android
  • ios