* ಕೆಲವರಿಗೆ ಜೇಬಿನಲ್ಲಿ ಇಲ್ಲವೆ ಪರ್ಸ್ನಲ್ಲಿ ದೇವರ ಫೋಟೋವಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದರಿಂದ ಮನಸ್ಸಿಗೆ ಧೈರ್ಯ ಸಿಗುವ ಜೊತೆಗೆ ಸಕಾರಾತ್ಮಕ ಮನೋಭಾವ ಹೊಂದಲು ಸಾಧ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಜೇಬಿನಲ್ಲಿ ಲಕ್ಷ್ಮೀದೇವಿಯ ಫೋಟೋವನ್ನಿಟ್ಟುಕೊಳ್ಳುವುದರಿಂದ ಒಳಿತಿದೆ. ಲಕ್ಷ್ಮೀ ಸಂಪತ್ತಿನ ಅಧಿದೇವತೆ. ನಿಮಗೂ, ನಿಮ್ಮ ಕುಟುಂಬಕ್ಕೂ ಸಂಪತ್ತು, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ಬೇಕಿದ್ದರೆ ಜೇಬಿನಲ್ಲಿ ಅಕ್ಕಪಕ್ಕದಲ್ಲಿ ಎರಡು ಆನೆಗಳೊಂದಿಗೆ ಕುಳಿತ ಭಂಗಿಯಲ್ಲಿರುವ ಲಕ್ಷ್ಮೀ ದೇವಿಯ ಫೋಟೋವನ್ನಿಟ್ಟುಕೊಳ್ಳಿ. 

ಈ ಕಲರ್ ಪರ್ಸ್ ಇದ್ದರೆ ದುಡ್ಡಿ ನಿಮ್ಮ ಬಳಿ ಇರುತ್ತೆ

*ಜೇಬಿನಲ್ಲಿ ಬೆಳ್ಳಿ ವಸ್ತುಗಳು ಅಥವಾ ನಾಣ್ಯಗಳನ್ನಿಟ್ಟುಕೊಳ್ಳುವುದರಿಂದ ನಿಮ್ಮ ಹಾಗೂ ಕುಟುಂಬದ ಆರೋಗ್ಯ ಸುಧಾರಿಸುತ್ತದೆ. ಬೆಳ್ಳಿಯಲ್ಲಿ ರೋಗನಿರೋಧಕ ಅಂಶವಿರುವುದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ಹಿಂದೂ ಸಂಪ್ರದಾಯದಲ್ಲಿ ವಿವಾಹಿತ ಮಹಿಳೆಯರು ಬೆಳ್ಳಿಯ ಕಾಲುಂಗುರ ಧರಿಸುವುದು ಕಡ್ಡಾಯ. ಈ ನಿಯಮದ ಹಿಂದೆ ಕೂಡ ಆರೋಗ್ಯದ ಗುಟ್ಟು ಅಡಗಿದೆ. ಬಳೆ, ಕಾಲ್ಗೆಜ್ಜೆ, ಕಿವಿಯೋಲೆ, ಸರ....ಹೀಗೆ ನಾನಾ ಆಭರಣಗಳ ರೂಪದಲ್ಲಿ ಬೆಳ್ಳಿಯನ್ನು ಧರಿಸುತ್ತೇವೆ. ಬೆಳ್ಳಿಗೆ ಸಕಾರಾತ್ಮಕವಾದ ಶಕ್ತಿಯನ್ನು ಆಕರ್ಷಿಸುವ ಗುಣವಿರುವುದರಿಂದಲೇ ಬಹುತೇಕರು ಅದನ್ನು ಬಳಸಲು ಇಚ್ಛಿಸುತ್ತಾರೆ. 

*ಮನೆಯಿಂದ ಹೊರಗೆ ಹೋಗುವಾಗ ಜೇಬಿಗೆ ನಾಲ್ಕಾರು ಕಾಳು ಅಕ್ಕಿಯನ್ನು ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ನಿಮಗೆಂದೂ ದ್ರಾರಿದ್ರ್ಯ ಕಾಡುವುದಿಲ್ಲ. ನಿಮ್ಮ ಮನೆಯ ಸದಸ್ಯರಿಗೆ ಎಂದಿಗೂ ಊಟಕ್ಕೆ ತೊಂದರೆ ಉಂಟಾಗುವುದಿಲ್ಲ. ಹೊಟ್ಟೆ ತುಂಬಾ ನೆಮ್ಮದಿಯಿಂದ ಊಟ ಮಾಡುವ ಭಾಗ್ಯ ಸಿಗುತ್ತದೆ.

*ಲಕ್ಷ್ಮೀ ದೇವಿಯ ಆಸನ ಕಮಲ. ನೀವು ನಿಮ್ಮ ಉದ್ಯೋಗದಲ್ಲಿ, ಸಂಪತ್ತಿನಲ್ಲಿ ಉನ್ನತಿ ಸಾಧಿಸಬೇಕೆಂಬ ಬಯಕೆ ಹೊಂದಿದ್ದರೆ ಕಮಲದ ಬೇರುಗಳನ್ನು ಜೇಬಿನಲ್ಲಿಟ್ಟುಕೊಳ್ಳುವುದು ಉತ್ತಮ. ಇದು ನಿಮಗೆ ಸಕಾರಾತ್ಮಕ ಶಕ್ತಿಯನ್ನು ಒದಗಿಸುವ ಮೂಲಕ ನೀವು ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವಂತೆ ಮಾಡುತ್ತದೆ.

ಒತ್ತಡ ಕಳೆಯೋಕೆ ವಾಸ್ತು ನಿಯಮಗಳು

*ಸಮುದ್ರದಲ್ಲಿ ಸಿಗುವ ಚಿಪ್ಪುಗಳು ಕೂಡ ಅದೃಷ್ಟದ ಸಂಕೇತ. ಇವು ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಗಳನ್ನು ತಮ್ಮೊಳಗೆ ಸಂಚಯಿಸಿಕೊಂಡಿರುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು.  ನಿಮಗೆ ಸಮುದ್ರದಲ್ಲಿ ಸಿಗುವ ನಾನಾ ವಿನ್ಯಾಸದ ಚಿಪ್ಪುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅಭ್ಯಾಸವಿದ್ದರೆ, ಇನ್ನು ಮುಂದೆ ಅವುಗಳಲ್ಲಿ ಕೆಲವನ್ನು ಜೇಬಿನಲ್ಲಿಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ.

*ಅರಳಿ ಮರ ಸುತ್ತುವುದು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಶುಭಸೂಚಕವಾಗಿರುವ ಅರಳಿ ಮರದ ಎಲೆಯನ್ನು ಜೇಬಿನಲ್ಲಿಟ್ಟುಕೊಂಡರೆ ನಿಮಗೂ ಹಾಗೂ ಕುಟುಂಬಕ್ಕೂ ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ಒಲಿಯುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

*ಗೋಮತಿ ಚಕ್ರ ಹಾಗೂ ಶ್ರೀ ಯಂತ್ರಗಳು ಅನೇಕ ವಾಸ್ತು ದೋಷಗಳನ್ನು ನಿವಾರಿಸುವ ಸಾಮಥ್ರ್ಯ ಹೊಂದಿವೆ. ಇವನ್ನು ಜೇಬಿನಲ್ಲಿಟ್ಟುಕೊಳ್ಳುವುದರಿಂದ ನಿಮಗೆ ನೆಮ್ಮದಿ,ಆರೋಗ್ಯ ಹಾಗೂ ಸಮೃದ್ಧಿ ಲಭಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. 

ಆರೋಗ್ಯಕ್ಕೆ ವಾಸ್ತು