Asianet Suvarna News Asianet Suvarna News

Vaastu Tips : ಕಪಾಟಿನಲ್ಲಿ ಈ ವಸ್ತು ಇಟ್ಟರೆ ಹಣದ ಹೊಳೆ ಹರಿಯೋದು ನಿಶ್ಚಿತ

ವಾಸ್ತು ಶಾಸ್ತ್ರವನ್ನು ಅನೇಕರು ನಂಬ್ತಾರೆ. ವಾಸ್ತು ಮನೆಯ ಆರ್ಥಿಕ ವೃದ್ಧಿ, ಆರೋಗ್ಯ, ಆಯಸ್ಸು ಎಲ್ಲದಕ್ಕೂ ಸಂಬಂಧ ಹೊಂದಿರುತ್ತದೆ. ಮನೆಯಲ್ಲಿ ಸಂಪತ್ತು ತುಂಬಿ ತುಳುಕಬೇಕೆನ್ನುವವರು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
 

Keep These Things In The Almirah to become rich and have prosperity
Author
Bangalore, First Published May 27, 2022, 5:07 PM IST

ಶ್ರೀಮಂತಿಕೆ (Richness) ಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ರಾತ್ರೋರಾತ್ರಿ ಹಣ (Money) ದ ಮಳೆಯಾಗ್ಲಿ ಎಂಬ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಆದ್ರೆ ತಾಯಿ ಲಕ್ಷ್ಮಿ (Laxmi) ಕರುಣೆ ತೋರಿಸುವುದು ಬಹಳ ಅಪರೂಪ. ಹಗಲು – ರಾತ್ರಿ ದುಡಿದ್ರೂ ಅನೇಕರ ಕೈನಲ್ಲಿ ಹಣ ನಿಲ್ಲುವುದಿಲ್ಲ. ಬಯಸ್ಸಿದ್ದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಜನರು ಪೂಜೆ, ಉಪವಾಸ ಮಾಡ್ತಾರೆ. ಶ್ರಮದ ಜೊತೆ ಲಕ್ಷ್ಮಿ ಆರಾಧನೆ ಮಾಡಿದ್ರೆ ಮಾತ್ರ ಸಾಲುವುದಿಲ್ಲ, ತಾಯಿ ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ಇರಬೇಕು ಎಂದು ಬಯಸುವವರು ವಾಸ್ತುಶಾಸ್ತ್ರದ ನಿಯಮಗಳನ್ನು ಸಹ ಪಾಲನೆ ಮಾಡ್ಬೇಕಾಗುತ್ತದೆ. ವಾಸ್ತುಶಾಸ್ತ್ರ ಎಂದಾಗ ಬಹುತೇಕರ ಬಾಯಲ್ಲಿ ಬರುವ ಮಾತೆಂದ್ರೆ, ಮನೆ ಕೆಡವಿ ಹೊಸ ಮನೆ ನಿರ್ಮಾಣ ಮಾಡ್ಬೇಕಾ ಎಂದು. ಆದ್ರೆ ಮನೆ ನಿರ್ಮಾಣ ಮಾತ್ರ ವಾಸ್ತುಶಾಸ್ತ್ರದಲ್ಲಿ ಬರುವುದಿಲ್ಲ. ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ವಾಸ್ತು (Vastu ) ಶಾಸ್ತ್ರದಡಿ ಬರುತ್ತದೆ. ಮನೆಯಲ್ಲಿ ಕಪಾಟುಗಳಿರುವುದು ಮಾಮೂಲಿ. ನಮ್ಮ ಅಮೂಲ್ಯ ವಸ್ತುಗಳನ್ನು, ಬೆಲೆ ಬಾಳುವ ಆಭರಣಗಳನ್ನು ಹಾಗೂ ಹಣವನ್ನು ನಾವು ಕಪಾಟಿನಲ್ಲಿಡುತ್ತೇವೆ. ಈ ಕಪಾಟಿನಲ್ಲಿ ನೀವು ಬಯಸಿದಂತೆ ಸದಾ ಹಣ, ಒಡವೆ ತುಂಬಿರಬೇಕೆಂದ್ರೆ ವಾಸ್ತುಶಾಸ್ತ್ರದ ಕೆಲ ನಿಯಮ ಪಾಲನೆ ಮಾಡ್ಬೇಕು. ಅದಕ್ಕೆ ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ. ನಿಮ್ಮ ಮನೆ ಕಪಾಟಿನಲ್ಲಿ ಈಗ ನಾವು ಹೇಳುವ ವಸ್ತುಗಳಲ್ಲಿ ಒಂದನ್ನು ಇಟ್ಟರೆ ಸಾಕು. ನಿಧಾನವಾಗಿ ನಿಮ್ಮೆಲ್ಲ ಆಸೆ ಈಡೇರುತ್ತ ಬರುತ್ತದೆ. 

ಕಪಾಟಿನಲ್ಲಿರಲಿ ಕುಬೇರ ಯಂತ್ರ:  ವಾಸ್ತು ಶಾಸ್ತ್ರದಲ್ಲಿ ಕುಬೇರ ಯಂತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ದೀಪಾವಳಿಯ ದಿನದಂದು ಕುಬೇರ ಯಂತ್ರವನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಕುಬೇರ ಯಂತ್ರವನ್ನು ಪದ್ಧತಿಯಂತೆ ಪೂಜಿಸಬೇಕು ಮತ್ತು ಅದನ್ನು ನಿಮ್ಮ ಕಪಾಟಿನಲ್ಲಿ ಇಟ್ಟುಕೊಳ್ಳಬೇಕು. ಕುಬೇರ ಯಂತ್ರದ ಹೊರತಾಗಿ, ನೀವು ಶ್ರೀ ಯಂತ್ರವನ್ನು ಕೂಡ ಇಟ್ಟುಕೊಳ್ಳಬಹುದು.  

ಕಮಲದ ಹೂವು: ಕಮಲದ ಹೂವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದ, ನೀವು ಈ ಹೂವನ್ನು ಮಾ ಲಕ್ಷ್ಮಿಗೆ ಅರ್ಪಿಸಬೇಕು. ನೀವು ತಾಜಾ ಕಮಲದ ಹೂವನ್ನು ಕಪಾಟಿನಲ್ಲಿ ಇಡಬಹುದು. ಇದರಿಂದ ಮನೆಯಲ್ಲಿ ಆರ್ಥಿಕ ವೃದ್ಧಿ ಕಾಣುತ್ತದೆ. ಆದರೆ ಕಮಲದ ಹೂವು ಒಣಗಿ ಹೋಗಿದ್ದರೆ ಅದನ್ನು ಕಪಾಟಿನಲ್ಲಿ ಅಪ್ಪಿತಪ್ಪಿಯೂ ಇಡ್ಬೇಡಿ. 

ಏನು ಮಾಡಿದರೂ ಕೈಯಲ್ಲಿ ದುಡ್ಡು ನಿಲ್ತಾ ಇಲ್ವಾ? ಈ ಗಿಡೆ ನೆಟ್ಟು ನೋಡಿ

ನಿಮ್ಮ ಕಪಾಟಿನಲ್ಲಿರಲಿ ಅರಿಶಿನದ ಕೊಂಬು: ಅರಿಶಿನದ ಕೊಂಬನ್ನು ಶುಭ ಕಾರ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಇದಕ್ಕೂ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ, ಇದು ನಿಮಗೆ ಹಣಕಾಸಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ನೀವು ಅರಿಶಿನದ ಕೊಂಬನ್ನು ಸಣ್ಣ ಗಂಟು ಕಟ್ಟಿ ಅದನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿ ಇಡಿಬಹುದು. ಇದ್ರಿಂದ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ. 

ಕನ್ನಡಿ : ಕನ್ನಡಿ ನಿಮ್ಮನ್ನು ನೀವು ನೋಡಿಕೊಳ್ಳಲು ಮಾತ್ರ ಸಹಾಯವಾಗುವುದಿಲ್ಲ, ಕನ್ನಡಿಯು ನಿಮ್ಮ ಮನೆಯ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀವು ಕಪಾಟಿನ ಒಳಗೆ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿ. ನಿಮ್ಮ ಮನೆ ತಿಜೋರಿಯಲ್ಲಿ ಕನ್ನಡಿ ಇಟ್ಟರೆ ನಿಮ್ಮ ಮನೆಗೆ ಸಂಪತ್ತು ಹರಿದು ಬರಲು ಶುರುವಾಗುತ್ತದೆ.  

ನಿದ್ರೆ ಬರೋಲ್ವಾ? ರಾಹುದೋಷ ಇರ್ಬೋದು! ಪರಿಹಾರ ಇಲ್ಲಿದೆ..

ಕೆಂಪು ಉಡುಗೆ : ನೀವು ವಾರ್ಡ್ರೋಬ್ ನಲ್ಲಿ ಕೆಂಪು ಬಟ್ಟೆಗಳನ್ನು ಸಹ ಇರಿಸಬಹುದು. ಕೆಂಪು ಬಣ್ಣದ ಬಟ್ಟೆಗಳನ್ನು ಲಕ್ಷ್ಮಿ ದೇವಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ. ತಾಯಿಯ ಆಶೀರ್ವಾದ ಪಡೆಯಲು, ತಿಜೋರಿಯಲ್ಲಿ ಕೆಂಪು ಬಟ್ಟೆಯನ್ನು ಕಟ್ಟಿಡಿ. ಇದು ನಿಮ್ಮ ಮನೆಯ ಆದಾಯ ಹೆಚ್ಚಾಗಲು ನೆರವಾಗುತ್ತದೆ. ಮನೆಯ ಆರ್ಥಿಕ ವೃದ್ಧಿಗೆ ದಾರಿ ಮಾಡಿಕೊಡುತ್ತದೆ. 

Follow Us:
Download App:
  • android
  • ios