Asianet Suvarna News Asianet Suvarna News

ಈ ಮೂರು ವಸ್ತುಗಳು ಮನೆಯಲ್ಲಿದ್ದರೆ ಹಣಕ್ಕೆ ಕೊರತೆನೇ ಆಗಲ್ವಂತೆ....!

ಮನೆಯಲ್ಲಿ ಸದಾ ಒಂದಲ್ಲ ಒಂದು ಆರ್ಥಿಕ ತೊಂದರೆ ಏನು ಮಾಡಿದರೂ ಸರಿ ಹೋಗುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಪರಿಹಾರ. ಕೆಲವು ವಸ್ತುಗಳು ಮನೆಯಲ್ಲಿದ್ದರೆ ಸುಖ-ಸಂಪತ್ತು ನೆಲೆಸುತ್ತದೆ. ಹೀಗಾಗಿ ನಿಮ್ಮ ಮನೆಯಲ್ಲೂ ಈ ವಸ್ತುಗಳು ಇವೆಯೇ ಎಂಬುದನ್ನು ನೋಡಿಕೊಳ್ಳಿ. ಆರ್ಥಿಕ ಬಲ ತುಂಬಲು ಹೀಗೆ ಮಾಡಿ… ಹಾಗಿದ್ದರೆ ಯಾವುದು ಆ ವಸ್ತುಗಳನ್ನು ಎಂಬುದನ್ನು ನೋಡೋಣ ಬನ್ನಿ…

Keep a few things to have prosperity and make Lakshmi stay home
Author
Bangalore, First Published Mar 15, 2021, 4:09 PM IST

ಮನೆಯಲ್ಲಿ ನೆಮ್ಮದಿ - ಶಾಂತಿ ನೆಲೆಸಿರಬೇಕೆಂದರೆ ವಾಸ್ತು ದೋಷ ಇರಬಾರದು. ಮನೆಯ ಪ್ರತಿ ಮೂಲೆಯೂ ವಾಸ್ತು ಪ್ರಕಾರವಿದ್ದಲ್ಲಿ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯ. ಸರಳವಾದ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರಿಂದ  ಮನೆಯಲ್ಲಿ ಸುಖ ಮತ್ತು ಸಮೃದ್ಧಿ ಉಂಟಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ಸುಲಭವಾದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ.

ಮನೆಯಲ್ಲಿರುವ ವಸ್ತುಗಳು ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿರುವುದು ಮನೆಯ ಸದಸ್ಯರ ಖುಷಿ ಮತ್ತು ನೆಮ್ಮದಿಗೆ ಕಾರಣವಾಗಿರುತ್ತದೆ. ನಾವು ಮನೆಯಲ್ಲಿ ತಂದಿಡುವ ಕೆಲವು ವಸ್ತುಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಕೆಲವು ಸಂದರ್ಭದಲ್ಲಿ ನಮಗೆ ಅಂದವಾಗಿಯೋ, ಇಷ್ಟವಾಗಿಯೋ ಕೆಲವು ವಸ್ತುಗಳನ್ನು ತಂದು ಇಟ್ಟುಕೊಂಡು ಬಿಡುತ್ತೇವೆ. ಇದರಿಂದ ಕೆಲವು ಬಾರಿ ಒಳ್ಳೆಯದಾದರೂ ಹಲವಾರು ಬಾರಿ ಕೆಟ್ಟ ಅನುಭವಗಳು, ಸಂಕಷ್ಟಗಳು ಎದುರಾಗುತ್ತವೆ. ಆದರೆ, ನಮಗೆ ಇದರ ಅರಿವೇ ಇರುವುದಿಲ್ಲ.

ಇದನ್ನು ಓದಿ: ಈ 5 ರಾಶಿಯವರಿಗೆ ಅಡುಗೆ ಮಾಡೋದಂದ್ರೆ ತುಂಬಾ ಇಷ್ಟವಂತೆ ...! 

ಕೆಲವು ವಸ್ತುಗಳನ್ನು ನಾವು ಮನೆಯಲ್ಲಿ ತಂದಿಟ್ಟುಕೊಂಡರೆ ನೆಗೆಟೀವ್ ಅಂಶಗಳು ಆವರಿಸಿ ಎಲ್ಲವಕ್ಕೂ ಅಡ್ಡಿ ಆತಂಕಗಳು ಎದುರಾಗುತ್ತವೆ. ಮನಸ್ಸೂ ಸಹ ಉಲ್ಲಸಿತವಾಗಿರುವುದಿಲ್ಲ. ಅದೇ, ಇನ್ನು ಕೆಲವು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅವು ನಮಗೆ ಖುಷಿಯನ್ನು ತಂದುಕೊಡುತ್ತದೆ, ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳುತ್ತದೆ. ಧನ ಲಾಭವನ್ನುಂಟು ಮಾಡಿ ಆರ್ಥಿಕ ಪ್ರಗತಿ ಸಾಧಿಸುವಂತೆ ಮಾಡುತ್ತದೆ. ಹೀಗಾಗಿ ಯಾವುತ್ತೂ ಮನೆಯಲ್ಲಿ ಯಾವುದಕ್ಕೂ ಕೊರತೆಯೇ ಆಗುವುದಿಲ್ಲ. 

Keep a few things to have prosperity and make Lakshmi stay home



ಹೀಗೆ ಯಾವ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡರೆ ಹಣಕ್ಕೆ ಕೊರತೆಯಾಗುವುದಿಲ್ಲ. ಇವು ಈಗಾಗಲೇ ನಿಮ್ಮ ಮನೆಯಲ್ಲಿದ್ದರೆ ಬಹಳ ಒಳ್ಳೆಯದು, ಒಂದು ವೇಳೆ ಅವುಗಳು ಇಲ್ಲದಿದ್ದರೆ ಶೀಘ್ರವೇ ಹೋಗಿ ತಂದಿಟ್ಟುಕೊಳ್ಳಿ. ಹಾಗಾಗಿ ಮನೆಯ ಸಮೃದ್ದಿಗೆ ಕಾರಣವಾಗುವ ಸರಳ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ... 

ಇದನ್ನು ಓದಿ: ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯಲು ಹೀಗಿರಲಿ ವಾಸ್ತು!...

ಕಮಲದ ಮೇಲೆ ಕುಳಿತಿರುವ  ಲಕ್ಷ್ಮೀದೇವಿ :
ಎಲ್ಲರ ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೋ ಇದ್ದೇ ಇರುತ್ತದೆ. ಆದರೆ, ಯಾವ ರೀತಿಯ ಫೋಟೋ ಇಟ್ಟುಕೊಂಡರೆ ಬಹಳ ಒಳ್ಳೆಯದು..? ಯಾವ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು..? ಹೀಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಏನೆಲ್ಲ ಪರಿಣಾಮ ಬೀರುತ್ತದೆ..? ಆರ್ಥಿಕವಾಗಿ ಹೇಗೆ ಲಾಭವಾಗುತ್ತದೆ. ಧನಲಾಭ ಹೆಚ್ಚುತ್ತಾ ಹೋಗುತ್ತದೆ ಎಂಬುದು ಬಹಳಷ್ಟು ಜನಕ್ಕೆ ಗೊತ್ತಿರುವುದಿಲ್ಲ. ಇದಕ್ಕೆ ಮುಖ್ಯವಾಗಿ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮೀದೇವಿಯು ಕೈಯಿಂದ ಬಂಗಾರದ ನಾಣ್ಯಗಳನ್ನು ಮಳೆಯಂತೆ ಸುರಿಸುತ್ತಿರುವ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ಫೋಟೋವನ್ನು ಇಟ್ಟುಕೊಂಡರೆ ಸಾಲದು, ಇದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟರೆ ಇನ್ನೂ ಒಳ್ಳೆಯದಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯು ಮನೆಯ ಮತ್ತು ಮನೆಯ ಸದಸ್ಯರ ಮೇಲೆ ಸದಾ ಇರುತ್ತದೆ. ಅದರಿಂದಾಗಿ ಮನೆಯಲ್ಲಿ ಸದಾ ಹಣ ಕೊರತೆ ಇಲ್ಲದೆ, ಸಂಪತ್ತು ನೆಲೆಸಲು ಸಹಾಯಕವಾಗುತ್ತದೆ.

ನೀರಿನಿಂದ ತುಂಬಿದ ಮಡಿಕೆ ಇದ್ದರೆ ಲಾಭ:
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರಿನಿಂದ ತುಂಬಿದ ಮಡಿಕೆ ಅಥವಾ ಜೆಗ್ ಅನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಉತ್ತಮ. ಹೀಗೆ ಮಡಿಕೆಯಲ್ಲಿ ನೀರು ತುಂಬಿಡುವುದರಿಂದ ಮನೆಯಲ್ಲಿ ಹಣವೂ ತುಂಬಿಕೊಂಡಿರುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. ನಿಮ್ಮ ಮನೆಯಲ್ಲಿ ಮಡಿಕೆ ಇಲ್ಲದಿದ್ದರೆ ಈಗಲೇ ತಂದಿಟ್ಟುಕೊಳ್ಳಬಹುದು. 

ಇದನ್ನು ಓದಿ: ವಾಸ್ತು ಪ್ರಕಾರ ಮನೆಗೆ ಅಡಿಪಾಯ ಹಾಕಿ, ಇಲ್ಲದಿದ್ರೆ ಕೇಡಾಗಬಹುದು..!

ಆಮೆ ಮತ್ತು ಮೀನಿನ ಪ್ರತಿಮೆಯನ್ನು ಇಟ್ಟುಕೊಳ್ಳಿ
ಮನೆಯ ಉತ್ತರ ದಿಕ್ಕಿನಲ್ಲಿ ಲೋಹದ ಆಮೆ ಅಥವಾ ಮೀನಿನ ಪ್ರತಿಮೆಯನ್ನು ಇಡುವುದರಿಂದ ಮನೆಯ ಸದಸ್ಯರಿಗೆ  ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಇವುಗಳು ಪಾಸಿಟಿವ್ ಎನರ್ಜಿಯನ್ನೂ ಕೊಡುತ್ತವೆ. ಹೀಗಾಗಿ ಮನೆಯಲ್ಲಿ ಹೊಂದಬೇಕೆಂದು ಹೇಳಲಾಗುತ್ತದೆ. 

Follow Us:
Download App:
  • android
  • ios