ಈ 5 ರಾಶಿಯವರಿಗೆ ಅಡುಗೆ ಮಾಡೋದಂದ್ರೆ ತುಂಬಾ ಇಷ್ಟವಂತೆ ...!

ಪ್ರತ್ಯೇಕ ರಾಶಿಯವರಿಗೆ ಬೇರೆ ಬೇರೆ ಪ್ರಿಯವಾದ ವಿಷಯಗಳಿರುತ್ತವೆ. ಕೆಲವರಿಗೆ ಚಿತ್ರ ಬಿಡಿಸುವುದು ಪ್ರಿಯವಾದರೆ ಮತ್ತೆ ಕೆಲವರಿಗೆ ನೃತ್ಯ, ಸಂಗೀತ ಹೀಗೆ ರಾಶಿಗನುಗುಣವಾಗಿ ವಿವಿಧ ಅಭಿರುಚಿಗಳಿರುತ್ತವೆ. ಅದೇ ರೀತಿ ರಾಶಿಗಳಿಗನುಗುಣವಾಗಿ ಅಡುಗೆಯನ್ನೂ ಇಷ್ಟಪಡುವವರಿದ್ದಾರೆ. ಈ 5 ರಾಶಿಯವರಿಗೆ ಅಡುಗೆ ಮಾಡುವುದೆಂದರೆ ಬಲು ಇಷ್ಟವಂತೆ. ಹಾಗಾದರೆ ಆ 5 ರಾಶಿ ಯಾವುವು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ.. 

These five zodiac sign people love cooking

ಅಡುಗೆ ಮಾಡುವುದು ಒಂದು ಕಲೆ. ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಕಷ್ಟ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ರಾಶಿಗನುಗುಣವಾಗಿ ಗುಣ ಸ್ವಭಾವಗಳು ಭಿನ್ನವಾಗಿರುತ್ತವೆ. ಹಾಗಾಗಿ ಕೆಲವು ಕೆಲಸಗಳು ಒಬ್ಬರಿಗೆ ಇಷ್ಟವಾದರೆ, ಮತ್ತೆ ಕೆಲವರಿಗೆ ಅದನ್ನು ಮಾಡಲು ಮನಸ್ಸೇ ಇರುವುದಿಲ್ಲ. ಇನ್ನು ಅಡುಗೆ ಮಾಡುವುದರಲ್ಲಿ ಗಂಡು-ಹೆಣ್ಣು ಎಂಬ ಭೇದವೂ ಇಲ್ಲ. ಮಹಿಳೆಯರಷ್ಟೇ ಪುರುಷರೂ ಸಹ ಅತ್ಯುತ್ತಮವಾಗಿ ಅಡುಗೆ ಮಾಡುತ್ತಾರೆ. ಬಹುತೇಕ ಪಂಚತಾರಾ ಹೋಟೆಲ್ ಗಳು, ಹೋಟೆಲ್ ಗಳಲ್ಲಿ ಚೆಫ್, ಅಡುಗೆ ಭಟ್ಟರು ಇರುವುದು ಪುರುಷರೇ ಇದ್ದಾರೆ. ಹಾಗಂತ ಮನೆಯ ವಿಷಯಕ್ಕೆ ಬಂದಾಗ ಗೃಹಿಣಿಯರು ಮೇಲುಗೈ ಸಾಧಿಸುತ್ತಾರೆ. ಅವರೇ ಮನೆಯ ಹೋಂ ಮಿನಿಸ್ಟರ್ ಆಗಿರುತ್ತಾರೆ. ಅವರ ಕೈ ರುಚಿಯೋ ರುಚಿ.

ಇದನ್ನು ಓದಿ: ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯಲು ಹೀಗಿರಲಿ ವಾಸ್ತು!...

ಇಲ್ಲಿ ವಿಷಯ ಏನೆಂದರೆ ಅಡುಗೆ ಮಾಡುವುದಕ್ಕೂ ಒಂದು ಅಭಿರುಚಿ, ಆಸಕ್ತಿ, ಇಚ್ಛೆ ಇರಬೇಕಾಗುತ್ತದೆ. ಅದಿಲ್ಲದೆ ಮಾಡಿದರೆ ಮಾಡಿದ ಅಡುಗೆ ಸಹ ಅಷ್ಟಕ್ಕಷ್ಟೇ. ಇನ್ನು ಇವೆಲ್ಲ ಇದ್ದು ಪದಾರ್ಥಗಳನ್ನು ತಯಾರಿಸಿದರೆ ಅಮೃತಕ್ಕೆ ಸಮನಾಗಿ ಹೊಗಳುವುದೂ ಉಂಟು. ಇದೆಲ್ಲದರ ಜೊತೆಗೆ ಅಡುಗೆ ಎಂದರೆ ಮಾರು ದೂರ ಸರಿಯುವವರೂ, ನಿರಾಸಕ್ತಿ ಉಳ್ಳವರೂ ಇರುತ್ತಾರೆ. ಇದಕ್ಕೆ ನಾನಾ ಕಾರಣಗಳೂ ಇರಬಹುದು. ಆದರೆ, ರಾಶಿ ಚಕ್ರವೂ ಕಾರಣ ಎಂದರೆ ನೀವು ನಂಬಲೇಬೇಕು. 

ಹೌದು. ಅಡುಗೆ ಮಾಡುವ ವಿಚಾರದಲ್ಲಿ ಕೆಲವು ರಾಶಿಯವರಿಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟವಂತೆ. ಈ ರಾಶಿಯವರಿಗೆ ಪಾಕಶಾಸ್ತ್ರದ ಬಗ್ಗೆ ಹುಟ್ಟಿನಿಂದಲೇ ಆಸಕ್ತಿ ಬೆಳೆದು ಬಂದಿರುತ್ತದಂತೆ, ಆದರೆ, ಉಳಿದ ಕೆಲ ರಾಶಿಯವರಿಗೆ ಅಷ್ಟಕ್ಕಷ್ಟೇ ಎನ್ನಲಾಗಿದೆ. ಈಗ ಅಡುಗೆಯನ್ನು ಇಷ್ಟಪಟ್ಟು ಮಾಡುವ ಐದು ರಾಶಿಗಳಿದ್ದು, ಯಾವ ಯಾವ ರಾಶಿಯವರಿಗೆ ಅಡುಗೆ ಇಷ್ಟ ಎಂಬುದನ್ನು ತಿಳಿಯೋಣ..

ಮಿಥುನ ರಾಶಿ 
ಈ ರಾಶಿಯವರಿಗೆ ಅಡುಗೆ ಮಾಡುವುದೆಂದರೆ ವಿಶೇಷ ಆಸಕ್ತಿ.  ಹೊಸ ಹೊಸ ಅಡುಗೆಗಳನ್ನು ಮಾಡುವುದು ಮತ್ತು ಅದರಲ್ಲಿ  ವಿವಿಧ ತರಹದ ಮಸಾಲೆ ಪದಾರ್ಥಗಳನ್ನು ಬಳಸುವುದು ಇವರಿಗೆ ತುಂಬಾ ಇಷ್ಟ. ಮಿಥುನ ರಾಶಿಯವರಿಗೆ ಹೋಟೆಲ್ ಶೈಲಿಯ ಅಡುಗೆಗಳನ್ನು ತಯಾರಿಸಿವುದು ಮತ್ತು ಅದನ್ನು ಅಲಂಕರಿಸುವುದು ಇವರ ಇಷ್ಟದ ಹವ್ಯಾಸಗಳಲ್ಲೊಂದಾಗಿರುತ್ತದೆ.

ಕರ್ಕಾಟಕ ರಾಶಿ 
ಈ ರಾಶಿಯವರಿಗೆ ತಮ್ಮ ಪ್ರೀತಿಪಾತ್ರರಿಗೆ ವಿಶೇಷವಾದ ಅಡುಗೆ ಮಾಡಿ ಬಡಿಸುವುದೆಂದರೆ ಬಹಳ ಇಷ್ಟ. ರುಚಿ ಮತ್ತು ಶುಚಿಯಾದ ಅಡುಗೆಯಿಂದ ಮನೆಯವರ ಮತ್ತು ಸ್ನೇಹಿತರ ಮನಸ್ಸನ್ನು ಗೆಲ್ಲಲು ಸಾಧ್ಯ ಎಂಬುದು ಇವರಿಗೆ ತಿಳಿದಿರುತ್ತದೆ.  ಹಾಗಾಗಿ ವಿವಿಧ ರೀತಿಯ ವಿಶೇಷ ಖಾದ್ಯಗಳನ್ನು ತಯಾರಿಸುವುದನ್ನು ಇವರು ಇಷ್ಟಪಡುತ್ತಾರೆ.

ಇದನ್ನು ಓದಿ: ವಾಸ್ತು ಪ್ರಕಾರ ಮನೆಗೆ ಅಡಿಪಾಯ ಹಾಕಿ, ಇಲ್ಲದಿದ್ರೆ ಕೇಡಾಗಬಹುದು..!

ಕನ್ಯಾ ರಾಶಿ 
ಈ ರಾಶಿಯವರಿಗೆ ಆಹಾರವನ್ನು ವೇಸ್ಟ್ ಮಾಡುವುದನ್ನು ಇಷ್ಟಪಡುವುದಿಲ್ಲ. ಉಳಿದಿರುವ ಆಹಾರದಲ್ಲಿ ಹೊಸತಾದ ಮತ್ತು ರುಚಿಯಾದ ಅಡುಗೆಯನ್ನು ತಯಾರಿಸುವುದರ ಬಗ್ಗೆ ಚಿಂತಿಸುತ್ತಾರೆ. ಅದರಿಂದ ರುಚಿಯಾದ ಖಾದ್ಯವನ್ನು ತಯಾರಿಸುತ್ತಾರೆ. ಆಹಾರವನ್ನು ಬಡಿಸುವ ಪಾತ್ರೆಯ ಬಣ್ಣದ ಆಯ್ಕೆಯ ಬಗ್ಗೆಯೂ ಇವರು ವಿಶೇಷ ಆಸಕ್ತಿ ವಹಿಸುತ್ತಾರೆ. ರುಚಿಯ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತಾರೆ. 

ತುಲಾ ರಾಶಿ 
ಈ ರಾಶಿಯವರಿಗೆ ಅಡುಗೆ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಬಗ್ಗೆ ವಿಶೇಷ ಅರಿವಿರುತ್ತದೆ. ಯಾವ ಪದಾರ್ಥವನ್ನು ಬಳಸಿದರೆ ಅಡುಗೆ ರುಚಿ ಆಗುತ್ತದೆ ಎಂಬುದರ ಬಗ್ಗೆ ಹುಟ್ಟಿನಿಂದಲೇ ತಿಳಿದಿರುತ್ತಾರೆ. ಅಡುಗೆಯಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ಮಾಡುವುದು ಇವರ ಹವ್ಯಾಸ . ಅಷ್ಟೇ ಅಲ್ಲದೆ ರುಚಿಯಾದ ಖಾದ್ಯವನ್ನು ತಯಾರಿಸುತ್ತಾರೆ.     

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

ಮಕರ ರಾಶಿ 
ಈ ರಾಶಿಯವರು ನಿತ್ಯದ ಒತ್ತಡದ ಕೆಲಸ ಕಾರ್ಯಗಳಿಂದ ವಿರಾಮ ತೆಗೆದುಕೊಳ್ಳಲು ಅಡುಗೆಯ ಮೊರೆ ಹೋಗುತ್ತಾರೆ. ಮಕರ ರಾಶಿಯವರಿಗೆ ಅಡುಗೆಯು ಒಂದು ರೀತಿಯ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಅಡುಗೆ ಮಾಡುತ್ತಾ ಒತ್ತಡವನ್ನು  ನಿವಾರಿಸಿಕೊಳ್ಳುವುದಲ್ಲದೆ, ಹೊಸ ಉತ್ಸಾಹವನ್ನು ಪಡೆಯುತ್ತಾರೆ.   

Latest Videos
Follow Us:
Download App:
  • android
  • ios