ಪೊರಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಗೌರವದಿಂದ ಕಾಣಬೇಕು. ಪೊರಕೆಯ ಬಗ್ಗೆ ಹಲವು ನಂಬಿಕೆಗಳಿವೆ, ಹಲವು ತಪ್ಪು ನಂಬಿಕೆಗಳಿವೆ. ವಾಸ್ತು ಪ್ರಕಾರ ಅದನ್ನು ಇಟ್ಟುಕೊಂಡರೆ ಶುಭ ಖಚಿತ.

ನಿತ್ಯ ನಮ್ಮ ಮನೆ ಗುಡಿಸಿ ಸ್ವಚ್ಛವಾಗಿಡುವ ಪೊರಕೆ ಅಥವಾ ಕಸಬರಿಕೆಯ ಬಗ್ಗೆ ಕೆಲವು ಒಳ್ಳೆಯ ನಂಬಿಕೆಗಳೂ ಇವೆ, ತಪ್ಪು ಕಲ್ಪನೆಗಳೂ ಇವೆ. ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿಯ ಸ್ವರೂಪ ಎಂದೇ ತಿಳಿಯಲಾಗಿದೆ. ಪುರಾಣಗಳ ಪ್ರಕಾರ ,ಲಕ್ಷ್ಮಿದೇವಿಯು ವೈಕುಂಠಕ್ಕೆ ಹೋದಾಗ ಆ ಸ್ಥಳವನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಿದಳು ಎಂಬ ಪ್ರತೀತಿ ಇದೆ. ಹಾಗಾಗಿ ಪೊರಕೆಯನ್ನು ದೇವಿಯ ಸ್ವರೂಪ ಎಂದೇ ಭಾವಿಸಲಾಗುತ್ತದೆ. ಪೊರಕೆಯನ್ನು ಕೂಡ ಗೌರವದಿಂದ ಕಾಣುವುದರಿಂದ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಇಡೋದ್ರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಮನೆಯಲ್ಲಿರುವವರ ಕಾಲಿಗೆ ಪೊರಕೆ ತಾಗದಂತೆ ಅದನ್ನು ಇಡಬೇಕು. ಪೊರಕೆ ಲಕ್ಷ್ಮಿಯ ರೂಪವಾದ್ದರಿಂದ ನಾವು ಅದನ್ನು ಕಾಲಿನಲ್ಲಿ ಮುಟ್ಟಬಾರದು. ಲಕ್ಷ್ಮಿದೇವಿಯ ರೂಪವಾದ ಪೊರಕೆಯನ್ನು ತುಳಿಯುವುದು ಕೂಡ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. 

ಹಾಗೇ ಪೊರಕೆಯನ್ನು ಬೇರೆಯವರಿಗೆ ಕೈಯಲ್ಲಿ ಕೊಡಬಾರದಂತೆ. ಅದರಿಂದ ಅವರಿಬ್ಬರ ನಡುವೆ ಕಲಹ ಸೃಷ್ಟಿಯಾಗುತ್ತದೆ ಎಂಬ ನಂಬಿಕೆ ಜನಪದೀಯರಲ್ಲಿ ಇದೆ. ಹೀಗಾಗಿ ಪೊರಕೆ ಕೊಡಬೇಕಾದಾಗ ನೆಲದಲ್ಲಿ ಇಡುತ್ತಾರೆ. ಮತ್ತೊಬ್ಬರು ಎತ್ತಿಕೊಳ್ಳುತ್ತಾರೆ. ಪೊರಕೆ ಎಂದರೆ ಲಕ್ಷ್ಮಿದೇವಿ ಎಂಬ ನಂಬಿಕೆಯೂ ಇರುವುದರಿಂದ, ಪೊರಕೆ ಕೊಟ್ಟರೆ ಹಣ ಕೊಟ್ಟಂತೆ ಎಂಬ ನಂಬಿಕೆ ಸಹ ಇದೆ. ಹಣ ಜಗಳಕ್ಕೆ ಮೂಲ. ಹೀಗಾಗಿ ಸಂಬಂಧಿಗಳು ಪೊರಕೆಯನ್ನು ಕೈ ಬದಲಿಸಿಕೊಳ್ಳಬಾರದು ಎಂಬ ನಂಬಿಕೆ ಬಂದಿರಬಹುದು. 

ಪೊರಕೆ ಸಂಪತ್ತಿನ ಸಂಕೇತ. ಆದ್ದರಿಂದ ಅದನ್ನು ಮರೆಮಾಡಬೇಕು. ಆದುದರಿಂದ ಒಬ್ಬರ ಮನೆಯ ಪೊರಕೆಯನ್ನು ಬೇರೆಯವರಿಗೆ ಉಪಯೋಗಿಸಲು ಕೊಡುವುದಿಲ್ಲ. ನಂಬಿಕೆಗಳ ಪ್ರಕಾರ, ಮನೆಯ ಪೊರಕೆ ತಿಳಿಯದೆ ಮತ್ತೊಂದು ಮನೆಗೆ ತಲುಪಿದರೆ, ಮನೆಯ ಶ್ರೇಯಸ್ಸು ಕಡಿಮೆಯಾದಂತೆ. ಪೊರಕೆಯನ್ನು ಯಾವುದೇ ಭಾರವಾದ ವಸ್ತುವಿನ ಕೆಳಗೆ ಇಡಬಾರದು, ಆಕಸ್ಮಿಕವಾಗಿ ಮನೆಯಲ್ಲಿ ಯಾವುದೇ ಭಾರವಾದ ವಸ್ತುವಿನ ಅಡಿಯಲ್ಲಿ ಪೊರಕೆ ಒತ್ತಿದರೆ, ಆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವಂತೆ. 

ಮನೆಯಲ್ಲಿ ಪೊರಕೆ ಬಳಕೆಯಲ್ಲಿಲ್ಲದಿದ್ದಾಗ, ಅದನ್ನು ಕಾಣದಂತೆ ಇಡಬೇಕು. ಪೊರಕೆಯನ್ನು ಎಂದಿಗೂ ನಿಂತಿರುವಂತೆ ಇಡಬಾರದು. ಉಲ್ಟಾ ಕೂಡ ಇಡಬಾರದು. ಗೊತ್ತಿದ್ದೂ ತಿಳಿಯದೆಯೂ ಪೊರಕೆಯನ್ನು ತುಳಿಯಬಾರದು ಎಂಬುದನ್ನು ನೆನಪಿನಲ್ಲಿಡಿ. ಪೊರಕೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ತುಂಬಾ ಹಳೆಯ ಪೊರಕೆಗಳನ್ನು ಮನೆಯಲ್ಲಿ ಇಡಬೇಡಿ. ಹಳೆಯ ಪೊರಕೆಯನ್ನು ಬದಲಾಯಿಸಬೇಕಾದರೆ ಶನಿವಾರದಂದು ಹಳೆಯ ಪೊರಕೆಯನ್ನು ಬದಲಾಯಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶನಿವಾರದಂದು ಮನೆಯಲ್ಲಿ ವಿಶೇಷ ಶುಚಿತ್ವವನ್ನು ಮಾಡಬೇಕು.

ಇನ್ನು ಶನಿವಾರದಂದು ಹೊಸ ಪೊರಕೆಯನ್ನು ಖರೀದಿಸುವುದು ಮಂಗಳಕರ ಅಲ್ಲವಂತೆ. ಏಕೆಂದರೆ ಇದರಿಂದ ವ್ಯಕ್ತಿ ಶನಿ ದೋಷದಿಂದ ಬಳಲಬಹುದು. ಇದರೊಂದಿಗೆ ಶುಕ್ಲ ಪಕ್ಷದಲ್ಲಿಯೂ ಪೊರಕೆಯನ್ನು ಖರೀದಿಸಬಾರದು. ಹೀಗೆ ಮಾಡುವುದರಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ಭಾನುವಾರ ಮತ್ತು ಗುರುವಾರದಂದು ಪೊರಕೆ ಖರೀದಿಯನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುವುದಿಲ್ಲ. ಈ ನಿಯಮಗಳನ್ನು ಅನುಸರಿಸದಿದ್ದರೆ, ವ್ಯಕ್ತಿಯು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಧುಮಂಚ ಚೆನ್ನಾಗಿರಬೇಕೆಂದರೆ ಬೆಡ್‌ರೂಂ ಬಣ್ಣವೂ ಕೊಂಚ ಚೆನ್ನಾಗಿರಲಿ ಗುರೂ!

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಮನೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಡುವೆ ಇಡುವುದು ಒಳ್ಳೆಯದು. ಯಾವಾಗಲೂ ಅದನ್ನು ಅಡ್ಡ ಮಲಗಿಸಿ. ಅಡುಗೆಮನೆಯಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಪೊರಕೆಯನ್ನು ಎಂದಿಗೂ ಇಡಬೇಡಿ. ಹಾಗೆ ಮಾಡುವುದರಿಂದ ಮನೆಯಲ್ಲಿ ಬಡತನ ಮತ್ತು ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಪೊರಕೆಯನ್ನು ಹೊರಗಿನವರು ನೋಡದ ಸ್ಥಳದಲ್ಲಿ ಯಾವಾಗಲೂ ಅಡಗಿಸಿಡಬೇಕು. ಮನೆಯ ಪೊರಕೆಗಳು ಮುರಿದುಹೋದರೆ ಅಥವಾ ತುಂಬಾ ಹಳೆಯದಾಗಿದ್ದರೆ, ಅವುಗಳನ್ನು ತಕ್ಷಣವೇ ಬದಲಾಯಿಸಬೇಕು. 

Vastu Tips: ಲಕ್ಷ್ಮಿ ದೇವಿ ಮನೆಗೆ ಆಗಮಿಸಬೇಕೆಂದರೆ ಅಕ್ಷಯ ತೃತೀಯಕ್ಕೂ ಮುನ್ನ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ