ಮನೆಯೊಳಗಿರೋ ನಕಾರಾತ್ಮಕ ಶಕ್ತಿಯನ್ನು ಪತ್ತೆ ಹಚ್ಚೋದು ಹೇಗೆ?
ಮನೆಯೊಳಗೆ ನಕಾರಾತ್ಮಕ ಶಕ್ತಿಯಿದೆ ಎಂಬುದು ಬಹುತೇಕರಿಗೆ ತಿಳಿದಿರೋದಿಲ್ಲ. ನಕಾರಾತ್ಮಕ ಶಕ್ತಿ ಮನೆಯೊಳಗೆ ನೆಲೆಸಿದೆ ಎಂಬುದಕ್ಕೆ ಅನೇಕ ಸೂಚನೆಗಳು ದಿನನಿತ್ಯ ಸಿಗುತ್ತಲೇ ಇರುತ್ತವೆ.ಆದ್ರೆ ನಾವು ಗುರುತಿಸಿರೋದಿಲ್ಲವಷ್ಟೇ. ಹಾಗಾದ್ರೆ ಆ ಸೂಚನೆಗಳು ಯಾವುವು? ವಾಸ್ತುಶಾಸ್ತ್ರದ ಪ್ರಕಾರ ಇದಕ್ಕೆ ಪರಿಹಾರವಿದೆಯೇ?
ಈ ಜಗತ್ತನ್ನು ಸಕಾರಾತ್ಮಕ ಶಕ್ತಿಯೊಂದು ಮುನ್ನಡೆಸುತ್ತಿದೆ ಎಂದು ನೀವು ನಂಬೋದಾದ್ರೆ,ನಕಾರಾತ್ಮಕ ಶಕ್ತಿಗಳು ಕೂಡ ಇವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ನೆಗೆಟಿವ್ ಎನರ್ಜಿ ಎಂದ ತಕ್ಷಣ ಭೂತ-ಪ್ರೇತಗಳ ಕಾಟವೆಂದು ಭಾವಿಸಬೇಕಾಗಿಲ್ಲ. ಅಸೂಯೆ,ಪರನಿಂದೆ,ಸಿಟ್ಟು,ಆಲಸ್ಯ ಮುಂತಾದ ವರ್ತನೆಗಳು ಕೂಡ ನಕಾರಾತ್ಮಕ ಶಕ್ತಿಗಳೇ. ಇವು ನಮ್ಮ ಯಶಸ್ಸು,ನೆಮ್ಮದಿಗೆ ಭಂಗ ತರಬಲ್ಲವು.ಈ ನಕಾರಾತ್ಮಕ ಶಕ್ತಿಗಳು ನಮ್ಮ ಸುತ್ತಲಿನ ವಾತಾವರಣದ ಮೇಲೂ ಪ್ರಭಾವ ಬೀರಬಲ್ಲವು.ಉದಾಹರಣೆಗೆ ನೀವು ಪ್ರತಿದಿನ ಚಿಕ್ಕಪುಟ್ಟ ವಿಷಯಕ್ಕೆ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ರೆ ಅವರೆಲ್ಲರ ನೆಮ್ಮದಿ ಹಾಳಾಗುತ್ತೆ.ಇಂಥ ನೆಗೆಟಿವ್ ವಾತಾವರಣ ಮನೆಯಲ್ಲಿದ್ರೆ ಅದು ಉಳಿದವರ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಕೂಡ.ಆದ್ರೆ ಕೆಲವೊಮ್ಮೆನಮ್ಮ ಕೈಮೀರಿದಂತಹ ಕೆಲವು ಘಟನೆಗಳು ಮನೆಯಲ್ಲಿ ಪದೇಪದೆ ಘಟಿಸಿ, ನೆಮ್ಮದಿ ಕೆಡಿಸುತ್ತವೆ.ಇಂಥ ನಕಾರಾತ್ಮಕ ಶಕ್ತಿಗಳು ವಾಸ್ತುದೋಷದ ಕಾರಣದಿಂದ ಹುಟ್ಟಿಕೊಂಡಿರೋ ಸಾಧ್ಯತೆಯಿದೆ.
- ಪದೇಪದೆ ಮನೆಯ ಸದಸ್ಯರಿಗೆ ಅನಾರೋಗ್ಯ ಕಾಡೋದು.
-ಉದ್ಯೋಗ ಅಥವಾ ಯಾವುದೇ ಶುಭ ಕಾರ್ಯಕ್ರಮಕ್ಕೆ ಅಡ್ಡಿಯುಂಟಾಗೋದು. ಕೊನೆಯ ಹಂತದಲ್ಲಿ ಉತ್ತಮ ಅವಕಾಶ ಕೈತಪ್ಪಿಹೋಗೋದು.
-ಎಷ್ಟೇ ಪ್ರಯತ್ನಪಟ್ಟರೂ ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದಿರೋದು.
-ಸದಾ ಆಲಸ್ಯ ಕಾಡೋದು, ಯಾವುದೇ ಕೆಲಸದಲ್ಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗದಿರೋದು.
-ಸಮಸ್ಯೆ ಎದುರಾದಾಗ ಸಮರ್ಪಕವಾಗಿ ಯೋಚಿಸಲು ಸಾಧ್ಯವಾಗದಿರೋದು.
-ಪದೇಪದೆ ನಕಾರಾತ್ಮಕ ಯೋಚನೆಗಳು ಬರೋದು ಅಥವಾ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳು ಹುಟ್ಟಿಕೊಳ್ಳೋದು.
-ಕುಟುಂಬ ಸದಸ್ಯರ ನಡುವೆ ಸದಾ ಜಗಳ ನಡೆಯೋದು.
-ಮನೆಯಲ್ಲಿ ವಿಚಿತ್ರ ಘಟನೆಗಳು ಅಥವಾ ಅನುಭವಗಳಾಗೋದು.
ಗಣೇಶ ವಿಗ್ರಹವನ್ನುಮನೆಯ ಯಾವ ದಿಕ್ಕಿನಲ್ಲಿಡಬೇಕು ಗೊತ್ತಾ?
ಕಾರಣವೇನು?
ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಅನುಭವವಾಗಲು ವಾಸ್ತುದೋಷ ಕಾರಣವಾಗಿರೋ ಸಾಧ್ಯತೆಯಿದೆ.ಮನೆಯ ದಕ್ಷಿಣ ಹಾಗೂ ಪಶ್ಚಿಮ ಪ್ರದೇಶದಲ್ಲಿ ಗಂಭೀರ ವಾಸ್ತುದೋಷಗಳಿದ್ರೆ ಇಂಥ ಅನುಭವವಾಗುತ್ತದೆ.ಪೂಜಾ ಕೋಣೆ ವಾಸ್ತು ಪ್ರಕಾರ ಇಲ್ಲದೇ ಇದ್ದಾಗ ಕೂಡ ಇಂಥ ಅನುಭವವಾಗುತ್ತದೆ.ಇನ್ನುಮನೆಯನ್ನುಸ್ವಚ್ಛವಾಗಿಟ್ಟುಕೊಳ್ಳದೇ ಇರೋದು,ಒಡೆದುಹೋದ, ತುಂಡಾದ ವಸ್ತುಗಳನ್ನು ಮನೆಯೊಳಗಿಟ್ಟುಕೊಳ್ಳೋದ್ರಿಂದ ನಕಾರಾತ್ಮಕ ಶಕ್ತಿ ಸೃಷ್ಟಿಯಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ.ಹಾಗಾದ್ರೆ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೋಗಲಾಡಿಸೋದು ಹೇಗೆ? ವಾಸ್ತುಶಾಸ್ತ್ರದ ಕೆಲವು ಸರಳ ಸಲಹೆಗಳನ್ನು ಅನುಸರಿಸೋ ಮೂಲಕ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗಿಡಬಹುದು.
ಮನೆಯ ಪ್ರವೇಶದ್ವಾರ ಸ್ವಚ್ಛವಾಗಿಡಿ
ಇದ್ರಿಂದ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ದೂರವಿಡಲು ಸಾಧ್ಯವಾಗೋ ಜೊತೆ ಮನೆಗೆ ಬರೋ ಅತಿಥಿಗಳಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಕೂಡ ಮೂಡುತ್ತೆ.ಇನ್ನು ಪ್ರವೇಶ ದ್ವಾರದಲ್ಲಿ ಚಿಕ್ಕ ಗಿಡಗಳಿರೋ ಪಾಟ್‌ಗಳನ್ನಿಡೋದ್ರಿಂದ ಮನೆಗೆ ಎಂಟ್ರಿ ಆಗೋವಾಗಲೇ ಖುಷಿ ಹಾಗೂ ನೆಮ್ಮದಿ ಅನುಭವವಾಗುತ್ತೆ. ಮನೆಯೊಳಗಷ್ಟೇ ಕ್ಲೀನ್ ಆಗಿದ್ರೆ ಸಾಲದು, ಹೊರಗೂ ಸ್ವಚ್ಛವಾಗಿರಬೇಕು. ಹೀಗಾಗಿ ಪ್ರತಿದಿನ ಮನೆಯ ಮುಂಬಾಗಿಲು ತೊಳೆಯಬೇಕು.
ಬೇಕಾ ಬಿಟ್ಟಿ ವಿಂಟ್ ಚೈಮ್ ತೂಗು ಬಿಡೋದು ಅಪಾಯ: ಅದಕ್ಕೂ ಇದೆ ವಾಸ್ತು..!
ಉಪ್ಪಿನಿಂದ ನಕಾರಾತ್ಮಕ ಶಕ್ತಿಯ ನಾಶ
ಹೌದು, ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ನಾಶಮಾಡೋ ತಾಕತ್ತಿದೆ. ಉಪ್ಪು,ಲಿಂಬೆಹಣ್ಣಿನ ರಸ,ವಿನೆಗರ್ ಮಿಶ್ರಿತ ನೀರಿನಿಂದ ಮನೆಯ ಬಾಗಿಲುಗಳ ಚಿಲಕ, ಕಿಟಕಿಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಹಾಗೆಯೇ ಮನೆ ಒರೆಸೋವಾಗ ನೀರಿಗೆ ಸ್ವಲ್ಪ ಉಪ್ಪು ಬೆರೆಸಬೇಕು. ಇದ್ರಿಂದ ನೆಲದ ಮೆಲಿರೋ ಕೀಟಾಣುಗಳು ನಾಶವಾಗೋ ಜೊತೆ ಮನೆಯಲ್ಲಿರೋ ನಕಾರಾತ್ಮಕ ಶಕ್ತಿಗಳು ಕೂಡ ದೂರವಾಗುತ್ತವೆ. ಬಾತ್‌ರೂಮ್ ಹಾಗೂ ಟಾಯ್ಲೆಟ್‌ನಲ್ಲಿ ಒಂದು ಗಾಜಿನ ಲೋಟದಲ್ಲಿ ಉಪ್ಪು ಹಾಕಿಡಬೇಕು. ಹಾಗೆಯೇ ಪತಿ-ಪತ್ನಿ ನಡುವೆ ಸಂಬಂಧ ಚೆನ್ನಾಗಿಲ್ಲದಿದ್ರೆ ಮಲಗೋ ಹಾಸಿಗೆಯ ಒಂದು ಬದಿಯಲ್ಲಿ ಕಲ್ಲುಪ್ಪಿನ ಒಂದು ಸಣ್ಣ ತುಂಡನ್ನು ಇಡಬೇಕು.
ಊದಿನಕಡ್ಡಿ ಬಳಕೆ
ಪ್ರತಿದಿನ ಮನೆಯಲ್ಲಿ ಊದಿನಕಡ್ಡಿ ಹಾಗೂ ಧೂಪ ಹಚ್ಚಿಡಬೇಕು. ಇದ್ರಿಂದ ಮನೆ ಸದಸ್ಯರ ಆರೋಗ್ಯ ಹಾಗೂ ಉತ್ಸಾಹ ಹೆಚ್ಚುತ್ತೆ.
ಸಂತಾನ ಪ್ರಾಪ್ತಿಗೆ ವಾಸ್ತು ದೋಷ ಅಡ್ಡಿಯಾಗುತ್ತಾ?
ಮಂತ್ರ ಹಾಗೂ ಧಾರ್ಮಿಕ ಚಿಹ್ನೆಗಳು
ಮನೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಗಾಯತ್ರಿ ಮಂತ್ರ ಅಥವಾ ದೇವರನಾಮಗಳನ್ನು ಜಪಿಸೋದ್ರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಬೆಲ್ಸ್, ಶಂಖ ಮುಂತಾದವುಗಳ ಸದ್ದು ಕೂಡ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಪಿರಮಿಡ್, ಯಂತ್ರಗಳು, ಮೂರ್ತಿಗಳು ಅಥವಾ ದೇವರ ಚಿತ್ರಗಳು ಪವಿತ್ರ ಶಕ್ತಿಗಳನ್ನು ಮನೆಗೆ ಆಹ್ವಾನಿಸಬಲ್ಲವು.