Asianet Suvarna News Asianet Suvarna News

ಸಂತಾನ ಪ್ರಾಪ್ತಿಗೆ ವಾಸ್ತು ದೋಷ ಅಡ್ಡಿಯಾಗುತ್ತಾ?

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ, ತಜ್ಞ ವೈದ್ಯರ ಸಲಹೆ ಯಾವುದರಿಂದಲೂ ಮಗು ಪಡೆಯಲು ಸಾಧ್ಯವಾಗದ ದಂಪತಿಗಳು ಅನೇಕರಿದ್ದಾರೆ. ಏನೂ ಸಮಸ್ಯೆಯಿಲ್ಲದಿದ್ರೂ ಸಂತಾನ ಪ್ರಾಪ್ತಿ ಸಾಧ್ಯವಾಗದಿರೋದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು.

Vaastu problems in the house causes infertility
Author
Bangalore, First Published Jul 20, 2020, 4:12 PM IST

ಪ್ರತಿ ಹೆಣ್ಣು ತಾಯಿಯಾಗುವ ಕನಸು ಕಾಣುತ್ತಾಳೆ. ತನ್ನದೇ ಪ್ರತಿರೂಪವಾದ ಪುಟ್ಟ ಜೀವವನ್ನು ಹೊತ್ತು, ಹೆತ್ತು ಮುದ್ದಾಡಲು ಬಯಸುತ್ತಾಳೆ. ಆದ್ರೆ ಆಧುನಿಕ ಮಹಿಳೆ ಗರ್ಭ ಧರಿಸೋದ್ರಿಂದ ಹಿಡಿದು ಮಗುವಿಗೆ ಜನ್ಮ ನೀಡುವ ತನಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಬಂಜೆತನ, ಗರ್ಭಪಾತ, ಅವಧಿಪೂರ್ವ ಪ್ರಸವ ಮುಂತಾದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ವೈದ್ಯರು, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ, ಪೂಜೆ-ಪುನಸ್ಕಾರ ಏನು ಮಾಡಿದ್ರೂ ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲ ಎನ್ನೋದು ಅನೇಕರ ಅಳಲು. ವೈದ್ಯಕೀಯ ವರದಿಗಳು ಯಾವುದೇ ಸಮಸ್ಯೆಯಿಲ್ಲ ಎಂದ ಮೇಲೂ ತಾಯಿಯಾಗಲು ಸಾಧ್ಯವಾಗದಿರೋದಕ್ಕೆ ಕಾರಣವೇನಿರಬಹುದು? ವಾಸ್ತುದೋಷವಿದ್ರೆ ಹೀಗೆಲ್ಲ ಆಗುತ್ತಾ? ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಮೂಡಬಹುದು. ವಾಸ್ತುಶಾಸ್ತ್ರದ ಪ್ರಕಾರ ವಾಸಿಸುವ ಮನೆಯಲ್ಲಿ ವಾಸ್ತುದೋಷವಿದ್ರೆ ಅದು ಗರ್ಭಧಾರಣೆ, ಸಂತಾನ ಫಲದ ಮೇಲೆ ಪರಿಣಾಮ ಬೀರುತ್ತದೆಯಂತೆ. ಹಾಗಾದ್ರೆ ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ದಂಪತಿ ಯಾವೆಲ್ಲ ವಾಸ್ತು ನಿಯಮಗಳನ್ನು ಪಾಲಿಸಬೇಕು?

ಈ ಬೆಡ್‌ರೂಮ್‌ ವಾಸ್ತು ನಿಮ್ಮ ಲವ್‌ ಲೈಫ್‌ ಸೂಪರ್ ಮಾಡುತ್ತೆ

-ಮಗುವಿಗಾಗಿ ಪ್ರಯತ್ನಿಸುತ್ತಿರುವ ದಂಪತಿ, ಈಶಾನ್ಯ ದಿಕ್ಕಿನ ಬೆಡ್‍ರೂಮ್‍ನಲ್ಲಿ ಮಲಗಿದ್ರೆ ಮಹಿಳೆ ಗರ್ಭ ಧರಿಸೋ ಸಾಧ್ಯತೆ ಕಡಿಮೆ ಎನ್ನುತ್ತದೆ ವಾಸ್ತುಶಾಸ್ತ್ರ. ಒಂದು ವೇಳೆ ಗರ್ಭ ಧರಿಸಿದ್ರೂ ಈಶಾನ್ಯದಲ್ಲಿರುವ ಜಲ ಮೂಲ ಭ್ರೂಣಕ್ಕೆ ಸಾಕಷ್ಟು ಉಷ್ಣಾಂಶ ತಲುಪದಂತೆ ತಡೆಯುವ ಮೂಲಕ ಗರ್ಭಪಾತಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Vaastu problems in the house causes infertility

-ನೈಋತ್ಯ ಭಾಗದಲ್ಲಿ ಮಾಸ್ಟರ್ ಬೆಡ್‍ರೂಮ್ ಇರುವಂತೆ ನೋಡಿಕೊಳ್ಳಿ. ಈ ದಿಕ್ಕಿನಲ್ಲಿರುವ ರೂಮ್‍ನಲ್ಲಿ ಮಲಗೋದ್ರಿಂದ ದಂಪತಿಯ ನಡುವೆ ರೊಮ್ಯಾನ್ಸ್ ಹೆಚ್ಚುತ್ತದೆ. ಅಲ್ಲದೆ, ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆ.
- ಪತಿ ಹಾಗೂ ಪತ್ನಿ ರಾತ್ರಿ ಮಲಗೋವಾಗ ತಲೆಯನ್ನು ದಕ್ಷಿಣ ದಿಕ್ಕಿಗೆ ಹಾಕಿ ಮಲಗಬೇಕು. ಇದ್ರಿಂದ ಗರ್ಭ ಧರಿಸೋ ಸಾಧ್ಯತೆ ಹೆಚ್ಚು.
-ಬೆಡ್‍ರೂಮ್‍ನ ಗೋಡೆಗಳ ಮೇಲೆ ದಂತಗಳಿರುವ ಜೋಡಿ ಆನೆಗಳ ಚಿತ್ರವನ್ನು ಹಾಕಿ. ಆನೆಗಳು ಗರ್ಭಧಾರಣೆಯ ಸಂಕೇತ. ಹಾಗಾಗಿ ಮಗುವಿಗಾಗಿ ಪ್ರಯತ್ನಿಸುತ್ತಿರುವ ದಂಪತಿ ಈ ಚಿತ್ರವನ್ನು ತಮ್ಮ ಬೆಡ್‍ರೂಮ್ ಗೋಡೆಯಲ್ಲಿ ಹಾಕಿದ್ರೆ ನಿರೀಕ್ಷಿತ ಫಲ ಸಿಗುತ್ತದೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು. ಅದೇರೀತಿ ದಾಳಿಂಬೆ ಚಿತ್ರ ಅಥವಾ ಸಂಕೇತವನ್ನು ಬೆಡ್‍ರೂಮ್‍ನಲ್ಲಿ ಹಾಕಿದ್ರೆ ಫಲವತ್ತತೆ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
-ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ದಂಪತಿ ಮನೆಯಲ್ಲಿ ಯಾವುದೇ ನಿರ್ಮಾಣ ಅಥವಾ ಮರುನಿರ್ಮಾಣ ಕಾರ್ಯಕ್ಕೆ ಮುಂದಾಗದಿರೋದು ಒಳ್ಳೆಯದು. ನಿರ್ಮಾಣ ಅಥವಾ ಮರುನಿರ್ಮಾಣ ಕಾರ್ಯ ಗರ್ಭಧಾರಣೆಗೆ ಅಡ್ಡಿಯುಂಟು ಮಾಡೋ ಸಾಧ್ಯತೆಯಿದೆ.

ಮನೆ ಖರೀದಿಸುವಾಗ ಈ ಅಂಶ ಗಮನಿಸಿ

-ಮನೆಯ ಮುಖ್ಯದ್ವಾರವನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಮುಖ್ಯದ್ವಾರಕ್ಕೆ ಅಡ್ಡಲಾಗಿ ಯಾವುದೇ ವಸ್ತುಗಳನ್ನಿಡಬಾರದು. ಮುಖ್ಯದ್ವಾರದ ಸುತ್ತಮುತ್ತಲಿನ ಸ್ಥಳ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.
-ಬೆಡ್‍ರೂಮ್‍ನಲ್ಲಿ ಯಾವುದೇ ಇನ್‍ಡೋರ್ ಪ್ಲಾಂಟ್‍ಗಳನ್ನಿಡಬಾರದು. ಬೆಡ್‍ರೂಮ್‍ನಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ತಾಜಾ ಹೂಗಳನ್ನಿಡಬೇಕು. ಅಕ್ವೇರಿಯಂ ಸೇರಿದಂತೆ ನೀರಿರುವ ವಸ್ತುಗಳು ಬೆಡ್‍ರೂಮ್‍ನಲ್ಲಿರದಂತೆ ಎಚ್ಚರ ವಹಿಸಿ. 

Vaastu problems in the house causes infertility

-ಬೆಡ್‍ರೂಮ್ ಗೋಡೆಗಳಿಗೆ ತಿಳಿ ಬಣ್ಣಗಳನ್ನು ಬಳಸಿ. ಅಳುತ್ತಿರುವ ಬಾಲಕಿ, ಹಿಂಸೆ ಹಾಗೂ ಕಾಡುಪ್ರಾಣಿಗಳ ಚಿತ್ರಗಳನ್ನು ಯಾವುದೇ ಕಾರಣಕ್ಕೂ ಬೆಡ್‍ರೂಮ್‍ನಲ್ಲಿ ಹಾಕಬೇಡಿ. ಇವು ಸಕಾರಾತ್ಮಕ ಶಕ್ತಿಯನ್ನು ಕುಗ್ಗಿಸಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಗು ಅಥವಾ ಮಕ್ಕಳ ಫೋಟೋ ಇದ್ದರೆ ಸೂಕ್ತ. ಬೆಡ್‍ರೂಮ್‍ನಲ್ಲಿ ಕನ್ನಡಿಯಿದ್ದರೆ ಅದನ್ನು ತೆಗೆದು ಬಿಡಿ.
-ಪತ್ನಿ ಪತಿಯ ಎಡಭಾಗದಲ್ಲಿ ಮಲಗಬೇಕು. ಇದ್ರಿಂದ ಗರ್ಭಧಾರಣೆ ಸಾಧ್ಯತೆ ಹೆಚ್ಚಿರುತ್ತೆ.
-ಬೆಡ್ ಕೆಳಭಾಗದಲ್ಲಿ ಸಿಕ್ಕಸಿಕ್ಕ ವಸ್ತುಗಳನ್ನು ತುಂಬಿಡಬಾರದು. ಆದಷ್ಟು ಸ್ವಚ್ಛವಾಗಿರುವಂತೆ ಎಚ್ಚರ ವಹಿಸಿ. 

ಮಳೆಗಾಲಕ್ಕೆ ಒಂದಷ್ಟು ಸಿಂಪಲ್‌ ಗಾರ್ಡನಿಂಗ್‌ ಟಿಪ್ಸ್‌

ಗರ್ಭಧಾರಣೆ ಬಳಿಕ ಏನು ಮಾಡಬೇಕು?
-ಮಹಿಳೆ ಗರ್ಭಧರಿಸಿದ ಬಳಿಕ ಆಗ್ನೇಯ ಭಾಗದಲ್ಲಿರುವ ಬೆಡ್‍ರೂಮ್‍ನಲ್ಲಿ ಮಲಗಬಾರದು. ನೈಋತ್ಯ ದಿಕ್ಕಿನಲ್ಲಿರುವ ಬೆಡ್‍ರೂಮ್‍ಗೆ ಶಿಫ್ಟ್ ಆಗೋದು ಉತ್ತಮ.
-ಗರ್ಭಿಣಿ ಬಿಳಿ, ಹಸಿರು, ನೀಲಿ, ಹಳದಿ ಮುಂತಾದ ತಿಳಿ ಬಣ್ಣದ ಬಟ್ಟೆ ಧರಿಸಬೇಕು. ಮನಸ್ಸನ್ನು ಪ್ರಶಾಂತವಾಗಿಡುವ ಬಣ್ಣಗಳ ಬಟ್ಟೆಗಳನ್ನು ಧರಿಸೋದು ಉತ್ತಮ.
-ಈಶಾನ್ಯ ಭಾಗದ ಕೋಣೆಯಲ್ಲಿ ಗರ್ಭಿಣಿ ಬೆಳಗ್ಗೆ ಯೋಗ ಅಥವಾ ವ್ಯಾಯಾಮ ಮಾಡಬೇಕು. ಇದ್ರಿಂದ ಬೆಳಗ್ಗಿನ ಸೂರ್ಯನ ಎಳೆಯ ಕಿರಣಗಳು ಮೈಗೆ ತಾಕುತ್ತವೆ. ಈ ಕಿರಣಗಳಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತೆ.
-ಗರ್ಭಿಣಿ ಮಲಗುವ ಕೋಣೆಯ ಗೋಡೆಗಳಲ್ಲಿ ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಹಾಕೋದು ಒಳ್ಳೆಯದು. 

Follow Us:
Download App:
  • android
  • ios