ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವಾಗ ವಾಸ್ತು ಪಾಲಿಸುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ನಾಯಿ, ಬೆಕ್ಕು, ಮೀನು, ಹಸು, ಪಕ್ಷಿ, ಕುದುರೆಗಳಿಗೆ ಸೂಕ್ತ ದಿಕ್ಕುಗಳಲ್ಲಿ ವಾಸಸ್ಥಾನ ಕಲ್ಪಿಸುವುದು, ಆಹಾರ ನೀಡುವುದು ಮುಖ್ಯ. 

ಮನೆಯಲ್ಲಿ ಚಪ್ಪಲಿ ಇಡೋಕೂ ವಾಸ್ತು ಇರುತ್ತೆ, ಹಾಗಿದ್ದ ಮೇಲೆ ಸಾಕುಪ್ರಾಣಿಗಳನ್ನು ಎಲ್ಲಿ ಇಡಬೇಕು, ಮಲಗಿಸಬೇಕು, ಅವುಗಳಿಗೆ ಊಟ ಹಾಕಬೇಕು- ಎಂಬುದಕ್ಕೂ ವಾಸ್ತು ಇಲ್ಲದೇ ಇರುತ್ತದೆಯೇ? ಇದೆ. ಸಾಕುಪ್ರಾಣಿಗಳು ಮನೆಯಲ್ಲಿ ಪ್ರೀತಿ ಮತ್ತು ಹರ್ಷದಿಂದ ಇರಲು ವಾತಾವರಣವನ್ನು ಸೃಷ್ಟಿಸುವುದಕ್ಕೆ ಸಹಾಯ ಮಾಡುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಸಾಕಿದರ ಸಾಕುಪ್ರಾಣಿಗಳು ಮನೆಯಲ್ಲಿರುವ ವ್ಯಕ್ತಿಗಳ ಮನಸ್ಥಿತಿಯನ್ನು ಉತ್ತಮಪಡಿಸುತ್ತದೆ ಎಂಬುದು ನಂಬಿಕೆ. ಆದ್ದರಿಂದ ಸಾಕುಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಾಗ, ಊಟ ಹಾಕುವಾಗ, ಮಲಗಿಸುವ ಜಾಗ ಇವುಗಳಲ್ಲಿ ಕೆಲವು ವಾಸ್ತು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಅವು ಈ ಕೆಳಗಿವೆ.

ಅವುಗಳ ಬೆಡ್‌ ಎಲ್ಲಿರಬೇಕು?

ಮನೆಯಲ್ಲಿ ಸಾಕಿರುವ ನಾಯಿ ಅಥವಾ ಬೆಕ್ಕಿಗೆ ಮಲಗಲು ಬೆಡ್‌ ಒದಗಿಸುತ್ತೀರಿ ಎನ್ನುವುದಾದರೆ,ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿದರೆ ಆ ಪ್ರಾಣಿ ಸಂತೋಷದಿಂದ ನಿಮ್ಮ ಮನೆಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಈ ದಿಕ್ಕುಗಳಲ್ಲಿ ಇರಿಸುವುದರಿಂದ ಪ್ರಾಣಿಗಳು ನಿಮ್ಮ ಜೊತೆ ಉತ್ತಮ ರೀತಿಯಲ್ಲಿ ವರ್ತಿಸುತ್ತವೆ. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಗ್ನೇಯ ಮತ್ತು ನೈರುತ್ಯ ಜಾಗದಲ್ಲಿ ಹಾಸಿಗೆಯನ್ನು ಇಡುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಪ್ರಾಣಿಗಳ ಕೆಟ್ಟ ನಡವಳಿಕೆಯನ್ನು ಸೂಚಿಸುತ್ತದೆ. ನಿಮ್ಮ ಮನೆಯಲ್ಲಿ ಕಪ್ಪು ನಾಯಿಯನ್ನು ಇಟ್ಟುಕೊಂಡಿದ್ದರೆ ಇದು ರಾಹು, ಕೇತು ಮತ್ತು ಶನಿ ಗ್ರಹಗಳ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಊಟ- ತಿಂಡಿ ಹಾಕುವುದೆಲ್ಲಿ?

ನಾಯಿ ಅಥವಾ ಬೆಕ್ಕಿಗೆ ಮನೆಯೊಳಗೆ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಊಟ ಹಾಕಬಹುದು. ಇಲ್ಲಿ ನಾಯಿಗೆ ಮನೆಯ ಹೊರಗೂ, ಬೆಕ್ಕಿಗೆ ಹೊರಗೆ ಅಥವಾ ಒಳಗೆ ಊಟ ಹಾಕಬಹುದು. ಪ್ರತಿದಿನ ನಿಗದಿತವಾದ ಒಂದು ಜಾಗದಲ್ಲಿಯೇ ತಿಂಡಿ ಹಾಕಬೇಕು. ಹಿಂದೆಲ್ಲಾ ಮನೆಯಲ್ಲಿರುವ ಸಾಕುಪ್ರಾಣಿಗಳಿಗೆ ಪ್ರತ್ಯೇಕವಾದ ಆಹಾರ ಇರುತ್ತಿರಲಿಲ್ಲ. ನಮಗೆ ಮಾಡಿಕೊಂಡ ಅಡಿಗೆಯಲ್ಲೇ ಒಂದು ಪಾಲು ಸಾಕುಪ್ರಾಣಿಗಳಿಗೆ ಹಾಕಲಾಗುತ್ತಿತ್ತು. ಇಂದು ಕಾಲ ಬದಲಾಗಿದೆ.ನಾಯಿ, ಬೆಕ್ಕುಗಳು ಇತರ ಪ್ರಾಣಿಗಳಿಗೆ ಪ್ರತ್ಯೇಕವಾದ ಆಹಾರಗಳು ಸಿದ್ಧ ರೂಪದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಸಾಕುಪ್ರಾಣಿಗಳ ಇರುವಿಕೆಗೆ ಒಂದು ಸ್ಥಳವನ್ನು ನಿಗದಿ ಮಾಡಿ ಅದೇ ಸ್ಥಳದಲ್ಲಿ ಆಹಾರ ಇರಿಸಲಾಗುತ್ತದೆ. ಈಶಾನ್ಯ, ಆಗ್ನೇಯ ಮತ್ತು ನೈರುತ್ಯ ಭಾಗಗಳಲ್ಲಿ ಊಟ ಹಾಕಿದರೆ ಅನಾರೋಗ್ಯ ಎಂದು ಹೇಳಲಾಗುತ್ತದೆ.

ಮೀನು ಸಾಕುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಅಕ್ವೇರಿಯಂ ಇಡುವುದು ಪ್ರತಿಯೊಬ್ಬರ ಹವ್ಯಾಸವಾಗಿ ಪರಿಣಮಿಸಿದೆ. ಮೀನುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ನಿವಾಸಿಗಳಿಗೆ ಅದೃಷ್ಟ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರುತ್ತವೆ ಎಂದು ಹೇಳಲಾಗುತ್ತದೆ. ಮೀನಿನ ಟ್ಯಾಂಕನ್ನು ಈಶಾನ್ಯ ಅಥವಾ ಪೂರ್ವ-ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಏಕೆಂದರೆ ಈ ದಿಕ್ಕಿನಲ್ಲಿ ದುಷ್ಟಶಕ್ತಿಗಳನ್ನು ದೂರವಿಡಲು ಸಹಾಯವಾಗುತ್ತದೆ. ಇದು ಮೀನಿನ ಟ್ಯಾಂಕನ್ನು ಇರಿಸಲು ಉತ್ತಮವಾದ ಮತ್ತು ಸರಿಯಾದ ಸ್ಥಳವಾಗಿದೆ. ಮೀನಿನ ತೊಟ್ಟಿ ಅಥವಾ ಅಕ್ವೇರಿಯಂ ಅನ್ನು ಇಡುವುದರಿಂದ ಮನೆಯಲ್ಲಿ ವಾಸಿಸುವವರಲ್ಲಿ ಆತಂಕ ಅಥವಾ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಕ್ವೇರಿಯಂ ಜೊತೆಗೆ ಆಮೆ ಸಾಕಬೇಕೆಂದು ಬಯಸಿದರೆ ಅದನ್ನು ಉತ್ತರದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲಿತಾಂಶ ದೊರೆಯುತ್ತದೆ.

​ಹಸುಗಳನ್ನು ಎಲ್ಲಿ ಸಾಕಬೇಕು?

ಭಾರತೀಯ ಸಂಸ್ಕೃತಿಯಲ್ಲಿ ಹಸುಗಳಿಗೆ ಉತ್ತಮವಾದ ಸ್ಥಾನವನ್ನು ನೀಡಲಾಗಿದೆ. ಹಸುಗಳನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಮಾತೆ ಎಂದು ಕರೆದು ಪೂಜಿಸಲಾಗುತ್ತದೆ. ಹಸುವು ಮನೆಯಲ್ಲಿನ ದುಃಖಗಳನ್ನು ತೊಡೆದುಹಾಕುತ್ತದೆ. ನಿಮ್ಮ ಮನೆಯಲ್ಲಿ ಹಸು ಸಾಕಬೇಕೆಂದಿದ್ದರೆ ಅವುಗಳನ್ನು ವಾಯುವ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಒಂದು ಕೊಟ್ಟಿಗೆ ಕಟ್ಟಿ ಅಲ್ಲಿ ಸಾಕಬೇಕು. ಇದರಿಂದ ನಿಮ್ಮ ಮನೆಯಲ್ಲಿ ಉತ್ತಮವಾದ ವಾತಾವರಣ ನಿರ್ಮಾಣವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹಸುವನ್ನು ಪುಣ್ಯಕೋಟಿ ಎಂದು ಕರೆಯುತ್ತಾರೆ. ಇದನ್ನು ನಿಮ್ಮ ಮನೆಯಲ್ಲಿ ಸಾಕಿದ ಉತ್ತಮ ಅನುಭವ ನಿಮಗಾಗುತ್ತದೆ.

​ಪಕ್ಷಿಗಳ ಪಂಜರ ಇಲ್ಲಿರಲಿ

ವಾಸ್ತು ಶಾಸ್ತ್ರದ ಪ್ರಕಾರಗಳನ್ನು ಮನೆಯಲ್ಲಿ ಗಿಳಿ ಸಾಕುವುದರಿಂದ ಉತ್ತಮ ಆರೋಗ್ಯ ಮತ್ತು ಪ್ರೀತಿಯನ್ನು ಇದು ತರುತ್ತದೆ ಮತ್ತು ಇದರಿಂದ ಅದೃಷ್ಟ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಗಿಳಿಗಳನ್ನು ಯಾವಾಗಲೂ ಉತ್ತರದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಪ್ರೀತಿಯ ಪಕ್ಷಿಗಳು ಸಹ ಅದೃಷ್ಟ ಎಂದು ಹೇಳಲಾಗುತ್ತದೆ. ಈ ರೀತಿಯ ಪಂಜರವನ್ನು ವಾಯುವ್ಯ, ಈಶಾನ್ಯ ಅಥವಾ ಪೂರ್ವದಿಕ್ಕಿನಲ್ಲಿಯು ಸಹ ಇಡಬಹುದು.ಪಕ್ಷಿಗಳನ್ನು ಪಂಜರದಲ್ಲಿ ಈ ಮೇಲೆ ತಿಳಿಸಿದ ಜಾಗದಲ್ಲಿ ಇಡಿ.

ನಿಮ್ಗೆ ಒಳ್ಳೇದಾಗ್ಬೇಕು ಅಂದ್ರೆ ಮನೆನಲ್ಲಿ ಕನ್ನಡಿನ ಈ ಜಾಗದಲ್ಲಿ ಇಡಿ... ಇದು ವಾಸ್ತು ಪ್ರಕಾರ ಟಿಪ್ಸ್!

ಕುದುರೆಗಳನ್ನು ಸಾಕುವುದಾದರೆ

ಸಾಮಾನ್ಯವಾಗಿ ಕುದುರೆಗಳ ಮೇಲೆ ಗಂಡುಮಕ್ಕಳಿಗೆ ಹೆಚ್ಚು ಮಟ್ಟದ ವ್ಯಾಮೋಹವಿರುತ್ತದೆ. ಕುದುರೆಗಳು ಪ್ರತಿಷ್ಠೆ, ಧೈರ್ಯ, ಅಧಿಕಾರ ಮತ್ತು ಸ್ವಾತಂತ್ರ್ಯದ ಸಂಕೇತವಾಗಿವೆ. ಅಲ್ಲದೇ ಕುದುರೆಗಳು ಧೈರ್ಯದ ಸಂಕೇತವೆಂದೂ ಸಹಾ ಹೇಳಲಾಗುತ್ತದೆ.ಕುದುರೆಗಳನ್ನು ಹೊಂದಿರುವವರು ಜೀವನದಲ್ಲಿ ಎಲ್ಲಾ ಹಂತಗಳಲ್ಲೂ ಬಹಳ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ.ಕುದುರೆಗಳನ್ನು ಯಾವಾಗಲೂ ಮನೆಯ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಸಮಯಕ್ಕೆ ತಕ್ಕಂತೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿ ಉತ್ತಮ ರೀತಿಯಲ್ಲಿ ಸಾಕುಪ್ರಾಣಿಗಳನ್ನು ನೋಡಿಕೊಳ್ಳಬೇಕು. ಏಕೆಂದರೆ ಮನೆಯಲ್ಲಿರುವ ಪ್ರಾಣಿಗಳು ಜೊತೆ ಮನೆಯ ಸದಸ್ಯರ ಜೊತೆ ಒಡನಾಟಗಳನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಸೂಕ್ತ ಸಮಯಕ್ಕೆ ಕೊಡಿಸಬೇಕಾದ ಚಿಕಿತ್ಸೆ, ಲಸಿಕೆಗಳನ್ನು ನೀಡಬೇಕು.

ವಾರದ ಈ 2 ದಿನಗಳಲ್ಲಿ ಬಟ್ಟೆ ಒಗೆಯುವುದು ಅಶುಭ, ಹಣವು ನೀರಿನಂತೆ ಹರಿದು ಹೋಗುತ್ತೆ, ವೃತ್ತಿಜೀವನದಲ್ಲಿ ಸಮಸ್ಯೆ