Asianet Suvarna News Asianet Suvarna News

Vaastu And Aquarium : ಮೀನಿನಿಂದ ಮನೆಗೆ ಸುಖ ಸಮೃದ್ಧಿ..

ಮನೆಯಲ್ಲಿ ಮೀನು ಸಾಕುವಿಕೆ ಅಂದರೆ ಅಕ್ವೇರಿಯಂ ಇಟ್ಟುಕೊಂಡಿದ್ದರೆ ಅದರಿಂದ ಸುಖ ಮತ್ತು ಸಮೃದ್ಧಿ ಸಾಧ್ಯವಿದೆ. ಆದರೆ, ಅದನ್ನು ವಾಸ್ತು ಶಾಸ್ತ್ರದ ಅನುಸಾರ ಇಡಬೇಕು. ಅಂದರೆ ಅದನ್ನು ಸರಿಯಾದ ದಿಕ್ಕಿನಲ್ಲಿಡಬೇಕು. ಜೊತೆಗೆ ಇಂತಿಷ್ಟೇ ಮೀನುಗಳಿರಬೇಕು ಎಂಬ ನಿಯಮಗಳಿವೆ. ಆಗ ನಿಮ್ಮ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿಯು ನೆಲೆಸುತ್ತದೆ. ಹೀಗಾಗಿ ನಿಮ್ಮ ಮನೆಯಲ್ಲಿರುವ ಅಕ್ವೇರಿಯಂ ಯಾವ ದಿಕ್ಕಿನಲ್ಲಿದೆ..? ಮತ್ತು ಅದರಲ್ಲಿ ಎಷ್ಟು ಮೀನುಗಳಿವೆ ಎಂಬುದನ್ನು ಲೆಕ್ಕಹಾಕಿ... ಈಗ ಅದರ ಬಗ್ಗೆ ಸ್ವಲ್ಪ ನೋಡೋಣ..

Fish brings home happiness and Prosperity
Author
Bangalore, First Published Dec 30, 2021, 10:00 AM IST

ವಾಸ್ತು ಶಾಸ್ತ್ರದ ಅನುಸಾರ ನಡೆದುಕೊಂಡರೆ ಜೀವನದಲ್ಲಿ ಅನೇಕ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ. ವಸ್ತುಗಳನ್ನು ಸಹ ಅದರ ಅನುಸಾರ ಇಟ್ಟುಕೊಳ್ಳಬೇಕು. ಆಗ ಮನೆಯಲ್ಲಿ ಸದಾ ಸುಖ, ಸಮೃದ್ಧಿ (Happiness, prosperity) ನೆಲೆಸುತ್ತದೆ. ಅದೇ, ಇಂಥ ನಿಯಮಗಳನ್ನು ಗಾಳಿಗೆ ತೂರಿದರೆ, ಮನೆ ಬಂದಂತೆ ವಸ್ತುಗಳನ್ನಿಟ್ಟುಕೊಂಡರೆ ಅದರಿಂದ ವಿನಾಶ ಎದುರಾಗಬಹುದು. ವಾಸ್ತು ಅನುಸಾರ ಪ್ರತಿಯೊಂದಕ್ಕೂ ಒಂದು ನಿಗದಿತ ಸ್ಥಳವಿದೆ. ಅಡುಗೆ ಮನೆ, ದೇವರ ಕೋಣೆ, ಮಲಗುವ ಕೋಣೆ, ಬಚ್ಚಲು ಮನೆ ಹೀಗೆ ಎಲ್ಲವೂ ಆಯಾ ದಿಕ್ಕಿನಲ್ಲೇ ಇರಬೇಕು. ಆಗಷ್ಟೇ ಆ ಮನೆಗೆ ಒಳ್ಳೆಯದಾಗುತ್ತದೆ. ಇದಕ್ಕೆ ಮನೆಯಲ್ಲಿಟ್ಟುಕೊಳ್ಳುವ ಅಕ್ವೇರಿಯಂ ಕೂಡಾ ಹೊರತಲ್ಲ. ಅಕ್ವೇರಿಯಂ (Aquarium) ಅನ್ನು ಇಡುವ ದಿಕ್ಕು, ಅದರಲ್ಲಿರುವ ಮೀನಿನ ಸಂಖ್ಯೆ ಮೇಲೆ ಸುಖ – ಸಮೃದ್ಧಿ ನಿರ್ಧರಿತವಾಗುತ್ತದೆ. 

ಅಕ್ವೇರಿಯಂನಲ್ಲಿ ಹರಿಯುವ ನೀರಿನ ಶಬ್ದವು ಮನೆ - ಮನಸ್ಸಿನಲ್ಲಿ ಪಾಸಿಟಿವ್ (Positive) ಎನರ್ಜಿಯನ್ನು ತುಂಬಿದರೆ, ಅದರಲ್ಲಿರುವ ಮೀನುಗಳು ನೆಗೆಟಿವ್ (Negetive) ಎನರ್ಜಿಯನ್ನು ಮನೆಯೊಳಗೆ ಬರಲು ಬಿಡಲಾರವು. ಹಾಗಾದರೆ ಇವುಗಳ ಲಾಭದ ಬಗ್ಗೆ ನೋಡೋಣ.

ಕೆಟ್ಟ ದೃಷ್ಟಿಯಿಂದ ಕಾಪಾಡುತ್ತದೆ
ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಂಡಿದ್ದರೆ ಬಹಳ ಒಳ್ಳೆಯದು. ಮನೆಗೆ ಯಾರೇ ಬರಲಿ ಅವರ ಕೆಟ್ಟ ಕಣ್ಣಿನಿಂದ ಆಗುವ ದೃಷ್ಟಿಯನ್ನು ಅದು ತಪ್ಪಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಅಕ್ವೇರಿಯಂನಲ್ಲಿರುವ  ಮೀನುಗಳು ನಕಾರಾತ್ಮಕ ಶಕ್ತಿಯನ್ನು ಸೆಳೆದುಕೊಂಡು, ಮನೆಯಲ್ಲಿ ಪಾಸಿಟಿವ್ ಶಕ್ತಿಗಳ ಹರಿವಿಗೆ ಸಹಾಯ (Help) ಮಾಡುತ್ತದೆ. ಜೊತೆಗೆ ಸಂತೋಷ (Happy) ಮನೆಮಾಡುತ್ತದೆ. 

ಒತ್ತಡಗಳ ನಿವಾರಕ (stress relieves)
ಅಕ್ವೇರಿಯಂ ಮನೆಯ (Home) ಸೌಂದರ್ಯವನ್ನು (Beauty) ಹೆಚ್ಚಿಸುವುದಲ್ಲದೆ, ಮೀನುಗಳನ್ನು ನೋಡುತ್ತಾ ಕುಳಿತರೆ ಮನಸ್ಸು (Mind) ಪ್ರಫುಲ್ಲಗೊಳ್ಳುತ್ತದೆ. ಜೊತೆಗೆ ತಾಜಾ (freshens) ಮನೋಭಾವ ಮೂಡಿ ಕೆಲಸದಲ್ಲಿ ಉತ್ಸಾಹ ಮೂಡುತ್ತದೆ. ಒತ್ತಡಕ್ಕೆ ಒಳಗಾದರೆ ಅಕ್ವೇರಿಯಂ ಬಳಿ ಒಮ್ಮೆ ಕುಳಿತರೆ ಸಾಕು. ಆ ಮೀನುಗಳ ಓಡಾಟ ಮನಸ್ಸನ್ನು ತಿಳಿಗೊಳಿಸುತ್ತದೆ. ಇದು ಮನೆಯಲ್ಲಿದ್ದರೆ ಕುಟುಂಬದವರಿಗೆ ಯಾವುದೇ ವಿಪತ್ತುಗಳು ಸಹ ಎದುರಾಗದು.

ಮನೆಯಲ್ಲಿ ಸಂಪತ್ತು (Wealth)
ಅಕ್ವೇರಿಯಂ ಮೀನುಗಳಿಂದ ತುಂಬಿಕೊಂಡಿದ್ದರೆ ಬಹಳ ಒಳ್ಳೆಯದು. ಇದರಿಂದ ಮನೆಯಲ್ಲಿ ಸುಖ – ಸಮೃದ್ಧಿ ಮತ್ತು ಸಂಪತ್ತು ಸದಾ ತುಂಬಿರುತ್ತದೆ. ಮನೆಯ ಆರ್ಥಿಕ ಸ್ಥಿತಿ (Financial condition) ಸಹ ಸುಧಾರಿಸುತ್ತದೆ. 

ಇದನ್ನು ಓದಿ : ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ನೆಗೆಟಿವ್ ಎನರ್ಜಿ ಇರಲ್ಲ (Negative energy)
ಅಕ್ವೇರಿಯಂನಲ್ಲಿ ಮೀನುಗಳು ಈಜುತ್ತಿದ್ದರೆ ನೆಗೆಟಿವ್ ಎನರ್ಜಿಗಳು ಬರಲು ಆಸ್ಪದ ಇರುವುದಿಲ್ಲ. ಇದರಿಂದ ಎಂಥಾ ನಕಾರಾತ್ಮಕ ಶಕ್ತಿ ಇದ್ದರೂ ಫಲಿಸದು. ಅಲ್ಲದೆ, ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಅಕ್ವೇರಿಯಂನಲ್ಲಿ ಮೀನು ಕೃಷಿ ಮಾಡದಲ್ಲಿ ಅದೃಷ್ಟ ಹೆಚ್ಚಲಿದೆ. ಮೀನನ್ನು ವ್ಯಾಪಾರದಲ್ಲಿ ಯಶಸ್ಸು ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಯಾವ ದಿಕ್ಕಿನಲ್ಲಿಡಬೇಕು..? (Direction) 
ನೀರಿಗೆ (Water) ಸಂಬಂಧಪಟ್ಟ ವಸ್ತುಗಳು ಮನೆಯ ಈಶಾನ್ಯ (North-East) ದಿಕ್ಕಿನಲ್ಲಿರಬೇಕು. ಹೀಗೆ ಮಾಡಿದರೆ ಸಂಪತ್ತನ್ನು ಆಕರ್ಷಿಸಬಹುದು. ಜೊತೆಗೆ ಪಾಸಿಟಿವ್ ಎನರ್ಜಿಯ ಹರಿವೂ ಹೆಚ್ಚಲಿದೆ. ಪೂರ್ವ (East), ಉತ್ತರ (North) ಅಥವಾ ಈಶಾನ್ಯ (North-East) ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ವೈವಾಹಿಕ ಜೀವನದಲ್ಲಿ (Marriage Life) ಪರಸ್ಪರ ಪ್ರೀತಿಯನ್ನು (Love) ಕಾಪಾಡಿಕೊಳ್ಳಲು, ಮುಖ್ಯ ಬಾಗಿಲಿನ ಎಡಭಾಗದಲ್ಲಿ ಅಕ್ವೇರಿಯಂ ಅನ್ನು ಇರಿಸಬೇಕು. ಇದರ ಹೊರತಾಗಿ ಅಕ್ವೇರಿಯಂ ಒಳಗೆ ಬಣ್ಣಬಣ್ಣದ ಹೂಗಳನ್ನು ನೆಡುವುದು ಮನೆಯ ಸಮೃದ್ಧಿಯನ್ನು ತೋರಿಸುತ್ತದೆ. ವಾಸ್ತು ಪ್ರಕಾರ, ಅಡುಗೆ ಮನೆಯ ಒಳಗೆ ಅಕ್ವೇರಿಯಂ ಇಡುವುದು ಅಪಾಯಕ್ಕೆ ಕರೆ ಕೊಟ್ಟಂತೆ. ಇದು ಮನೆಯವರಲ್ಲಿ ಪರಸ್ಪರ ಜಗಳವನ್ನು ತಂದಿಡುತ್ತದೆ. 

ನೀರಿನ ಸ್ಥಿತಿ ಹೇಗಿರಬೇಕು? (condition of water)
ಅಕ್ವೇರಿಯಂನಲ್ಲಿ ನೀರನ್ನು ಆಗಾಗ ಬದಲಾಯಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಲಿದೆ. ಯಾವುದೇ ಕಾರಣಕ್ಕೂ ಅದರಲ್ಲಿ ನೀರಿನ ಹರಿವು ನಿಲ್ಲದಂತೆ ನೋಡಿಕೊಳ್ಳಿ. ಇದು ಆರ್ಥಿಕ ಪ್ರಗತಿ (Financial progress) ಮೇಲೆ ಪರಿಣಾಮವನ್ನು ಬೀರುವುದಲ್ಲದೆ, ತೀವ್ರ ಸಂಕಷ್ಟ ತಂದೊಡ್ಡಬಲ್ಲದು. ಇದರೊಳಗೆ ಪಾಚಿ ಕಟ್ಟಲು ಬಿಡಬಾರದು. ಹಾಗಾದರೆ ಮಾಡುವ ಪ್ರತಿಯೊಂದು ಕೆಲಸದಲ್ಲೂ (Every task) ಅಡಚಣೆಯನ್ನು ಎದುರಿಸಬೇಕಾದೀತು. 

ಇದನ್ನು ಓದಿ: New Year Mantra: ಹೊಸ ವರ್ಷದ ಸುಖ-ಸಮೃದ್ಧಿಗೆ ಗ್ರಹದೋಷ ನಿವಾರಣಾ ಮಂತ್ರಗಳು!

ಎಷ್ಟು ಸಂಖ್ಯೆಯ (number) ಮೀನುಗಳು ಇರಬೇಕು?
ಅಕ್ವೇರಿಯಂನಲ್ಲಿ ಎಷ್ಟು ಮೀನುಗಳಿರಬೇಕು ಎಂಬುದು ಸಹ ಮುಖ್ಯವಾಗುತ್ತದೆ. ಬೆಸ ಸಂಖ್ಯೆಯಲ್ಲಿ (odd number) ಮೀನುಗಳಿದ್ದರೆ ಶುಭವೆಂದು ಪರಿಗಣಿಸಲಾಗುತ್ತದೆ. ಒಂಬತ್ತು ಮೀನುಗಳನ್ನಿಟ್ಟರೆ ಬಹಳ ಒಳ್ಳೆಯದು. ಇವುಗಳಲ್ಲಿ 8 ಗೋಲ್ಡ್ ಫಿಶ್, ಒಂದು ಬ್ಲ್ಯಾಕ್ ಫಿಶ್ ಇರಬೇಕು. ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚಲಿದೆ. 

Follow Us:
Download App:
  • android
  • ios