Asianet Suvarna News Asianet Suvarna News

Vastu Tips: ಎಲ್ಲ ಸರಿ ಇರ್ಬೇಕೆಂದ್ರೆ ರಾತ್ರಿ ತಲೆ ಬಳಿ ಇದನ್ನಿಟ್ಟುಕೊಳ್ಳಬೇಡಿ

ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಮಾತ್ರವಲ್ಲ ಮಲಗಿದ ಮೇಲಿನ ಎಲ್ಲ ವಿಷ್ಯವೂ ವಾಸ್ತು ಶಾಸ್ತ್ರದಡಿ ಬರುತ್ತದೆ. ನಾವು ಮಾಡುವ ಕೆಲಸ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ವಿಧಾನ ಹಾಗೂ ಮಲಗುವಾಗ ಬಳಸುವ ಕೆಲ ವಸ್ತು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ. 
 

Do not keep electronic device while you sleep as per vaastu tips
Author
Bangalore, First Published Jun 27, 2022, 3:43 PM IST | Last Updated Jun 27, 2022, 3:43 PM IST

ಅನೇಕ ಜನರು ವಾಸ್ತು ಶಾಸ್ತ್ರ (Architecture) ವನ್ನು ಬಲವಾಗಿ ನಂಬುತ್ತಾರೆ. ಮನೆ (Home) ಯಲ್ಲಿ ಪ್ರತಿಯೊಂದು ವಸ್ತುವನ್ನು ವಾಸ್ತು ಪ್ರಕಾರ ಇಟ್ಟುಕೊಳ್ತಾರೆ.  ವ್ಯಕ್ತಿಯ ಜೀವನ (Life) ದ ಮೇಲೆ ವಾಸ್ತು ಬಹಳ ಪ್ರಭಾವ ಬೀರುತ್ತದೆ. ಮನೆಯ ವಾಸ್ತು ಶಾಸ್ತ್ರ ಚೆನ್ನಾಗಿದ್ದರೆ ಜೀವನದಲ್ಲಿ ಸುಖ (Happy) ,ಶಾಂತಿ,ಸಮೃದ್ಧಿ ನೆಲೆಸುತ್ತದೆ. ಇದರ ಹೊರತಾಗಿ ಸಂಸಾರದಲ್ಲಿ ಸಂತೋಷವೂ ಸಿಗುತ್ತದೆ. ಆದರೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಕಲಹ ಮತ್ತು ಹಣ (Money) ಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ (Mobile) ಅನಿವಾರ್ಯವಾಗಿದೆ. ಬಹುತೇಕರು ರಾತ್ರಿ (Night) ಮಲಗುವವರೆಗೂ ಮೊಬೈಲ್ ನೋಡ್ತಾರೆ. ನಂತ್ರ ಅದನ್ನು ತಲೆ (Head) ಬಳಿ ಇಟ್ಟು ಮಲಗ್ತಾರೆ. ಬರೀ ಮೊಬೈಲ್ ಮಾತ್ರವಲ್ಲ ಹಾಸಿಗೆ ಬಳಿ, ತಲೆ ಬಳಿ ಕೆಲ ವಸ್ತುಗಳನ್ನು ಇಟ್ಟು ಮಲಗುವ ಜನರಿದ್ದಾರೆ. ಆದರೆ, ವಾಸ್ತು ಪ್ರಕಾರ ಈ 5 ವಸ್ತುಗಳನ್ನು ಮನೆಯಲ್ಲಿಟ್ಟರೆ ನಕಾರಾತ್ಮಕ ಶಕ್ತಿ (Negative energy ) ನಿಮ್ಮನ್ನು ಕಾಡುತ್ತದೆ. ಇಂದು ಯಾವ ವಸ್ತುವನ್ನು ತಲೆ ಬಳಿ ಇಟ್ಟು ಮಲಗಿದ್ರೆ ವಾಸ್ತುದೋಷ ನಿಮ್ಮನ್ನು ಕಾಡುತ್ತದೆ ಎಂಬುದನ್ನು ನಾವು ಹೇಳ್ತೇವೆ.

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ತಲೆ ಬಳಿ ಇಡಬೇಡಿ : 

ಯಾವುದೇ ಎಲೆಕ್ಟ್ರಾನಿಕ್ (Electronic) ಸಾಧನ : ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಯಂಚಾಲಿತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳು ಎಲ್ಲಾ ಸಮಯದಲ್ಲೂ ಚಲಿಸುತ್ತವೆ. ವಾಚ್, ಮೊಬೈಲ್, ಲ್ಯಾಪ್‌ಟಾಪ್ ಮತ್ತು ವಿಡಿಯೋ ಗೇಮ್‌ಗಳಂತಹ ವಸ್ತುಗಳನ್ನು ತಲೆಯ ಬಳಿ ಇಟ್ಟು ಮಲಗಬಾರದು.  ವಾಸ್ತು ಶಾಸ್ತ್ರದ ಪ್ರಕಾರ, ಈ ವಸ್ತುಗಳು ನಿಮ್ಮ ನಿದ್ರೆಗೆ ಅಡೆತಡೆಯುಂಟು ಮಾಡುತ್ತವೆ. ಈ ವಸ್ತುಗಳು ನಿಮ್ಮ ಆರೋಗ್ಯಕ್ಕೂ ಹಾನಿಕಾರಕ. ಇವುಗಳಿಂದ ಹೊರಹೊಮ್ಮುವ ಕಿರಣಗಳು ಮೆದುಳಿಗೆ ಹಾನಿಯುಂಟು ಮಾಡುತ್ತದೆ. 

ಪುಸ್ತಕ (Book), ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು : ಅನೇಕ ಜನರು ರಾತ್ರಿ ಮಲಗುವ ಮುನ್ನ ಪುಸ್ತಕಗಳನ್ನು ಓದುತ್ತಾರೆ. ಅಲ್ಲಿಯೇ ನಿದ್ರೆ ಬರುವ ಕಾರಣ ಅದನ್ನು ತಲೆ ಬಳಿ ಇಟ್ಟು ಮಲಗ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ತಲೆಯ ಬಳಿ ಇಡಬಾರದು. ಹಾಸಿಗೆ ಬಳಿ ಪುಸ್ತಕವನ್ನಿಟ್ಟು ಮಲಗಿದ್ರೆ ಜೀವನದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದ್ರಿಂದ ಸಮಸ್ಯೆ ಉಲ್ಪಣಿಸುತ್ತದೆ. 

ಜಾತಕದ ಮೊದಲ ಮನೆಯಲ್ಲಿದ್ದರೆ ಸೂರ್ಯ, ಸಿಗುತ್ತೆ ಐಶಾರಾಮಿ ಸೌಕರ್ಯ!

ನೀರಿನ ಬಾಟಲಿ (Water Bottle) :  ರಾತ್ರಿ ನೀರು ಕುಡಿಯುವ ಅಭ್ಯಾಸವೂ ಹಲವರಿಗೆ ಇದೆ.ಬಾಯಾರಿಕೆಯಾದಾಗ ಎದ್ದು ಹೋಗಲು ಮನಸ್ಸಾಗುವುದಿಲ್ಲ. ಇದೇ ಕಾರಣಕ್ಕೆ ನೀರಿನ ಬಾಟಲಿಗಳನ್ನು ತಲೆ ಬಳಿ ಇಟ್ಟುಕೊಂಡು ಮಲಗುತ್ತಾರೆ. ವಾಸ್ತು ಪ್ರಕಾರ, ಈ ಬಾಟಲಿಗಳನ್ನು ತಲೆ ಬಳಿ ಇಟ್ಟು ಮಲಗಬಾರದು. ನೀರು ಚಂದ್ರನ ಗ್ರಹಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನಿಮ್ಮ ತಲೆಯ ಬಳಿ ನೀರಿನ ಬಾಟಲಿ ಇಟ್ಟು ಮಲಗಿದರೆ ನೀವು ಮಾನಸಿಕ ಕಾಯಿಲೆಗಳನ್ನು ಎದುರಿಸಬೇಕಾಗಬಹುದು.

ಚೈನ್ (Chain) : ಕಬ್ಬಿಣ ಅಥವಾ ಯಾವುದೇ ಲೋಹದಿಂದ ಮಾಡಿದ ಸರಪಳಿಯನ್ನು  ತಲೆಯ ಬಳಿ ಇಟ್ಟು ಮಲಗಬೇಡಿ. ಸರಪಳಿಯನ್ನು ತಲೆಯ ಬಳಿ ಮಾತ್ರವಲ್ಲದೆ ಹಾಸಿಗೆಯ ಬಳಿಯೂ ಇಡಬಾರದು. ವಾಸ್ತು ಪ್ರಕಾರ, ಇದನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ತಲೆಯ ಬಳಿ ಇಡುವುದರಿಂದ ವ್ಯಕ್ತಿಯ ಪ್ರತಿಯೊಂದು ಕೆಲಸದಲ್ಲಿ ತೊಂದರೆಗಳು ಉಂಟಾಗಬಹುದು.  

ಮೇಷದಿಂದ ಕುಂಭದವರೆಗೆ; ಈ ರಾಶಿಯ ಜನರು ಫೋನಿಗೇ ಅಂಟಿಕೊಂಡಿರುತ್ತಾರೆ!

ಕುಟ್ಟಾಣಿ : ಒರಳು ಅಥವಾ ಕುಟ್ಟಾಣಿಯನ್ನು ತಲೆಯ ಬಳಿ ಇಟ್ಟು ಎಂದಿಗೂ ಮಲಗಬೇಡಿ. ವಾಸ್ತು ಪ್ರಕಾರ ಇದು ಅಶುಭವೆಂದು ನಂಬಲಾಗಿದೆ. ಇದನ್ನು ತಲೆ ಬಳಿ ಇಟ್ಟು ಮಲಗಿದ್ರೆ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟುಮಾಡಬಹುದು. ಇದಲ್ಲದೆ  ಜೀವನದಲ್ಲಿ ಸಂತೋಷ ಮತ್ತು ಶಾಂತಿಯ ಕೊರತೆ ಎದುರಿಸಬೇಕಾಗುತ್ತದೆ.

Latest Videos
Follow Us:
Download App:
  • android
  • ios