Vastu Tips: ಬೆಳಗ್ಗೆ ಈ 3 ಕೆಲಸ ಮಾಡಿದರೆ ಬ್ಯಾಡ್ ಲಕ್ ಬೆನ್ಹತ್ತುವುದು!

ಮನೆಯ ಸಮಸ್ಯೆಗಳಿಗೆ ವಾಸ್ತುದೋಷವೂ ಕಾರಣವಾಗಿರಬಹುದು. ಇದರಿಂದ ಅನೇಕ ತೊಂದರೆಗಳು ಆಗುತ್ತಿರಬಹುದು. ಈ ದೋಷನಿವಾರಣೆಗೆ ನೀವು ಪ್ರಯತ್ನಗಳನ್ನು ಮಾಡಿಯೂ ಸಫಲವಾಗಿರದಿದ್ದರೆ ಮನೆಯಲ್ಲಿ ಮಾಡುವ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ವಾಸ್ತು ಶಾಸ್ತ್ರದ ಈ ಸರಳ ನಿಯಮವನ್ನು ಅನುಸರಿಸಿ. 
 

Avoid these things after you wake up in the morning

ವಾಸ್ತು ಶಾಸ್ತ್ರವು (Vastu) ಜ್ಯೋತಿಷ್ಯ ಶಾಸ್ತ್ರದ (Astrology) ಒಂದು ಭಾಗ. ಇದರ ಬಗ್ಗೆ ಪುರಾತನ ಗ್ರಂಥಗಳಲ್ಲಿಯೇ ಉಲ್ಲೇಖವಿದೆ. ವಾಸ್ತು ದೋಷವಿದ್ದರೆ ಮನೆಯಲ್ಲಿ (House) ಅಥವಾ ಕಚೇರಿಗಳಲ್ಲಿ (Office) ತೊಂದರೆಗಳು ಉಂಟಾಗುತ್ತವೆ ಎಂಬುದನ್ನೂ ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ಮನೆ, ಮನುಷ್ಯ ಎಂದ ಮೇಲೆ ಸಮಸ್ಯೆಗಳು (Problem) ಬರುವುದು ಸಹಜ. ಆದರೆ, ಸಮಸ್ಯೆಗೆ ಯಾವ ಮೂಲವೆಂದು ತಿಳಿದುಕೊಂಡರೆ ಜೀವನ ಸುಗಮ, ಸುಲಭ ಹಾಗೂ ಸುಖಮಯವಾಗಿರಲಿದೆ. 

ಸಮಸ್ಯೆಗಳಿಗೆ ಮನೆಯ ವಾಸ್ತುದೋಷವೂ ಕಾರಣವಾಗಿರಬಹುದು. ಇದರಿಂದ ಅನೇಕ ತೊಂದರೆ (Problem), ತಾಪತ್ರಯಗಳೂ ಎದುರಾಗಬಹುದು. ಈ ದೋಷನಿವಾರಣೆಗೆ ಹಲವು ಕಡೆ ಹಲವು ರೀತಿ ಪ್ರಯತ್ನಿಸಿ ಬಿಟ್ಟಿದ್ದರೆ ವಾಸ್ತು ಶಾಸ್ತ್ರದ ಅನುಸಾರ ಈ ಸಿಂಪಲ್ ಟಿಪ್ಸ್ ಅನುಸರಿಸಿ ಸಮೃದ್ಧ ಬಾಳನ್ನು ನಿಮ್ಮದಾಗಿಸಿಕೊಳ್ಳಿ...

ವಾಸ್ತು ಶಾಸ್ತ್ರದ ಬಗ್ಗೆ ವಿಶೇಷವಾಗಿ ಹೇಳಬೇಕೆಂದರೆ ವಿವಿಧ ದಿಕ್ಕುಗಳಲ್ಲಿ (Direction) ಇರಿಸಲಾದ ವಸ್ತುಗಳು, ಅವುಗಳ ಆಕಾರ, ಗಾತ್ರ, ತೂಕ ಇತ್ಯಾದಿ ಅಂಶಗಳ ಪರಿಣಾಮಗಳನ್ನು ಬೀರುತ್ತವೆ. ಕೆಲವು ಸಕಾರಾತ್ಮಕ ಶಕ್ತಿಯನ್ನು ಕೊಟ್ಟರೆ, ಮತ್ತೆ ಕೆಲವು ನಕಾರಾತ್ಮಕ (Negative) ಶಕ್ತಿಯನ್ನು ಕೊಡುತ್ತವೆ. ಹೀಗಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಮಾಡಲಾಗಿದೆ. ಆ ನಿಯಮದಂತೆ ಅನುಸರಿಸಿದರೆ ನಾವು ನಮ್ಮ ಜೀವನದಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಬಹುದು. ಪಾಸಿಟಿವ್ (Positive) ಎನರ್ಜಿಯನ್ನು ಹೊಂದುವ ಮೂಲಕ ಮನೆ ಹಾಗೂ ಮನದಲ್ಲಿ ಸುಖ ಶಾಂತಿಯನ್ನು ತಮ್ಮದಾಗಿಸಬಹುದು. ಹೀಗಾಗಿ ಬೆಳಗ್ಗೆ ಮಾತ್ರ ಈ ಮೂರು ಕೆಲಸಗಳನ್ನು ಮಾಡಲೇಬಾರದು. ಅವುಗಳು ಯಾವುವು ಎಂಬುದರ ಬಗ್ಗೆ ನೋಡೋಣ...

ಎದ್ದಕೂಡಲೇ ಕನ್ನಡಿ (mirror) ನೋಡಬೇಡಿ
ಬೆಳ್ಳಂಬೆಳಗ್ಗೆ ಇವತ್ತು ಯಾರ ಮುಖ (Face) ನೋಡಿದೆನೋ ಏನೋ..? ಎಂದು ಶಪಿಸುವವರನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ನಾವೇ ಆ ಮಾತನ್ನು ಹೇಳಿರುತ್ತೇವೆ. ಆದರೆ, ನಮ್ಮ ಮುಖವನ್ನೇ ನಾವು ಎದ್ದ ಕೂಡಲೇ ನೋಡಿಬಿಟ್ಟಿರುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದು ನಮ್ಮದೇ ಮುಖವನ್ನು ನೋಡಿಕೊಳ್ಳಬಾರದು. ಇದರಿಂದ ಆ ವ್ಯಕ್ತಿಯು  ಜೀವನದಲ್ಲಿ (Life) ಸಮಸ್ಯೆಗಳನ್ನು (Problem) ಹೆಚ್ಚೆಚ್ಚು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ವಾಸ್ತುಶಾಸ್ತ್ರದ ಅನುಸಾರ ಮಲಗುವ ಕೋಣೆಯಲ್ಲಿ (Bed Room) ಕನ್ನಡಿಯನ್ನು ಇಡದಂತೆ ಸೂಚಿಸಲಾಗಿದೆ. 

ಇದನ್ನು ಓದಿ: Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!

ಎಂಜಲು ಪಾತ್ರೆ (Leftovers) ಇರಕೂಡದು
ವಾಸ್ತುಶಾಸ್ತ್ರದ ಪ್ರಕಾರ ಎಂಜಲು ಪಾತ್ರೆಗಳನ್ನು ಬಹಳ ಹೊತ್ತು ಅಡುಗೆ ಮನೆಯಲ್ಲಿ ಇಡುವುದು ಅಶುಭ ಸಂಕೇತವಾಗಿದೆ. ಹಾಗೇ ಮನೆಯ ಸದಸ್ಯರು ಬೆಳಗ್ಗೆ ಎದ್ದ ಕೂಡಲೇ ಎಂಜಲು ಪಾತ್ರೆಯನ್ನು ನೋಡಿದರೆ ಅವರ ಆ ದಿನವೇ ಹಾಳಾಗುತ್ತದೆ. ಅದು ನಕಾರಾತ್ಮಕ ಶಕ್ತಿಯೂ ಹೆಚ್ಚುವಂತೆ ಮಾಡುತ್ತದೆ. ಹೀಗಾಗಿ ವಾಸ್ತು ದೋಷವನ್ನು ನಿವಾರಿಸಲು ರಾತ್ರಿಯೇ ಎಂಜಲು ಪಾತ್ರೆಗಳನ್ನು ತೊಳೆದಿಡಬೇಕು. ರಾತ್ರಿಯಿಡೀ ಅಡುಗೆ ಮನೆಯಲ್ಲಿ (kitchen) ಎಂಜಿಲು ಪಾತ್ರೆಗಳನ್ನು ಬಿಡುವುದರಿಂದ ಮನೆಯಲ್ಲಿ ದಾರಿದ್ರ್ಯ ನೆಲೆಸಿ ಬಡತನ (Poverty) ಉಂಟಾಗಬಹದು. ಅಲ್ಲದೆ, ಎಂಜಲು ಪಾತ್ರೆಗಳನ್ನು ಎದ್ದಕೂಡಲೇ ಕಂಡರೆ ಆಗುವ ಕೆಲಸವೂ ಆಗದು. 

ಇದನ್ನು ಓದಿ: Jaya Ekadshi: ಜಯ ಏಕಾದಶಿ ವ್ರತ ಮಾಡಿ, ಇರೋ ಬರೋ ದೋಷಗಳಿಂದ ಮುಕ್ತರಾಗಿ!

ನೆರಳು (Shadow) ನೋಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ಕೂಡಲೇ ಯಾರ ನೆರಳನ್ನೂ ನೋಡಬಾರದು. ಇದು ವ್ಯಕ್ತಿಯ ಜೀವನದ ಮೇಲೆ, ದೈನಂದಿನ ಚಟುವಟಿಕೆ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಬೆಳಗ್ಗೆ ತಮ್ಮದೇ ನೆರಳನ್ನು ನೋಡುವುದೂ ಸಹ ವಾಸ್ತುಶಾಸ್ತ್ರದಲ್ಲಿ ನಿಷಿದ್ಧ ಮಾಡಲಾಗಿದೆ. ಇದರಿಂದ ಮಾನಸಿಕ ಖಿನ್ನತೆಯೂ (Mental depression) ಹೆಚ್ಚುವುದಲ್ಲದೆ, ನೆಗೆಟೀವ್ ಎನರ್ಜಿಯೂ ಹೆಚ್ಚಾಗುತ್ತದೆ. ಮನೆಯಲ್ಲಿ ಜಗಳಗಳೂ ಆಗುತ್ತವೆ. ಇದರ ಹೊರತಾಗಿ ಬೆಳಗ್ಗೆ ಎದ್ದ ತಕ್ಷಣ ಕಾಡು ಪ್ರಾಣಿಯ ಚಿತ್ರವನ್ನೂ ನೋಡಬಾರದು. ಇದು ನಿಮ್ಮ ಮನಸ್ಸಿನ ಭಾವನೆ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

Latest Videos
Follow Us:
Download App:
  • android
  • ios