Asianet Suvarna News Asianet Suvarna News

Jaya Ekadshi: ಜಯ ಏಕಾದಶಿ ವ್ರತ ಮಾಡಿ, ಇರೋ ಬರೋ ದೋಷಗಳಿಂದ ಮುಕ್ತರಾಗಿ!

 ಜಯ ಏಕಾದಶಿ ವ್ರತ ಆಚರಣೆಗೆ ಬಹಳ ದೊಡ್ಡ ಇತಿಹಾಸವೇ ಇದೆ. ದೋಷಗಳನ್ನು, ಪಾಪಗಳನ್ನು ತೊಳೆದುಕೊಳ್ಳಲು ಈ ವ್ರಥ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ವ್ರತ ಆಚರಣೆ ಏಕೆ ಬಂತು? ಹೇಗೆ ಬಂತು? ಇದರ ಹಿಂದಿನ ಕಥೆಯೇನು ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ....
 

Doing Jaya Ekadashi Vrat and get rid of sin in life
Author
Bangalore, First Published Feb 11, 2022, 1:56 PM IST | Last Updated Feb 11, 2022, 1:56 PM IST

ಮಾಘ ಶುಕ್ಲ ಪಕ್ಷ ಏಕಾದಶಿಯಂದು ಜಯ ಏಕಾದಶಿ ವ್ರತವನ್ನು (Jaya Ekadashi Vrat) ಮಾಡಲಾಗುತ್ತದೆ. ಈ ದಿನದಂದು ಭಗವಾನ್ ಶ್ರೀಕೃಷ್ಣನನ್ನು (Lord) ಆರಾಧಿಸಬೇಕು. ನಿತ್ಯ ಎಲ್ಲಾ ಸಮಯದಲ್ಲೂ (Time) ಶ್ರೀಕೃಷ್ಣನ ಜಪ ಮಾಡಬೇಕು. ಈ ವ್ರತವನ್ನು ಮಾಡುವುದರಿಂದ ಭೂತ, ಪ್ರೇತಾದಿ (Devil) ದೋಷಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ, ಜನ್ಮ ಜನ್ಮಾಂತರ ದೋಷಗಳು, ಬ್ರಹ್ಮಹತ್ಯೆಗಳಂತಹ ಪಾಪಗಳಿಂದಲೂ ಮುಕ್ತಿಯನ್ನು (Rid of sin) ಪಡೆಯಬಹುದಾಗಿದೆ.

ಜಯ ಏಕಾದಶಿ ವ್ರತ ಕಥೆ
ಕೃಷ್ಣನ ಬಳಿ ಬಂದ ಯುಧಿಷ್ಠಿರನು (Yudhistira) ಜಯ ಏಕಾದಶಿ ವ್ರಥದ ಬಗ್ಗೆ ಕೇಳುತ್ತಾನೆ. ಒಮ್ಮೆ ಇಂಧ್ರನ ಸಭೆಯಲ್ಲಿ ಅಪ್ಸರೆಯರು ನೃತ್ಯ (Dance) ಮಾಡುತ್ತಿರುತ್ತಾರೆ. ಗಂಧರ್ವರಲ್ಲಿ ಪ್ರಸಿದ್ಧಿ ಪಡೆದ ಪುಷ್ಪವಂತ ಮತ್ತು ಅವನ ಮಗಳು ಪುಷ್ಪವತಿ ಇದ್ದರು. ಆ ಸಭೆಯಲ್ಲಿ ಪುಷ್ಪವಾನನ (Pushpavan) ಮಗ ಮಾಲ್ಯವಾನ್ (Malyavan) ಇದ್ದ. ಈ ವೇಳೆ ಪುಷ್ಪವತಿಯು ಮಾಲ್ಯವಾನ್‌ನನ್ನು ನೋಡಿ ಮೋಹಿತಳಾಗುತ್ತಾಳೆ. ತನ್ನ ರೂಪ, ಲಾವಣ್ಯಗಳಿಂದ ಮಾಲ್ಯವಾನ್‌ನನ್ನು ವಶ ಮಾಡಿಕೊಳ್ಳುವ ಪುಷ್ಪವತಿಯು ಮಾಲ್ಯವಾನ್ ಜೊತೆಗೂಡಿ ನೃತ್ಯವನ್ನು ಮಾಡುತ್ತಾಳೆ. ಇಬ್ಬರೂ ಮೋಹಿತರಾಗಿ ಮೈಮರೆತು ನೃತ್ಯ ಮಾಡುತ್ತಿದ್ದ ಕಾರಣ, ಸ್ವರ, ತಾಳ, ಎಲ್ಲವೂ ತಪ್ಪುತ್ತಿತ್ತು. ನೃತ್ಯ ಪ್ರದರ್ಶನವು ಸಭೆಯ ನೀತಿಯನ್ನು ಉಲ್ಲಂಘಿಸಿದೆ ಎಂದು ಭಾವಿಸಿ ಇಂಧ್ರನು (Indra) ತನ್ನ ಆಜ್ಞೆಯನ್ನು ಉಲ್ಲಂಘಿಸಿದ ಕಾರಣ ನೀವಿಬ್ಬರೂ ಮೃತ್ಯುಲೋಕಕ್ಕೆ ಹೋಗಿ ಪಿಶಾಚಿ ರೂಪ ಧಾರಣೆ ಮಾಡಿ ನಿಮ್ಮ ಕರ್ಮಗಳ ಫಲ ಪಡೆಯಿರಿ ಎಂದು ಶಾಪ (Curse) ನೀಡುತ್ತಾನೆ.

ಇದನ್ನು ಓದಿ: Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು! 

ಇಂಧ್ರನ ಈ ಶಾಪದಿಂದ ದುಃಖಿತರಾಗಿ ಹಿಮಾಲಯ ಪರ್ವತದಲ್ಲಿ ರಕ್ತಪಿಶಾಚಿಗಳಾಗಿ ಜೀವನ ಸಾಗಿಸುತ್ತಿದ್ದರು. ಅವರಿಗೆ ಗಂಧ, ರಸ, ಸ್ಪರ್ಶ ಯಾವುದರ ಜ್ಞಾನವೂ ಇರುವುದಿಲ್ಲ. ಅವರಿಗೆ ನಿದ್ರೆಯೂ (Sleep) ಇರುವುದಿಲ್ಲ. ಹಾಗಾಗಿ ಈ ಶಾಪದಿಂದ ವಿಮೋಚನೆ ಹೊಂದಬೇಕು ಎಂದು ಎಷ್ಟೇ ಪ್ರಯತ್ನಪಟ್ಟರೂ ಆಗುತ್ತಿರಲಿಲ್ಲ. ಒಂದು ದಿನ ಅವರಿಗೆ ನಾರದ ಪ್ರತ್ಯಕ್ಷನಾಗುತ್ತಾನೆ. ದುಃಖಕ್ಕೆ ಏನು ಕಾರಣ ಎಂದು ನಾರದ ಕೇಳಿದಾಗ, ಇವರು ನಡೆದಿದ್ದೆಲ್ಲವನ್ನೂ ವಿವರಿಸುತ್ತಾರೆ. ಆಗ ನಾರದನು ಜಯ ಏಕಾದಶಿ ವ್ರಥದ ಬಗ್ಗೆ ಹಾಗೂ ಸಂಪೂರ್ಣ ವಿಧಿ ವಿಧಾನಗಳನ್ನು ಏಳುತ್ತಾನೆ. ಆ ದಿನ ಅವರು ಏನೂ ತಿನ್ನದೆ, ಯಾವುದೇ ಪಾಪ ಕರ್ಮಗಳನ್ನು ಮಾಡದೇ ಭಗವಂತನ ನಾಮಸ್ಮರಣೆಯನ್ನು ಮಾತ್ರ ಮಾಡುತ್ತಾ ವ್ರತಾಚರಣೆ ಮಾಡಿದರು. ಮರುದಿನ ಅವರಿಗೆ ಭಗವಂತನ ಕೃಪೆಯಿಂದ ಪೂರ್ವಶರೀರ ಅಂದರೆ ಮೊದಲಿನಂತಾಗಿದ್ದರು.ಶಾಪಮುಕ್ತರಾದ ಪುಷ್ಪವತಿ ಮತ್ತು ಮಾಲ್ಯವಾನ್ ಇಬ್ಬರೂ ಪುನಃ ಇಂದ್ರಲೋಕಕ್ಕೆ ತೆರಳಿ ಇಂದ್ರದೇವನಿಗೆ ಪ್ರಣಾಮಗಳನ್ನು ಸಲ್ಲಿಸುತ್ತಾರೆ. ಇವರನ್ನು ನೋಡಿದ ಇಂದ್ರನಿಗೆ ಬಹಳ ಆಶ್ಚರ್ಯವಾಗಿ ಪಿಶಾಚಿ ದೇಹದಿಂದ ನಿಮಗೆ ಹೇಗೆ ಮುಕ್ತಿ ಸಿಕ್ಕಿತು ಎಂದು ಕೇಳುತ್ತಾನೆ. ಆಗ ಇದರ ಬಗ್ಗೆ ಹೇಳುವ ಮಾಲ್ಯವಾನ್, “ಶ್ರೀಕೃಷ್ಣನ ದಯೆಯಿಂದ ಜಯ ಏಕಾದಶಿ ವ್ರತ ಆಚರಿಸಿದೆವು. ಇದರ ಪುಣ್ಯದ ಫಲವಾಗಿ ನಮಗೆ ಶಾಪಮುಕ್ತವಾಗಿ ದೇವರ ಅನುಗ್ರಹಕ್ಕೆ ಪಾತ್ರರಾದೆವು ಎಂದು ಹೇಳುತ್ತಾನೆ. ಆಗ ಸಂತಸಗೊಂಡ ಇಂದ್ರನು ಇನ್ನು ಮುಂದೆ ನೀನು ಪುಷ್ಪವತಿಯೊಂದಿಗೆ ಸ್ವಚ್ಛಂದವಾಗಿ ಜೀವನ ನಡೆಸು (Life lead) ಎಂದು ಆಶೀರ್ವದಿಸುತ್ತಾನೆ. ಬಳಿಕ ಇವರು ನಾಗಲೋಕಕ್ಕೆ ಹೋಗಿ ಜೀವನ ನಡೆಸುತ್ತಾರೆ ಎಂದು ಸವಿವರವಾಗಿ ಶ್ರೀಕೃಷ್ಣನು ಯುಧಿಷ್ಠಿರನಾದ ಧರ್ಮರಾಯನಿಗೆ ಜಯಏಕಾದಶಿ ವ್ರತದ ಕಥೆಯನ್ನು ಸಂಪೂರ್ಣವಾಗಿ ವಿವರಿಸುತ್ತಾನೆ.

ಇದನ್ನು ಓದಿ: Zodiac sign: ರಾಶಿ ಅನುಸಾರ, ಹುಡುಗಿಯರ ಕನಸಿನ ರಾಜ ಹೀಗಿರಬೇಕಂತೆ!

ಈ ಜಯ ಏಕಾದಶಿ ವ್ರತದ ಆಚರಣೆಯಿಂದ ಕೆಟ್ಟ ಜನ್ಮದಿಂದ ಮುಕ್ತಿ ಸಿಗುವುದಲ್ಲದೆ, ಉತ್ತಮ ಜನ್ಮವು ಪ್ರಾಪ್ತವಾಗುತ್ತದೆ. ಈ ವ್ರತ ಆಚರಿಸಿದ ವ್ಯಕ್ತಿಗೆ ಯಜ್ಞ, ತಪಸ್ಸು ಹಾಗೂ ದಾನಗಳ (Donate) ಫಲ ಪ್ರಾಪ್ತಿಯಾಗುತ್ತದೆ.

Latest Videos
Follow Us:
Download App:
  • android
  • ios