ವಾಸ್ತು ದೋಷ ನಿವಾರಣೆಗೆ ವಿಘ್ನನಿವಾರಕನ ಸರಳ ಪರಿಹಾರ!

ಮನೆಯಲ್ಲಿ ವಾಸ್ತು ದೋಷವಿದೆ ಎಂದು ತಿಳಿದರೆ, ಅದಕ್ಕೆ ಸುಲಭ ಪರಿಹಾರವನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ಪ್ರಥಮ ಪೂಜಿತ ಗಣೇಶನನ್ನು ಆರಾಧಿಸುವುದು ಸೂಕ್ತ ಪರಿಹಾರಗಳಲ್ಲೊಂದಾಗಿದೆ. ಗಣೇಶನನ್ನು ಭಕ್ತಿಯಿಂದ ಭಜಿಸಿದಾಗ ಕಷ್ಟಗಳು ನಿವಾರಣೆಯಾಗುತ್ತದೆ. ಹಾಗಾದರೆ ವಾಸ್ತುದೋಷ ನಿವಾರಣೆಗೆ ಏನೇನು ಉಪಾಯಗಳಿವೆ ಎಂಬುದನ್ನು ತಿಳಿಯೋಣ.

A simple remedy for vaastu dosha removal!

ವಿಘ್ನ ನಿವಾರಕ, ವಿಘ್ನೇಶ್ವರ, ಪ್ರಥಮ ಪೂಜಕ, ಮೋದಕ ಪ್ರಿಯ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಗಣೇಶನನ್ನು (Lord Ganesha) ಆರಾಧಿಸಿದರೆ ಸಕಲ ಕಷ್ಟಗಳೂ ನಿವಾರಣೆಯಾಗುತ್ತದೆ. ದೂರ್ವೆ (ಗರಿಕೆ) ಪ್ರಿಯನಾಗಿರುವ ಗಣೇಶನನ್ನು ಭಕ್ತಿಯಿಂದ ಭಜಿಸಿದಾಗ ಅವನ ಕೃಪಾಶೀರ್ವಾದ ನಿಮ್ಮದಾಗುತ್ತದೆ. ಪ್ರತಿಯೊಂದು ಶುಭಕಾರ್ಯದಲ್ಲೂ ಗಣಪತಿಗೆ ಮೊದಲ ಪೂಜೆಯು (Pooja) ಸಲ್ಲಿಕೆಯಾಗುತ್ತದೆ. 

ಇನ್ನು ಮನೆಯಲ್ಲಿ ಸದಾ ಜಗಳಗಳು (Quarrels) ಆಗುತ್ತಿದ್ದರೆ, ಕುಟುಂಬದವರ (Family) ಮಧ್ಯೆ ಮನಸ್ತಾಪಗಳು ಹೆಚ್ಚಿದ್ದರೆ, ಮಾನಸಿಕ ನೆಮ್ಮದಿ ಇಲ್ಲದಿದ್ದರೆ, ಆರೋಗ್ಯದ (Health) ಸಮಸ್ಯೆ ಕಾಡುತ್ತಿದ್ದರೆ, ಆರ್ಥಿಕ ಸಂಕಷ್ಟಗಳು (Economic Problem) ಎದುರಾಗಿದ್ದರೆ ಅಂತಹ ಸಮಯದಲ್ಲಿ ಗಣೇಶನನ್ನು ಪೂಜಿಸಬೇಕು. ಗಣೇಶನು ಸಕಲ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಇದಕ್ಕೆ ವಾಸ್ತು ದೋಷ (Vastu Dosha) ಸಹ ಕಾರಣವಾಗಿರಬಹುದಾಗಿದೆ. 

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ವಾಸ್ತುಪುರುಷನ ಪ್ರಾರ್ಥನೆಗೆ ಒಪ್ಪಿದ ಬ್ರಹ್ಮನು (Lord Brahma) ಮಾನವರ ಕಲ್ಯಾಣಕ್ಕೋಸ್ಕರವಾಗಿ ವಾಸ್ತುಶಾಸ್ತ್ರದ ನಿಯಮವನ್ನು ರಚಿಸುತ್ತಾನೆ. ಜೊತೆಗೆ ಗಣೇಶನನ್ನು ಪೂಜಿಸಿದರೆ ಮಾತ್ರ ವಾಸ್ತುದೇವ ಸಂತುಷ್ಟಗೊಳ್ಳುತ್ತಾನೆ ಎಂದೂ ಸಹ ಉಲ್ಲೇಖವಿದೆ. ಹಾಗಾಗಿ ಗಣೇಶನ ಆರಾಧನೆಯಿಂದ ವಾಸ್ತುದೋಷವನ್ನು ನಿವಾರಿಸಿಕೊಳ್ಳಬಹುದಾಗಿದೆ.

ವಾಸ್ತುದೋಷ ನಿವಾರಣೆಗೆ ಏನು ಮಾಡಬೇಕು?
• ವಾಸ್ತುಶಾಸ್ತ್ರದ ತೊಂದರೆಯಿಂದ ಸದಾ ಸಂಕಷ್ಟಗಳು ಎದುರಾಗುತ್ತಿದೆ ಎಂದಾದರೆ ಗಣಪತಿಯ ಫೋಟೋ (Photo) / ಪ್ರತಿಮೆಯನ್ನು ಮುಖ್ಯದ್ವಾರದ ಒಳಗೆ ಹಾಗೂ ಹೊರಗೆ ಎರಡೂ ಬದಿಯಲ್ಲಿ ಒಂದೇ ನೇರಕ್ಕೆ ಬರುವಂತೆ ಇಡಬೇಕು. ಹೀಗೆ ಮಾಡುವುದರಿಂದ ವಾಸ್ತುದೋಷ ನಿವಾರಣೆಯಾಗಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೆ, ಮನೆಯಲ್ಲಿ ಸಮೃದ್ಧಿ (Wealth) ಹಾಗೂ ಶಾಂತಿ, ನೆಮ್ಮದಿ ನೆಲೆಸುತ್ತದೆ.
• ಮಾವು (Mango), ಅಶ್ವತ್ಥ ಮತ್ತು ಬೇವಿನ ಮರದಿಂದ ಮಾಡಿದ ಗಣೇಶನ ಮೂರ್ತಿಯನ್ನು ಮನೆಯ ಪ್ರಮುಖ ದ್ವಾರದ ಬಳಿ ಇಡಬೇಕು. ಹೀಗೆ ಮಾಡಿದರೆ ಪಾಸಿಟಿವ್ (Positive) ಎನರ್ಜಿ ಹೆಚ್ಚಾಗುತ್ತದೆ. 
• ಶ್ವೇತ ವರ್ಣದ (White Colour) ಗಣೇಶನ ಮೂರ್ತಿ ಅಥವಾ ಫೋಟೋವನ್ನು ಪೂಜಿಸಿದರೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ.
• ಮನೆಯಲ್ಲಿ (Home) ಹೆಚ್ಚಿನ ಗಣೇಶನ ಮೂರ್ತಿ ಇಲ್ಲವೇ ಫೋಟೋವನ್ನು ಇಟ್ಟುಕೊಳ್ಳುವುದು ಉತ್ತಮವಲ್ಲ.
• ಗಣೇಶನ ಮೂರ್ತಿಯನ್ನು ತರಬೇಕಾದರೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸೊಂಡಿಲು ಎಡಗಡೆಗೆ ತಿರುಗಿರುವಂತಹ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡರೆ ಬಹಳ ಒಳ್ಳೆಯದು. ಅದೇ ಬಲಮುರಿ ಗಣೇಶನನ್ನು ಇಟ್ಟುಕೊಂಡರೆ ಮನೆಯಲ್ಲಿ ನಿಯಮಬದ್ಧ ಆರಾಧನೆ ಮಾಡಬೇಕಾಗುತ್ತದೆ. ಜೊತೆಗೆ ಬಲಮುರಿ ಗಣಪನನ್ನು ಪ್ರಸನ್ನಗೊಳಿಸುವುದು ಸಹ ಅಷ್ಟೇ ಕಷ್ಟದ ವಿಷಯವಾಗಿದೆ.

ಇದನ್ನು ಓದಿ: ಸ್ಪಟಿಕ ಧಾರಣೆ ಮತ್ತು ಗ್ರಹಬಲದಲ್ಲಿ ಅಡಗಿದೆ ನಿಮ್ಮ ಬಲ

ಮನೆಯಲ್ಲಿ ವಾಸ್ತುದೋಷ ಇದ್ದರೆ ಏನು ಮಾಡಬೇಕು?
ಮನೆಯ ಎಲ್ಲಿಯಾದರೂ ವಾಸ್ತುವಿನ ದೋಷ ಇದೆ ಎಂದಾದರೆ ಅದನ್ನು ಕೆಡವಿ ಸರಿಪಡಿಸಬೇಕು ಎಂದೇನಿಲ್ಲ. ಹಾಗೆಯೇ ಬಿಟ್ಟು ವಾಸ್ತುದೋಷವನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ದೋಷ ಇರುವ ಜಾಗದಲ್ಲಿ ಕುಂಕುಮವನ್ನು (vermeil) ತುಪ್ಪದಲ್ಲಿ (Ghee) ಬೆರೆಸಿ ಅದರಿಂದ ಸ್ವಸ್ತಿಕ್ ಬರೆಯಬೇಕು. ಹೀಗೆ ಮಾಡುವುದರಿಂದ ವಾಸ್ತುದೋಷ ಕ್ರಮೇಣ ನಿವಾರಣೆಯಾಗುತ್ತದೆ. ಗಣೇಶನ ಆಶೀರ್ವಾದದಿಂದ ಮನೆಯಲ್ಲಿ ಸುಖ, ಶಾಂತಿ ದೊರೆಯುವುದರ ಜೊತೆಗೆ ಧನ ಸಮೃದ್ಧಿಯೂ ಆಗುತ್ತದೆ. 

ಕಾರ್ಯಸ್ಥಳದಲ್ಲಿನ ವಾಸ್ತುದೋಷಕ್ಕೇನು ಪರಿಹಾರ?
ಕೆಲಸದ ಮಾಡುವ ಸ್ಥಳದಲ್ಲಿ ವಾಸ್ತು ದೋಷ ಇದೆ ಎಂದಾದರೆ ಅದನ್ನು ನಿವಾರಿಸಿಕೊಳ್ಳಲು ದಕ್ಷಿಣ ಇಲ್ಲವೇ ನೈರುತ್ಯ ದಿಕ್ಕಿನಲ್ಲಿ ಗಣೇಶನ ಫೋಟೋವನ್ನು ಇಡಬೇಕು. ಫೋಟೋದಲ್ಲಿ ಇರುವ ದೇವರ ಮುಖವು ದಕ್ಷಿಣ (South) ಇಲ್ಲವೇ ನೈರುತ್ಯ (South-West) ದಿಕ್ಕನ್ನು ನೋಡುತ್ತಿರಬಾರದು.

ಇದನ್ನು ಓದಿ: ಈ ರಾಶಿಯವರಿಗೆ True Love ಸುಲಭವಾಗಿ ಸಿಗೋದಿಲ್ಲ!

ಗಣೇಶನ ವಿಗ್ರಹವು ಹೇಗಿರಬೇಕು?
ಸಂಕಷ್ಟಗಳನ್ನು ನಿವಾರಣೆ ಮಾಡುವ ಗಣೇಶನಿಗೆ, ವಾಸ್ತುದೋಷವನ್ನು ನಿವಾರಿಸುವ ಶಕ್ತಿಯೂ ಇದೆ. ಮನೆ ಇಲ್ಲವೇ ಕೆಲಸ ಮಾಡುವ ಸ್ಥಳದಲ್ಲಿ ಗಣೇಶನ ಫೋಟೋವನ್ನು ಇಡುವಾಗ, ಮುದ್ರೆಯ ಬಗ್ಗೆ ಮುಖ್ಯವಾಗಿ ಗಮನಹರಿಸಬೇಕು. ವಾಸ್ತುಶಾಸ್ತ್ರದ ಅನುಸಾರ, ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಣೆ ಮಾಡಿಕೊಳ್ಳಬೇಕೆಂದರೆ ಕುಳಿತಿರುವ ಗಣಪತಿಯ ಫೋಟೋವನ್ನು ಇಟ್ಟುಕೊಳ್ಳಲೇಬೇಕು. ಕೆಲಸದ ಸ್ಥಳದಲ್ಲಿ ವಾಸ್ತುದೋಷ ಇದ್ದರೆ ಅದರ ಪರಿಹಾರಕ್ಕಾಗಿ ನಿಂತಿರುವ ಗಣೇಶನ ಫೋಟೋವನ್ನು ಇಡುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ. ಈ ನಿಂತಿರುವ ಗಣೇಶನ ಫೋಟೋದಲ್ಲಿ ಕಾಲು ನೆಲವನ್ನು ಸ್ಪರ್ಶ ಮಾಡುತ್ತಿರಬೇಕು. ಹೀಗಿದ್ದಲ್ಲಿ ಕೆಲಸದಲ್ಲಿ (Work) ಸ್ಥಿರತೆ ಕಾಣಬಹುದು. ಜೊತೆಗೆ ಯಾವುದೇ ಅಡ್ಡಿ ಆತಂಕಗಳು ಸಹ ಇರುವುದಿಲ್ಲ. 

Latest Videos
Follow Us:
Download App:
  • android
  • ios