Asianet Suvarna News Asianet Suvarna News

ಈ ರಾಶಿಯವರಿಗೆ True Love ಸುಲಭವಾಗಿ ಸಿಗೋದಿಲ್ಲ!

ಹನ್ನೆರಡು ರಾಶಿ ಚಕ್ರಗಳಲ್ಲಿ ಪ್ರತಿ ರಾಶಿಯವರಿಗೂ  ಒಂದೊಂದು ವಿಶೇಷತೆ ಇರುತ್ತದೆ. ಅದು ಅನುಕೂಲವೂ ಆಗಿರಬಹುದು ಅನಾನುಕೂಲವು ಆಗಿದ್ದಿರಬಹುದು. ಕೆಲವು ವ್ಯಕ್ತಿಗಳಿಗೆ ಅನಾಯಾಸವಾಗಿ ಅವರಂದುಕೊಂಡಂತೆ ನಿಜವಾದ ಪ್ರೀತಿ ಸಿಗುತ್ತದೆ. ಅದೇ ಕೆಲವು ರಾಶಿಯವರಿಗೆ ನಿಜವಾದ ಪ್ರೀತಿ ಸಿಗುವುದೆ ತುಂಬ ಕಷ್ಟವಾಗುತ್ತದೆ. ಹಾಗಾದರೆ ಆ ರಾಶಿಗಳು ಯಾವುವು ತಿಳಿಯೋಣ....

True Love is not easily available to zodiac signs Aquarius Libra
Author
Bangalore, First Published Jun 11, 2022, 7:22 PM IST

ಕೆಲವೊಬ್ಬರಿಗೆ ಹಾಗೇ ಏನೇ ವಿಷಯವಾಗಲಿ, ಯಾವುದೇ ವಸ್ತುವಾಗಲಿ, ಯಾವುದೇ ಕೆಲಸವಾಗಲಿ... ಅವರಿಗೆ ಅದು ಸುಲಭವಾಗಿ ದಕ್ಕುವುದೇ ಇಲ್ಲ. ಅದಕ್ಕಾಗಿ ಅವರು ಬಹಳವೇ ಕಷ್ಟಪಡಬೇಕು. ಎಷ್ಟೇ ಕಷ್ಟಪಟ್ಟರೂ ಅಷ್ಟೇ ಎಂಬಂತೆಯೂ ಆಗಿರುತ್ತದೆ. ಇದೇ ರೀತಿಯಾಗಿ ಕೆಲವರಿಗೆ ಪ್ರೀತಿ (Love) ಸಿಗುವುದಿಲ್ಲ. ಸಿಕ್ಕರೂ ನಿಜವಾದ ಪ್ರೀತಿಯು ಅವರಿಗೆ ಸುಲಭವಾಗಿ ಸಿಗುವುದಿಲ್ಲ. 

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಪ್ರೀತಿ, ಪ್ರೇಮ ಸೇರಿದಂತೆ ಪ್ರತಿ ವಿಷಯಗಳಿಗೂ ಆ ವ್ಯಕ್ತಿಯ ರಾಶಿಗಳು (Zodiac sign), ಗ್ರಹಗತಿಗಳು (Planets) ಸಹಕರಿಸಬೇಕಾಗುತ್ತದೆ. ಅಲ್ಲದೆ, ಪ್ರತಿಯೊಬ್ಬ ರಾಶಿಯ ವ್ಯಕ್ತಿಗಳ ಸ್ವಭಾವ (Nature), ಭವಿಷ್ಯವು (Future) ಭಿನ್ನವಾಗಿರುತ್ತವೆ. ಪ್ರತಿ ರಾಶಿಗಳಿಗೂ ಅಧಿಪತಿ ಗ್ರಹಗಳಿದ್ದು, ಆ ಗ್ರಹಗಳ ಪ್ರಭಾವದ ಮೇಲೆ ವ್ಯಕ್ತಿಗಳ ಸ್ವಭಾವವು ನಿರ್ಧರಿತವಾಗುತ್ತವೆ. ಇದೇ ರೀತಿಯಾಗಿ ನಿಜವಾದ ಪ್ರೀತಿ ಪಡೆಯಲು ಶ್ರಮ ಪಡಬೇಕಾದ ರಾಶಿಯವರ ಬಗ್ಗೆ ನಾವೀಗ ತಿಳಿಯೋಣ... 

ಪ್ರೀತಿಗೂ ಇದೆ ರಾಶಿಯ ಪ್ರಭಾವ 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ವ್ಯಕ್ತಿಯ ಮೇಲೆ ಅವರ ಜನ್ಮ ರಾಶಿಯ ಪ್ರಭಾವ ಬಹಳವೇ ಇರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜನ್ಮಫಲವನ್ನು ತಿಳಿದುಕೊಂಡರೆ ಬಹಳ ಉತ್ತಮ. ಏಕೆಂದರೆ ಈ ರಾಶಿಯ ಆಧಾರದ ಮೇಲೆಯೇ ಆ ವ್ಯಕ್ತಿಯ ಭವಿಷ್ಯ, ಯಶಸ್ಸು (Success), ವೈಫಲ್ಯಗಳು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು. ಇದರ ಮೂಲಕ ಪ್ರೀತಿಯ ವಿಷಯವನ್ನೂ ಅರಿಯಬಹುದಾಗಿದೆ. ಆ ವ್ಯಕ್ತಿಗೆ ನೈಜ ಪ್ರೀತಿ ದೊರೆಯುತ್ತದೆಯೇ...? ಅಥವಾ ಪ್ರೀತಿಯಲ್ಲಿ ಮೋಸ (Cheating)ಹೋಗಬಹುದೇ..? ಇಲ್ಲವೇ ಆ ವ್ಯಕ್ತಿಯು ಯಾವ ವಯಸ್ಸಿನಲ್ಲಿ (Age) ನಿಜವಾದ ಪ್ರೀತಿಯನ್ನು ಪಡೆಯಬಹುದು?  ಎಂಬಿತ್ಯಾದಿ ಅಂಶಗಳನ್ನು ಜನ್ಮ ಜಾತಕದಿಂದ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಕೆಲವು ರಾಶಿ ಚಕ್ರದ ವ್ಯಕ್ತಿಗಳಿಗೆ ಪ್ರೀತಿಯು ಅದರಲ್ಲೂ ನಿಜವಾದ ಪ್ರೀತಿಯು ಸುಲಭವಾಗಿ ದಕ್ಕುವುದಿಲ್ಲ. ಹೀಗಾಗಿ ಅಂತಹ ರಾಶಿಗಳ ಬಗ್ಗೆ ನೋಡೋಣ....

ಕುಂಭ ರಾಶಿ (Aquarius)
ಜ್ಯೋತಿಷ್ಯ ಶಾಸ್ತ್ರದ ಅನುಸಾರ 12 ರಾಶಿಚಕ್ರಗಳಿವೆ. ಇದರಲ್ಲಿ ಕುಂಭ ರಾಶಿಯು 11ನೇ ಸ್ಥಾನದಲ್ಲಿದೆ. ಶನಿ ಗ್ರಹವು ಕುಂಭ ರಾಶಿಯ ಅಧಿಪತಿ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ (Saturn) ಸ್ವಭಾವವು ಕ್ರೂರವಾಗಿದೆ. ಇದರ ಜೊತೆಗೆ ಶನಿದೇವನನ್ನು ನ್ಯಾಯದ ದೇವರು ಹಾಗೂ ಕರ್ಮದ ಫಲ ನೀಡುವ ದೇವರು ಎಂದೂ ಹೇಳಲಾಗುತ್ತದೆ, ಇಂತಹ ಸಂದರ್ಭದಲ್ಲಿ ಈ ರಾಶಿಚಕ್ರದವರ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ಇವರಿಗೆ ಕಷ್ಟಗಳು (Problems) ಎದುರಾಗುತ್ತವೆ. ಜೊತೆಗೆ ಇವರು ನೈಜ ಪ್ರೀತಿಯನ್ನು ಪಡೆಯಲು ಅನೇಕ ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ಇದಕ್ಕೆ ಜ್ಯೋತಿಷಿಗಳ ಮೊರೆಹೋಗಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. 

ಇದನ್ನು ಓದಿ: ಪದೆ ಪದೇ ಉಪ್ಪು ಚೆಲ್ಲುತ್ತಿದ್ದೀರಾ? ಅಪಶಕುನದ ಸೂಚನೆ ಇರಬಹುದು ಇದು!

ತುಲಾ ರಾಶಿ (Libra)
ಶುಕ್ರ ಗ್ರಹವು ತುಲಾ ರಾಶಿಯ ಅಧಿಪತಿ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಗ್ರಹವನ್ನು ಐಷಾರಾಮಿ (Luxury), ಪ್ರೀತಿ, ಪ್ರಣಯ, ವೈಭೋಗಿ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಅಲ್ಲದೆ, ಇದು ಅಗ್ನಿ ತತ್ವಕಾರಕ ರಾಶಿಯಾಗಿದೆ. ಜೊತೆಗೆ ಈ ರಾಶಿ ಸಹ ಶನಿಗೆ ಪ್ರಿಯವಾದ ರಾಶಿಯಾಗಿದೆ. ಹೀಗಾಗಿ ಈ ರಾಶಿಯ ವ್ಯಕ್ತಿಗಳು ನಿಯಮ ಮತ್ತು ಶಿಸ್ತನ್ನು (Rule and Discipline) ಬಹಳವಾಗಿಯೇ ಪಾಲಿಸುತ್ತಾರೆ. ಆದರೆ, ಇವರು ಪ್ರೀತಿಯನ್ನು ಪಡೆಯಬೇಕೆಂದರೆ ಸ್ವಲ್ಪ ಕಷ್ಟವನ್ನು ಪಡಬೇಕಿದೆ. ಅನೇಕ ಬಾರಿ ಇವರು ಪ್ರೀತಿ  ಪಡೆಯಲು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಕಾರಣ, ಕಠಿಣ ಪರಿಶ್ರಮವನ್ನು ಹಾಕಿದವರ ಮೇಲೆ ಶನಿದೇವರು ಕೃಪಾಶೀರ್ವಾದವನ್ನು ದಯಪಾಲಿಸುತ್ತಾನೆ.

ಇದನ್ನು ಓದಿ: ಮಹಾಲಕ್ಷ್ಮೀ ಯೋಗ ಈ ಮೂರು ರಾಶಿಗಳಿಗೆ ಬಂಪರ್ ಲಾಭ!

ಮಕರ ರಾಶಿ (Capricorn)
ಈ ರಾಶಿ ಚಕ್ರವೂ ಶನಿದೇವರಿಗೆ ಸಂಬಂಧಪಟ್ಟಿದ್ದಾಗಿದೆ. ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಗಳನ್ನು ಶನಿದೇವ ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ರಾಶಿಯವರು ಪ್ರೀತಿಗಾಗಿ ಬಹಳಷ್ಟು ಪರದಾಡಬೇಕಾಗುತ್ತದೆ. ಮಕರ ರಾಶಿಯವರ ಜಾತಕದಲ್ಲಿ (Horoscope) ಶನಿಯು ಅಶುಭ ಸ್ಥಾನದಲ್ಲಿದ್ದರೆ ಅವರ ಪ್ರೀತಿಯಲ್ಲಿ ದೊಡ್ಡ ಸಮಸ್ಯೆಗಳ ಎದುರಾಗುತ್ತವೆ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ ಶನಿಯ ಶುಭ ಪರಿಣಾಮಗಳಿಗಾಗಿ ಪೂಜಿಸಬೇಕಾಗುತ್ತದೆ. ಆ ಮೂಲಕ ಪರಿಹಾರವನ್ನು (Solution)  ಕಂಡುಕೊಳ್ಳಬೇಕಾಗುತ್ತದೆ. 

Follow Us:
Download App:
  • android
  • ios