Asianet Suvarna News Asianet Suvarna News

ಸ್ಪಟಿಕ ಧಾರಣೆ ಮತ್ತು ಗ್ರಹಬಲದಲ್ಲಿ ಅಡಗಿದೆ ನಿಮ್ಮ ಬಲ

ಸ್ಪಟಿಕವನ್ನು ಧರಿಸುವುದು ಶುಭಕಾರಕ ಎನ್ನಲಾಗಿದೆ. ಸ್ಪಟಿಕಧಾರಣೆಯಿಂದ ಗ್ರಹಗಳ ಬಲ ಹೆಚ್ಚುತ್ತದೆ. ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಶಿವ ಮತ್ತು ಲಕ್ಷ್ಮೀದೇವಿ ಕೃಪೆಗೆ ಸ್ಪಟಿಕ ಧಾರಣೆ ಅತ್ಯುತ್ತಮ ಮಾರ್ಗವಾಗಿದೆ. ಸ್ಪಟಿಕ ಧಾರಣೆ ವಿಶೇಷತೆಯನ್ನು ನೋಡೋಣ... 

Your strength lies in crystal holding and planetary strength
Author
Bangalore, First Published Jun 11, 2022, 7:39 PM IST

ಜ್ಯೋತಿಷ್ಯದ (Astrology) ಪ್ರಕಾರ ಜೀವನದಲ್ಲಿ (Life) ಗ್ರಹಗಳ (Planet) ಪ್ರಭಾವ ಬಹಳವೇ ಇರುತ್ತದೆ. ಈ ಗ್ರಹಗಳಿಂದ ಶುಭ ಮತ್ತು ಅಶುಭ ಫಲಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ ಕೆಲವು ಗ್ರಹಗಳು ಅಸ್ತ ಆಗುತ್ತವೆ. ಆಗ ಆ ಗ್ರಹಗಳ ಪ್ರಭಾವ ಕ್ಷೀಣಿಸುತ್ತದೆ. ಅಶುಭ ಫಲವನ್ನು ನೀಡುವ ಗ್ರಹಗಳ ಪ್ರಭಾವ ಕಡಿಮೆ ಮಾಡಲು ಮತ್ತು ಅಸ್ತವಾಗಿರುವ ಗ್ರಹಗಳು ಒಳ್ಳೇ ಪ್ರಭಾವ (Influence) ಬೀರಲು ಸಮರ್ಥವಾಗುವಂತೆ ಮಾಡಲು ಜ್ಯೋತಿಷ್ಯದಲ್ಲಿ ಕೆಲವು ರತ್ನಗಳನ್ನು (Stones) ಧರಿಸಲು ಸೂಚಿಸಲಾಗುತ್ತದೆ.

ಜ್ಯೋತಿಷಿಗಳ ಸಲಹೆಯನ್ನು ಪಡೆಯುವುದಾದರೆ ಗ್ರಹಗತಿಗಳು ಶುಭಕಾರಕ ಆಗಬೇಕೆಂದರೆ ಆ ವ್ಯಕ್ತಿಗಳಿಗೆ  ಸರಿಹೊಂದುವ ರತ್ನಗಳನ್ನು ಮಾತ್ರ ಧರಿಸಬೇಕು. ಅವರಿಗೆ ಹೊಂದಾಣಿಕೆ ಆಗುವ ರತ್ನಗಳನ್ನು ಧರಿಸಿದರೆ ಜೀವನದಲ್ಲಿ ಸಮೃದ್ಧಿ (Prosperity) ಹಾಗೂ ಯಶಸ್ಸನ್ನು (Success) ಕಾಣಬಹುದಾಗಿದೆ. ಈಗ ಸ್ಪಟಿಕ ಧಾರಣೆಯಿಂದ ಆಗುವ ಲಾಭಗಳನ್ನು ತಿಳಿಯೋಣ.

ಸ್ಪಟಿಕದ ಸೃಷ್ಟಿ 
ಹಿಮ ಪರ್ವತಗಳ ಕೆಳಗೆ ಸ್ಪಟಿಕಗಳು (Crystalline) ಸಿಗಲಿದ್ದು, ಸಣ್ಣ ಸಣ್ಣ ತುಂಡಗಳ ರೂಪದಲ್ಲಿ ಇರುತ್ತವೆ. ಆಕ್ಸಿಜನ್ (Oxygen) - ಸಿಲಿಕಾನ್ ಅಣುಗಳ ಮಧ್ಯೆ ಸರಿಸಮ ಅನುಪಾತವು ಉಂಟಾದರೆ ಈ ಸ್ಪಟಿಕವು ಸೃಷ್ಟಿಯಾಗುತ್ತದೆ. ಈ ಸ್ಪಟಿಕವು ದೇವಿ ಮತ್ತು ಶಿವನಿಗೆ (Lord Shiva) ಬಹಳ ಪ್ರಿಯ ಎಂದು ಹೇಳಲಾಗುತ್ತದೆ. ಚಂದ್ರ (Moon) ಮತ್ತು ಶುಕ್ರ ಗ್ರಹಕ್ಕೆ (Venus) ಸ್ಪಟಿಕವು ಪ್ರಿಯವಾದದ್ದಾಗಿದೆ. ಇದನ್ನು ಜಪಮಾಲೆಗೂ ಬಳಸಲಾಗುತ್ತದೆ.

ಸ್ಪಟಿಕ ಧಾರಣೆ ಪ್ರಯೋಜನ (Benefit):
- ಶುಕ್ರ ಗ್ರಹವು ಶುಭ ಸ್ಥಾನದ ಅಧಿಪತಿಯಾಗಿದ್ದು, ಜಾತಕದಲ್ಲಿ ಶುಕ್ರ ಗ್ರಹದ ಫಲವು ಅಶುಭವನ್ನು ತೋರಿಸುತ್ತಿದ್ದರೆ, ಅಶುಭ ಮನೆಯಲ್ಲಿ ಸ್ಥಿತವಾಗಿದ್ದರೆ ಇಲ್ಲವೇ ಈ ಗ್ರಹದ ಬಲವು ಕ್ಷೀಣವಾಗಿದ್ದರೆ ಪರಿಹಾರವನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ಸ್ಪಟಿಕ ಧಾರಣೆ ಮಾಡಿದರೆ ಶುಕ್ರ ಗ್ರಹಕ್ಕೆ ಬಲ ಬರುತ್ತದೆ. ಇದರಿಂದ ಒಳ್ಳೆಯದೂ ಆಗುತ್ತದೆ. ಸ್ಪಟಿಕಧಾರಣೆಯ ಇನ್ನಿತರ ಪ್ರಯೋಜನದ ಬಗ್ಗೆ ತಿಳಿಯೋಣ.

ಇದನ್ನು ಓದಿ: ಪದೆ ಪದೇ ಉಪ್ಪು ಚೆಲ್ಲುತ್ತಿದ್ದೀರಾ? ಅಪಶಕುನದ ಸೂಚನೆ ಇರಬಹುದು ಇದು!

- ಸ್ಪಟಿಕ ಧಾರಣೆಯಿಂದ ಭಯ, ಗಾಬರಿಗಳು (Fear) ನಿವಾರಣೆಯಾಗುತ್ತದೆ.
- ಧನಸಂಪತ್ತು (Wealth) ಹೆಚ್ಚುತ್ತದೆ ಹಾಗೂ ಬಲ ವೃದ್ಧಿ ಆಗುತ್ತದೆ.
- ಸುಖ – ಸಮೃದ್ಧಿ (Happiness and prosperity) ನೆಲೆಸಿ ಧೈರ್ಯ ಹೆಚ್ಚುತ್ತದೆ.
- ಮಂತ್ರಸಿದ್ಧಿಯನ್ನು ಸಹ ಸಾಧಿಸಬಹುದಾಗಿದೆ. 
- ತಾಯಿಯ ಸ್ಪಟಿಕ ಧಾರಣೆಯು ಭೂತ (Ghost) – ಪ್ರೇತ - ಪಿಶಾಚಿಗಳ ಬಾಧೆಯಿಂದ ಮುಕ್ತಿ ಗೊಳಿಸುತ್ತದೆ.
- ಬುದ್ಧಿ ಚುರುಕಿನ ಜೊತಗೆ ವ್ಯಕ್ತಿತ್ವ ವಿಕಸನ (Personality Development) ಆಗುತ್ತದೆ.
- ಸ್ಪಟಿಕದಿಂದ ತಯಾರಿಸಿದ ಭಸ್ಮವು ಜ್ವರ (Fever), ಪಿತ್ತದ ತೊಂದರೆ, ರಕ್ತ ಸಂಬಂಧಿ ಸಮಸ್ಯೆ (Blood related problem), ನಿಶ್ಶಕ್ತಿ ಸೇರಿದಂತೆ ಅನೇಕ ವ್ಯಾಧಿಗಳನ್ನು ಗುಣಪಡಿಸುತ್ತದೆ. 

ಯಾವ ರಾಶಿಯವರಿಗೆ ಸ್ಪಟಿಕದಿಂದ ಶುಭ
ಯಾವ ರಾಶಿಯ ಅಧಿಪತಿ ಗ್ರಹವು ಶುಕ್ರ ಆಗಿರುತ್ತದೆಯೋ ಅಂಥ ರಾಶಿಯವರಿಗೆ ಸ್ಪಟಿಕ ಧಾರಣೆಯು ಶುಭಫಲವನ್ನು ತಂದುಕೊಡುತ್ತದೆ. ವೃಷಭ ಮತ್ತು ತುಲಾ ರಾಶಿಗಳಿಗೆ ಶುಕ್ರ ಗ್ರಹವು ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಸ್ಪಟಿಕ ಧಾರಣೆ ಮಾಡಬೇಕು. 

ಚಂದ್ರ ಮತ್ತು ಬುಧ ಗ್ರಹಗಳು ಪ್ರಧಾನವಾಗಿರುವ ರಾಶಿಯ ಅಂದರೆ ಕರ್ಕಾಟಕ, ಕನ್ಯಾ, ಮಿಥುನ ರಾಶಿಯವರು ಸ್ಪಟಿಕ ಧರಿಸುವುದರಿಂದ ಶುಭವಾಗುತ್ತದೆ.

ಇದನ್ನು ಓದಿ: ಮಹಾಲಕ್ಷ್ಮೀ ಯೋಗ ಈ ಮೂರು ರಾಶಿಗಳಿಗೆ ಬಂಪರ್ ಲಾಭ!

ಯಾವಾಗ ಸ್ಪಟಿಕವನ್ನು ಧರಿಸಬೇಕು?
ಯಾವುದೇ ತಿಂಗಳಿನ ಶುಕ್ಲಪಕ್ಷದ ಮೊದಲ ಶುಕ್ರವಾರ (Friday) ನೀರು (Water) ಮತ್ತು ಹಾಲಿನಿಂದ (Milk) ಶುದ್ಧೀಕರಣ ಮಾಡಬೇಕು. ನಂತರ ಸ್ಪಟಿಕ ಮಾಲೆ ಬಳಸಿ ಗಾಯತ್ರಿ ಮಂತ್ರ (Gayatri Mantra) ಜಪಿಸಬೇಕು. ಸೂರ್ಯೋದಯಕ್ಕೆ 3 ತಾಸು ಮೊದಲು ಈ ಮಾಲೆಯನ್ನು ಧರಿಸಬೇಕು. ಲಕ್ಷ್ಮೀದೇವಿ ಆರಾಧನೆಗೆ ಸ್ಪಟಿಕ ಮಾಲೆ ಅತ್ಯಂತ ಶುಭಕಾರಕವಾಗಿದೆ. 

Follow Us:
Download App:
  • android
  • ios