Asianet Suvarna News Asianet Suvarna News

ಮನೆ ಹಿರಿಯರ ಆರೋಗ್ಯದಲ್ಲಿ ಸದಾ ಏರುಪೇರೇ? ಈ Vastu Tips ಅನುಸರಿಸಿ ನೋಡಿ

ಮನೆಯಲ್ಲಿ ಹಿರಿಯರು ಹಾಸಿಗೆ ಹಿಡಿದಿದ್ದರೆ ಯಾರಿಗೂ ನೆಮ್ಮದಿ ಇರುವುದು ಸಾಧ್ಯವಿಲ್ಲ. ಅವರ ಆರೋಗ್ಯಕ್ಕಾಗಿ ಚಿಕಿತ್ಸೆ ಎಲ್ಲವನ್ನೂ ಕೊಡಿಸಿದ್ದು, ಸರಿ ಹೋಗದಿದ್ದರೆ ಈ ವಾಸ್ತು ನಿಯಮಗಳ(Vastu Tips) ಪಾಲನೆಯಾಗುತ್ತಿದೆಯೇ ನೋಡಿ. 

9 vastu tips for a healthy and long life of family elders
Author
Bangalore, First Published Mar 12, 2022, 5:31 PM IST

ಮನೆ ಹಿರಿಯರಿಗೆ ಸದಾ ಒಂದಿಲ್ಲೊಂದು ಅನಾರೋಗ್ಯ ಕಾಡುತ್ತಿದ್ದರೆ, ಅಥವಾ ಅವರು ಹಾಸಿಗೆ ಹಿಡಿದಿದ್ದರೆ ಮನೆಯ ಇತರ ಸದಸ್ಯರು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಕುಟುಂಬ ಸದಸ್ಯರೆಲ್ಲರೂ ಆರೋಗ್ಯವಾಗಿದ್ದಾಗಷ್ಟೇ ಮನೆಯಲ್ಲಿ ಸಂತೋಷ ನೆಲೆಸಲು ಸಾಧ್ಯ. ಮನೆಯ ಪೂರ್ವ(East) ಮತ್ತು ನೈಋತ್ಯ ದಿಕ್ಕುಗಳು ವಯಸ್ಸಾದವರ ಉತ್ತಮ ಆರೋಗ್ಯಕ್ಕೆ ಸಂಬಂಧಿಸಿವೆ. ಅವರು ಮಲಗುವ ಕೋಣೆ ಸರಿಯಾದ ದಿಕ್ಕಿನಲ್ಲಿಲ್ಲ, ಅಥವಾ ಕೋಣೆಯ ಒಳಭಾಗದಲ್ಲಿ ಕೆಲವು ವಾಸ್ತು ದೋಷವಿದೆ ಎಂದಾಗ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಿರಿಯರಿಗೆ ಅನಾರೋಗ್ಯವಿದ್ದಾಗ ಈ 12 ರೀತಿಯ ವಾಸ್ತು ಸಲಹೆಗಳು ನಿಮ್ಮ ಮನೆಯಲ್ಲಿ ಪಾಲನೆಯಾಗುತ್ತಿವೆಯೇ ಖಚಿತಪಡಿಸಿಕೊಳ್ಳಿ. 

1. ಮನೆಯ ನೈಋತ್ಯ(South West) ಭಾಗ ಸ್ವಲ್ಪ ಎತ್ತರದಲ್ಲಿರಬೇಕು. ಇದು ಮನೆಯ ನಿಯಂತ್ರಣವನ್ನು ನಿರ್ವಹಿಸುವಲ್ಲಿ ವಯಸ್ಸಾದವರಿಗೆ ಸಹಾಯ ಮಾಡುತ್ತದೆ ಮತ್ತು ಮನೆಯಲ್ಲಿ ಅವರ,ಚತ, ಪ್ರಾಮುಖ್ಯತೆಯನ್ನು ಉಳಿಸುತ್ತದೆ. ಇದು ಅವರ ಆರೋಗ್ಯ(health)ದ ಮೇಲೆ ನಿಗಾ ಇಡುತ್ತದೆ, ಶಾಂತಿ ಮತ್ತು ಸಮೃದ್ಧಿ(prosperity)ಯನ್ನು ಕಾಪಾಡುತ್ತದೆ ಮತ್ತು ಸಮಸ್ಯೆಗಳನ್ನು ತಡೆಯುತ್ತದೆ.

2. ಪೂರ್ವ ಭಾಗವು ತೆರೆದಿರಬೇಕು ಮತ್ತು ಯಾವಾಗಲೂ ಸ್ವಚ್ಛವಾಗಿರಬೇಕು. ಈ ದಿಕ್ಕಿನಲ್ಲಿ ಕಿಟಕಿಗಳನ್ನು ಅಗಲವಾಗಿ ಹೊಂದಿರುವುದು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ತೆರೆದಿಡುವುದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಈ ದಿಕ್ಕಿನಲ್ಲಿ ಅಂಗಡಿ, ಶೌಚಾಲಯ(toilet), ಮೆಟ್ಟಿಲು, ಎತ್ತರದ ಮಹಡಿಗಳನ್ನು ನಿರ್ಮಿಸುವುದು ಅಥವಾ ಎತ್ತರದ ಮರಗಳನ್ನು ನೆಡುವುದು ಗಂಭೀರ ವಾಸ್ತುದೋಷಗಳಿಗೆ ಕಾರಣವಾಗುತ್ತದೆ. ಈ ದೋಷಗಳು ನಿಮ್ಮ ಮಕ್ಕಳು(children) ವಯಸ್ಸಾದವರನ್ನು ಅಗೌರವಿಸಲು ಕಾರಣವಾಗಬಹುದು.

3. ಕುಟುಂಬದ ಮುಖ್ಯಸ್ಥರು ಮತ್ತು ಕುಟುಂಬದ ಹಿರಿಯರ ಕೊಠಡಿಯು ನೈಋತ್ಯ ಅಥವಾ ದಕ್ಷಿಣ(South) ದಿಕ್ಕಿನಲ್ಲಿ ನೆಲೆಗೊಂಡಿರಬೇಕು. ಆದಾಗ್ಯೂ, ಹಿರಿಯರು ಕೆಲಸದಿಂದ ನಿವೃತ್ತಿ ಹೊಂದಿದ್ದು, ಈಗ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಮಯ ಕಳೆಯುತ್ತಿದ್ದರೆ, ಅವರಿಗೆ ಈಶಾನ್ಯ, ಪೂರ್ವ ಅಥವಾ ಉತ್ತರದಲ್ಲಿಯೂ ಕೋಣೆಯನ್ನು ನೀಡಬಹುದು. ಹೆಚ್ಚುವರಿ ಮಲಗುವ ಕೋಣೆ ಇಲ್ಲದಿದ್ದರೆ, ಬೆಡ್ ಅನ್ನು ಲಿವಿಂಗ್ ರೂಮಿನ ನೈಋತ್ಯ ಭಾಗದಲ್ಲಿ ಇರಿಸಬಹುದು.

ವೈವಾಹಿಕ ಜೀವನದಲ್ಲಿ ಸಂತೋಷ ತುಂಬಲು Chanakya Neeti ಅನುಸರಿಸಿ
 
4. ಹಿರಿಯ ಹೆಂಗಸರ ಮಲಗುವ ಕೋಣೆ ಆಗ್ನೇಯ(South East) ದಿಕ್ಕಿನಲ್ಲಿದ್ದರೆ, ಅವರಲ್ಲಿ ಕೋಪತಾಪಗಳು ಹೆಚ್ಚುತ್ತವೆ. ಅದೇ ರೀತಿ, ಅವನ/ಅವಳ ಕೋಣೆ ವಾಯುವ್ಯ(North West)ದಲ್ಲಿದ್ದರೆ, ಹಿರಿಯರು ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ಇಡೀ ಕುಟುಂಬಕ್ಕೆ ಆತಂಕದ ಮೂಲವಾಗಬಹುದು.

5. ಹಿರಿಯರು ಹಾಸಿಗೆಯಲ್ಲಿ ಪೂರ್ವಕ್ಕೆ ತಲೆ ಹಾಕಿ ಮಲಗಬೇಕು. ಆಗಲಿಲ್ಲವೆಂದರೆ ದಕ್ಷಿಣ ದಿಕ್ಕು ಪರವಾಗಿಲ್ಲ. 

6. ಪ್ರಮುಖ ದಾಖಲೆಗಳು, ಹಣಕಾಸು ಸಂಬಂಧಿತ ಪೇಪರ್‌ಗಳು(finance-related papers), ಹಣ, ಆಭರಣಗಳು ಇತ್ಯಾದಿಗಳನ್ನು ಕೋಣೆಯ ನೈಋತ್ಯ ಮೂಲೆಯಲ್ಲಿ ಇರಿಸಲಾಗಿರುವ ದೈನಂದಿನ ಬಳಕೆಯ ಉಡುಪುಗಳನ್ನಿಡುವ ಕಬೋರ್ಡ್‌ನಲ್ಲಿ ಇಡಬೇಕು.

HoLi 2022: ನವವಿವಾಹಿತೆ ಕಾಮದಹನ ನೋಡ್ಲೇಬಾರ್ದು, ಅತ್ತೆ ಸೊಸೆ ಜೊತೆಯಾಗಿ ನೋಡಿದ್ರಂತೂ ಕಷ್ಟ ಕಷ್ಟ

7. ಧಾರ್ಮಿಕ ಪುಸ್ತಕಗಳು(Religious books) ಹಾಗೂ ಇತರೆ ಸಾಹಿತ್ಯ ಪುಸ್ತಕಗಳನ್ನು ಪಶ್ಚಿಮ ದಿಕ್ಕಿನಲ್ಲಿ ಶೆಲ್ಫ್‌ನಲ್ಲಿಡಬೇಕು. 

8. ವಯಸ್ಸಾದಂತೆಲ್ಲ ಆರೋಗ್ಯ ಸಮಸ್ಯೆಗಳು(health-related problems) ಹೆಚ್ಚುವುದು ಸಾಮಾನ್ಯವೇ. ಆದರೆ ಎಲ್ಲ ವೈದ್ಯಕೀಯ ಪೇಪರ್‌ಗಳು, ವರದಿಗಳು, ಪ್ರಿಸ್ಕ್ರಿಪ್ಷನ್‌ಗಳು ಮತ್ತು ಔಷಧಿಗಳನ್ನು ಉತ್ತರ ಮತ್ತು ಈಶಾನ್ಯದ ನಡುವೆ ಇರುವ ಬೀರು ಅಥವಾ ಶೆಲ್ಫ್‌ನಲ್ಲಿ ಇರಿಸಬೇಕು. ಇದನ್ನು ದಕ್ಷಿಣ ಅಥವಾ ನೈಋತ್ಯ ಮೂಲೆಯಲ್ಲಿ ಇರಿಸಿದರೆ, ವ್ಯಕ್ತಿಯ ಆರೋಗ್ಯವು ಮತ್ತಷ್ಟು ಹದಗೆಡಬಹುದು.

9. ಹಿರಿಯರಿರುವ ಕೋಣೆಯಲ್ಲಿ ತಿಳಿ ಹಳದಿ ಬಣ್ಣದ ಗೋಡೆ ಹಾಗೂ ಪೀಠೋಪಕರಣಗಳಿದ್ದರೆ ಉತ್ತಮ. ಇದರಿಂದ ಅವರಿಗೆ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚುವುದು. ಉತ್ತಮ ಚಿಂತನೆಯಲ್ಲಿ ತೊಡಗಿದ ಅವರ ಆರೋಗ್ಯವೂ ಉತ್ತಮವಾಗುವುದು. ಈ ಬಣ್ಣ ಇಷ್ಟವಾಗದಿದ್ದರೆ ತಿಳಿ ಹಸಿರು ಇಲ್ಲವೇ ಬಿಳಿ ಬಣ್ಣ ಬಳಸಿ.
 

Follow Us:
Download App:
  • android
  • ios