Astrologer Kamalakar Bhat Suchitra: ಸಿದ್ದಾಪುರ ಮೂಲದ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಅಕ್ರಮ ಸಂಬಂಧದಿಂದ ಒಂದು ಕೊಲೆ ಆಗಿದೆ. ಸುಚಿತ್ರಾರ ಅಕ್ರಮ ಸಂಬಂಧದಿಂದ ಬೇಸತ್ತ ಮಗಳು ಸುಮಶ್ರೀ ಕೂಡ ತಾಯಿ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಕಮಲಾಕರ್‌, ಸುಚಿತ್ರಾರ ಆಡಿಯೋ ಕೂಡ ವೈರಲ್‌ ಆಗ್ತಿದೆ. 

ಸಿದ್ದಾಪುರ ಮೂಲದ ಕಮಲಾಕರ್‌ ಭಟ್‌ ಅವರು ಶಿವಮೊಗ್ಗದಲ್ಲಿ ಕಚೇರಿ ಹೊಂದಿದ್ದರು. ಅಲ್ಲಿಯೇ ಇವರು ಸುಚಿತ್ರಾಗೆ ಬಾಡಿಗೆ ಮನೆ ಮಾಡಿಸಿದ್ದರು. ಸುಚಿತ್ರಾ ತನ್ನ ಮಗಳ ಜೊತೆ ಅಲ್ಲಿ ಇದ್ದರು. ಈ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ. ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಆಡಿಯೋ ವೈರಲ್‌ ಆಗಿದೆ.

ನಿಜಕ್ಕೂ ಏನು ನಡೆಯಿತು?

ಉತ್ತರ ಕನ್ನಡ ಜಿಲ್ಲೆ ಮೂಲದ ಪತಿ ಮಹೇಶ್‌ ಜೊತೆ ಜಗಳವಾಡಿಕೊಂಡು ಶಿವಮೊಗ್ಗಕ್ಕೆ ಬಂದಿದ್ದ ಸುಚಿತ್ರಾ ಅಲ್ಲಿ ತನ್ನ ಮಕ್ಕಳೊಡನೆ ವಾಸವಿದ್ದಳು. ಜ್ಯೋತಿಷಿ ಕಮಲಾಕಾರ್ ಭಟ್ ಮತ್ತು ತಾಯಿ ಸುಚಿತ್ರಾ ನಡುವೆ ಅಕ್ರಮ ಸಂಬಂಧ ಇತ್ತು ಎಂದು ಸುಚಿತ್ರಾ ಮಗಳು ಸುಮಶ್ರೀ ಹೇಳಿದ್ದಾರೆ. ಸುಮಶ್ರೀ ತನ್ನ ತಂದೆಗೆ ಈ ವಿಷಯ ತಿಳಿಸಿದ್ದು, ಸಿದ್ದಾಪುರದ ಮನೆಗೆ ಬಂದಿದ್ದಾರೆ.

ಫೆಬ್ರವರಿ 1 ರ ರಾತ್ರಿ 10.30ರ ವೇಳೆ ತಾಯಿ ಸುಚಿತ್ರಾ ಕಾರ್‌ನಲ್ಲಿ ಐದಾರು ಜನರ ಜೊತೆ ಬಂದು ಮನೆಗೆ ನುಗ್ಗಿದ್ದಾರೆ. ಪತಿ ಹಾಗೂ ಪತಿಯ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾರೆ, ಚಾಕುವಿನಿಂದ ಚುಚ್ಚಿದ್ದು, ಪತಿಯ ಅಣ್ಣ ತೀರಿಕೊಂಡಿದ್ದಾರೆ. ಪತಿಯನ್ನು ಬಿಡಬೇಡ ಎಂದು ಕೂಡ ಹೇಳುತ್ತಿದ್ದಳು ಎಂದು ಮಗಳು ಸುಮಶ್ರೀ ಅವರೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಬಾಡಿಗೆ ಮನೆ ಮಾಲೀಕ ನಾಗೇಶ್‌ ಏನಂದ್ರು?

“ಕಮಲಾಕರ್‌ ಭಟ್‌ ಅವರು ಹತ್ತು ಎಕರೆ ಜಮೀನು ತಗೊಂಡು, 3 ದೇವಸ್ಥಾನವನ್ನು ಕೂಡ ಕಟ್ಟಿಸಿದ್ದರು. ಗೋಶಾಲೆಯನ್ನು ಕೂಡ ಮಾಡಿದ್ದರು. ನಮಗೆ ಬಾಡಿಗೆ ಕೊಟ್ಟಿದ್ದರು, ಹೋಮ ಮಾಡಿದರೂ ಕೂಡ ಅವರೇ ಕೂತು ಮಾತನಾಡುತ್ತಿದ್ದರು. ಸಹಾಯ ಮಾಡುವ ಮನಸ್ಥಿತಿ ಇತ್ತು, ದಾನ ಧರ್ಮ ಕೂಡ ಮಾಡಿದರು. ಸರಿಯಾದ ಟೈಮ್‌ಗೆ ಬಾಡಿಗೆ ಕೊಡುತ್ತಿದ್ದರು. ಆರು ತಿಂಗಳ ಹಿಂದೆ ಸುಚಿತ್ರಾ ಅವರು ಕಮಲಾಕರ್‌ ಭಟ್‌ ಮನೆ ಪಕ್ಕದಲ್ಲೇ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಕೊರೊನಾದಲ್ಲಿ ಕಮಲಾಕರ್‌ ಭಟ್‌ ಅವರ ಹೆಂಡ್ತಿ ತೀರಿಕೊಂಡಿದ್ದಾರೆ. ಸುಚಿತ್ರಾ ನನಗೆ ರಿಲೇಶನ್‌ ಆಗಬೇಕು, ನಮ್ಮ ಊರಿನವರು ಎಂದು ಭಟ್ರು ಹೇಳಿದರು, ಈ ಬಗ್ಗೆ ನಾನು ಪ್ರಶ್ನೆ ಮಾಡಲಿಲ್ಲ” ಎಂದು ಮನೆ ಮಾಲೀಕ ನಾಗೇಶ್‌ ಹೇಳಿದ್ದಾರೆ.

ಕಮಲಾಕರ್‌ ಭಟ್‌ ಆಡಿಯೋದಲ್ಲಿ ಏನಿದೆ?

“ಇವಳೇ ನನ್ನ ಸರ್ವಸ್ವ, ಇವಳನ್ನೇ ಪಡೆಯಬೇಕು ಎಂದು ನಾನು ಓಡಾಡಿದ್ದೇನೆ. ಸುಚಿತ್ರಾ ಚಿಟಿಕಿ ಹೊಡೆದರೆ ನಾಯಿಗಳ ಥರ ಜನರು ಬರುತ್ತಾರೆ, ಅಷ್ಟು ಕ್ಯಾಪೆಸಿಟಿ ಇದೆ. ಅವಳಿಗೋಸ್ಕರ ನಾನು ನಾಯಿ ಥರ ಓಡಾಡಿದ್ದೇನೆ, ಅವಳು ನನ್ನ ಹಿಂದೆ ಬಂದಿಲ್ಲ. ಆದರೆ ನಾಲ್ಕು ತಿಂಗಳ ಪರಿಶ್ರಮ ಹಾಕಿ ನಾನು ಅವಳನ್ನು ಪಡೆದುಕೊಂಡಿದ್ದೇನೆ, ಇದು ಭಗವಂತನ ಫಲ ಎಂದುಕೊಳ್ತೀನಿ” ಎಂದು ಕಮಲಾಕರ್‌ ಭಟ್‌ ಅವರ ಆಡಿಯೋ ವೈರಲ್‌ ಆಗ್ತಿದೆ.

ಅಂದಹಾಗೆ ಸುಚಿತ್ರಾ ಅವರು ಅವನಿಗೆ ನಾನೇ ಲವ್ವರ್‌, ಅವನಿಗೆ ನಾನೇ ಹೆಂಡ್ತಿ ಎಂದು ಹೇಳಿದ್ದಲ್ಲದೆ, ಲೈ*ಗಿಕತೆಯ ಬಗ್ಗೆ ತೀರ ಅಸಹ್ಯವಾಗಿ ಮಾತನಾಡಿರುವ ಆಡಿಯೋ ಕೂಡ ವೈರಲ್‌ ಆಗಿದೆ.