ಸಾರಿಗೆ ಇಲಾಖೆ ನೌಕರರಿಗೆ ಗುಡ್‌ನ್ಯೂಸ್ ನೌಕರರ ವೇತನ ಹೆಚ್ಚಳಕ್ಕೆ ಚಿಂತನೆ ಹಣಕಾಸು ಇಲಾಖೆ ಜೊತೆ ಚರ್ಚಿಸುವೆ ಎಂದ ಸಚಿವ
ಶಿರಸಿ: ಸಾರಿಗೆ ಸಂಸ್ಥೆ ನೌಕರರಿಗೆ ಸಾರಿಗೆ ಇಲಾಖೆ ಗುಡ್‌ನ್ಯೂಸ್ ನೀಡಲು ಮುಂದಾಗಿದೆ. ಸಾರಿಗೆ ನೌಕರರಿಗೆ ಶೀಘ್ರವೇ ವೇತನ ಹೆಚ್ಚಳ ಮಾಡಲು ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಲಾಗುವುದು ಎಂದು ಸಾರಿಗೆ ಸಚಿವ (Transport Minister) ಬಿ. ಶ್ರೀರಾಮುಲು ಭರವಸೆ ನೀಡಿದ್ದಾರೆ. ಉತ್ತರ ಕನ್ನಡದ (Uttara Kannda) ಶಿರಸಿಯಲ್ಲಿ ಶಿರಸಿ (Sirasi) ಬಸ್ ನಿಲ್ದಾಣದ (Busstand) ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನ ಹೆಚ್ಚಳದ ಬಗ್ಗೆ ಹಣಕಾಸು ಇಲಾಖೆ ಜೊತೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೇ ಸಾರಿಗೆ ನೌಕರರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗದೇ ಇರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಸಕಾಲಕ್ಕೆ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಡಿಸಿಎಂ ಹುದ್ದೆ ಆಸೆ ಕಮರಿಲ್ಲ
ಮನುಷ್ಯ ಅಂದ್ರೆ ಆಸೆ ಇದ್ದೇ ಇರುತ್ತೆ. ಆಸೆ ಇಲ್ಲದ ವ್ಯಕ್ತಿಗೆ ಮನುಷ್ಯ ಅನ್ನಲ್ಲ ಅನ್ನೋ ಮೂಲಕ ಡಿಸಿಎಂ ಹುದ್ದೆ ಮೇಲೆ ಆಸೆ ಕಮರಿಲ್ಲ ಅನ್ನೋ ಸಂದೇಶವನ್ನ ಸಚಿವ ಬಿ ಶ್ರೀರಾಮುಲು ( B sriramulu) ನೀಡಿದರು. ರಾಜ್ಯದಲ್ಲಿ ನಾಲ್ವರು ಡಿಸಿಎಂಗಳಾಗ್ತಾರೆ ಅನ್ನೋ ಚರ್ಚೆ ಚಾಲ್ತಿಯಲ್ಲಿರುವಾಗ್ಲೆ ರಾಮುಲು ಈ ಮಾತು ಹೇಳಿದ್ದಾರೆ. ಗದಗ (Gadaga) ನಗರದಲ್ಲಿ ಸುದ್ದಿಗಾರರ ಜೊತೆ ಮಾತ್ನಾಡಿದ ಅವರು, ಹುದ್ದೆ ಮೇಲೆ ಆಸೆ ಇರಬಹುದು ಆದ್ರೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದ್ರು. ಯಾರನ್ನ ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡ್ಬೇಕು ಅನ್ನೋದು ಪಾರ್ಟಿ ತೀರ್ಮಾನ ಮಾಡುತ್ತೆ. ಪಾರ್ಟಿ ತೀರ್ಮಾನವೇ ಅಂತಿಮ. ಆಸೆ ಇರಬಹುದು, ಆದ್ರೆ ಪಾರ್ಟಿ ಅನ್ನೋ ಸಿಸ್ಟಮ್ ಇದೆ. ನಮ್ಮದು ರಾಷ್ಟ್ರೀಯ ಪಕ್ಷ, ಮುಂದಿನ ತೀರ್ಮಾನವನ್ನ ಪಾರ್ಟಿ ತೆಗೆದುಕೊಳ್ಳುತ್ತದೆ ಎಂದ್ರು. ಜೊತೆ ಪಾರ್ಟಿ ಏನೇ ಜವಾಬ್ದಾರಿ ಕೊಟ್ಟರೂ ನಿಬಾಯಿಸುತ್ತೇನೆ ಅನ್ನೋ ಮೂಲಕ ಡಿಸಿಎಂ ಜವಾಬ್ದಾರಿ ನೀಡಿದ್ರೆ ನಿಭಾಯಿಸುತ್ತೇನೆ ಎನ್ನುವ ಸಂದೇಶ ನೀಡಿದ್ದಾರೆ. ಡಿಸಿಎಂ ಯಾರಾಗ್ಬೇಕು ಅನ್ನೋದನ್ನ ಪಾರ್ಟಿ ನಿರ್ಧರಿಸಲಿದೆ ಎಂದ್ರು. ಅಲ್ದೆ, ಪಾರ್ಟಿ ಬಿಟ್ಟು ಬೇರೇನೂ ಇಲ್ಲ. ಎಲ್ಲವೂ ಪಾರ್ಟಿ ತೀರ್ಮಾನ ಮಾಡುತ್ತೆ ಎಂದ್ರು.
2 ತಿಂಗಳು ಸಂಬಳ ಇಲ್ಲದೇ ಸಾರಿಗೆ ನೌಕರರು ಹೈರಾಣ, ಸಚಿವರದ್ದು ಭರವಸೆಯೇ ಆಯ್ತಾ.?
ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ: 150 ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಜನಪ್ರಿಯ ಬಜೆಟ್ ನೀಡಿದ್ದೇವೆ ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜನಸ್ಪಂದನೆ ಸಿಗಲಿದೆ. ಸ್ಪಷ್ಟವಾಗಿ ಹೇಳುತ್ತೇನೆ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ.. ಉಸ್ತುವಾರಿ ಅರುಣ್ ಸಿಂಗ್ (Arun singh), ಕೇಂದ್ರ ಸಚಿವ ಅಮಿತ್ ಶಾ (Amith shah), ಯಡಿಯೂರಪ್ಪ ಅವರೂ ಹೇಳಿದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ರಾಮುಲು ಪುನರುಚ್ಚರಿಸಿದ್ರು.. ಶಾಸಕ ಬಸನಗೌಡ ಯತ್ನಾಳ್ (Basavana gowda Yatnal) ವಯಕ್ತಿಕ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ, ಸಿಎಂ ಬೊಮ್ಮಾಯಿ ಯವರು ಎಲ್ಲ ಜಾತಿ ಧರ್ಮದವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಶಾಲ ಹೃದಯದವರು. ನಮ್ಮ ಮುಖ್ಯಮಂತ್ರಿಗಳೇ ಮುಂದುವರೆಯುತ್ತಾರೆ ಅಂತಾ ವಿಶ್ವಾಸ ವ್ಯಕ್ತ ಪಡಿಸಿದ್ರು.
Karnataka Transport Department : 4 ವಾರದೊಳಗೆ ಸಾರಿಗೆ ನೌಕರರ ಮರುನೇಮಕ
ಸಂಪುಟ ವಿಸ್ತರಣೆ ವಿಚಾರವಾಗಿ ನಿಕಟಪೂರ್ವ ಸಿಎಂ ಯಡಿಯೂರಪ್ಪ ಈಗಾಗ್ಲೆ ಹೇಳಿದ್ದಾರೆ. ಸಂಪುಟ ವಿಚಾರವಾಗಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಹೈಕಮಾಂಡ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದ್ರು. ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅಧ್ಯತೆ ನೀಡ್ಬೇಕು ಎಂದಿದ್ದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (B L Santhosh) ಹೇಳಿಕೆಗೆ ಸಹಮತ ವ್ಯಕ್ತಪಡಿಸಿ, ಹಿರಿಯ ನಾಯಕ ಸಂತೋಷ್ ಜೀ ಹೇಳಿರುವ ವಿಚಾರ ಸರಿಯಾಗಿದೆ. ಹೊಸಬರಿಗೆ ಅವಕಾಶ ಕೊಡೋದ್ರಿಂದ ಜಿಡ್ಡು ಗಟ್ಟಿದ ವ್ಯವಸ್ಥೆ ಬದಲಾಗಲಿದೆ. ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು, ರಾಜಕೀಯವಾಗಿ ನಿಶಕ್ತರಾದವರು ತೊಲಗಬೇಕು. ಹೊಸಬರು ಬರಬೇಕು. ಎಂದ ಬಿಎಲ್ ಸಂತೋಷ ಹೇಳಿಕೆಗೆ ಅನುಮೋದನೆ ನೀಡಿದ್ರು.
