Asianet Suvarna News Asianet Suvarna News

Karnataka Transport Department : 4 ವಾರದೊಳಗೆ ಸಾರಿಗೆ ನೌಕರರ ಮರುನೇಮಕ

  •  4 ವಾರದೊಳಗೆ ಸಾರಿಗೆ ನೌಕರರ ಮರುನೇಮಕ: ಶ್ರೀರಾಮುಲು
  • ಸಾರಿಗೆ ನೌಕರರ ಮುಷ್ಕರದ ವೇಳೆ ಕರ್ತವ್ಯಕ್ಕೆ ಗೈರಾದ ಕಾರಣಕ್ಕೆ ವಜಾಗೊಂಡಿದ್ದ ನೌಕರರು
Transport Employees Rejoin To work in 4 weeks Says Sriramulu snr
Author
Bengaluru, First Published Dec 22, 2021, 7:21 AM IST

ಗದಗ (ಡಿ.22):  ಸಾರಿಗೆ ನೌಕರರ  (Transport Department Employess) ಮುಷ್ಕರದ ವೇಳೆ ಕರ್ತವ್ಯಕ್ಕೆ ಗೈರಾದ ಕಾರಣಕ್ಕೆ ವಜಾಗೊಂಡಿದ್ದ ನೌಕರರಿಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು (Sriramulu) ಸಿಹಿ ಸುದ್ದಿ ನೀಡಿದ್ದಾರೆ. ಅಂಥ ನೌಕರರನ್ನು (Employees) ನಾಲ್ಕು ವಾರಗಳೊಳಗೆ ಮರುನೇಮಕ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕರ್ತವ್ಯಕ್ಕೆ ಗೈರಾಗಿದ್ದ ಕಾರಣಕ್ಕೆ ವಜಾಗೊಂಡಿರುವ ನೌಕರರ ಮರುನೇಮಕ ಸಂಬಂಧ ರಾಜ್ಯದ ನಾಲ್ಕು ವಿಭಾಗದ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಲೋಕ ಅದಾಲತ್‌ (Lok Adalat) ಮೂಲಕ ಕಾನೂನು ತೊಡಕು ನಿವಾರಿಸಿ, ಮಾನವೀಯತೆ ದೃಷ್ಟಿಯಿಂದ ಅಂಥ ನೌಕರರ ಮರುನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಿಎಂ ಬದಲಾವಣೆ ಇಲ್ಲ: ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ(Karnataka CM)  ಬದಲಾವಣೆ, ಸಚಿವ ಸಂಪುಟ ಪುನರ್‌ ರಚನೆ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ರಾಜ್ಯ ಸರ್ಕಾರದ ಎಲ್ಲ ಮಂತ್ರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಬದಲಾವಣೆ ಬಗ್ಗೆ ನಮ್ಮ ನಾಯಕರೇ ಮಾತನಾಡುತ್ತಾರೆ ಎಂದು ಶ್ರೀರಾಮುಲು (Sriramulu) ತಿಳಿಸಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ, ಮಂತ್ರಿಮಂಡಲ ಪುನರ್‌ರಚನೆಯ ಕುರಿತು ಯಾವುದೇ ಪ್ರಸ್ತಾಪ ಇಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು.   

ಎಂಇಎಸ್‌ ಕುರಿತು ಮಾತನಾಡಿದ ಸಚಿವರು, ಎಂಇಎಸ್‌ (MES) ಮಹಾ ಯಡವಟ್ಟು ಸಂಘವಾಗಿದ್ದು, ಅವರ ಪುಂಡಾಟಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೂಂಡಾ ಕಾಯ್ದೆ ಪ್ರಯೋಗ ಮಾಡಲಾಗಿದೆ. ಪ್ರತಿ ಬಾರಿ ಅಧಿವೇಶನ ನಡೆಯುವ ಸಂದರ್ಭ ಈ ರೀತಿ ಹೇಡಿ ಕೃತ್ಯ ಮಾಡುತ್ತಾ ಬಂದಿರುವ ಎಂಇಎಸ್‌ ಬ್ಯಾನ್‌ ಮಾಡುವ ಕುರಿತು ಸರ್ಕಾರ ತಜ್ಞರ ಜತೆ ಚರ್ಚೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ. ನಾಡು, ನುಡಿ ವಿಚಾರವಾಗಿ ಯಾವುದೇ ರಾಜಿ ಇಲ್ಲ, ಎಂಇಎಸ್‌ ಆಟ ನಡೆಯಲ್ಲ ಎಂದರು.

ಮತಾಂತರ ನಿಷೇಧ ಕಾಯ್ದೆ:  ಆಸೆ, ಆಮಿಷಗಳ ಮೂಲಕವಾಗಿ ಬಲವಂತ ಮತಾಂತರ ಮಾಡಬಾರದು ಎಂಬ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಯಾಗುತ್ತಿದ್ದು, ಉಡುಗೊರೆ, ಉದ್ಯೋಗ, ಹಣ ಆಮಿಷ ಒಡ್ಡುವವರನ್ನು ಕಾಯ್ದೆಯಡಿ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಲಾಗುವುದು. ಬಲವಂತದಿಂದ ಮತಾಂತರ ಮಾಡಿದಲ್ಲಿ ಅಂಥವರಿಗೆ 3ರಿಂದ 10 ವರ್ಷ ಜೈಲು (Jail) ಶಿಕ್ಷೆಯಾಗುವ ಬಗ್ಗೆ ಕಾಯ್ದೆಯಲ್ಲಿ ಪ್ರಸ್ತಾಪವಿದೆ. ಈ ಐತಿಹಾಸಿಕ ವಿಧೇಯಕ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದರು.

ರೇಷ್ಮೆ ಬೆಳೆಗಾರರಿಗೆ ಸಹಾಯಧನ :  ಗದಗ (Gadag) ಜಿಲ್ಲೆಯಲ್ಲಿಯೇ ಶಿರಹಟ್ಟಿತಾಲೂಕಿನಲ್ಲಿ 560 ಹೆಕ್ಟೇರ್‌ ಪ್ರದೇಶದಲ್ಲಿ 311 ಜನ ರೈತರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ ಎಂಬ ಇಲಾಖೆ ಮಾಹಿತಿ ಇದೆ. ಸಿಬ್ಬಂದಿ ಕೊರತೆ ಮತ್ತು ಇದ್ದ ಸಿಬ್ಬಂದಿ ರೈತರೊಂದಿಗಿನ ಸಮನ್ವಯದ ಕೊರತೆಯಿಂದ ಸರ್ಕಾರ ನೀಡುವ ಎಲ್ಲ ಹಂತದ ಸಹಾಯಧನ ದೊರಕುತ್ತಿಲ್ಲ. ಇದನ್ನು ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂದು ರೇಷ್ಮೆ ಕೃಷಿ ಆಯುಕ್ತ ಆರ್‌.ಎಸ್‌. ಪೆದ್ದಪ್ಪಯ್ಯ ಹೇಳಿದರು.

ಮಂಗಳವಾರ ಸಂಜೆ ರೇಷ್ಮೆ ಇಲಾಖೆ ಕಚೇರಿಯಲ್ಲಿ ರೇಷ್ಮೆ ಬೆಳೆಗಾರರ ಜತೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೇಷ್ಮೆ ಬೆಳೆಗಾರರಿಗೆ ನಾಟಿ ಹಂತದಿಂದ ಹಿಡಿದು ಎಲ್ಲ ಸಹಾಯಧನ ನೀಡಲಾಗುತ್ತಿದೆ. ಹೊಸ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಕೃಷಿಗೆ ಮುಂದಾಗುವಂತೆ ಕೋರಿದರು.

ನಿರ್ವಹಣೆ ವೆಚ್ಚ, ಭೂಮಿ ಫಲವತ್ತತೆ, ತೋಟ ನಿರ್ವಹಣೆ, ನರ್ಸರಿ ಬೆಳೆಸಲು ಒಂದು ಲಕ್ಷದವರೆಗೂ ಸಹಾಯಧನ ನೀಡಲಾಗುತ್ತಿದೆ. ಹುಳು ಸಾಕಾಣಿಕೆ, ರೇಷ್ಮೆ ಶೆಡ್‌ ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ .3 ಲಕ್ಷ ಹಾಗೂ ಎಸ್ಸಿ, ಎಸ್ಟಿರೈತರಿಗೆ .3.60 ಲಕ್ಷ ಸಹಾಯಧನ ನೀಡಲಾಗುತ್ತಿದ್ದು, ಯಾವುದೇ ಅನುದಾನದ ಕೊರತೆ ಇಲ್ಲ. ಬೆಳೆ ರೋಗ ನಿವಾರಣೆಗೆ ಉಚಿತ ಔಷಧಿ ನೀಡಲಾಗುತ್ತಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಚಾಕಿ ಸಾಕಾಣಿಕೆ ವೆಚ್ಚವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದ್ದು, ಇದರೊಟ್ಟಿಗೆ ಹನಿ ನೀರಾವರಿ ಸಹಾಯಧನದ ಹಣ ಸೇರಿ ಕೇಂದ್ರ ಸರ್ಕಾರ ಸಾಕಷ್ಟುಅನುದಾನ ನೀಡಿದ್ದು, ಇನ್ನು 3 ದಿನದಲ್ಲಿ ಎಲ್ಲ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊರೋನಾ ಕಾಲದ ಕಷ್ಟದ ಸಮಯದಲ್ಲೂ ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡುವುದನ್ನು ನಿಲ್ಲಿಸಿಲ್ಲ. ರೇಷ್ಮೆ ಬೆಳೆಗಾರರು ಸಾಕಷ್ಟುಹವಾಮಾನದಲ್ಲಿ ಏರಿಳಿತಗಳನ್ನು ಕಂಡಿದ್ದರೂ ರೇಷ್ಮೆ ಕೃಷಿ ಕೈಬಿಟ್ಟಿಲ್ಲ. ಸರ್ಕಾರ ಸಾಕಷ್ಟುಸಹಾಯ, ಸೌಲಭ್ಯಗಳನ್ನು ರೈತರಿಗೆ (Farmers) ನೀಡುತ್ತಿದೆ. ಯಾವುದೇ ರೀತಿಯಲ್ಲೂ ಎದೆಗುಂದದೇ ರೈತರು ರೇಷ್ಮೆ ಕೃಷಿಗೆ ಆದ್ಯತೆ ನೀಡಬೇಕು ಎಂದರು.

ಶಿರಹಟ್ಟಿರೇಷ್ಮೆ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಗಮನ ಸೆಳೆದ ರೈತರು, ಒಟ್ಟು 12 ಜನ ಸಿಬ್ಬಂದಿ ಕಾರ್ಯನಿರ್ವಹಿಸಬೇಕಿದ್ದು, ಇಲ್ಲಿ ಯಾರೊಬ್ಬರೂ ಇಲ್ಲದೇ ಇರುವುದರಿಂದ ರೇಷ್ಮೆ ಮಾರುಕಟ್ಟೆಮುಚ್ಚುವ ಹಂತಕ್ಕೆ ಬರುತ್ತಿದ್ದು, ಹಿರಿಯ ಅಧಿಕಾರಿಗಳು ಸಿಬ್ಬಂದಿ ನೇಮಕಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಮನವಿ ಮಾಡಿಕೊಂಡರು.

Follow Us:
Download App:
  • android
  • ios