Telugu Saregamapa Show: ಜನಪ್ರಿಯ ಮನರಂಜನಾ ವಾಹಿನಿ 'ಜೀ ತೆಲುಗು', ತನ್ನ ಅತ್ಯಂತ ಯಶಸ್ವಿ ಸಿಂಗಿಂಗ್ ರಿಯಾಲಿಟಿ ಶೋ 'ಸ ರಿ ಗ ಮ ಪ'ದ ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಇದರ ಆಡಿಷನ್‌ ನಡೆಯಲಿದೆ.  

ಬೆಂಗಳೂರು: ಭಾರತೀಯ ಚಿತ್ರರಂಗಕ್ಕೆ ಹಲವು ಪ್ರತಿಭಾನ್ವಿತ ಗಾಯಕರನ್ನು ಪರಿಚಯಿಸಿರುವ ಈ ಕಾರ್ಯಕ್ರಮ ( telugu saregamapa show ), ಇದೀಗ 'ಸ ರಿ ಗ ಮ ಪ - ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್' ಹೆಸರಿನಲ್ಲಿ ಹೊಸ ಆಯಾಮ ಪಡೆದುಕೊಂಡಿದೆ. ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಜಾಗತಿಕ ಮಟ್ಟದಲ್ಲಿರುವ ಗಾಯಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಸುವರ್ಣಾವಕಾಶವಾಗಿದೆ. ಆನ್-ಗ್ರೌಂಡ್ ಮತ್ತು ಡಿಜಿಟಲ್ ಆಡಿಷನ್‌ಗಳ ಮೂಲಕ ಈ ರಿಯಾಲಿಟಿ ಶೋಗೆ ಪ್ರತಿಭಾವಂತ ಗಾಯಕರನ್ನು ಆಯ್ಕೆ ಮಾಡಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವಾಗ? ಎಲ್ಲಿ ನಡೆಯಲಿದೆ?

ಈ ಕಾರ್ಯಕ್ರಮದ ಭಾಗವಾಗಿ, ಜೀ ತೆಲುಗು ದೇಶದ ವಿವಿಧ ನಗರಗಳಲ್ಲಿ ಆನ್-ಗ್ರೌಂಡ್ ಮತ್ತು ಡಿಜಿಟಲ್ ಆಡಿಷನ್‌ಗಳನ್ನು ನಡೆಸುತ್ತಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಆಡಿಷನ್‌ಗಳು ಜೂನ್ 28, 2026ರ ಭಾನುವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಅಬ್ಬಯ್ಯ ನಾಯ್ಡು ಸ್ಟುಡಿಯೋ (ಮಧು ಆರ್ಟ್ ಸ್ಟುಡಿಯೋ), ನಂ. 134, 7ನೇ ಕ್ರಾಸ್ ರಸ್ತೆ, ನಾಯ್ಡು ಲೇಔಟ್, ಬೆಂಗಳೂರು - 560061 ಇಲ್ಲಿ ನಡೆಯಲಿವೆ.

ಯಾರು ಯಾರು ಭಾಗವಹಿಸಬಹುದು?

18 ರಿಂದ 35 ವರ್ಷದೊಳಗಿನ ಗಾಯಕರು ಈ ಆಡಿಷನ್‌ನಲ್ಲಿ ಭಾಗವಹಿಸಲು ಅರ್ಹರಾಗಿದ್ದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಡುವುದು ಮತ್ತು ಉಜ್ವಲ ಭವಿಷ್ಯ ರೂಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ನಿಮ್ಮ ಸಿಂಗಿಂಗ್ ಕನಸನ್ನು ನನಸಾಗಿಸಿಕೊಳ್ಳಲು ಈ ಆಡಿಷನ್‌ನಲ್ಲಿ ಪಾಲ್ಗೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜೀ ತೆಲುಗು ವಾಹಿನಿಯನ್ನು ತಪ್ಪದೆ ವೀಕ್ಷಿಸಿ