ಬಿಗ್‌ಬಾಸ್‌ ಗೆದ್ದ ಹನುಮಂತನ ನಡತೆ ನಾಟಕ ಎಂಬ ಆರೋಪ ಕೇಳಿಬಂದಿತ್ತು. ಆದರೆ ಸರಿಗಮಪ ಶೋನಲ್ಲಿ ಅತಿಥಿಯೊಬ್ಬರು ಹನುಮಂತನ ಸರಳತೆ, ಶೋ ಪೂರ್ವದಲ್ಲಿದ್ದಂತೆಯೇ ಈಗಲೂ ಒಂದೇ ರೀತಿಯ ವ್ಯಕ್ತಿತ್ವ ಹೊಂದಿದ್ದಾನೆ ಎಂದು ಹೇಳಿ, ನಾಟಕದ ಆರೋಪವನ್ನು ತಳ್ಳಿಹಾಕಿದ್ದಾರೆ. ಅನುಶ್ರೀ ಸೇರಿದಂತೆ ಹಲವರು ಇದಕ್ಕೆ ಸಮ್ಮತಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದು ಹಳ್ಳಿ ಹೈದ ಹನುಮಂತ (Hanumantha) ಟ್ರೋಫಿ ಎತ್ತಿದ್ದೂ ಆಯ್ತು. ಆದರೂ ಹನುಮಂತನ ಹವಾ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಕಾರಣ, ಬಿಗ್‌ ಬಾಸ್‌ ಕನ್ನಡ ಇಷ್ಟು ಸೀಸನ್‌ದು ಒಂದು ಲೆಕ್ಕ, ಈ ಸೀಸನ್‌ದೆ ಇನ್ನೊಂದು ಲೆಕ್ಕ ಎಂಬಂತೆ ಆಗಿರೋದು. ಇಷ್ಟು ದಿನ ವೈಲ್ಡ್‌ ಕಾರ್ಡ್ ಎಂಟ್ರಿ ಪಡೆದ ಯಾರೊಬ್ಬರೂ ಟ್ರೋಫಿ ಎತ್ತಿರಲಿಲ್ಲ ಅನ್ನೋದು ಒಂದು ಕಡೆಯಾದರೆ, ಕುರಿ ಕಾಯುತ್ತಿದ್ದ ಹಳ್ಳಿ ಹೈದ ಹನುಮಂತ ಯಾರೂ ಊಹಿಸದೇ ಇದ್ದರೂ ಗೆದ್ದು ಅಷ್ಟೊಂದು ಹಣ ಪಡೆದಿರುವುದು ಇನ್ನೊಂದು ಕಡೆ. ಈ ಎಲ್ಲದರ ಮಧ್ಯೆ, ಹನುಮಂತ ನಾಟ್ಕ ಆಡಿ ಗೆದ್ದ ಅನ್ನೋ ಆರೋಪ!

ಹೌದು, ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ 'ಹನುಮಂತ ನಿಜವಾಗಿಯೂ ಹಾಗೆ ಇಲ್ಲ. ಅವನು ನಾಟಕ ಆಡಿ ಬಿಗ್ ಬಾಸ್ ಕಪ್ ಗೆದ್ದುಬಿಟ್ಟಿದ್ದಾನೆ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಕನ್ನಡದ ಈ ಸೀಸನ್‌ನಲ್ಲಿಯೇ ಆಡಿ ಸೋತಿರುವ ಕೆಲವು ಹನುಮಂತನ ಸಹಸ್ಪರ್ಧಿಗಳು, ಅವರ ಪೋಷಕರು ಕೂಡ ಆ ಮಾತು ಹೇಳಿದ್ದಿದೆ. ಆದರೆ, ಕೆಲವರು 'ಅದು ಸುಳ್ಖು, ಹನುಮಂತ ತನ್ನ ಒರಿಜಿನಲ್ ವ್ಯಕ್ತಿತ್ವ ಹೇಗಿದೆಯೋ ಹಾಗೇ ಆಡಿದ್ದಾನೆ, ಅವನಿಗೆ ಅದೇ ಗೆಲುವನ್ನು ತಂದುಕೊಟ್ಟಿದೆ' ಎಂದವರೂ ಇದ್ದಾರೆ. 

ಈಗ ಕುಬೇರನಾದ ಹನುಮಂತ ಆ 'ಹಣದ ಗಂಟ'ನ್ನು ಏನ್ ಮಾಡ್ತಾರಂತೆ ಗೊತ್ತಾ?

ಈಗ, ಸೋಷಿಯಲ್ ಮೀಡಿಯಾದಲ್ಲಿ ಹನುಮಂತನಿಗೆ ಸಂಬಂಧಪಟ್ಟು ಅದೊಂದು ವಿಡಿಯೋ ಓಡಾಡಿ ವೈರಲ್ ಆಗ್ತಿದೆ. ಜೀ ಕನ್ನಡದ ಸರಿಗಮಪ ಶೋದಲ್ಲಿ ಗೆಸ್ಟ್‌ ಆಗಿ ಬಂದವರೊಬ್ಬರು ಹನುಮಂತನ ನಾಟಕದ ಪಾರ್ಟಿ ಹೌದೋ ಅಲ್ವೋ ಎಂಬುದರ ಬಗ್ಗೆ ಮಾತನ್ನಾಡಿದ್ದಾರೆ. ಅವರು ಅದೇನು ಹೇಳಿದ್ದಾರೆ, ಅದಕ್ಕೆ ಅವರು ಕೊಟ್ಟ ಕಾರಣವೇನು? ಈ ಎಲ್ಲ ಕುತೂಹಲಕ್ಕೆ ಇಲ್ಲಿದೆ ಉತ್ತರ ನೋಡಿ.. ಓವರ್ ಟು ಜೀ ಕನ್ನಡ ಸರಿಗಮಪ ಶೋ ಸ್ಟೇಜ್..

'ನಾನು ಬರ್ತಾ ದಾರಿನಲಲ್ಲಿ ಒಂದು ಥಿಂಕ್ ಮಾಡಿದೆ.. ಹನುಮಂತನ್ನ ನಾನು ಬಿಫೋರ್ ಶೋನೂ ನೋಡಿದೀನಿ.. ಒಂದು ಶೋನಲ್ಲಿ ಬಂದ್ಮೇಲೆ ಅವ್ರ ಆಚಾರ ವಿಚಾರ ಎಲ್ಲಾ ಚೇಂಜ್ ಆಗುತ್ತೆ.. ಆದ್ರೆ ಹನುಮಂತ ಅದೇ ತರ ಇದಾನೆ.. ಸಿಂಪಲ್ ಆಗಿ.. ಅವ್ನು ಯಾವಾಗ ನಮ್ ಆಫೀಸಿಗೆ ಬಂದ್ರೂ ಹಿಂಗೇ ಇರ್ತಾನೆ.. ಮುಂಚೆ ನಾನು ಏನ್ ಅಂದ್ಕೊಂಡಿದ್ದೆ ಅಂದ್ರೆ, ಬರೀ ಸ್ಟೇಜ್‌ಗೆ ಈ ಡ್ರೆಸ್ಸು ಅಂತ.. ಆದ್ರೆ ಫುಲ್ ಟೈಮ್‌ ಹೀಗೇ ಇರ್ತಾನೆ..' ಎಂದಿದ್ದಾರೆ. 

ಹೆಂಡ್ತಿ ಕಾಟನೂ ತಪ್ಪುತ್ತೆ, ಗರ್ಲ್‌ಫ್ರೆಂದೂ ಬಿಟ್ಟೋಗಲ್ಲ; ಯೋಗರಾಜ್‌ ಭಟ್ರ ಹೇಳಿದ್ದು ಕೇಳಿ ಸಾಕು!

ಜೀ ಕನ್ನಡ ಸರಿಗಮಪ ಸ್ಟೇಜ್‌ ಗೆಸ್ಟ್ ಮಾತಿಗೆ ಅಲ್ಲಿದ್ದವರ ಚಪ್ಪಾಳೆ ಸಿಕ್ಕಿದೆ. ಹನುಮಂತ ಅವರು ಮಾತನ್ನಾಡುತ್ತಿದ್ದರೆ ಎಂದಿನಂತೆ ಕೈ ಕಟ್ಟಿ ನಿಂತಿದ್ದಾನೆ. ಅನುಶ್ರೀ ಚಪ್ಪಾಳೆಯೂ ಹನುಮಂತನಿಗೆ ಸಿಕ್ಕಿದೆ. ಇದೇ ಅನುಶ್ರೀ ಹಲವು ವರ್ಷಗಳ ಹಿಂದೆ ಜೀ ಸರಿಗಮಪ ಶೋದಲ್ಲಿ ಹನುಮಂತ ವಿನ್ನರ್ ಆಗಿದ್ದಾಗ ಚಪ್ಪಾಳೆ ತಟ್ಟಿದ್ದರು. ಈಗ ಹನುಮಂತ ಬಿಗ್ ಬಾಸ್ ವಿನ್ನರ್ ಕೂಡ ಆಗಿದ್ದಾನೆ, ಇನ್ನಷ್ಟು ಜನಪ್ರಿಯತೆ ಪಡೆದಿದ್ದಾನೆ. ಆದ್ರೆ, ವ್ಯಕ್ತಿತ್ವ ಹಾಗೇ ಇದೆ' ಎನ್ನಲಾಗುತ್ತಿದೆ. 

View post on Instagram