‘ಹಿಟ್‌ ದಿನದ ಫೀಲಿಂಗ್‌’ ಎಂಬ ಟ್ಯಾಗ್‌ಲೈನ್‌ ಮೂಲಕ ಶುರುವಾಗುತ್ತಿರುವ ಝೀ ಪಿಚ್ಚರ್‌ ಹಲವು ವಿಶೇಷತೆ ಹೊಂದಿದೆ. ಈಗಾಗಲೇ ಕನ್ನಡ ಕಿರುತೆರೆಯಲ್ಲಿ ದಾಖಲೆಯ ರೇಟಿಂಗ್‌ ಪಡೆದಿರುವ ಸೂಪರ್‌ ಹಿಟ್‌ ಚಿತ್ರಗಳಾದ ‘ಕುರುಕ್ಷೇತ್ರ’, ‘ದೊಡ್ಮನೆ ಹುಡುಗ’, ‘ಪೈಲ್ವಾನ್‌’, ‘ಹೆಬ್ಬುಲಿ’ ಹಾಗೂ ‘ದಿ ವಿಲನ್‌’ ಜತೆಗೆ ಟ್ರೆಂಡ್‌ ಸೆಟ್‌ ಸಿನಿಮಾಗಳಾದ ಮಯೂರ, ಜೋಗಿ, ಮಿಲನ, ಬುಲ್‌ ಬುಲ್‌ ರೀತಿಯ ಸಾಕಷ್ಟುಚಿತ್ರಗಳು ‘ಝೀ ಪಿಚ್ಚರ್‌’ನಲ್ಲಿ ಪ್ರಸಾರವಾಗಲಿವೆ.

‘ಜೀ ಪಿಕ್ಚರ್: ಹಿಟ್ ದಿನದ ಫಿಲಿಂಗ್’: ಶೀಘ್ರದಲ್ಲೇ ಕನ್ನಡ ಸಿನಿ ಪ್ರಿಯರಿಗೆ ರಸದೌತಣ!

ಈಗಾಗಲೇ ಝೀ ಪಿಚ್ಚರ್‌ ಲೈಬ್ರರಿಯಲ್ಲಿ 350ಕ್ಕೂ ಹೆಚ್ಚು ಚಿತ್ರಗಳಿವೆ. ಮತ್ತೊಂದು ಸಾಹಸವೆಂದರೆ 12 ಹೊಚ್ಚ ಹೊಸ ಸಿನಿಮಾಗಳು ಪ್ರಾರಂಭಿಕ ಕೊಡುಗೆಯಾಗಿ ಪ್ರಸಾರ ವಾಗಲಿವೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 12 ದಿನಗಳ ಕಾಲ 12 ಹೊಸ ಜನಪ್ರಿಯ ಸಿನಿಮಾ ನೋಡುವ ಅವಕಾಶ ‘ಝೀ ಪಿಚ್ಚರ್‌’ನಲ್ಲಿ ಲಭ್ಯವಿದೆ. ಹಾಗೆಯೇ ಪ್ರೇಕ್ಷಕರನ್ನು ಸ್ಯಾಂಡಲ್‌ವುಡ್‌ ಸಿನಿಮಾಗಳತ್ತ ಸೆಳೆಯಲು ಝೀ ಕುರಿತಾದ ಫಸ್ಟ್‌ ಲುಕ್‌ ಮತ್ತು ವಾಹಿನಿಯ ಪ್ರಮೋಷನಲ್‌ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ ಎನ್ನುತ್ತಿವೆ ‘ಝೀ’ ಮೂಲಗಳು.