Asianet Suvarna News Asianet Suvarna News

Umashree Hamsalekha: ಅಣ್ಣನ ಕಾಲಿಗೆ ನಮಸ್ಕರಿಸಿ ಭಾವುಕರಾದ ನಟಿ ಉಮಾಶ್ರೀ!

ಸರಿಗಮಪ ವೇದಿಕೆಯಲ್ಲಿ ಪುಟ್ಟಕ್ಕನ ಮಕ್ಕಳು. ಉಮಾ ಮತ್ತು ರಾಜಣ್ಣ ಸಂಬಂಧ ಹೇಗಿತ್ತು ಗೊತ್ತಾ?

Zee Kannada Umashree Hamsalekha reveals about brother sister bond vcs
Author
Bangalore, First Published Dec 27, 2021, 6:12 PM IST

ಜೀ ಕನ್ನಡ (Zee Kannada) ಸರಿಗಮಪ ಚಾಂಪಿಯನ್‌ಶಿಪ್‌ ಕಾರ್ಯಕ್ರಮದಲ್ಲಿ ಈ ವೀಕೆಂಡ್ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಜೀ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಪುಟ್ಟಕ್ಕನ ಮಕ್ಕಳು (Puttakkana Makalu) ತಂಡವೂ ಆಗಮಿಸಿತ್ತು. ನಟಿ ಉಮಾಶ್ರೀ (Umashree) ಅವರು ನಾದ ಬ್ರಹ್ಮ ಹಂಸಲೇಖ (Hamsalekha) ಅವರ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಅವರ ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ. 

'ಆಕೆ ನನ್ನನ್ನು ತುಂಬಾ ಪ್ರೀತಿಯಿಂದ ರಾಜಣ್ಣ (Rajanna) ಅಂತ ಕರೆಯುತ್ತಾರೆ. ನಾನು ಆಕೆಯನ್ನು ಉಮಾ ಉಮಾ ಎಂದು ಕರೆಯುವೆ. ನನ್ನ ಸಹೋದರಿ (Sister) ಆಕೆ' ಎಂದು ಹಂಸಲೇಖ ಅವರು ಹೇಳುವಾಗ ದಯವಿಟ್ಟು ವೇದಿಕೆ ಮೇಲೆ ಬನ್ನಿ ಅಣ್ಣ ಎಂದು ಉಮಾಶ್ರೀ ಅವರು ಕೇಳಿಕೊಳ್ಳುತ್ತಾರೆ. ವೇದಿಕೆ ಮೇಲೆ ಹಂಸಲೇಖ ಅವರು ಬರುತ್ತಿದ್ದಂತೆ, ಅವರ ಪಾದದ ಮೇಲೆ ತಲೆ ಭಾಗಿ ವಂದಿಸಿ, ಪಾದಕ್ಕೆ ಮುತ್ತಿಟ್ಟು ನಮಸ್ಕರಿಸಿದ ಉಮಾಶ್ರೀ ಅವರು ಭಾವುಕರಾಗಿದ್ದರು. 

Puttakkana Makkalu: IAS ಅಧಿಕಾರಿ ಪಾತ್ರದಲ್ಲಿ ಸಂಜನಾ ಬುರ್ಲಿ, ಕಥೆ ಒಪ್ಪಿಕೊಂಡಿದ್ದು ಹೀಗೆ...

'ನಾವಿಬ್ಬರು ಒಂದೇ ವೇದಿಕೆ (Public Stage) ಮೇಲೆ ಬಹಳ ಕಡಿಮೆ ಸಲ ಭೇಟಿ ಮಾಡಿರುವುದು. ನಾವು ಜೀವನದಲ್ಲಿ ದಿನಲೂ ನಾಟಕ (Theatre) ಮಾಡುತ್ತಿದ್ದವರು. ನಾಟಕದ ವೇದಿಕೆ ಮೇಲೆ ಸಂಭ್ರಮಿಸುತ್ತಿದ್ದವರು. ಸಿನಿಮಾ ರಂಗಕ್ಕೆ ಬಂದ ಮೇಲೆ ಒಂದೇ ವೇದಿಕೆ ಮೇಲೆ ಸೇರಿರಲಿಲ್ಲ. ಆಕೆ ಶಾಸಕಿ ಆಗಿದ್ದಾಗ ಎಲ್ಲಾ ರಂಗ ಕಲಾವಿದರನ್ನು ಕೂರಿಸಿ ಸನ್ಮಾನ ಮಾಡಿದ್ದರು. ಅವತ್ತು ನಾನು ಮೈ ಮರೆತು ಸಂತೋಷ (Happiest Person) ಪಟ್ಟಿದ್ದೆ. ನಮ್ಮ ಯಜಮಾನರನ್ನು ಪಕ್ಕದಲ್ಲಿ ಕೂರಿಸಿ ನಮ್ಮ ಬಾಲು ಸರ್‌ಗೆ ಸಂತೋಷ ಕೊಟ್ಟರು. ಇವತ್ತು ನನ್ನ ತಂಗಿ ನನ್ನ ಪಕ್ಕದಲ್ಲಿದ್ದಾರೆ,' ಎಂದು ಹಂಸಲೇಖ ಸಹ ಭಾವುಕರಾಗಿ ಮಾತನಾಡಿದ್ದಾರೆ. 

Zee Kannada Umashree Hamsalekha reveals about brother sister bond vcs

'ನನ್ನ ರಂಗಭೂಮಿ ಮತ್ತು ಸಿನಿಮಾ , ಕಿರುತೆರೆ ಎಲ್ಲಾ ನೋಡಿದಾಗ ಬಹಳಷ್ಟು ಜನ ನನ್ನ ಬದುಕಿನಲ್ಲಿ ಈ ರೀತಿ ಆತ್ಮೀಯವಾಗಿ ಬಂದು ಹೋಗಿದ್ದಾರೆ. ಆದರೆ ಅಣ್ಣ ನನಗೆ ತುಂಬಾ ತುಂಬಾ ತುಂಬಾ ವಿಶೇಷ. ಅವರು ನನಗೆ ಸ್ಪೆಷಲ್ ವ್ಯಕ್ತಿ. ಅಣ್ಣನ ನೋಡಿದ್ರೆ ನಾನು ತುಂಬಾ ಭಯ ಪಡ್ತಿದ್ದೆ. ಅವರ ಮುಂದೆ ಹೋಗ್ತಿರ್ಲಿಲ್ಲ ನಾನು. ಈಗಲೂ ಅಷ್ಟೆ ಅಣ್ಣ ಅಂದ್ರೆ ನಾನು ಒಂದು ಹೆಜ್ಜೆ ದೂರ ಇರ್ತೀನಿ. ಈ ವಿಚಾರ ನಿಮಗೆ ಆಶ್ಚರ್ಯ ಆಗ್ಬೋದು,' ಎಂದು ಉಮಾಶ್ರೀ ಅವರು ಮಾತನಾಡಿದ್ದಾರೆ. 

Puttakkana Makkalu: ಧಾರಾವಾಹಿಗೆ ಹಿರಿಯ ನಟಿ ಉಮಾಶ್ರೀ ಸಂಭಾವನೆ ದುಬಾರಿ!

'ನಾಟಕಕ್ಕೆ ಒಂದು ಶಿಸ್ತು ಬೇಕು ಅಲ್ವಾ? ಎಲ್ಲರಿಗೂ ಕಣ್ಣಲ್ಲಿ ಕಮ್ಯಾಂಡ್ ಮಾಡುತ್ತಿದ್ದೆ,' ಎಂದು ಹಂಸಲೇಖ ಹೇಳಿದ್ದರೆ. 'ಈಗ ಹಾಗೆಲ್ಲ ಇಲ್ಲ ಅಣ್ಣ. ಆ ರಾಜಣ್ಣ ಬೇರೆ ಈ ರಾಜಣ್ಣ ಬೇರೆ' ಎಂದು ಉಮಾಶ್ರೀ ಹೇಳಿದ್ದಾರೆ. 

'ಆಗ ನಾವು ತಮಾಷೆ, ಸಂಭ್ರಮ ಮತ್ತು ಶಿಸ್ತು..ಎಲ್ಲದರ ಜೊತೆ ಬದುಕಿದ್ದೀವಿ. ಈ ವೇದಿಕೆ ಮೇಲೆ ಈ ಎರಡು ಪಾತ್ರಗಳಿಂದ ಸಂದೇಶ ಏನೆಂದರೆ ಓದಿಲ್ಲ (Education), ಗಾಡ್‌ಫಾದರ್ (Godfather) ಇಲ್ಲ, ಅನುಕೂಲ ಇಲ್ಲ, ಜಾತಿ (Cast) ಬಲ ಇಲ್ಲ ಮತ್ತು ಬೆಂಬಲ (Support) ಇಲ್ಲ. ನಾವಿಬ್ಬರು ಇದ್ಯಾವುದೂ ಇಲ್ಲದೆ ಬೆಳೆದ ಪ್ರತಿಭಾವಂತರು. ನಾವು ಗುರಿ ತಲುಪಬೇಕು ಅಂತ ವಿಸಿಟಿಂಗ್ ಕಾರ್ಡ್‌ (Visiting Card) ಹುಡುಕಿಕೊಂಡು ಬಂದಿದ್ದೀವಿ. ನಿಮಗೆ ನಿಮ್ಮ ತಂದೆ ತಾಯಿ ಒಂದು ವಿಸಿಟಿಂಗ್ ಕಾರ್ಡ್ ಕೊಡ್ತಾರೆ. ಇಲ್ಲಿ ಹೋಗು, ಅಲ್ಲಿ ಹೋಗು ಅಂತ. ಆದರೆ ನಮ್ಮಿಬ್ಬರಿಗೂ ನೋ ವಿಸಿಟಿಂಗ್ ಕಾರ್ಡ್ಸ್‌. ನಮಗೆ ಇದ್ದ ಪ್ರತಿಭೆ ನಾವು ತಲುಪಬೇಕಾದ ಗುರಿ ಹೋರಾಡಿ, ಹೋರಾಡಿ ಇಲ್ಲಿಗೆ ಬಂದಿದ್ದೀವಿ,' ಎಂದು ಹಂಸಲೇಖ ಹೇಳಿದ್ದಾರೆ.

Follow Us:
Download App:
  • android
  • ios