Asianet Suvarna News Asianet Suvarna News

ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಕ್ಯೂಟ್ ಲವ್‌ಸ್ಟೋರಿ ಶುರುವಾಯ್ತು! ಆದ್ರೆ ಶ್ರೀವಲ್ಲಿ ಬ್ರೇಕಪ್‌ ತಡ್ಕೋತಾಳ?

 ಶ್ರಾವಣಿ ಸುಬ್ರಹ್ಮಣ್ಯದಲ್ಲಿ ವಿಲನ್‌ಗಳು ಮಾಡಿದ ಕುತಂತ್ರ ಜೋಡಿ ಜೀವಗಳಲ್ಲಿ ಪ್ರೇಮದ ಟುವ್ವಿ ಟುವ್ವಿ ಶುರುವಾಗುವಂತೆ ಮಾಡಿದೆ. ಆದರೆ ಸುಬ್ಬನೇ ಸರ್ವಸ್ವ ಅಂದುಕೊಂಡಿರೋ ಶ್ರೀವಲ್ಲಿ ಇದನ್ನೆಲ್ಲ ತಡ್ಕೋತಾಳ?

zee kannada shravani subrahmanya serial new love story begins
Author
First Published Sep 24, 2024, 12:54 PM IST | Last Updated Sep 24, 2024, 1:17 PM IST

ಶ್ರಾವಣಿ ಸುಬ್ರಹ್ಮಣ್ಯ ರೊಮ್ಯಾಂಟಿಕ್ ಸೀರಿಯಲ್. ಇದರಲ್ಲಿ ಇಲ್ಲೀವರೆಗೆ ಮನೆತನ, ಅಂತಸ್ತು, ಅಪ್ಪನ ಪ್ರೀತಿ ಇತ್ಯಾದಿ ವಿಚಾರಗಳೇ ಪ್ರಧಾನವಾಗಿತ್ತು. ಆದರೆ ಈಗ ಕ್ಯೂಟ್ ಲವ್‌ ಸ್ಟೋರಿ ಶುರುವಾಗ್ತಿದೆ. ಇದಕ್ಕೆ ಜನ ಕೊಡ್ತಿರೋ ರೆಸ್ಪಾನ್ಸ್ ನೋಡಿದ್ರೆ ಈ ಸೀರಿಯಲ್ ಟಿಆರ್‌ಪಿ ಏಕ್‌ದಂ ಮೇಲಕ್ಕೆ ಜಿಗಿಸುವ ಎಲ್ಲ ಚಾನ್ಸಸ್ ಕಾಣ್ತಿದೆ. ಏಕೆಂದರೆ ಲವ್‌ಸ್ಟೋರಿಗಳನ್ನು ಇಷ್ಟಪಡೋ ಸೀರಿಯಲ್‌ ಲವರ್ಸ್ ಜಾಸ್ತಿ ಆಗ್ತಿದ್ದಾರೆ. ಅದರಲ್ಲೂ ಲೈಟಾಗಿ ಶುರುವಾಗೋ ಲವ್ವು, ಆಮೇಲೆ ಅದರ ನಡುವೆ ಉದ್ಭವವಾಗೋ ಸಂಘರ್ಷ, ಎಲ್ಲವನ್ನೂ ಜನ ಎನ್‌ಮಾಡೋ ಟ್ರೆಂಡ್ ಸದ್ಯಕ್ಕಿದೆ. ಹೀಗಾಗಿ ಈ ಸೀರಿಯಲ್ ಮತ್ತಷ್ಟು ಜನ ಮೆಚ್ಚುಗೆ ಪಡೆದು ಟಿಆರ್‌ಪಿ ಹೆಚ್ಚಾಗಿಸಿಕೊಳ್ಳೋ ಎಲ್ಲ ಸಾಧ್ಯತೆ ಕಾಣ್ತಿದೆ. ಅಂದ ಹಾಗೆ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಸದ್ಯ ವಿಲನ್‌ಗಳು ಮಾಡಿರೋ ರಣತಂತ್ರವೇ ಜೋಡಿ ಹಕ್ಕಿಗಳ ಪ್ರೇಮಕ್ಕೆ ನಾಂದಿ ಹಾಡಿದ ಹಾಗಾಗಿದೆ. ಒಳಗೆ ಪ್ರೀತಿ ಇದ್ರೂ ಅದು ಈವರೆಗೆ ಶ್ರಾವಣಿಗೆ ಸ್ಪಷ್ಟ ಆಗಿರಲಿಲ್ಲ. ಆದರೆ ಈಗ ಹೆಚ್ಚು ಸ್ಪಷ್ಟ ಆಗ್ತಿದೆ. ಜೀವವನ್ನೇ ಒತ್ತೆಯಿಟ್ಟು ತನ್ನ ಜೀವ ಕಾಪಾಡಿದ ಸುಬ್ಬು ಇದೀಗ ಮಿನಿಷ್ಟ್ರ ಮಗಳ ಕಣ್ಣಲ್ಲಿ ಹೀರೋ ಆಗ್ತಿದ್ದಾನೆ. ಅಲ್ಲಿಗೆ ಶ್ರಾವಣಿ ಅಪ್ಪನ ಕಥೆಯೇ ಮತ್ತೆ ರಿಪೀಟ್ ಆಗೋ ಎಲ್ಲ ಸಾಧ್ಯತೆ ಕಂಡು ಬರ್ತಾ ಇದೆ.

ಸಾಲಿಗ್ರಾಮದ ಉತ್ಸವದಲ್ಲಿ ಕಳಶ ಹೊರುವ ಶ್ರಾವಣಿ ಕಾಲಿಗೆ ಗಾಜು ಚುಚ್ಚಿದರೂ ತಡೆದು ಎಷ್ಟೇ ನೋವಾದರೂ ನುಂಗಿ ತನ್ನ ಸಂಕಲ್ಪ ಪೂರೈಸುತ್ತಾಳೆ. ಆದರೆ ಕೊನೆಯಲ್ಲಿ ದೇವಸ್ಥಾನದ ಹಿಂದಿರುವ ಮರಕ್ಕೆ ದಾರ ಕಟ್ಟಿ ಹಾಕಬೇಕು ಎಂಬ ಸ್ವಾಮೀಜಿಯ ಮಾತಿಗೆ ತಕ್ಕಂತೆ ದೇವಸ್ಥಾನದ ಹಿಂಭಾಗದಲ್ಲಿರುವ ಮರದ ಬಳಿ ಹೋಗುತ್ತಾರೆ ಸುಬ್ಬು–ಶ್ರಾವಣಿ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಶ್ರಾವಣಿಯ ಪ್ರಾಣ ತೆಗೆಯಲು ಸಿದ್ಧನಾಗುತ್ತಾನೆ ಮದನ್‌. ಶ್ರಾವಣಿಯ ಸುತ್ತಲೂ ಬೆಂಕಿ ಹರಡಿದ್ದು ನೋಡಿ ಗಾಬರಿಗೊಳ್ಳುವ ಸುಬ್ಬು ಏನು ಮಾಡಬೇಕೆಂದು ದಿಕ್ಕೇ ತೋಚದಂತೆ ನಿಲ್ಲತ್ತಾನೆ. ಸುತ್ತಲೂ ಬೆಂಕಿ ಹರಡಿದ್ದರೂ ಅಜ್ಜಿ ಹೇಳಿದ ಮಾತು ನೆನಪಾಗಿ ಮರಕ್ಕೆ ಏಳು ಸುತ್ತು ಹಾಕುವಲ್ಲಿ ನಿರತಳಾಗುತ್ತಾಳೆ ಶ್ರಾವಣಿ. ಸುಬ್ಬು ಕೆಳಗಡೆ ಬನ್ನಿ ಮೇಡಂ ಎಂದು ಎಷ್ಟು ಕರೆದರೂ ಶ್ರಾವಣಿ ಬರುವುದಿಲ್ಲ.

ಸೀತಾರಾಮದ ಪ್ರಿಯಾ ಜೊತೆ ಕನ್ನಡತಿ ಹರ್ಷ: ಈ ಸೀರಿಯಲ್ ನೋಡಿದ್ರಾ?

ಅವಳ ಮೈ ಮೇಲೆ ಬೆಂಕಿ ಅಂಟಿಕೊಂಡಿರುತ್ತದೆ. ಇತ್ತ ಜನರೆಲ್ಲಾ ಶ್ರಾವಣಿಯ ಕೂಗು ಕೇಳಿ ಓಡಿ ಹೋಗುತ್ತಿರುತ್ತಾರೆ. ಈ ನಡುವೆ ಸಾವಿತ್ರಿಯ ಅಜ್ಜನ ಕಾಲು ತುಳಿದುಕೊಂಡೇ ಓಡುತ್ತಾರೆ. ಇತ್ತ ಶ್ರಾವಣಿಯ ಸುತ್ತಲೂ ಬೆಂಕಿ ಹಿಡಿದಿರುವುದು ನೋಡಿದ ಸುಬ್ಬು ಬೇರೆ ಕಾಣದೇ ತಾನೇ ಮರದ ಕಟ್ಟೆ ಹತ್ತಿ ಅವಳ ಮೈ ಮೇಲೆ ಇರುವ ಶಾಲನ್ನು ಎಳೆದು ಬಿಸಾಕುತ್ತೇನೆ. ಆದರೆ ಸುತ್ತಲೂ ಬೆಂಕಿ ಇರುವ ಕಾರಣ ಹೊರಗಡೆ ಹೋಗುವುದು ಅಸಾಧ್ಯವಾಗಿರುತ್ತದೆ. ಕೊನೆಗೆ ತನ್ನ ಪ್ರಾಣವನ್ನೂ ಲೆಕ್ಕಿಸದ ಸುಬ್ಬು, ಶ್ರಾವಣಿಯನ್ನು ಹಿಡಿದು ಬೆಂಕಿಯಿಂದ ಹಾರಿ ಅವಳನ್ನು ಕಾಪಾಡಿ ತನ್ನ ಪ್ರಾಣವನ್ನೂ ಉಳಿಸಿಕೊಳ್ಳುತ್ತಾನೆ. ಕಟ್ಟೆಯಿಂದ ಹಾರುವ ಸುಬ್ಬು, ಶ್ರಾವಣಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಉರುಳಿ ಬಿಡುತ್ತಾರೆ.

ಆಗ ಶ್ರಾವಣಿಗೆ ಜೋಗತಿ ಹೇಳಿದ ಮಾತುಗಳು ನೆನಪಾಗುತ್ತವೆ. ಬೆಂಕಿಯನ್ನು ದಾಟಿ ಬಂದು ನಿನ್ನನ್ನು ಕಾಪಾಡುವವ ನಿನ್ನ ಬದುಕನ್ನು ನಂದಾದೀಪ ಮಾಡ್ತಾನೆ ಎಂಬ ಮಾತನ್ನು ಜೋಗತಿ ಹೇಳಿರ್ತಾಳೆ. ಅಲ್ಲದೇ ಸಾವಿತ್ರಿ ಕೂಡ ಸುಬ್ಬವನ್ನು ಶ್ರಾವಣಿಯ ಗಂಡ ಎಂದು ತಿಳಿದು ಮಾತನಾಡಿದ್ದು ಅವಳಿಗೆ ನೆನಪಾಗುತ್ತದೆ. ಮಾತ್ರವಲ್ಲ ಸುಬ್ಬು ಕೇವಲ ತನ್ನ ಗೆಳೆಯ ಮಾತ್ರವಲ್ಲ, ಜೀವದ ಗೆಳೆಯ ಇಷ್ಟು ದಿನ ಇದು ನನಗೆ ಅರ್ಥವೇ ಆಗಿಲ್ಲ ಎಂದು ಯೋಚಿಸುತ್ತಾ ಪ್ರಜ್ಞೆ ತಪ್ಪುತ್ತಾಳೆ. ಕೊನೆಗೆ ಎಲ್ಲರೂ ಅವಳನ್ನು ಕೂಗಿ ಕರೆದರೂ ಎಚ್ಚರಗೊಳ್ಳದ ಶ್ರಾವಣಿ ಸುಬ್ಬು ಮೇಡಂ ಎಂದು ಕರೆದಾಗ ಬೆಚ್ಚಿ ಎದ್ದೇಳುತ್ತಾಳೆ. ಇದನ್ನ ಕಂಡ ವಂದನಾಗೆ ಅಚ್ಚರಿಯಾದ್ರೂ ಉಳಿದವರೆಲ್ಲಾ ಶ್ರಾವಣಿಗೆ ಎಚ್ಚರ ಆಯ್ತಲ್ಲ ಎನ್ನುವ ಖುಷಿಯಲ್ಲೇ ಇರುತ್ತಾರೆ.

ಅಮೃತಧಾರೆ: ಮಲ್ಲಿ ಸೀಮಂತದಲ್ಲಿ ಮಹಿಮಾ-ಜೀವ ಎಲ್ಲಿ? ವೀಕ್ಷಕರ ಪ್ರಶ್ನೆ!

ಸದ್ಯಕ್ಕಂತೂ ಈ ಕ್ಯೂಟ್‌ ಲವ್‌ಸ್ಟೋರಿ ವೀಕ್ಷಕರ ಮನ ಗೆದ್ದಿದೆ. ಮುಂದೆ ಯಾವ ಟರ್ನ್ ತಗೊಳ್ಳಬಹುದು ಅಂತ ಅವರು ಕುತೂಹಲದಿಂದಿದ್ದಾರೆ. ಆದರೆ ಇಲ್ಲಿ ಒಂದಿಷ್ಟು ಜನಕ್ಕೆ ಸುಬ್ಬು ಮೇಲೆ ಜೀವನೇ ಇಟ್ಕೊಂಡಿರೋ ಶ್ರೀವಲ್ಲಿ ನೆನಪಾಗಿ ಅಯ್ಯೋ ಪಾಪ ಅಂತ ಅನಿಸಿಬಿಟ್ಟಿದೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios