ಸೀತಾರಾಮದ ಪ್ರಿಯಾ ಜೊತೆ ಕನ್ನಡತಿ ಹರ್ಷ: ಈ ಸೀರಿಯಲ್ ನೋಡಿದ್ರಾ?

ಸೀತಾರಾಮ ಸೀರಿಯಲ್ ನಟಿ ಮೇಘನಾ ಶಂಕರಪ್ಪ ಅವರ ಹಳೆಯ ಸೀರಿಯಲ್ ಕ್ಲಿಪ್ಪಿಂಗ್ ವೈರಲ್ ಆಗುತ್ತಿದೆ. ಈ ಕ್ಲಿಪ್ಪಿಂಗ್ ನಲ್ಲಿ ಮೇಘನಾ ಅವರು ಕನ್ನಡತಿ ಧಾರಾವಾಹಿಯ ಹರ್ಷ ಅವರ ಜೊತೆ ನಟಿಸಿದ್ದಾರೆ. ಈ ಸೀರಿಯಲ್ ಯಾವುದು ಅಂತ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

kannadati harsha and seetarama serial priya acted together in kinnari serial

ಮೇಘನಾ ಶಂಕರಪ್ಪ ಸೀತಾರಾಮ ಸೀರಿಯಲ್, ರಿಯಾಲಿಟಿ ಶೋಗಳಿಂದ ಸದ್ಯ ಮನೆಮಾತಾಗಿದ್ದಾರೆ. ಅವರು ಜನಪ್ರಿಯತೆ ಪಡೆಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಗಣಿಗಾರಿಕೆ ಆರಂಭವಾಗಿದೆ. ಅವರ ಹಳೇ ಸೀರಿಯಲ್‌ಗಳ ಕ್ಲಿಪ್ಪಿಂಗ್‌ಗಳೆಲ್ಲ ಮೇಲಕ್ಕೆ ಬಂದಿವೆ. ಅದರಲ್ಲಿ ಒಂದು ಕಡೆ ಕನ್ನಡತಿಯ ಹರ್ಷ ಮತ್ತು ಈ ಸೀತಾರಾಮದ ಮುದ್ದು ಹುಡುಗಿ ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ ಒಂದೇ ಫ್ರೇಮಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಅದು ಯಾವ ಸೀರಿಯಲ್ ಅಂತ ಈ ಕ್ಲಿಪ್ಪಿಂಗ್ ನೋಡಿದವರಿಗೆ ಗೊತ್ತಾಗದೇ ಹುಳ ಬಿಟ್ಟಂಗಾಗಿದೆ. ಜೊತೆಗೆ ಇವ್ರನ್ನು ಜೊತೆಯಾಗಿ ಎಲ್ ನೋಡಿದ್ದೀವಪ್ಪಾ ಅಂತ ತಲೆ ಕೆಡಿಸಿಕೊಳ್ಳೋಕೆ ಶುರು ಮಾಡಿದ್ದಾರೆ ಮೇಘನಾ ಫ್ಯಾನ್ಸ್. ಅಷ್ಟಕ್ಕೂ ಅದ್ಯಾವ ಸೀರಿಯಲ್ ಅಂತ ಗೊತ್ತಾದ್ರೆ ನಿಮಗೆ ಆಶ್ಚರ್ಯ ಆಗುತ್ತೆ. ಏಕೆಂದರೆ ನೀವೂ ಆ ಸೀರಿಯಲ್ ನೋಡಿರ್ತೀರಿ. ಆದರೆ ಅಷ್ಟೊತ್ತಿಗೆ ಈ ಮೇಘನಾ ಶಂಕರಪ್ಪ ಅವರಿಗೆ ಈ ಲೆವೆಲ್‌ನ ಪಾಪ್ಯುಲಾರಿಟಿ ಇರಲಿಲ್ಲವಾದ ಕಾರಣ ಅವರ ಪಾತ್ರ ಮನಸ್ಸಲ್ಲಿ ಉಳಿದಿರಲ್ಲ. ಆದರೆ ಈ ಸೀರಿಯಲ್ ಡೀಟೇಲ್ಸ್ ಎಲ್ಲ ಗೊತ್ತಾಗಿ ಬಿಟ್ರೆ ಈ ಹಳೆಯ ಸೀರಿಯಲ್, ಅದರಲ್ಲಿ ನಟಿಸುತ್ತಿದ್ದ ಕನ್ನಡತಿ ಹರ್ಷ ಕಿರಣ್ ರಾಜ್ ಅವರ ಪಾತ್ರ ಹಾಗೂ ಮೇಘನಾ ಶಂಕರಪ್ಪ ಅವರ ಕ್ಯಾರೆಕ್ಟರ್ ಎಲ್ಲ ಕಣ್ಮುಂದೆ ಬಂದರೂ ಬರಬಹುದು ಅನಿಸುತ್ತೆ.

ಈ ಮೇಘನಾ ಅವರು ವಾರಗಳ ಕೆಳಗೆ ಸೀರಿಯಲ್‌ನಿಂದ ತಾನು ಸಖತ್ತಾಗಿ ಎಂಟರ್‌ಟೈನ್ ಮಾಡುತ್ತಿದ್ದ ಡಿಕೆಡಿಯಿಂದ ಎಲ್ಲ ಬ್ರೇಕ್ ತಗೊಂಡ್ರು. ಫ್ಯಾನ್ಸ್‌ಗೆ ಶಾಕ್ ಆಗಿತ್ತು. ಏನಾಯ್ತಪ್ಪ ಈ ಚಿಟಪಟ ಮಾತಾಡೋ ಹುಡುಗಿಗೆ ಅಂತ. ಸೀತಾರಾಮ ಸೀರಿಯಲ್​ ಹಾಗೂ ಡಿಕೆಡಿ ಶೋನಲ್ಲಿ ಸಖತ್​ ಬ್ಯೂಸಿಯಾಗಿದ್ದ ನಟಿ ಮೇಘನಾ ಶಂಕರಪ್ಪ ಅವರು ಸ್ಕ್ರೀನ್ ಮೇಲೇ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದರು. ಅಯ್ಯೋ ದಿಢೀರ್ ಅಂತ ನಟಿ ಮೇಘನಾ ಅವರಿಗೆ ಏನಾಯ್ತು? ಸೀರಿಯಲ್​ನಲ್ಲೂ ಇಲ್ಲ, ಇತ್ತ ಡಿಕೆಡಿ ಶೋನಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಂತ ಬೇಸರಗೊಂಡಿದ್ದರು. ಹೀಗಾಗಿ ಅಭಿಮಾನಿಗಳು ಅವರ ಪರ್ಸನಲ್ ಅಕೌಂಟ್​ಗೆ ಮೆಸೇಜ್​ ಮಾಡುವ ಮೂಲಕ ಕಳವಳ ವ್ಯಕ್ತ ಪಡಿಸಿದ್ದರು. ಅದಕ್ಕಾಗಿಯೇ ನಟಿ ಮೇಘನಾ ಶಂಕರಪ್ಪ ಅವರು ಖುದ್ದಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಡಬೇಕಾಯಿತು.

ರೀ ಡೈರೆಕ್ಟ್ರೇ, ಶ್ರೀರಸ್ತು ಶುಭಮಸ್ತುನಲ್ಲಿ ತುಳಸೀಗೇ ಮಗು ಆಗ್ತಿದೆಯಂತೆ, ಭೂಮಿಕಾಗೆ ಆಗಲ್ವಾ? ನೆಟ್ಟಿಗರ ತರಾಟೆ!

ಮೇಘನಾ ಅವರ ಕಣ್ಣಿನ ಮೇಲೆ ಅಂದ್ರೆ ಹುಬ್ಬಿನ ಕೆಳಗೆ ಹರ್ಪಿಸ್ ಜೋಸ್ಟರ್ ಆಗಿತ್ತು. ಹರ್ಪಿಸ್ ಜೋಸ್ಟರ್ ಅನ್ನು ಕನ್ನಡದಲ್ಲಿ ಸರ್ಪಸುತ್ತು ಎಂದು ಕರೆಯಲಾಗುತ್ತದೆ. ಈ ಹರ್ಪಿಸ್ ಜೋಸ್ಟರ್ ಒಂದು ವೈರಲ್ ಸೋಂಕು. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಬಹುದು. ಇದು ಬಂದಮೇಲೆ ಬಹಳ ನೋವು ಅನುಭವಿಸಬೇಕಾಗುತ್ತದೆ. ಹೀಗಾಗಿ ವೈದ್ಯರು ನಟಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದರು. ಅದಕ್ಕಾಗಿ ನಟಿ ಸೀತಾರಾಮ ಸೀರಿಯಲ್​​ ಹಾಗೂ ಡಿಕೆಡಿ ಶೋನಲ್ಲಿ ಕಾಣಸಿಕೊಳ್ಳಲಾಗಿಲ್ಲ. ಆಮೇಲೆ ಹಳೆಯ ಲವಲವಿಕೆಯಿಂದ ಕಾಣಿಸಿಕೊಳ್ಳೋ ಜೊತೆಗೆ ಗ್ಲಾಮರಸ್ ಪೋಟೋವನ್ನೂ ಹಾಕಿದ್ರು.

ಇದೀಗ ಸೀರಿಯಲ್‌ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಅಶೋಕ್ ಜೊತೆ ರಾಮ ನಗರ ಬೆಟ್ಟದಲ್ಲಿ ಇವರ ಸೀನ್ ನಡೀತಾ ಇದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಪ್ರಿಯಾಗೆ ವಿಷಯ ತಿಳಿಸದೇ ಅವಳನ್ನು ಅಶೋಕ್ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ.

ಅಮೃತಧಾರೆ: ಮಲ್ಲಿ ಸೀಮಂತದಲ್ಲಿ ಮಹಿಮಾ-ಜೀವ ಎಲ್ಲಿ? ವೀಕ್ಷಕರ ಪ್ರಶ್ನೆ!

ಇನ್ನು ಮೇನ್ ವಿಷಯಕ್ಕೆ ಬಂದರೆ ಕನ್ನಡತಿಯ ಹರ್ಷ ಮತ್ತು ಸೀತಾರಾಮದ ಪ್ರಿಯಾ ಜೊತೆಯಾಗಿ ನಟಿಸಿದ ಸೀರಿಯಲ್ ಕಿನ್ನರಿ. ಈ ಸೀರಿಯಲ್‌ ಮೂಲಕವೇ ನಿರೂಪಕಿಯಾಗಿದ್ದ ಮೇಘನಾ ಸೀರಿಯಲ್ ಜಗತ್ತಿಗೆ ಕಾಲಿಟ್ಟರು. ಈ ಸೀರಿಯಲ್‌ನಲ್ಲಿ ಅವರ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಜೊತೆಗೆ ಅವರಿಗೆ ಜನಪ್ರಿಯತೆಯನ್ನೂ ತಂದಿತ್ತು.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios