ತುಳಿಸಿ ಮನೆ ಬಾಗಿಲಿಗೆ ಬಂದ ಅವಿನಾಶ್; ಇನ್ನೇನು 'ಗ್ರಹಚಾರ' ಕಾದಿದೆಯೋ ಎಂದ ವೀಕ್ಷಕರು!

ತುಳಸಿ (ಸುಧಾರಾಣಿ) ಮನೆಗೆ ಅವಿನಾಶ್ ಬಂದಿದ್ದಾನೆ. ಆತ ಈಗ ಬಂದಿರುವ ಉದ್ದೇಶವೇನು?  ಸಡನ್ನಾಗಿ ಮನೆಗೆ ಬಂದಿರುವ ಅವಿನಾಶ್ ನೋಡಿ ತುಳಸಿ ಮನದಲ್ಲಿ ಯಾವ ಭಾವನೆಗಳು ಬಂದು  ಆಕೆ ಒದ್ದಾಡುತ್ತಿದ್ದಾಳೆ? ಮನೆಗೆ ಬಂದ ಅವಿನಾಶ್‌ನನ್ನು ನೋಡಿ ಶಾಕ್ ಆಗುವ ತುಳಸಿ!

Zee Kannada serial Shreerastu Shubhamastu takes turning point in story line srb

ಕನ್ನಡದ ಸೀರಿಯಲ್ ಲೋಕದಲ್ಲಿ ಸಾಕಷ್ಟು ಸೀರಿಯಲ್‌ಗಳು ವೀಕ್ಷಕರ ಮೆಚ್ಚುಗೆ ಗಳಿಸುತ್ತ ವರ್ಷಗಳನ್ನೂ ಮೀರಿ ಪ್ರಸಾರ ಕಾಣುತ್ತಿದೆ. ಈ ಸಾಲಿನಲ್ಲಿ ಜೀ ಕನ್ನಡದ 'ಶ್ರೀರಸ್ತು ಶುಭಮಸ್ತು ' ಧಾರಾವಾಹಿ ಕೂಡ ಒಂದು. 'ತುಳಸಿ' ಪಾತ್ರದ ಮೂಲಕ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸೀರಿಯಲ್, ಇದೀಗ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇಂದು ಬಿಡುಗಡೆಯಾಗಿರುವ ಪ್ರೋಮೋ ಇದೀಗ ತೀವ್ರ ಕುತೂಹಲ ಕೆರಳಿಸುತ್ತಿದೆ. 

ಇದೀಗ ಬಿಡುಗಡೆಯಾಗಿರುವ ಪ್ರೋಮೋ ನೋಡಿದರೆ, ತುಳಸಿ (ಸುಧಾರಾಣಿ) ಮನೆಗೆ ಅವಿನಾಶ್ ಬಂದಿದ್ದಾನೆ. ಆತ ಈಗ ಬಂದಿರುವ ಉದ್ದೇಶವೇನು?  ಸಡನ್ನಾಗಿ ಮನೆಗೆ ಬಂದಿರುವ ಅವಿನಾಶ್ ನೋಡಿ ತುಳಸಿ ಮನದಲ್ಲಿ ಯಾವ ಭಾವನೆಗಳು ಬಂದು  ಆಕೆ ಒದ್ದಾಡುತ್ತಿದ್ದಾಳೆ? ಮನೆಗೆ ಬಂದ ಅವಿನಾಶ್‌ನನ್ನು ನೋಡಿ ಶಾಕ್ ಆಗುವ ತುಳಸಿ, ಆತನನ್ನು ಸ್ವಾಗತಿಸುವ ಪರಿ ಹೇಗೆ? ಮುಂದೇನು ಕಾದಿದೆ? ಎಂಬ ತೀವ್ರ ಕುತೂಹಲ ಕೆರಳಿಸುವ ಇಂದಿನ ಪ್ರೊಮೋಗೆ ಉತ್ತರ ಸಿಗಲು ಇಂದಿನ ಸಂಚಿಕೆ ನೋಡಬೇಕು. 

ಸಲ್ಮಾನ್ ಖಾನ್-ಕತ್ರಿನಾ ಕೈಫ್ ಜೋಡಿಯ 'ಟೈಗರ್ 3' ಟ್ರೈಲರ್ ರಿಲೀಸ್ ಡೇಟ್‌ ಕನ್ಫರ್ಮ್!

'ಪೂರ್ಣಿ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡೋಕೆ ಏನೋ ತಂದಿರುವ ಅವಿನಾಶ್, ಇದನ್ನೇ ಕೊಡಲಾ ಎಂದು ತುಳಸಿಯನ್ನು ಕೇಳಲು ಹೀಗೆ ಸಡನ್ನಾಗಿ ಬಂದಿದ್ದಾನೆ . ಅವಳನ್ನು ಪೂರ್ಣೀ ಮನೆಗೆ ಕರೆದುಕೊಂಡು ಹೋಗೋಕೆ, ಹೆಂಡತಿಯನ್ನು ಖುಸಹಿ ಪಡಿಸೋಕೆ ಹೀಗೆ ಅವಿನಾಶ್ ಮನೆಗೆ ಬಂದಿದ್ದಾನೆ' ಎನ್ನುವುದು ಕೆಲವು ವೀಕ್ಷಕರ ಅಭಿಪ್ರಾಯ. ಅದೇನು ಅಂತ ನೋಡಲು ಇಂದಿನ ಸಂಚಿಕೆ ಮಿಸ್ ಮಾಡದೇ ನೋಡಲೇಬೇಕು. ಏಕೆಂದರೆ, ಕುತೂಹಲ ತಣಿಸಲು ಇನ್ಯಾವ ದಾರಿಯೂ ಇಲ್ಲ!

ಬಿಗ್​ಬಾಸ್​ ಸ್ಪರ್ಧಿಗಳ ಆಯ್ಕೆ ಮಾನದಂಡದ ಕುರಿತ ಪ್ರಶ್ನೆಗೆ ಸುದೀಪ್​ ಗರಂ: ಏನ್​ ಹೇಳಿದ್ರು ಕೇಳಿ

ಇದೀಗ 'ತುಳಿಸಿಯನ್ನು ಮನೆಗೆ ಕರೆದುಕೊಂಡು ಹೋಗಲೆಂದೇ ಬಂದಿದ್ದಾನೆ ಅವಿನಾಶ್' ಎಂಬ ಸಂದೇಶ ಹೊತ್ತ ಇನ್ನೊಂದು ಪ್ರೋಮೋ ರಿಲೀಸ್ ಆಗಿದೆ. ಹಾಗಿದ್ದರೆ ಇದ್ದಕ್ಕಿದ್ದಂತೆ ಹೆಂಡತಿಯನ್ನು ನೆನಪಿಸಿಕೊಂದು ಅವಿನಾಶ್ ಮನೆಗೇ ಬಂದಿದ್ದೇಕೆ? ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ  'ಶ್ರೀರಸ್ತು ಶುಭಮಸ್ತು ' ಧಾರಾವಾಹಿ..

 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios