ಸಲ್ಮಾನ್ ಖಾನ್-ಕತ್ರಿನಾ ಕೈಫ್ ಜೋಡಿಯ 'ಟೈಗರ್ 3' ಟ್ರೈಲರ್ ರಿಲೀಸ್ ಡೇಟ್‌ ಕನ್ಫರ್ಮ್!

ಕಳೆದ ತಿಂಗಳ ಕೊನೆಯಲ್ಲಿ ಟೈಗರ್ 3 ಚಿತ್ರದ ಟೀಸರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡಿತ್ತು. ಇದರಲ್ಲಿ ಚಿತ್ರದ ನಾಯಕ ನಟ ಸಲ್ಮಾನ್ ಖಾನ್ ಹೇಳಿರುವ ಡೈಲಾಗ್‌ಗಳು ಭಾರೀ ಸದ್ದು ಮಾಡಿದ್ದವು. ಜತೆಗೆ, ಡೈಲಾಗ್ ಉದ್ದೇಶಪೂರ್ವಕವಾಗಿ ಹೇಳಿಸಲಾಗಿದೆ ಎಂಬ ಚರ್ಚೆ ಜೋರಾಗಿಯೇ ನಡೆದಿದೆ.

Salman Khan Tiger 3 movie trailer release on mid October 2023 srb

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯ 'ಟೈಗರ್ 3' ಚಿತ್ರವು ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದಕ್ಕೂ ಮೊದಲು, ಅಂದರೆ ಅಕ್ಟೋಬರ್ ಮಧ್ಯೆ, 15-16 ಅಷ್ಟರಲ್ಲಿ ಈ ಚಿತ್ರದ ಟ್ರೇಲರ್ ಹೊರಬೀಳಲಿದೆ ಎನ್ನಲಾಗಿದೆ. ಈ ಸಂಗತಿ ಆಫೀಸಿಯಲ್ ಆಗಿ ಕನ್ಫರ್ಮ್ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕತ್ರಿನಾ-ಸಲ್ಮಾನ್ ಜೋಡಿಯ ಅಭಿಮಾನಿಗಳು ಟ್ರೈಲರ್ ನೋಡಿ ಖುಷಿಯಿಂದ ಕುಣಿದಾಡಬಹುದು. 

ಕಳೆದ ತಿಂಗಳ ಕೊನೆಯಲ್ಲಿ ಟೈಗರ್ 3 ಚಿತ್ರದ ಟೀಸರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡಿತ್ತು. ಇದರಲ್ಲಿ ಚಿತ್ರದ ನಾಯಕ ನಟ ಸಲ್ಮಾನ್ ಖಾನ್ ಹೇಳಿರುವ ಡೈಲಾಗ್‌ಗಳು ಭಾರೀ ಸದ್ದು ಮಾಡಿದ್ದವು. ಜತೆಗೆ, ಡೈಲಾಗ್ ಉದ್ದೇಶಪೂರ್ವಕವಾಗಿ ಹೇಳಿಸಲಾಗಿದೆ ಎಂಬ ಚರ್ಚೆ ಜೋರಾಗಿಯೇ ನಡೆದಿದೆ. 'ಭಾರತಕ್ಕೆ 20 ವರ್ಷ ಕೆಲಸ ಮಾಡಿದ ಬಳಿಕವೂ ನಾನು ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೇಳಬೇಕಾಗಿದೆ' ಎಂಬ ಡೈಲಾಗ್ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. 

ನನ್ ಕರ್ಮ, ಯಾವ ಮದ್ವೆಯೂ ಇಲ್ಲ: ಮದುವೆ ಬಗ್ಗೆ ಮಂಗ್ಲಿ ಪ್ರತಿಕ್ರಿಯೆ

ಮುಂಬರುವ ಟ್ರೈಲರ್ ಬಹಳಷ್ಟು ಸುದ್ದಿ-ಸದ್ದು ಮಾಡುವುದು ಖಂಡಿತ ಎನ್ನಲಾಗುತ್ತಿದೆ. ಕಾರಣ, ಈ ಚಿತ್ರದ ನಿರ್ಮಾಪಕರು ಇಷ್ಟಪಟ್ಟು ಮಾಡಿ ಈ ಟ್ರೈಲರ್ ಹೊರತರಲು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರದ ಜೀವಾಳವನ್ನೇ ಕುತೂಹಲ ಕೆರಳಿಸುವಂತೆ ಈ ಟ್ರೈಲರ್‌ನಲ್ಲಿ ಕಟ್ಟಿಕೊಡಲಾಗುವುದು ಎಂಬುದು ಚಿತ್ರತಂಡದ ಮಾತು. ಒಟ್ಟಿನಲ್ಲಿ, 'ಟೈಗರ್ 3' ಚಿತ್ರದ ಮುಂಬರುವ ಟ್ರೈಲರ್‌ಗಾಗಿ ಈ ಸುದ್ದಿ ಮೂಲಕ ಭಾರೀ ನಿರೀಕ್ಷೆ ಹುಟ್ಟುಹಾಕಿದಂತಾಗಿದೆ. 

ಸೀರಿಯಲ್‌ಗೆ ಗುಡ್‌ ಬೈ ಹೇಳಿ ವೆಬ್‌ ಸೀರೀಸ್‌ನತ್ತ ಜ್ಯೋತಿ ರೈ

Latest Videos
Follow Us:
Download App:
  • android
  • ios