Asianet Suvarna News Asianet Suvarna News

ಬನ್ಸಾಲಿ 'ಬಾಜಿರಾವ್ ಮಸ್ತಾನಿ'ಗೆ ಮೊದಲ ಆಯ್ಕೆ ಬಿಗ್ ಸ್ಟಾರ್, ಬಳಿಕ ದೀಪಿಕಾ ಕಾಲಿಟ್ಟಿದ್ದು ಹೇಗೆ?

ಸಂಜಯ್ ಲೀಲಾ ಬನ್ಸಾಲಿ ಸೂಪರ್ ಹಿಟ್ ಚಿತ್ರಗಳಲ್ಲಿ 2015 ರಲ್ಲಿ ರಿಲೀಸ್ ಆದ 'ಬಾಜಿರಾವ್ ಮಸ್ತಾನಿ' ಹಾಗೂ 2018 ರಲ್ಲಿ ಬಿಡುಗಡೆಯಾದ 'ಪದ್ಮಾವತ್' ಚಿತ್ರಗಳು ಸೇರಿವೆ. ಈ ಚಿತ್ರಗಳ ಮೂಲಕ ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಮೇಲೇರಿದ್ದರು ಎಂಬುದು ಈಗ ಇತಿಹಾಸ. 

Bajirao Mastani in 2003 with Salman Khan and Aishwarya Rai first choice srb
Author
First Published Nov 1, 2023, 2:56 PM IST

ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ ಕಂಡ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರು. ಅವರು ಹಿಂದಿ ಚಿತ್ರರಂಗಕ್ಕೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬನ್ಸಾಲಿ ಸೂಪರ್ ಹಿಟ್ ಚಿತ್ರಗಳಲ್ಲಿ 2015 ರಲ್ಲಿ ರಿಲೀಸ್ ಆದ 'ಬಾಜಿರಾವ್ ಮಸ್ತಾನಿ' ಹಾಗೂ 2018 ರಲ್ಲಿ ಬಿಡುಗಡೆಯಾದ 'ಪದ್ಮಾವತ್' ಚಿತ್ರಗಳು ಸೇರಿವೆ. ಈ ಚಿತ್ರಗಳ ಮೂಲಕ ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಮೇಲೇರಿದ್ದರು ಎಂಬುದು ಈಗ ಇತಿಹಾಸ. ಆದರೆ, ಪದ್ಮಾವತಿ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ದೀಪಿಕಾ ಅಲ್ಲ, ಬದಲಿಗೆ ಬೇರೊಬ್ಬರು ನಟಿ. 

ಹೌದು, ನಟಿ ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ಅವರ ಎರಡನೇ ಆಯ್ಕೆ. ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರದ ನಾಯಕ ನಟ ರಣವೀರ್ ಸಿಂಗ್ ಕೂಡ ಮೊದಲ ಆಯ್ಕೆಯಲ್ಲ. ಸಂಜಲ್ ಲೀಲಾ ಬನ್ಸಾಲಿ ಸ್ಕ್ರಿಪ್ಟ್ ಮುಗಿಸಿದ ತಕ್ಷಣ ಕಾಲ್ ಶೀಟ್ ಕೇಳಿದ್ದು ನಟ ಸಲ್ಮಾನ್ ಖಾನ್ ಅವರದು. ನಾಯಕಿ ಅವರ ಮನಸ್ಸಲ್ಲಿ ಮೊದಲೇ ಫಿಕ್ಸ್ ಆಗಿತ್ತು. ಆದರೆ, ಸಲ್ಮಾನ್ ಖಾನ್ ಬ್ಯುಸಿ ಇದ್ದ ಕಾರಣ ಅದು ಬಳಿಕ ರಣವೀರ್ ಸಿಂಗ್ ಪಾಲಾಗಿದೆ. ಅಷ್ಟರಲ್ಲಿ ಸಂಜಯ್ ಲೀಲಾ ಬನ್ಸಾಲಿಗೆ ಓಕೆ ಅಂದಿದ್ದ ನಟಿ ಬ್ಯುಸಿ ಆಗಿಬಿಟ್ಟಿದ್ದಾರೆ. 

ಎಲ್ಲಿದ್ದೇವೆ ಅನ್ನೋದನ್ನೂ ಮರೆತು ದೀಪಿಕಾಗೆ ರಣವೀರ್ ಕಿಸ್​​: ಪಬ್ಲಿಸಿಟಿ ಹುಚ್ಚು ಬಿಟ್ಟಿಲ್ವಾ ಅಂತಿದ್ದಾರೆ ಫ್ಯಾನ್ಸ್​!

ಇತ್ತ, ರಣವೀರ್ ಸಿಂಗ್‌ ಹೀರೋ ಆಗಿ ಆಯ್ಕೆಯಾಗಿದ್ದರೆ ಅತ್ತ ತಮ್ಮ ಈ ಎರಡೂ ಚಿತ್ರದ ನಾಯಕಿ ಐಶ್ವರ್ಯಾ ರೈ ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅಂದುಕೊಂಡಿದ್ದರು. ಆದರೆ, ಹೀರೋ ಆಯ್ಕೆ ಬದಲಾಗುವಷ್ಟರಲ್ಲಿ ನಟಿ ಐಶೂ ಕೂಡ ಬನ್ಸಾಲಿಯವರ ಕೈಗೆ ಸಿಗದಷ್ಟು ಬ್ಯುಸಿ ಆಗಿಬಿಟ್ಟರು. ಹೀಗಾಗಿ, ನಟ ರಣವೀರ್ ಸಿಂಗ್ ಸಲಹೆಯಂತೆ ಈ ಎರಡೂ ಚಿತ್ರಗಳಿಗೆ ನಾಯಕಿಯಾಗಿ ನಟಿ ದೀಪಿಕಾ ಪಡುಕೊಣೆ ಬರುವಂತಾಯಿತು. ಬಾಲಿವುಡ್ ಚಿತ್ರಪ್ರೇಮಿಗಳು ಐಶ್ವರ್ಯಾ ರೈ ಜಾಗದಲ್ಲಿ ನಟಿ ದೀಪಿಕಾರನ್ನು ನೋಡಬೇಕಾಯಿತು. 

ಯೋಗಿ ಆದಿತ್ಯನಾಥರಿಗೆ 'ತೇಜಸ್'​ ಚಿತ್ರದ ವಿಶೇಷ ಷೋ: ಸಿನಿಮಾ ನೋಡಿ ಕಣ್ಣೀರಾದ ಮುಖ್ಯಮಂತ್ರಿ

ಒಟ್ಟಿನಲ್ಲಿ, 2015ನ ಬಾಜಿರಾವ್ ಮಸ್ತಾನಿ ಹಾಗೂ 2018ರ ಪದ್ಮಾವತ್, ಈ ಎರಡೂ ಚಿತ್ರಗಳು ಸೂಪರ್ ಹಿಟ್ ದಾಖಲಿಸುವ ಮೂಲಕ ಬಾಲಿವುಡ್‌ನಲ್ಲಿ ನಟಿ ದೀಪಿಕಾ ಗ್ರಾಫ್ ಭಾರೀ ಮೇಲಕ್ಕೆ ಹೋಯಿತು. ಆದರೆ, ನಟಿ ಐಶ್ವರ್ಯಾ ರೈ ಇದ್ದಲ್ಲೇ ಇರುವಂತಾಯಿತು. ಆದರೆ, ನಟಿ ಐಶೂ ಈ ಬಗ್ಗೆ ಖಂಡಿತ ತಲೆ ಕೆಡಿಸಿಕೊಂಡಿಲ್ಲ, ಕಾರಣ ಅವರು ಅದಾಗಲೇ ಸಾಕಷ್ಟು ಸಕ್ಸಸ್ ಕಂಡಿರುವ ಸೀನಿಯರ್ ನಟಿ ಆಗಿದ್ದರು. ಅಂದಹಾಗೆ, ಈ ಎರಡೂ ಚಿತ್ರಗಳಲ್ಲಿ ನಟಿಸಿದ್ದ ನಟ ರಣವೀರ್-ನಟಿ ದೀಪಿಕಾ ಇಬ್ಬರೂ ಬಳಿಕ ನಿಜ ಜೀವನದಲ್ಲೂ ಜೋಡಿಯಾಗಿದ್ದು ಈಗ ಇತಿಹಾಸ!

Follow Us:
Download App:
  • android
  • ios