Asianet Suvarna News Asianet Suvarna News

ಹಾಡುಗಾರ-ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅಕಾಲಿಕ ನಿಧನ

ಮನೋಜ್ ವಸಿಷ್ಠ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ಇಂದು (01 ನವೆಂಬರ್ 2023) ಮಧ್ಯಾನ್ಹ 12 ಗಂಟೆಯ ನಂತರ ಆಮಿಟಿ ದೇವಸ್ಥಾನ ಬೇ ಅಪಾರ್ಟ್ಮೆಂಟ್ (Amity temple Bay Apartment), ಜಯನಗರ, ಹೌಸಿಂಗ್ ಸೊಸೈಟಿ ಬಳಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

Karnataka Singer and Music Composer Manoj Vasista death srb
Author
First Published Nov 1, 2023, 3:40 PM IST

ಕರ್ನಾಟಕ ಕಲಾವಿದರ ಸಂಘದ ಸದಸ್ಯ, ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅವರು ನಮ್ಮನ್ನು ಅಗಲಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಮನೋಜ್ ವಸಿಷ್ಠ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಕಲಾವಿದರ ಸಂಘದ ಸದಸ್ಯರೂ ಆಗಿದ್ದ ಮನೋಜ್ ವಸಿಷ್ಠ ಅವರು ಬಹುಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. 

ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ಇಂದು (01 ನವೆಂಬರ್ 2023) ಮಧ್ಯಾನ್ಹ 12 ಗಂಟೆಯ ನಂತರ ಆಮಿಟಿ ದೇವಸ್ಥಾನ ಬೇ ಅಪಾರ್ಟ್ಮೆಂಟ್ (Amity temple Bay Apartment), ಜಯನಗರ, ಹೌಸಿಂಗ್ ಸೊಸೈಟಿ ಬಳಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಕ, ಸಂಗೀತ ನಿರ್ದೇಶಕ ಮನೋಜ್ ವಸಿಷ್ಠ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೋಜ್ ಅವರು ಮೂಲತಃ ತುಮಕೂರಿನವರಾಗಿದ್ದಾರೆ. 

ಯೋಗಿ ಆದಿತ್ಯನಾಥರಿಗೆ 'ತೇಜಸ್'​ ಚಿತ್ರದ ವಿಶೇಷ ಷೋ: ಸಿನಿಮಾ ನೋಡಿ ಕಣ್ಣೀರಾದ ಮುಖ್ಯಮಂತ್ರಿ

ಕನ್ನಡ ಕೋಗಿಲೆ ಸೇರದಂತೆ ಹಲವಾರು ಟಿವಿ ರಿಯಾಲಿಟಿ ಶೋಗಳಲ್ಲಿ ಅವರು ತಮ್ಮ ಸಂಗೀತದ ಸುಧೆ ಹರಿಸಿದ್ದರು. ಕರ್ನಾಟಕದ ಆಚೆಗೂ ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಪರಿಚಯವಾಗಿದ್ದ ಮನೋಜ್, ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರ ಹೆಂಡತಿ ಅರುಂಧತಿ ಕೂಡ ಗಾಯಕಿಯಾಗಿದ್ದು, ಇತ್ತೀಚೆಗಷ್ಟೇ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಈಗ ಗಂಡನನ್ನು ಕೂಡ ಕಳೆದಕೊಂಡ ಅವರ ಪರಿಸ್ಥಿತಿ ಶೋಚನೀಯವಾಗಿದೆ ಎನ್ನಲಾಗುತ್ತಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಫೋಸ್ಟ್‌ಗಳು ಬಂದಿವೆ.

ಬನ್ಸಾಲಿ 'ಬಾಜಿರಾವ್ ಮಸ್ತಾನಿ'ಗೆ ಮೊದಲ ಆಯ್ಕೆ ಬಿಗ್ ಸ್ಟಾರ್, ಬಳಿಕ ದೀಪಿಕಾ ಕಾಲಿಟ್ಟಿದ್ದು ಹೇಗೆ?

ಕಳೆದ ಕೆಲವು ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ತೆಗೆದುಕೊಳ್ಳುತ್ತ ನೋವು ಅನುಭವಿಸುತ್ತಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ. ಅನಾರೋಗ್ಯದಲ್ಲಿ ಬಳಲುತ್ತಿದ್ದರೂ ತಾವು ಆದಷ್ಟು ಬೇಗ ಗುಣಮುಖರಾಗಿ ಇನ್ನು ಹೆಚ್ಚಿನ ಸಾಧನೆ ಮಾಡಲಿರುವುದಾಗಿ ಆಪ್ತರ ಬಳಿ ಅವರು ಹೇಳಿಕೊಳ್ಳುತ್ತಲೇ ಇದ್ದರು ಎನ್ನಲಾಗಿದೆ. ಆದರೆ, ಅವರ ಆಸೆ ಈಡರೆಲೇ ಇಲ್ಲ, ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಅವರು ಅಸುನೀಗಿದ್ದಾರೆ. ಒಟ್ಟಿನಲ್ಲಿ ಸಂಗೀತ ಲೋಕ ಪ್ರತಿಭಾನ್ವಿತ ಗಾಯಕ, ಸಂಗೀತ ಸಂಯೋಜಕರೊಬ್ಬರನ್ನು ಕಳೆದುಕೊಂಡಿದೆ.

Follow Us:
Download App:
  • android
  • ios