ಭಾರೀ ಮಳೆಯಲ್ಲಿ ನಿಂತು ಅಳುತ್ತಿರುವ ಗೌತಮ್, ಸಡನ್ನಾಗಿ ಬಂದು ಭೂಮಿ ಹೇಳಿದ್ದೇನು?
ಅಮೃತಧಾರೆ ಸೀರಿಯಲ್ ಚಿತ್ರಕಥೆಯಲ್ಲಿ ಹಲವು ತಿರುವುಗಳು ಗೋಚರಿಸುತ್ತಿವೆ. ಮನೆಯಲ್ಲಿ ಒಬ್ಬಂಟಿಯಾಗಿ ತನ್ನ ಸ್ನೇಹಿತ ಆನಂದನ ಬಗ್ಗೆ ಯೋಚಿಸಿ ಅಳುತ್ತಿದ್ದಾನೆ. ಗೌತಮ್ ಕ್ಲೋಸ್ ಫ್ರಂಡ್ ಆನಂದನ ಮೇಲೆ ಕಳ್ಳತನದ ಆರೋಪ ಬಂದಿದೆ. ಅದನ್ನು ಸಾಕ್ಷಿ ಸಮೇತ ನೋಡಿದ ಗೌತಮ್ ಏನು ಮಾಡಲೂ ಅಸಮರ್ಥನಾಗಿದ್ದಾನೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕಥಾ ನಾಯಕ ಗೌತಮ್ ಜೀವನದಲ್ಲಿ ಬರೀ ಸಮಸ್ಯೆಗಳೇ ಬರುತ್ತಿವೆ. ಗೌತಮ್ ಇತ್ತೀಚೆಗೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮನೆಯವರ ಮುಂದೆ ಸ್ನೇಹಿತನ ಬಗ್ಗೆ ಹೇಳಿಕೊಳ್ಳಲಾಗದೇ ಚಡಪಡಿಸುತ್ತಿದ್ದಾನೆ. ಆತ ನೋವು ನುಂಗಿಕೊಳ್ಳುತ್ತ, ಹಲವು ರೀತಿಯಲ್ಲಿ ಸತ್ಯ ಹುಡುಕುವ ಪ್ರಯತ್ನ ಮಾಡುತ್ತ ಅದಕ್ಕಾಗಿ ಕಾಯುತ್ತಿದ್ದಾನೆ. ಆದರೆ, ಗೌತಮ್ ಪಾಲಿಗೆ ಈಗ ಬರೀ ಕತ್ತಲೆ ಕಾಡುತ್ತಿದೆ.
ಅಮೃತಧಾರೆ ಸೀರಿಯಲ್ ಚಿತ್ರಕಥೆಯಲ್ಲಿ ಗೌತಮ್ ಮನೆಯಲ್ಲಿ ಒಬ್ಬಂಟಿ ಎಂಬಂತಾಗಿದ್ದಾನೆ. ಕಾರಣ, ಅಮೃತಧಾರೆ ಸೀರಿಯಲ್ ಚಿತ್ರಕಥೆಯಲ್ಲಿ ಹಲವು ತಿರುವುಗಳು ಗೋಚರಿಸುತ್ತಿವೆ. ಮನೆಯಲ್ಲಿ ಒಬ್ಬಂಟಿಯಾಗಿ ತನ್ನ ಸ್ನೇಹಿತ ಆನಂದನ ಬಗ್ಗೆ ಯೋಚಿಸಿ ಅಳುತ್ತಿದ್ದಾನೆ. ಗೌತಮ್ ಕ್ಲೋಸ್ ಫ್ರಂಡ್ ಆನಂದನ ಮೇಲೆ ಕಳ್ಳತನದ ಆರೋಪ ಬಂದಿದೆ. ಅದನ್ನು ಸಾಕ್ಷಿ ಸಮೇತ ನೋಡಿದ ಗೌತಮ್ ಏನು ಮಾಡಲೂ ಅಸಮರ್ಥನಾಗಿದ್ದಾನೆ.
ಗೌತಮ್ ಮನದಲ್ಲಿ ನೋವು ಮಡುಗಟ್ಟಿದೆ. ತಾಕಲಾಟ ತಾಳಲಾರದೇ ಒದ್ದಾಡುತ್ತಿದ್ದಾನೆ. ತನ್ನ ಹೃದಯಮಿತ್ರ ಆನಂದನ ಮೇಲೆ ಕಳ್ಳತನದ ಆರೋಪ ಬಂದಾಗ ಆತ ಅದನ್ನು ನಂಬಲು ಸಿದ್ಧನಿರಲಿಲ್ಲ. ಆದರೆ, ಸಿಟಿ ಟಿವಿ ಫೂಟೇಜ್ ನೋಡಿದ ಮೇಲೆ ಅನಿವಾರ್ಯವಾಗಿ ಗೌತಮ್ ಅದನ್ನು ನಂಬಲೇಬೇಕಾಗಿದೆ. ಆದರೆ, ತಾನು ಈಗ ಅಸಹಾಯಕ ಎಂಬ ಭಾವ ಮೂಡಿ ಆನಂದನ ಮನೆಯ ಮುಂದೆ ನಿಂತು ಗೌತಮ್ ಮಳೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾನೆ. ಗೌತಮ್ ಮಳೆಯಲ್ಲಿ ನಿಂತು ಅಳುತ್ತಿರಲು ಈ ಬಗ್ಗೆ ಗೊತ್ತಿಲ್ಲದೇ ಎಲ್ಲಿಂದಲೋ ಬಮದ ಭೂಮಿ 'ಯಾಕೆ ಈ ತರ ಮಳೆಯಲ್ಲಿ ನೆನೆಯುತ್ತಿದ್ದೀರಾ' ಎಂದು ಕೇಳಲು '30 ಮಿಲಿಯನೇರ್ ಗೌತಮ್ ಎಲ್ಲರ ಮುಂದೆ ಅಳಬಾರದು ಅಲ್ಲವೇ' ಎನ್ನುತ್ತಾನೆ ಗೌತಮ್. ಆತನ ಮಾತಿಗೆ ಉತ್ತರ ಕೊಡಲು ಭೂಮಿ ಪ್ರಯತ್ನಿಸಿ ಸೋತಿದ್ದಾಳೆ. ಕಾರಣ, ಆಕೆಗೆ ಆತನ ಮನದ ದುಗುಡ ಏನೆಂಬ ಅರಿವಿದೆ.
ಪ್ರಭಾಸ್ ಮದುವೆಗೆ ಭಾರೀ ಸಮಸ್ಯೆ, ಅನುಷ್ಕಾ ಶೆಟ್ಟಿ ಬಗ್ಗೆ ನಮಗೇನೂ ತೊಂದರೆಯಿಲ್ಲ; ಪ್ರಭಾಸ್ ಫ್ಯಾಮಿಲಿ
ಒಟ್ಟಿನಲ್ಲಿ, ಇತ್ತೀಚೆಗೆ ಜೋ ಕನ್ನಡದ ಸೀರಿಯಲ್ ಅಮೃತಧಾರೆ ಹೆಚ್ಚಿನ ಕುತೂಹಲ ಕೆರಳಿಸುತ್ತಿದ್ದು, ವೀಕ್ಷಕರು ಈ ಸೀರಿಯಲ್ ಸಂಚಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಅಮೃತಧಾರೆ ಸೀರಿಯಲ್ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7.00 ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ನಲ್ಲಿ ಹಿರಿಯ ನಟಿ ವನಿತಾ ವಾಸು ಸೇರಿದಂತೆ ರಾಜೇಶ್ ನಟರಂಗ, ಛಾಯಾ ಸಿಂಗ್ ಮುಂತಾಸವರು ನಟಿಸುತ್ತಿದ್ದಾರೆ. ಈ ಸೀರಿಯಲ್ ಟಿಆರ್‌ಪಿಯಲ್ಲಿ ಸಹ ಟಾಪ್‌ನಲ್ಲಿ ಒಂದು ಸ್ಥಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲವಾಗಿದೆ.
ಬಿಗ್ ಬಾಸ್ ಮನೆಯಲ್ಲಿ 'ಆನೆ' ವಿನಯ್ ಗೌಡಗೆ ಪಟ್ಟಾಭಿಷೇಕ; ಸಂಗೀತಾ ಎದೆಯಲ್ಲಿ ಗಡಗಡ ನಡುಕ!