Asianet Suvarna News Asianet Suvarna News

ಸೀತಾರಾಮ: ಪಾಪ ಅಶೋಕ್! ಒಂದು ಕಡೆ ಪ್ರಿಯಾ, ಇನ್ನೊಂದು ಕಡೆ ರಾಮ್, ಒಳ್ಳೇವ್ರಿಗೆ ಯಾವತ್ತು ಹೀಗೇನ?

ಸೀತಾರಾಮ ಸೀರಿಯಲ್‌ನಲ್ಲಿ ಅಶೋಕ್ ಪಾತ್ರದ ಸಂಕಷ್ಟಗಳು ವೀಕ್ಷಕರ ಮನ ಕಲಕುತ್ತಿವೆ. ತನ್ನ ಸ್ವಂತ ಸಮಸ್ಯೆಗಳ ನಡುವೆಯೂ ಗೆಳೆಯನ ಸಮಸ್ಯೆಗಳನ್ನು ಆಲಿಸುವ ಅಶೋಕ್‌ನ ವ್ಯಕ್ತಿತ್ವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

zee kannada seetharama serial Ashok characters conflict with ram and priya
Author
First Published Sep 3, 2024, 9:25 AM IST | Last Updated Sep 3, 2024, 9:48 AM IST

ಸೀತಾರಾಮ ಸೀರಿಯಲ್‌ನ ಬೆಸ್ಟ್ ಪಾತ್ರಗಳಲ್ಲೊಂದು ಅಶೋಕ್ ಪಾತ್ರ. ಈ ಪಾತ್ರದ ತುಂಬ ಒಳ್ಳೆತನವೇ ತುಂಬಿದೆ. 'ಒಳ್ಳೇವ್ರಿಗೆ ಯಾವತ್ತೂ ಕಷ್ಟ ಜಾಸ್ತಿ' ಅನ್ನೋ ಮಾತು ಅಕ್ಷರಶಃ ಅಶೋಕ್‌ಗೆ ಹೇಳಿ ಮಾಡಿಸಿದ ಹಾಗಿದೆ. ಹೀಗಾಗಿ ಈ ಪಾತ್ರವನ್ನು ಜನ ಸಿಂಪಥಿಯಿಂದ ನೋಡ್ತಿದ್ದಾರೆ. ಅಶೋಕ್ ಪರ್ಸನಲ್ ಲೈಫಲ್ಲಿ ದೊಡ್ಡ ದುರಂತ ನಡೆಯುತ್ತಿದೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ಗೆಳೆಯ ರಾಮ್ ಆತನಲ್ಲಿ ಸಣ್ಣ ಸಮಸ್ಯೆಯನ್ನೂ ದೊಡ್ಡದು ಮಾಡಿ ಹೇಳ್ಕೊಳ್ತಿದ್ದಾನೆ. ಇದನ್ನು ಕಂಡು ಅಶೋಕ್‌ಗೆ ಎಂಥಾ ಫೀಲ್ ಆಗಿರಬೇಕು ಅಂತ ವೀಕ್ಷಕರು ವೇದನೆ ಪಡ್ತಿದ್ದಾರೆ. ನಮ್ಮ ಲೈಫಲ್ಲೂ ಹಾಗೇ ಅಲ್ವಾ, ನಮ್ಮ ಕಷ್ಟವೇ ಬೆಟ್ಟದಷ್ಟಿರುವಾಗ ಯಾರೋ ಸ್ನೇಹಿತರು ತಮ್ಮ ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿ ಹೇಳಲು ಬರುತ್ತಾರೆ. ಇದು ಸ್ವಂತ ಕಷ್ಟದಲ್ಲಿರುವವರಿಗೆ ಯಾವ ರೀತಿ ಹಿಂಸೆ ಆಗುತ್ತೆ ಅನ್ನೋದನ್ನು ಅನುಭವಿಸಿದವರಿಗೇ ಗೊತ್ತು.

ನಮ ನಮಗೆ ನಮ್ ನಮ್ ಸಮಸ್ಯೆಯೇ ದೊಡ್ಡದು. ನಮ್ಮ ಪ್ರಾಬ್ಲೆಮ್‌ಗಳನ್ನೇ ಭೂತಗನ್ನಡಿಯಲ್ಲಿಟ್ಟು ನೋಡ್ತಾ ಹೋಗ್ತೀವಿ. ಆದರೆ ಅದಕ್ಕಿಂತ ಹೆಚ್ಚು ಸಮಸ್ಯೆ, ವೇದನೆ ಅನುಭವಿಸುವವರು ಬಹಳಷ್ಟು ಮಂದಿ ಇರುತ್ತಾರೆ. ಅವರ ಬಗ್ಗೆ ಕೊಂಚ ದೃಷ್ಟಿ ಹಾಯಿಸಿದರೆ ನಮ್ಮ ಸಮಸ್ಯೆಯ ತೀವ್ರತೆ ಕಡಿಮೆ ಆಗಬಹುದೇನೋ.

ಸೀತಾರಾಮದ ಹೀರೋ ಗಗನ್ ಮತ್ತು ವೈಷ್ಣವಿ ನಡುವೆ ಸಮ್‌ಥಿಂಗ್ ಸ್ಪೆಷಲ್.. ಸಿಕ್ಕೇ ಬಿಡ್ತಲ್ಲಾ ಸಾಕ್ಷಿ!

ಇನ್ನು ಈ ಸೀರಿಯಲ್‌ನಲ್ಲಿ ಪ್ರಿಯಾಗೆ ಬ್ರೆಸ್ಟ್ ಕ್ಯಾನ್ಸರ್ ಆಗಿದೆ. ತಾವೂ ಖುಷಿಯಾಗಿದ್ದುಕೊಂಡು, ಜಗತ್ತನ್ನೂ ಖುಷಿಯಾಗಿರುವಂತೆ ಮಾಡುತ್ತಿದ್ದ ಈ ಜೋಡಿ ಮುಖದಿಂದ ನಗು ಮರೆಯಾಗೋ ಹಾಗೆ ಮಾಡಿದ್ದು ವೀಕ್ಷಕರಿಗೆ ಜೀರ್ಣಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅತ್ತ ಅಶೋಕ್ ಅನುಭವಿಸೋ ಸಂಕಟವನ್ನೂ ನೋಡಲಾಗುತ್ತಿಲ್ಲ. ಇಲ್ಲೀವರೆಗೆ ತನ್ನೊಳಗೇ ಇದ್ದ ಸಂಕಟವನ್ನು ಇದೀಗ ಅಶೋಕ ಮನೆಯವ್ರಿಗೆ ಹೇಳಿದ್ದಾನೆ. ಈ ಮಾತನ್ನು ಆತ ಮನೆಯವ್ರಿಗೆ ಹೇಳೋ ಥರ ಇದ್ದರೂ ಒಂದು ರೀತಿ ಆತನಿಗೆ ಆತನೇ ಮಾತಾಡ್ಕೊಳ್ಳೋ ಹಾಗೂ ಇದೆ. 'ದೇವ್ರ ಮೇಲೆ ಇರೋ ನಂಬಿಕೆಯಷ್ಟೇ ಮೆಡಿಕಲ್ ಬಗ್ಗೆಯೇ ನಂಬಿಕೆ ಇರಬೇಕು. ಕ್ಯಾನ್ಸರ್‌ ಒತೆ ಫೈಟ್ ಮಾಡೋದಕ್ಕೆ ಏನೇನು ಬೇಕೋ ಅದೆಲ್ಲ ನಮಗೆ ಅದೆಲ್ಲ ಇದೆ. ಈ ವಿಷ್ಯದಲ್ಲಿ ಬಹಳ ಬೇಕಾಗಿರೋದು ಮನೋಬಲ' ಅನ್ನೋ ಮಾತನ್ನು ಹೇಳ್ತಾನೆ. ಇದನ್ನು ಆತ ಪ್ರಿಯಾ ತಾಯಿಗೆ ಹೇಳುವಂತೆ ಕಂಡರೂ ಆ ಮಾತು ಆತನದೇ ಆಗಿರುತ್ತೆ.

ಸದ್ಯ ಇಂಥಾ ನೋವಿನ ಸ್ಥಿತಿಯಲ್ಲಿ ತನ್ನ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗದೇ ಇರುವ ಅಶೋಕ ಸ್ಥಿತಿ ಕಂಡು ಎಲ್ಲರು ಮರುಗುತ್ತಿದ್ದಾರೆ. ಡಾಕ್ಟರ್ ಸಹ ಈ ವಿಷಯವನ್ನು ಪ್ರಿಯಾಗೆ ಹೇಳದೇ ಇರೋದೆ ಉತ್ತಮ. ಆಕೆಗೆ ಒಳ್ಳೆ ಟ್ರೀಟ್‌ಮೆಂಟ್ ಕೊಟ್ಟರೆ ಕ್ಯಾನ್ಸರ್‌ನಿಂದ ಹೊರಬರಬಹುದು ಎಂದಿದ್ದಾರೆ. ಆದರೆ ಸದಾ ಮುಕ್ತವಾಗಿ ಯೋಚಿಸುವ, ಹೆಲ್ದಿ ಮನಸ್ಥಿತಿ ಹೊಂದಿರುವ ಬಹಳ ಲವಲವಿಕೆಯ ಹುಡುಗಿ, ವೀಕ್ಷಕರ ಮೋಸ್ಟ್ ಫೇವರಿಟ್ ಪಾತ್ರ ಪ್ರಿಯಾಗೆ ಯಾಕೆ ಹೀಗಾಯ್ತು ಅನ್ನೋದೆ ವೀಕ್ಷಕರಿಗೆ ಅರ್ಥ ಆಗುತ್ತಿಲ್ಲ. ಇರಲಿ, ಈ ಸೀರಿಯಲ್‌ನಲ್ಲಿ ಪ್ರಿಯಾಳನ್ನು ಕ್ಯಾನ್ಸರ್‌ಗೆ ಬಲಿ ಕೊಟ್ಟರೆ ಇದು ಹತ್ತರಲ್ಲಿ ಹನ್ನೊಂದನೇ ಪಾತ್ರ ಆಗುತ್ತೆ. ಅದೇ ಆಕೆ ಕ್ಯಾನ್ಸರ್‌ ಅನ್ನು ಗೆದ್ದು ಹಿಂದಿನಂತಾದರೆ ಲಕ್ಷಾಂತರ ಕ್ಯಾನ್ಸರ್ ಸಮಸ್ಯೆ ಇರೋರಿಗೆ ಸ್ಫೂರ್ತಿ ಆಗುತ್ತೆ.

ಸಿಹಿ ತಂಟೆಗೆ ಬಂದ ಭಾರ್ಗವಿಗೆ ತಿರುಗೇಟು ಕೊಟ್ಟ ಸೀತಾ...‌ಇದು ಆಕ್ಚುಲಿ ಚೆನ್ನಾಗಿರೋದು ಅಂದ್ರು ವೀಕ್ಷಕರು

ಸದ್ಯ ಇಂಥಾದ್ದೊಂದು ಸ್ಥಿತಿಯಲ್ಲಿ ರಾಮ್ ಗೆಳೆಯನ ಸ್ಥಿತಿಯನ್ನು ಕೊಂಚವೂ ವಿಚಾರಿಸದೇ ಬರೀ ತನ್ನ ಬಗ್ಗೆ ಮಾತ್ರ ಹೇಳ್ಕೊಳ್ತಿರೋದನ್ನ ನೋಡಿದ್ರೆ ವೀಕ್ಷಕರಿಗೆ ರಾಮ್ ಪಾತ್ರದ ಬಗ್ಗೆ ಅಭಿಮಾನ ಕಡಿಮೆ ಆಗ್ತಿದೆ. ಜೊತೆಗೆ ಅಶೋಕನಂಥಾ ಜವಾಬ್ದಾರಿಯುತ ವ್ಯಕ್ತಿತ್ವದ ಬಗ್ಗೆ ಗೌರವ ಹೆಚ್ಚಾಗ್ತಿದೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios