ಸೀತಾರಾಮದ ಹೀರೋ ಗಗನ್ ಮತ್ತು ವೈಷ್ಣವಿ ನಡುವೆ ಸಮ್‌ಥಿಂಗ್ ಸ್ಪೆಷಲ್.. ಸಿಕ್ಕೇ ಬಿಡ್ತಲ್ಲಾ ಸಾಕ್ಷಿ!

 
ಸೀತಾರಾಮ ಸೀರಿಯಲ್‌ನ ಹೀರೋ ಹೀರೋಯಿನ್ ನಡುವೆ ಸಮ್ ಥಿಂಗ್ ಸ್ಪೆಷಲ್ ಏನೋ ನಡೀತಿದೆ ಅನ್ನೋ ಗುಮಾನಿ ಇತ್ತು. ಅದಕ್ಕೆ ಈಗ ಸಾಕ್ಷಿಯೂ ಸಿಕ್ಕಿ ಬಿಟ್ಟಿದೆ.

zee kannada seetharama seetha and sri ram fame gagan and vaishnavi love gossip

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ನಾಯಕ, ನಾಯಕಿ ತಮ್ಮ ಕ್ಯೂಟ್‌ನೆಸ್‌ನಿಂದಲೂ ಸಖತ್ ಪಾಪ್ಯುಲರ್‌. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಈ ಕ್ಯೂಟ್ ಹೀರೋ ಹೀರೋಯಿನ್. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗ್ತಾ ಇದೆ. ಇಬ್ರೂ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಅಂತ ಎಲ್ಲರೂ ಕಾಮೆಂಟ್ ಮಾಡ್ತಿದ್ದಾರೆ. ಹಾಗೆ ನೋಡಿದ್ರೆ ಈ ಮೊದಲು ವೈಷ್ಣವಿ ಡ್ರೆಸ್‌ಗೆ ಒಂದಿಷ್ಟು ಕಾಮೆಂಟ್ ಕೇಳಿ ಬರ್ತಾ ಇತ್ತು. ಸೀರೆ ಚೆನ್ನಾಗಿಲ್ಲ, ಚೂಡಿದಾರ್ ಒಪ್ಪುತ್ತಾ ಇಲ್ಲ, ಯಾಕೋ ಈ ಹೇರ್‌ ಸ್ಟೈಲ್‌ನಲ್ಲಿ ವಯಸ್ಸಾದಂತೆ ಕಾಣುತ್ತಿದೆ ಅನ್ನೋ ಮಾತು ಕೇಳಿ ಬರ್ತಾ ಇತ್ತು. ಆದರೆ ಈಗ ಮದುವೆ ಆದ್ಮೇಲೆ ವಡ್ಡ ವಡ್ಡ ಇದ್ದ ಸೀತಾ ಸಖತ್ ಬ್ಯೂಟಿಫುಲ್ ಆಗಿ ಬದಲಾಗಿದ್ದಾಳೆ. ಆಕೆಯ ಲುಕ್‌, ಗೆಟಪ್ ಎಲ್ಲ ಬದಲಾಗಿದೆ. ಈಗಿನ ಸೀತಾ ಅಂದ ಚಂದ ನೋಡಿ ಬಹಳ ಮಂದಿ ಪಾಸಿಟಿವ್ ಆಗಿಯೇ ಕಾಮೆಂಟ್ ಮಾಡ್ತಿದ್ದಾರೆ. ಅದರ ಜೊತೆಗೆ ಎಲ್ಲ ಸೀರಿಯಲ್ ಹೀರೋ ಹೀರೋಯಿನ್‌ಗಳಿಗೆ ಕಾಮೆಂಟ್ ಮಾಡುವಂತೆ ಇಬ್ಬರೂ ಮದುವೆ ಆಗಿ ಅನ್ನೋ ಮಾತನ್ನು ಹೇಳ್ತಿದ್ದಾರೆ. ಹಾಗೆ ನೋಡಿದ್ರೆ ಈ ಥರ ಮಾತು ಎಲ್ಲಾ ಹೀರೋ ಹೀರೋಯಿನ್‌ಗಳಿಗೂ ಕಾಮನ್ನಾಗೇ ಕೇಳಿ ಬರ್ತಿರುತ್ತೆ. ಇದರಲ್ಲಿ ಅಂಥಾ ಹೊಸತೇನಿಲ್ಲ.

ವೈಷ್ಣವಿ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಗ ಅದರ ಹೀರೋ ವಿಜಯ್ ಸೂರ್ಯ ಮತ್ತು ವೈಷ್ಣವಿ ಜೋಡಿ ಯಾವ ಲೆವೆಲ್‌ಗೆ ಫೇಮಸ್ ಆಗಿತ್ತು ಅಂದರೆ ಇವರಿಬ್ಬರೂ ಮದುವೆ ಆಗದೇ ಇರೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಮಾತು ಕೇಳಿ ಬರ್ತಿತ್ತು. ಆದರೆ ವಿಜಯ್‌ ಸೂರ್ಯ ಮತ್ತೊಬ್ಬರನ್ನು ಮದುವೆ ಆದಾಗ ಅಭಿಮಾನಿಗಳಿಗೆ ಫುಲ್ ನಿರಾಸೆ ಆಗಿ ಹೋಯ್ತು. 'ಎಷ್ಟು ಚಂದ ಇತ್ತು ಈ ಜೋಡಿ, ಛೇ..' ಅಂತ ತುಂಬ ಜನ ಮಾತಾಡ್ಕೊಂಡ್ರು. ಅದಾಗಿ ವೈಷ್ಣವಿ ಬಿಗ್‌ಬಾಸ್ ಮತ್ತೊಂದು ಅತ್ತ ಸುತ್ತು ಹೊಡೆದು ಇದೀಗ 'ಸೀತಾರಾಮ'ದಲ್ಲಿ ಬಂದು ನಿಂತಿದ್ದಾರೆ. ಈ ನಡುವೆ ಇವರ ಮದುವೆ ಒಬ್ಬರ ಜೊತೆಗೆ ಫಿಕ್ಸ್ ಆಗಿ ಆಮೇಲೆ ಆ ವ್ಯಕ್ತಿಯ ಚಾರಿತ್ರ್ಯದ ಬಗ್ಗೆ ಪ್ರಶ್ನೆ ಬಂದಾಗ ಈ ಜೋಡಿ ಸಪರೇಟ್ ಆಯ್ತು.

ಸಿಹಿ ತಂಟೆಗೆ ಬಂದ ಭಾರ್ಗವಿಗೆ ತಿರುಗೇಟು ಕೊಟ್ಟ ಸೀತಾ...‌ಇದು ಆಕ್ಚುಲಿ ಚೆನ್ನಾಗಿರೋದು ಅಂದ್ರು ವೀಕ್ಷಕರು

ಇನ್ನೊಂದೆಡೆ ಈ ಸೀರಿಯಲ್ ಹೀರೋ ಗಗನ್ ಚಿನ್ನಪ್ಪ ಅವರೂ ಈ ಹಿಂದೆ ಒಬ್ಬ ಹುಡುಗಿ ಜೊತೆಗೆ ಲವ್ವಲ್ಲಿ ಬಿದ್ದಿದ್ರು. ಆದರೆ ಈ ಜೋಡಿ ನಡುವೆ ಏನಾಯ್ತೋ ಬ್ರೇಕಪ್ ಅಂತೂ ಆಯ್ತು. ಇತ್ತೀಚೆಗೆ ಗಗನ್, 'ನಾನು ಸಿಂಗಲ್, ರೆಡಿ ಟು ಮಿಂಗಲ್' ಅಂತ ಕಣ್ ಹೊಡೆದಿದ್ರು. ಆಗ ಮಿಂಗಲ್ ಆಗಕ್ಕೆ ಪಕ್ಕದಲ್ಲೇ ಇದ್ದಾರಲ್ಲ ಅಂತ ವೈಷ್ಣವಿ ಕಡೆ ಕೈ ತೋರಿಸಿದ್ರು. ಈಗ ಈ ಜೋಡಿ ನಡುವೆ ಸಮ್ ಥಿಂಗ್ ಸ್ಪೆಷಲ್ ಏನೋ ಇದೆ ಅನ್ನೋ ಗುಸುಗುಸು ಕೇಳಿ ಬರ್ತಿದೆ.

ಸದ್ಯಕ್ಕೆ ಈ ಗುಮಾನಿಗೆ ಪುಷ್ಠಿ ಕೊಟ್ಟಿರೋದು ಇವರಿಬ್ಬರ ರೀಲ್. ಇಬ್ಬರೂ ಸಖತ್ ರೊಮ್ಯಾಂಟಿಕ್ ಆಗಿ ಒಂದು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ನೋಡಿದ್ಮೇಲೆ ಇವರಿಬ್ರೂ ಮದುವೆ ಆಗ್ಲಿ ಅನ್ನೋ ಫ್ಯಾನ್ಸ್ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಅಷ್ಟು ಕ್ಯೂಟ್ ಆಗಿ ಕಾಣ್ತಿರೋ ಈ ಜೋಡಿ ನಡುವೆ ನಿಜಕ್ಕೂ ಏನೋ ಇದೆ ಅನ್ನೋದಕ್ಕೆ ಇದನ್ನೇ ಪುರಾವೆಯಾಗಿಯೂ ಮಾಡ್ಕೊಂಡಿದ್ದಾರೆ.

ಇದು ಬೆಂಕಿ! ಫೇಕ್ ಪ್ರೆಗ್ನೆನ್ಸಿ ಅಂದೋರಿಗೆ ಬೆತ್ತಲೆ ಹೊಟ್ಟೆ ಫೋಟೋ ಹೊಡೆದು ಉತ್ತರ ಕೊಟ್ರಾ ದೀಪಿಕಾ

ಆದರೆ ಸದ್ಯ ರೀಲ್ಸ್‌ನಲ್ಲಷ್ಟೇ ರೊಮ್ಯಾಂಟಿಕ್ ಆಗಿ ಮಿಂಚಿರೋ ಈ ಜೋಡಿ ಮತ್ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.

 

Latest Videos
Follow Us:
Download App:
  • android
  • ios