ಸೀತಮ್ಮನದ್ದು, ಫ್ರೆಂಡ್‌ದ್ದು ಮದುವೆಗೆ ಕ್ಷಣಗಣನೆ; ಇತ್ತ ಸಿಹಿಗೆ ಶುರುವಾಯ್ತು ಢವ ಢವ!
ನನಗೇನೂ ಬೇಸರ ಆಗಿಲ್ಲ ಎಂದು ಸಪ್ಪೆ ಮುಖ ಹಾಕಿಕೊಂಡು ದೇಸಾಯಿ ಮನೆಯ ಮುಂದೆ ಸಿಹಿ ಹೊರಬರುತ್ತಾಳೆ. ಅಲ್ಲಿಂದ ತಮ್ಮ ಮನೆಗೆ ಬಂದು ಓದುತ್ತಿರುವಾಗ ಸಿಹಿಯ ಕಣ್ಮುಂದೆ ಅನಿಕೇತ್ ಆಡಿದ ಮಾತುಗಳು ಬರುತ್ತವೆ.
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾ ರಾಮಾ ಧಾರಾವಾಹಿಯಲ್ಲಿ (Seetha Rama Serial) ಕೆಲವೇ ಎಪಿಸೋಡ್‌ಗಳಲ್ಲಿ ಮದುವೆ ಸಂಭ್ರಮ ಮನೆ ಮಾಡಲಿದೆ. ಪುಟಾಣಿ ಸಿಹಿಯೇ (Sihi) ಮುಂದೆ ನಿಂತು ಸೀತಮ್ಮನ ಮದುವೆಯನ್ನು ಫ್ರೆಂಡ್ ರಾಮನ ಜೊತೆಯಲ್ಲಿ ಮಾಡುತ್ತಿದ್ದಾಳೆ. ಸಿಹಿ ಸೀತಮ್ಮನನ್ನು ರೆಡಿ ಮಾಡುತ್ತಿದ್ದಾಳೆ. ತಾನೇ ಅಮ್ಮನ ರೀತಿ ವರ್ತಿಸುತ್ತಿದ್ದಾಳೆ. ಈಗಾಗಲೇ ದೇಸಾಯಿ ಕುಟುಂಬದಲ್ಲೂ ಮದುವೆ ತಯಾರಿ ಜೋರಾಗಿದೆ. ಸೀತಾ ಮತ್ತು ರಾಮನ ಪ್ರೀವೆಡ್ಡಿಂಗ್ ಫೋಟೋಶೂಟ್ ಸಹ ಮುಕ್ತಾಯಗೊಂಡಿದೆ. ಆದ್ರೆ ಎಲ್ಲವನ್ನು ಭಾರ್ಗವಿಯೇ ಮುಂದೆ ನಿಂತು ಮಾಡಿಸುತ್ತಿದ್ದಾಳೆ.ಈ ಎಲ್ಲೆದರ ನಡುವೆ ಪುಟಾಣಿ ಸಿಹಿಗೆ ಹೊಸ ಆತಂಕವೊಂದು ಶುರುವಾಗಿದೆ. ಮುಂದೆ ಏನು ಎಂದು ಸಿಹಿ ಚಿಂತೆ ಮಾಡುತ್ತಿದ್ದಾಳೆ.
ಹೌದು, ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಭಾರ್ಗವಿ ಮಗ ಅನಿಕೇತ್ ಬಳಸುವ ನೋಟ್ ಪ್ಯಾಡ್ ಸಿಹಿ ಬಳಸುತ್ತಿರುತ್ತಾಳೆ. ಕರಾಟೆ ಕ್ಲಾಸ್ ಮುಗಿಸಿಕೊಂಡು ಮನೆಗೆ ಬಂದ ಅನಿಕೇತ್ ತನ್ನ ನೋಟ್‌ಪ್ಯಾಡ್ ಸಿಹಿ ಕೈಯಲ್ಲಿರೋದನ್ನು ಕಂಡು ಕೋಪಗೊಳ್ಳುತ್ತಾನೆ. ಕೂಡಲೇ ಸಿಹಿ ಬಳಿ ಹೋಗಿ ನೋಟ್‌ಪ್ಯಾಡ್ ಕಿತ್ತುಕೊಳ್ಳುತ್ತಾನೆ.
ಮುದ್ದು ಸಿಹಿಯ ಆ್ಯಕ್ಟಿಂಗ್ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...
ಅನಿಕೇತ್ ಹಠ, ಸಿಹಿಗೆ ಆತಂಕ
ಅನಿಕೇತ್ ಕೋಪ ಇಷ್ಟಕ್ಕೆ ಕಡಿಮೆಯಾಗಲ್ಲ. ನನ್ನ ವಸ್ತುಗಳನ್ನು ಬೇರೆಯವರು ಮುಟ್ಟಬಾರದು ಅಂತ ನಿಮಗೆ ಗೊತ್ತಿಲ್ಲವಾ ಎಂದು ಸಾಧನಾ ಚಿಕ್ಕಿಯನ್ನು ಅನಿಕೇತ್ ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ರಾಮ್, ಎಷ್ಟೇ ತಿಳಿಸಿದರೂ ಅನಿಕೇತ್ ಕೇಳಲ್ಲ. ತನ್ನ ಅನುಮತಿ ಇಲ್ಲದೇ ವಸ್ತುಗಳನ್ನು ತೆಗೆದುಕೊಂಡಿದ್ದು ತಪ್ಪು ಎಂದು ಅನಿಕೇತ್ ವಾದಿಸಿದ್ದಾನೆ. ಇದನ್ನೆಲ್ಲಾ ಕಂಡು ಭಾರ್ಗವಿ ಒಳಗೊಳಗೆ ಖುಷಿಪಟ್ಟಿದ್ದಾಳೆ. ಅನಿಕೇತ್ ಮಾತು ಕೇಳದಿದ್ದಾಗ ಮಧ್ಯ ಪ್ರವೇಶಿಸಿದ ಭಾರ್ಗವಿ, ಮಗನಿಗೆ ಸಿಹಿ ಹಾಗೂ ಸೀತಾ ಬಳಿ ಕ್ಷಮೆ ಕೇಳುವಂತೆ ಹೇಳುತ್ತಾಳೆ. ಅಮ್ಮನ ಮಾತು ಸಹ ಕೇಳದ ಅನಿಕೇತ್ ಕ್ಷಮೆ ಕೇಳಲ್ಲ ಎಂದು ಅಲ್ಲಿಂದ ಓಡಿ ಹೋಗುತ್ತಾನೆ.
ಕೊನೆಗೆ ಅಲ್ಲಿದ್ದ ರಾಮ್, ಸಾಧನಾ, ವಿಶ್ವ ಹಾಗೂ ಭಾರ್ಗವಿ ಎಲ್ಲರೂ ಸಿಹಿ ಬಳಿ ಕ್ಷಮೆ ಕೇಳುತ್ತಾರೆ. ಆಗ ಮಕ್ಕಳು ತಾನೇ ಹಠ ಮಾಡಬೇಕು. ಮುಂದೆ ಎಲ್ಲವೂ ಸರಿ ಹೋಗುತ್ತದ ಎಂದು ಸೀತಾ ತೂಕದ ಮಾತುಗಳನ್ನು ಆಡುತ್ತಾಳೆ. ನನಗೇನೂ ಬೇಸರ ಆಗಿಲ್ಲ ಎಂದು ಸಪ್ಪೆ ಮುಖ ಹಾಕಿಕೊಂಡು ದೇಸಾಯಿ ಮನೆಯ ಮುಂದೆ ಸಿಹಿ ಹೊರಬರುತ್ತಾಳೆ. ಅಲ್ಲಿಂದ ತಮ್ಮ ಮನೆಗೆ ಬಂದು ಓದುತ್ತಿರುವಾಗ ಸಿಹಿಯ ಕಣ್ಮುಂದೆ ಅನಿಕೇತ್ ಆಡಿದ ಮಾತುಗಳು ಬರುತ್ತವೆ.
ಸಿಹಿಯ ಹಿನ್ನೆಲೆ ಕೇಳಲು ರಾಮ್ ನಿರಾಕರಿಸ್ತಿರೋದಕ್ಕೆ ಇದೇ ಕಾರಣನಾ? ಏನಂತಿದ್ದಾರೆ ನೆಟ್ಟಿಗರು?
ಶುರುವಾಯ್ತು ಪುಟಾಣಿ ಸಿಹಿಗೆ ಢವ ಢವ
ಇಲ್ಲಿಯಾದ್ರೆ ವಠಾರದಲ್ಲಿರೋ ಎಲ್ಲರೂ ನನ್ನ ಜೊತೆ ಆಡುತ್ತಾರೆ. ಅಲ್ಲಿಗೆ ಹೋದ್ಮೇಲೆ ಅನಿಕೇತ್ ನನ್ನ ಜೊತೆ ಮಾತನಾಡದಿದ್ದರೆ ಹೇಗೆ? ಅಲ್ಲಿ ನನ್ನ ಜೊತೆ ಆಟ ಆಡೋರು ಯಾರು ಅನ್ನೋ ಆತಂಕ ಸಿಹಿಗೆ ಶುರುವಾಗಿದೆ.