ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅವರು ಮಹಾಕುಂಭಮೇಳದಲ್ಲಿ ಭಾಗಿಯಾಗಿ ಅಮೃತಸ್ನಾನ ಮಾಡಿದ್ದಾರೆ. ಈ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಮಹಾ ಕುಂಭಮೇಳಕ್ಕೆ ಹೋಗಿ ಪ್ರಯಾಗ್‌ರಾಜ್‌ನಲ್ಲಿ ಅಮೃತಸ್ನಾನ ಮಾಡಿಕೊಂಡು ಬಂದಿದ್ದಾರೆ. ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಕೂಡ ಈ ಅಮೃತಗಳಿಗೆಗೆ ಸಾಕ್ಷಿಯಾಗಿದ್ದಾರೆ. ಅತ್ತೆ ವೀನಾ ಕೌಶಲ್‌ ಜೊತೆಗೆ ಅವರು ಈ ಸ್ಥಳಕ್ಕೆ ಬೇಟಿ ಕೊಟ್ಟಿದ್ದಾರೆ. 

ಕತ್ರಿನಾ ಕೈಫ್‌ ಹೇಳಿದ್ದೇನು?
"ನಾನು ಈ ಬಾರಿಯ ಕುಂಭಮೇಳಕ್ಕೆ ಹೋಗಿರೋದು ಅದೃಷ್ಟ. ನಾನು ತುಂಬ ಖುಷಿಯಾಗಿದ್ದೇನೆ, ಹೆಮ್ಮೆಯೂ ಆಗ್ತಿದೆ. ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ನಾನು ಇಲ್ಲಿಂದಲೇ ಹೊಸ ಅನುಭವ ಪಡೆದುಕೊಂಡೆ, ಇಡೀ ದಿನ ಇಲ್ಲೆ ಸಮಯ ಕಳೆಯುವೆ" ಎಂದು ಕತ್ರಿನಾ ಕೈಫ್‌ ಹೇಳಿದ್ದಾರೆ.

ಮುಸ್ಲಿಮರಿಗೆ ಕುಂಭ ಹೊಣೆ: ಅಖಿಲೇಶ್‌ಗೆ ಯೋಗಿ ಚಾಟಿ, ಕುಂಭಮೇಳ ಟೀಕಿಸುವವರನ್ನ ಹಂದಿ, ಹದ್ದುಗಳಿಗೆ ಹೋಲಿಸಿದ ಸಿಎಂ!

ಸೆಲೆಬ್ರಿಟಿಗಳು ಭಾಗಿ 
ಪ್ರಯಾಗರಾಜ್‌ನಲ್ಲಿ ಗಂಗಾ, ಸರಸ್ವತಿ, ಯಮುನಾ ತ್ರಿವೇಣಿ ಸಂಗಮದಲ್ಲಿ ಅವರು ಪವಿತ್ರ ಸ್ನಾನ ಮಾಡಿದ್ದಾರೆ. ಈ ರೀತಿ ಮಾಡಿದವರಿಗೆ ಮೋಕ್ಷ ಎಂಬ ಪ್ರತೀತಿ ಇದೆ. ಅಕ್ಷಯ್‌ ಕುಮಾರ್‌, ಕ್ರಿಸ್‌ ಮಾರ್ಟಿನ್‌ ಕೂಡ ಮಹಾಕುಂಭದಲ್ಲಿ ಭಾಗಿ ಆಗಿದ್ದಾರೆ. ಕತ್ರಿನಾ ಕೈಫ್‌ ಪತಿ ವಿಕ್ಕಿ ಕೌಶಲ್‌ ಈಗಾಗಲೇ ಕುಂಭಮೇಳದಲ್ಲಿ ಭಾಗಿ ಆಗಿದ್ದರು. ʼಛಾವಾʼ ಸಿನಿಮಾ ಪ್ರಚಾರದ ವೇಳೆ ವಿಕ್ಕಿ ಕೌಶಲ್‌ ಅವರು ತಂಡದ ಜೊತೆಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದರು. ಇಶಾ ಗುಪ್ತ, ವಿಜಯ್‌ ದೇವರಕೊಂಡ, ಹೇಮಾ ಮಾಲಿನಿ ಕೂಡ ಭಾಗಿ ಆಗಿದ್ದಾರೆ. 

ತಮನ್ನಾ ಭಾಟಿಯಾ, ವಸಿಷ್ಠ ಸಿಂಹ, ಸೀತಾರಾಮ ಧಾರಾವಾಹಿ ನಟ ಗಗನ್‌ ಚಿನ್ನಪ್ಪ, ರೀತು ಸಿಂಗ್‌, ವೈಷ್ಣವಿ ಗೌಡ, ಮೇಘಶ್ರೀ ಮುಂತಾದವರು ಕೂಡ ಕುಂಭಮೇಳಕ್ಕೆ ಭೇಟಿ ಕೊಟ್ಟಿದ್ದಾರೆ. ನಟ ಯಶ್‌, ರಾಧಿಕಾ ಪಂಡಿತ್‌ ಕೂಡ ಮಕ್ಕಳ ಜೊತೆಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ. ನಟ ಜಗ್ಗೇಶ್‌ ಕೂಡ ಈ ಗಳಿಗೆಗೆ ಸಾಕ್ಷಿ ಆಗಿದ್ದಾರೆ. ಕಾರುಣ್ಯಾ ರಾಮ್‌ ಕೂಡ ಇಲ್ಲಿಗೆ ಭೇಟಿ ನೀಡಿದ್ದರು. ರಾಯರ ಪವಾಡದಿಂದಲೇ ಇಲ್ಲಿಗೆ ಹೋಗುವ ಅವಕಾಶ ಸಿಗ್ತು ಎಂದು ಅವರು ಹೇಳಿಕೊಂಡಿದ್ದಾರೆ. 

ದುಡ್ಡಿದೆ, ಕುಂಭಮೇಳಕ್ಕೆ ಹೋಗ್ತೀರಿ ಅಂದ್ರು, ನನಗೆ ದೆಹಲಿ ವರಿಷ್ಠರೂ ಸಹಾಯ ಮಾಡ್ಲಿಲ್ಲ: Actor Jaggesh

ಪ್ರತಿ ಮೂರು ವರ್ಷಗಳಿಗೊಮ್ಮೆ ಹರಿದ್ವಾರ, ಪ್ರಯಾಗರಾಜ್‌, ಉಜ್ಜಯನಿ, ನಾಸಿಕ್‌ನಲ್ಲಿ ನಡೆಯುವ ಜಾತ್ರೆಯನ್ನು ಕುಂಭ ಅಂತ ಕರೆಯುತ್ತಾರೆ. ಪ್ರತಿ ಆರು ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್‌, ಹರಿದ್ವಾರದಲ್ಲಿ ನಡೆಯುವ ಕುಂಭವನ್ನು ಅರ್ಧ ಕುಂಭ ಅಂತ ಕರೆಯುವರು. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಎನ್ನುವರು. ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಮಹಾಕುಂಭಮೇಳ ಎನ್ನುವರು. ಈ ಮೇಳದಲ್ಲಿ ನದಿಯಲ್ಲಿ ಸ್ನಾನ ಮಾಡಿದವರಿಗೆ ಮೋಕ್ಷ ಸಿಗುತ್ತದೆ ಎಂಬ ಮಾತಿದೆ.