ರಾಮ ರಾಮ ಎಂದು ರಾಮನನ್ನೇ ನಂಬಿರುವ ಸೀತಾ; ನಂಬಿಕೆ ಉಳಿಸಿಕೊಳ್ತಾನಾ ರಾಮ?
ಸೀತಾ ಆಫೀಸಿನಲ್ಲಿ ಏನಾದರಂದು ಸಮಸ್ಯೆಗೆ ಸಿಲುಕಿಕೊಂಡಾಗ ರಾಮ ಅಭಯ ಹಸ್ತ ಚಾಚುತ್ತಾನೆ. ಆದರೆ, ಕೆಲವೊಮ್ಮೆ ಸ್ವತಃ ರಾಮನೇ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಾನೆ. ಕೆಲವೊಮ್ಮೆ ಸೀತಾ-ರಾಮ ಇಬ್ಬರೂ ಸಮಸ್ಯೆಗೆ ಸಿಲುಕುವ ಮೂಲಕ ವೀಕ್ಷಕರು ಆತಂಕಕ್ಕೆ ಈಡಾಗುವಂತಾಗುತ್ತದೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾ-ರಾಮ' ಸೀರಿಯಲ್ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಸೀತಾಳಿಗೆ ಬರುತ್ತಿರುವ ಸಮಸ್ಯೆ, ರಾಮ ಅದನ್ನು ಹ್ಯಾಂಡಲ್ ಮಾಡುತ್ತ ಪರಿಹಾರ ಮಾಡುವತ್ತ ಪ್ರಯತ್ನ ಮಾಡುವುದು, ಇವೆಲ್ಲವೂ ಸೀರಿಯಲ್ ವೀಕ್ಷಕರಿಗೆ ಬಹಳಷ್ಟು ಮೆಚ್ಚುಗೆ ಆಗುತ್ತಿದೆ. ಈ ಕಾರಣಕ್ಕೆ 'ಸೀತಾ ರಾಮ' ಧಾರಾವಾಹಿ ಟಿಆರ್‌ಪಿ ರೇಸ್‌ನಲ್ಲಿ ಕೂಡ ಸಾಕಷ್ಟು ಟಾಪ್ ಸ್ಥಾನದಲ್ಲಿದೆ. ಸದ್ಯಕ್ಕೆ 'ಸೀತಾಳಿಗೆ ರಾಮನ ಮೇಲೆ ಇರುವಷ್ಟು ನಂಬಿಕೆ ರಾಮನಿಗೂ ಸೀತಾ ಮೇಲೆ ಇದೆಯೇ' ಎಂಬುದು ಸದ್ಯದ ಪ್ರಶ್ನೆ!
ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೀತಾ ರಾಮ ಧಾರಾವಾಹಿ, ಕಥೆಯಲ್ಲಿ ಸಾಕಷ್ಟು ಏರಿಳಿತ ಹೊಂದಿದೆ. ಸದ್ಯಕ್ಕೆ ಸೀತಾ ಪಾತ್ರವು ಬಹಳಷ್ಟು ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದು, ರಾಮನ ಪಾತ್ರವು ಸೀತಾಳ ಕಷ್ಟಗಳನ್ನು ಪರಿಹಾರ ಮಾಡುವ ಪ್ರಯತ್ನದಲ್ಲಿ ಸಾಗುತ್ತಿದೆ. ಆದರೆ, ಈ ಧಾರಾವಾಹಿಯ ಕಥೆಯನ್ನು ಎಲ್ಲಿಯೂ ಬೋರ್ ಆಗದಂತೆ ಹೆಣೆಯಲಾಗಿದೆ ಎನ್ನಬಹುದು. ಸಿಹಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೇಬಿ ರಿತು ಸಿಂಗ್ ಸಹ ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಎನ್ನಬಹುದು.
ಬಚ್ಚನ್ ಕುಟಂಬದಲ್ಲಿ ಏನೋ ಸರಿಯಿಲ್ಲ, ಗ್ರೂಪ್ ಫೋಟೋ ಕ್ರಾಫ್ ಮಾಡಿ ಮಾವನಿಗೆ ಐಶ್ವರ್ಯಾ ರೈ ಬರ್ತಡೇ ವಿಶ್
ಸೀತಾ ಆಫೀಸಿನಲ್ಲಿ ಏನಾದರಂದು ಸಮಸ್ಯೆಗೆ ಸಿಲುಕಿಕೊಂಡಾಗ ರಾಮ ಅಭಯ ಹಸ್ತ ಚಾಚುತ್ತಾನೆ. ಆದರೆ, ಕೆಲವೊಮ್ಮೆ ಸ್ವತಃ ರಾಮನೇ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಾನೆ. ಕೆಲವೊಮ್ಮೆ ಸೀತಾ-ರಾಮ ಇಬ್ಬರೂ ಸಮಸ್ಯೆಗೆ ಸಿಲುಕುವ ಮೂಲಕ ವೀಕ್ಷಕರು ಆತಂಕಕ್ಕೆ ಈಡಾಗುವಂತಾಗುತ್ತದೆ. ಆದರೆ, ಸೀತಾ-ರಾಮರು ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಅವನ್ನು ಪರಿಹಾರ ಮಾಡುವಲ್ಲಿ ಸಫಲರಾಗಲು ವೀಕ್ಷಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗುತ್ತದೆ.
ಸಮಂತಾ ಸೊಂಟದ ಮೇಲಿದ್ದ ನಾಗಚೈತನ್ಯ 'ಟ್ಯಾಟೂ' ಮಾಯ!
ಒಟ್ಟಿನಲ್ಲಿ, ಜೀ ಕನ್ನಡದ 'ಸೀತಾ ರಾಮ' ಸೀರಿಯಲ್ ವೀಕ್ಷಕರು ಮೆಚ್ಚಿರುವ ಸೀರಿಯಲ್ ಆಗಿದೆ. ಜೀ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಟೆಲಿಕಾಸ್ಟ್ ಆಗುತ್ತಿರುವ ಈ ಸೀರಿಯಲ್, ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸೀತಾ ರಾಮ ಸೀರಿಯಲ್ ಮೂಲಕ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಬಹಳಷ್ಟು ಖ್ಯಾತಿ ಗಳಿಸಿದ್ದಾರೆ. ಸಿಹಿ ಪಾತ್ರಧಾರಿ ಬೇಬಿ ರೀತು ಸಿಂಗ್ ಸಹ ಜನಮೆಚ್ಚುಗೆ ಗಳಿಸಿದ್ದಾರೆ.