Asianet Suvarna News Asianet Suvarna News

ಸಮಂತಾ ಸೊಂಟದ ಮೇಲಿದ್ದ ನಾಗಚೈತನ್ಯ 'ಟ್ಯಾಟೂ' ಮಾಯ!

ಸಮಂತಾ ಮಾಜಿ ಲವರ್ ನಾಗಚೈತನ್ಯ ಟ್ಯಾಟೂ ಸಮಂತಾ ದೇಹದಿಂದ ಮರೆಯಾಗಿದೆ. ಈ ಕಾರಣಕ್ಕೆ ಇದೀಗ ಸಮಂತಾ ಮತ್ತೆ ನಾಗಚೈತನ್ಯ ಜತೆ ಸುದ್ದಿಯಾಗುತ್ತಿದ್ದಾರೆ. ಒಂದು ವಾರದ ಹಿಂದಷ್ಟೇ ನಾಗ ಚೈತನ್ಯ ಮತ್ತು ಸಮಂತಾ ಒಂದೇ ನಾಯಿಯನ್ನು ತಬ್ಬಿಕೊಂಡು ಮುದ್ದಾಡುವ ಫೋಟೋ ವೈರಲ್ ಆಗಿತ್ತು.

Samantha Ruth Prabhu removed her ex husband Naga chaitanya Tattoo srb
Author
First Published Oct 12, 2023, 3:05 PM IST

ನಟಿ ಸಮಂತಾ ತಮ್ಮ ಪಕ್ಕೆಲುಬು ಸಮೀಪ ಹಾಕಿಸಿಕೊಂಡಿದ್ದ ಅವರ ಮಾಜಿ ಪತಿ ನಾಗಚೈತನ್ಯ ಸಹಿ ಇರುವ ಟ್ಯಾಟೂ ಮಾಯವಾಗಿದೆ! ಇದನ್ನು ನೋಡಿದ್ದೇ ನೋಡಿದ್ದು, ಹಲವರು ಈ ಬಗ್ಗೆ ಮಾತನಾಡತೊಡಗಿದ್ದಾರೆ. ಸಮಂತಾ ತಮ್ಮ ಮಾಜಿ ಪತಿಯ ಟ್ಯಾಟೂ ತೆಗೆಸಿಹಾಕಿದ್ದಾರೆ ಎಂದರೆ, ಅವರು ಮತ್ತೆ ಒಂದಾಗುವ ಮಾತೇ ಇಲ್ಲ ಎನ್ನಲಾಗುತ್ತಿದೆ. ಏಕೆಂದರೆ, ಇತ್ತೀಚೆಗಷ್ಟೇ ಮಾಜಿ ದಂಪತಿಗಳಾಗಿದ್ದ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿತ್ತು. 

ನಟಿ ಸಮಂತಾ ತಮ್ಮದಂದು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಅದರಲ್ಲಿ ಅವರ ಹೊಟ್ಟೆಯ ಭಾಗ ಕಾಣಿಸುವಂತಿದೆ. ಅಲ್ಲಿ ಈ ಮೊದಲು ಸಮಂತಾರ ಮಾಜಿ ಲವರ್ ಮತ್ತು ಪತಿ ನಾಗಚೈತನ್ಯ ಸಹಿ ಇರುವ ಟ್ಯಾಟೂ ಕಾಣಿಸುತ್ತಿತ್ತು. ಆದರೆ, ಅವರೀಗ ಪೋಸ್ಟ್ ಮಾಡಿರುವ ಫೋಟೋದಲ್ಲಿ ಅದು ಕಾಣಿಸುತ್ತಿಲ್ಲ, ಬಹುಶಃ ಅವರು ಅದನ್ನು ತೆಗೆಸಿರಬಹುದು ಎನ್ನುವ ಊಹೆ ಚರ್ಚೆಯಲ್ಲಿದೆ. 

ಈ ರೀತಿಯಾಗಿ ತಮ್ಮ ಮಾಜಿ ಲವರ್ ಹೆಸರಿನ ಟ್ಯಾಟೂ ತೆಗೆಸಿರುವವರ ಪೈಕಿ ನಟಿ ಸಮಂತಾ ಹೆಸರು ಮಾತ್ರ ಇಲ್ಲ. ಈ ಮೊದಲು ನಟಿಯರಾದ ದೀಪಿಕಾ ಮತ್ತು ನಯನತಾರಾ ಸಹ ಇದೇ ರಿಥಿ ಮಾಡಿದ್ದರು. ದೀಪಿಕಾ ತಮ್ಮ ಮಾಜಿ ಲವರ್ ರಣಬೀರ್ ಕಪೂರ್ ಹೆಸರಿನ 'ಆರ್‌ಕೆ' ಟ್ಯಾಟೂ ತೆಗೆದು ಹಾಕಿದ್ದರೆ ನಟಿ ನಯನತಾರಾ ತಮ್ಮ ಮಾಜಿ ಲವರ್ ಪ್ರಭುದೇವ್ 'ಪಿಡಿ' ಹೆಸರಿನ ಟ್ಯಾಟೂ ತೆಗೆಸಿದ್ದಾರೆ. 

ನಾಗಚೈತನ್ಯ - ಸಮಂತಾ ಪ್ಯಾಚ್ ಅಪ್? ಜೋಡಿಯನ್ನು ಮತ್ತೆ ಒಂದು ಮಾಡಿದ ಫ್ಯಾನ್ಸ್!

ಇದೀಗ ಸಮಂತಾ ಸರದಿ ಎಂಬಂತೆ, ಅವರ ಮಾಜಿ ಲವರ್ ನಾಗಚೈತನ್ಯ ಟ್ಯಾಟೂ ಸಮಂತಾ ದೇಹದಿಂದ ಮರೆಯಾಗಿದೆ. ಈ ಕಾರಣಕ್ಕೆ ಇದೀಗ ಸಮಂತಾ ಮತ್ತೆ ನಾಗಚೈತನ್ಯ ಜತೆ ಸುದ್ದಿಯಾಗುತ್ತಿದ್ದಾರೆ. ಒಂದು ವಾರದ ಹಿಂದಷ್ಟೇ ನಾಗ ಚೈತನ್ಯ ಮತ್ತು ಸಮಂತಾ ಒಂದೇ ನಾಯಿಯನ್ನು ತಬ್ಬಿಕೊಂಡು ಮುದ್ದಾಡುವ ಫೋಟೋ ವೈರಲ್ ಆಗಿ ಅವರಿಬ್ಬರೂ ಮತ್ತೆ ಒಂದಾಗಲಿದ್ದಾರೆ ಎಂಬ ಗಾಸಿಪ್ ಕೇಳಿ ಬಂದಿತ್ತು. 

ಪ್ಯಾಂಟ್‌ ಶರ್ಟ್‌ ಹಾಕಿಕೊಂಡ ತಕ್ಷಣ ನನಗೆ ಅಳುವೇ ಬಂದಿಬಿಡ್ತಿತ್ತು; ನೀತು ವನಜಾಕ್ಷಿ

Follow Us:
Download App:
  • android
  • ios