Yash ನನಗಿಂತ ಎರಡು ವರ್ಷ ಜೂನಿಯರ್, ಅವನ ಬಗ್ಗೆ ಏಕವಚನದಲ್ಲೇ ಮಾತನಾಡುತ್ತೀನಿ: ಸೀತಾರಾಮ ನಟ ಅಶೋಕ್
ಜೀ ಕನ್ನಡ ಅವಾರ್ಡ್ಸ್ ಸಮಾರಂಭದಲ್ಲಿ ನೆಚ್ಚಿನ ಗೆಳೆಯನ ಪ್ರಶಸ್ತಿಯನ್ನು ಅಶೋಕ್ ಶರ್ಮ ಗೆದಿದ್ದಾರೆ. ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಜೊತೆಗಿನ ಗೆಳೆತನ ವಿಶೇಷತೆಯನ್ನು ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಇದೀಗ ಹೊಸ ಸೀರಿಯಲ್‌ಗಳು ಆರಂಭವಾಗಿದ್ದು ಜನರು ಪ್ರೇಕ್ಷಕರು ಕಿರುತೆರೆ ಪ್ರಿಯರು ಹೊಸ ಕಥೆಗಳಿಗೆ ಕಥಾ ಹಂದರಕ್ಕೆ ಫಿದಾ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ಹೊಸ ಧಾರವಾಹಿಗಳಲ್ಲಿ 'ಸೀತಾರಾಮ' ಧಾರಾವಾಹಿ ಕೂಡ ಒಂದು. 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಅವರು ಇದರ ಪ್ರಮುಖ ಭೂಮಿಕೆಯಲ್ಲಿದ್ದು, 'ಪುಟ್ಟಗೌರಿ ಮದುವೆ' ಖ್ಯಾತಿಯ ಗಗನ್ ಚಿನ್ನಪ್ಪ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ 'ಸೀತಾರಾಮ' ಧಾರಾವಾಹಿಯಲ್ಲಿ ನಟ ಅಶೋಕ್ ಶರ್ಮ ಅವರದ್ದು ಒಂದು ಪ್ರಮುಖ ಪಾತ್ರ ಎಂದರೆ ತಪ್ಪಾಗಲ್ಲ. ಈವರೆಗೂ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟ ಅಶೋಕ್ ಶರ್ಮ ಇದೀಗ ಧಾರವಾಹಿಗೆ ಬಂದಿದ್ದು ತಮ್ಮ ನಟನೆಯ ಮೂಲಕ ಸಖತ್ ಅಭಿಮಾನಿಗಳನ್ನು ಪಡೆಯುತ್ತಿದ್ದಾರೆ.
ಇದೀಗ ಜೀ ಕನ್ನಡ ಅವಾರ್ಡ್ಸ್ ಸಮಾರಂಭದಲ್ಲಿ ನೆಚ್ಚಿನ ಗೆಳೆಯನ ಪ್ರಶಸ್ತಿಯನ್ನು ಅಶೋಕ್ ಶರ್ಮ ಗೆದಿದ್ದಾರೆ. ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಜೊತೆಗಿನ ಗೆಳೆತನ ವಿಶೇಷತೆಯನ್ನು ಹಂಚಿಕೊಂಡಿದ್ದಾರೆ. ಹೌದು! ನೆಚ್ಚಿನ ಗೆಳೆಯನ ಪ್ರಶಸ್ತಿಯನ್ನು ಸ್ಯಾಂಡಲ್‌ವುಡ್‌ನ ನೆನಪಿರಲಿ ಪ್ರೇಮ್ ಅವರಿಂದ ಪಡೆದು ಖುಷಿಪಟ್ಟರು. ಈ ವೇಳೆ ನಿರೂಪಕಿ ಶ್ವೇತಾ ಚೆಂಗಪ್ಪ ನಿಮ್ಮ ಬೆಸ್ಟ್ ಫ್ರೆಂಡ್ ಯಾರು, ಅವರ ವ್ಯಕಿತ್ವದ ಬಗ್ಗೆ ಮಾತನಾಡಿ ಎಂದಾಗ, ಅಶೋಕ್, ನಗುತ್ತಾ.. ಯಶ್ ನನಗಿಂತ ಎರಡು ವರ್ಷ ಜೂನಿಯರ್, ನಾನು ಫಸ್ಟ್ ಇಯರ್ ಬಿ.ಕಾಮ್ ಇದ್ದಾಗ ಯಶ್ ಫಸ್ಟ್ ಇಯರ್ ಪಿಯುಸಿನಲ್ಲಿದ್ದ.
ನಾನು ಯಶ್ ಬಗ್ಗೆ ಏಕವಚನದಲ್ಲೇ ಮಾತನಾಡುತ್ತಿದ್ದೀನಿ ಯಾರೂ ಬೇಜಾರಾಗಬೇಡಿ, ಯಾಕಂದ್ರೆ ಯಶ್ ನನಗೆ ತುಂಬಾ ಹಳೆ ಸ್ನೇಹ. ನಾವು ಒಂದೇ ಡ್ಯಾನ್ಸ್ ಗ್ರೂಪ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದೀವಿ. ಆಗ ಯಶ್ ತುಂಬಾ ಸಣ್ಣಗಿದ್ದ. I Still Remember ಲಗಾನ್ ಚಿತ್ರದ O Mitwa ಹಾಡಿನಲ್ಲಿ ಅಮೀರ್ ಖಾನ್ ಒಂದು ಚಿಕ್ಕ ಹುಡುಗನನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಆ ತರಹ ನಾನು ಯಶ್‌ನ ನನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದೆ. ಆ ಟೈಮ್‌ನಿಂದ ಯಶ್ ನಾನು ಫ್ರೆಂಡ್ಸ್. ಇವತ್ತಿನ ದಿನಗಳಲ್ಲಿ ನನಗೆ ಸಿನಿಮಾದಲ್ಲಿ ಒಳ್ಳೆಯ ಹೆಸರು ಬಂದಿದೆ ಅಂದ್ರೆ ಅದಕ್ಕೆ ಯಶ್ ಕಾರಣ.
ಪಾಚಿ ಕಲರ್ ಸೀರೆಯಲ್ಲಿ ಲವ್ ಮಾಕ್ಟೇಲ್ ಸುಂದರಿ: ಮಿಲನಾ ಪೋಟೋ ನೋಡಿದ ಫ್ಯಾನ್ಸ್ ಹೀಗೆ ಅನ್ನೋದಾ!
ನಾನು ಖಾಸಗಿ ವಾಹಿನಿಯಲ್ಲಿ ಆಂಕರಿಂಗ್ ಮಾಡುತ್ತಿರಬೇಕಾದರೆ ನಿನ್ನೊಬ್ಬ ನಟ, ಏನು ಮಾಡುತ್ತಿದ್ದೀಯಾ ಅಂತೆಲ್ಲಿ, ನನ್ನ ಕರೆದು ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ, ಗೂಗ್ಲಿ, ಗಜಕೇಸರಿ ಚಿತ್ರಗಳಲ್ಲಿ ಜನರು ನೆನಪಿನಲ್ಲಿಟ್ಟುಕೊಳ್ಳುವಂತಹ ಪಾತ್ರವನ್ನು ಯಶ್ ನನಗೆ ಕೊಡಿಸಿದ್ದಾನೆ. ಇನ್ನು ಸೀತಾರಾಮ ಧಾರಾವಾಹಿಯಲ್ಲಿ ನನ್ನ ಪಾತ್ರ ಏನಿದೆ ಅದು ಒಂದು ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾದ ಪಾತ್ರದ ರೀತಿಯಲ್ಲಿ ಇದೆ ಅಂತ ಅಶೋಕ್ ಹೇಳಿದರು. ನನ್ನ ಯಶ್ ಜೊತೆಗಿನ ತುಣುಕುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಾಗ ಸ್ನೇಹ ಅಂದ್ರೆ ನನ್ನ ಯಶ್ ತರಹ ಇರಬೇಕು ಅಂತ ಫ್ಯಾನ್ಸ್ ಹೇಳಿದಾಗ ತುಂಬಾ ಖುಷಿಯಾಗುತ್ತದೆ ಎಂದು ಜೀ ಕುಟುಂಬ ಅವಾರ್ಡ್ ಫಂಕ್ಷನ್‌ನಲ್ಲಿ ಅಶೋಕ್ ಹೇಳಿದರು.
ಅಸಲಿಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಶೋಕ್ ಶರ್ಮಾ ಅವರು ಖಾಸ ದೋಸ್ತ್‌ಗಳು. ಹೌದು! 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಎಂಬ ಸಿನಿಮಾ ಎಲ್ಲರಿಗೂ ಗೊತ್ತೇ ಇದೆ . ಈ ಸಿನಿಮಾದಲ್ಲಿ ಇಬ್ಬರು ನಟರು ಭಾವ ಮೈದುನನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮನ ಗೆದ್ದಿದ್ದರು. ‘ಗೂಗ್ಲಿ’ ಸಿನಿಮಾದಲ್ಲೂ ಯಶ್ ಗೆಳೆಯನಾಗಿ ಗಮನ ಸೆಳೆದಿದ್ದರು. ಅಂದ ಹಾಗೇ ಇವರಿಬ್ಬರದು ಎರಡು ದಶಕವನ್ನು ಮೀರಿದ ಸ್ನೇಹವಾಗಿದ್ದು ಯಶ್ ಅವರು ನಟಿಸಿರುವ ಹಲವಾರು ಸಿನಿಮಾಗಳಲ್ಲಿ ಅಶೋಕ್ ಶರ್ಮ ಅವರು ಪಾತ್ರ ಮಾಡಿದ್ದಾರೆ.
ಹುಲಿ ನಾಯಕ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್!
ನಟನೆಯ ಹೊರತಾಗಿ ಅಶೋಕ್ ಶರ್ಮ ಅವರು ಗಾಯಕ ಕೂಡ ಹೌದು. ಆರಂಭದ ದಿನಗಳಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ಇವರ ಕಲೆಯನ್ನು ನೋಡಿ ಬಹಳಷ್ಟು ಆರ್ಕೆಸ್ಟ್ರಾ ಇವರನ್ನು ಹಾಡು ಹೇಳಲು ಕಲಾವಿದನಾಗಿ ಕರೆಸಿಕೊಳ್ಳುತ್ತಿತ್ತು. ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಆರ್ಕೆಸ್ಟ್ರಾಗಳಲ್ಲಿ ಕಲಾವಿದನಾಗಿ ಹಾಡು ಹೇಳಲು ಶುರು ಮಾಡಿದರು. ಕ್ರಮೇಣ ಅವರಿಗೆ ಸಿನಿಮಾದಲ್ಲಿಯೂ ಹಾಡು ಹಾಡಲು ಅವಕಾಶ ಸಿಕ್ಕಿತ್ತು. ಈಗಾಗಲೇ ಅವರು ಹಲವಾರು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ಇತ್ತೀಚೆಗಂತೂ ಬಹಳ ವೈರಲ್ ಆಗಿ ಜನರನ್ನು ಮರಳು ಮಾಡಿದ ಹಾಡೆಂದರೆ ಜಿಂಗಿಚಕ ಜಿಂಗಿಚಕ ಹಾಡು.