ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಇನ್ನಿತ್ತರ ಧಾರಾವಾಹಿಗಳಿಗಿಂತ ಸಖತ್ ಡಿಫರೆಂಟ್ ಆಗಿದೆ. ರೌಡಿ ಲುಕ್‌ನಲ್ಲಿ ಹೀರೋಯಿನ್, ಅಮೂಲ್ ಬೇಬಿ ಲುಕ್‌ನಲ್ಲಿ ಹೀರೋ, ಇವರಿಬ್ಬರಿಗೆ ತಿಳಿಯದ ಹಾಗೆ ನಡೆಯುತ್ತಿರುವ ಅಕ್ಕನ ಮದುವೆ. ಇದೇ ಗ್ಯಾಪಲ್ಲಿ ಸತ್ಯಳಿಗೆ ಲವ್ ಆಗುತ್ತಾ? 

'ಸತ್ಯ' ಗೌತಮಿ ಮನೆಗೆ  ಹೊಸ ವರ್ಷಕ್ಕೆ ಹೊಸ ಅತಿಥಿ..ಯಾವ ಕಾರು? 

ಅಭಾರಿ ಶ್ರೀಮಂತ ಮಿಡಲ್ ಕ್ಲಾಸ್ ಹುಡುಗಿಯ ಬ್ಯೂಟಿಗೆ ಫಿದಾ ಆಗಿ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಆಕೆಯನ್ನು ನೋಡಲು ತನ್ನ ಬಳಿ ಇರುವ ಎಲ್ಲಾ ಐಷಾರಾಮಿ ಕಾರುಗಳನ್ನು ತರುವುದನ್ನು ಕಂಡು ಸತ್ಯ ಏನಾದರೂ ಕಿತಾಪತಿ ಮಾಡಿ ಗ್ಯಾರೇಜ್‌ಗೆ ಬರುವಂತೆ ಆಕೆಯ ಹುಡುಗ ಪ್ಲಾನ್ ಮಾಡುತ್ತಾರೆ. ಈ ಕೋಳಿ ಜಗಳದ ನಡುವೆ ಸತ್ಯಳಿಗೆ ತನ್ನ ಅಕ್ಕ ಮದುವೆಯಾಗುತ್ತಿರುವ ಹುಡುಗ ಇವನೇ ಎಂಬ ಸತ್ಯ ತಿಳಿದಿಲ್ಲ. 

ಯಾವುದೇ ತೊಂದರೆ ಇಲ್ಲದೆ ತನ್ನ ಹುಡುಗಿಯನ್ನು ಈ ಏರಿಯಾದಲ್ಲಿ ನೋಡಿಕೊಂಡು ಹೋಗಬಹುದು ಎಂಬ ಕಾರಣಕ್ಕೆ ಅಮೂಲ್ ಬೇಬಿ ಸತ್ಯಳ ಜೊತೆ ಫ್ರೆಂಡ್‌ಶಿಪ್ ಮಾಡಿಕೊಳ್ಳುತ್ತಾನೆ. ಇಷ್ಟು ವರ್ಷಗಳ ಕಾಲ ಸತ್ಯ ಕಾಪಾಡಿಕೊಂಡು ಬಂದ ತಂದೆ ರೇಶ್ಮೆ ಶರ್ಟ್‌ ಹಾಗೂ ಪಂಚೆಯನ್ನು ಅಮೂಲ್‌ ಬೇಬಿಗೆ ಕೊಟ್ಟ ಕಾರಣ ಸತ್ಯಳಿಗೆ ರಿಟರ್ನ್‌ ಗಿಫ್ಟ್‌ ನೀಡಿದ್ದಾರೆ. ಅದುವೇ ಪಿಂಕ್ ಸೀರೆ.

ಸೀರಿಯಲ್ ಸತ್ಯಾಳ ರಿಯಲ್ ಗಂಡ ಯಾರು ಗೊತ್ತಾ! 

ಅರೇ ರೌಡಿ ಹುಡುಗಿ ಸತ್ಯ: 

ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸತ್ಯ ಸೀರೆ ಧರಿಸಿ ಬರುವುದನ್ನ ನೋಡಿ ಅಮೂಲ್ ಬೇಬಿ ಕಾರ್ತಿಕ್‌ ಫುಲ್ ಫಿದಾ ಆಗುತ್ತಾನೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ ಇವರಿಬ್ಬರೇ ಮದುವೆಯಾಗುವುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.