ರಚಿತಾ ರಾಮ್ ಸಿನಿಮಾದಲ್ಲಿ ರಾಗಿಣಿ ದ್ವಿವೇದಿಯ 20 ನಿಮಿಷದ ಸೀನ್ ಡಿಲೀಟ್ ?; ತುಪ್ಪದ ಬೆಡಗಿ ಗರಂ
ಚಿತ್ರದಲ್ಲಿರುವ ಮುಖ್ಯವಾದ ಸೀನ್ ಡಿಲೀಟ್ ಮಾಡಿರುವುದಕ್ಕೆ ನಟಿ ರಾಗಿಣಿ ದ್ವಿವೇದಿ ಗರಂ. ಡಿಲೀಟ್ ಮಾಡುವುದು ಯಾಕೆ ಮತ್ತೆ ಸೇರಿಸುವುದು ಯಾಕೆ?

ಫೆಬ್ರವರಿ 7ರಂದು ಗಜರಾಮ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದಲ್ಲಿರುವ 'ಸಾರಾಯಿ ಶಾಂತಮ್ಮ' ಹಾಡಿನಲ್ಲಿ ನಟಿ ರಾಗಿಣಿ ದ್ವಿವೇದಿ ಸಖತ್ ಆಗಿ ಮಿಂಚಿದ್ದಾರೆ. ಹಾಡಿನಲ್ಲಿ ಇದ್ದರೂ ಕೂಡ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ, ಇದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಈ ಪ್ರಚಾರದ ನಡುವೆ ತಮ್ಮ ಸಂಜು ವೆಡ್ಸ್ ಗೀತಾ 2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಯಾಕೆ ಸಿನಿಮಾ ಶೂಟಿಂಗ್ ಮಾಡಿ ಸೀನ್ ಡಿಲೀಟ್ ಮಾಡಿದ್ದು? ಅನ್ನೋ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ ರೀ-ರಿಲೀಸ್ ಸಮಯದಲ್ಲಿ ಆ ಸೀನ್ ಹಾಕಬೇಕು ಅಂತಿದ್ದಾರೆ.
'ನಾನು ಕಮ್ ಬ್ಯಾಕ್ ಮಾಡಿದಾಗ ಅಫೀಶಿಯಲ್ ಆಗಿ ಫುಲ್ ಫ್ಲೆಡ್ಜ್‌ನಲ್ಲಿ ಆಗಿದ್ದು ಸಂಜು ವೆಡ್ಸ್ ಗೀತಾ 2 ಸಿನಿಮಾ. ಆದರೆ ಯಾವುದೋ ಕಾರಣದಿಂದ ಕೆಲವೊಂದು ಭಾಗಗಳು ಮಿಸ್ ಆಗಿತ್ತು. ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೆಗೆಟಿವ್ ಪಾತ್ರ. ಅದು ನನ್ನ ದೊಡ್ಡ ರಿಲೀಸ್ ಆಗಬೇಕಿತ್ತು ಆದರೆ ಸೀನ್‌ಗಳನ್ನು ಡಿಲೀಟ್ ಮಾಡಿರುವುದಕ್ಕೆ ಸರಿಯಾಗಿ ಕಾರಣ ಗೊತ್ತಿಲ್ಲ. ಗಜರಾಮ ಸಿನಿಮಾದಲ್ಲಿ ಕೇವಲ ಹಾಡಿನಲ್ಲಿ ಕಾಣಿಸಿಕೊಂಡಿದ್ದೀನಿ. ಶೀಘ್ರದಲ್ಲಿ ಒಂದೆರಡು ಕನ್ನಡ ಸಿನಿಮಾಗಳು ಬರಲಿದೆ. ಕನ್ನಡ ಸಿನಿಮಾಗಳ ಜೊತೆ ಎರಡು ತೆಲುಗು, ಒಂದು ತಮಿಳು ಮತ್ತು ಒಂದು ಹಿಂದಿ ಸಿನಿಮಾ ಮಾಡುತ್ತಿದ್ದೀನಿ. ಕನ್ನಡ ಸಿನಿಮಾದಲ್ಲಿ ಇರಬೇಕು ಅನ್ನೋ ಉದ್ದೇಶದಲ್ಲಿ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಟಿಸಿದ್ದು. ಆದರೆ ಯಾವ ಕೈವಾಡ ಏನ್ ಅಯ್ತು ಯಾವ ಉದ್ದೇಶಕ್ಕೆ ಡಿಲೀಟ್ ಆಯ್ತು ಅನ್ನೋದು ಗೊತ್ತಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಾಗಿಣಿ ದ್ವಿವೇದಿ ಮಾತನಾಡಿದ್ದಾರೆ.
ಒಂದು ಗಂಡು ಮಗು ಬೇಕು ಕಣೋ ನಮ್ಮ ಲೆಗೆಸಿ ಮುಂದುವರೆಸಲು; ರಾಮ್ ಚರಣ್‌ಗೆ ಡಿಮ್ಯಾಂಡ್ ಮಾಡಿದ ಚಿರಂಜೀವಿ
'ದೊಡ್ಡ ಆರ್ಟಿಸ್ಟ್ ಆಗಿ ಒಂದು ಸಿನಿಮಾದಲ್ಲಿ ಪ್ರೀತಿ ವಿಶ್ವಾಸಕ್ಕೆ ಮಾಡುತ್ತೀನಿ ಆದರೆ ಅದನ್ನು ಅವರು ಉಳಿಸಿಕೊಂಡಿಲ್ಲ ಅಂದ್ರೆ ಬೇಸರ ಆಗುತ್ತದೆ. ನಾನು ನಟಿಸಿರುವ ಬಹುತೇಕ ಸೀನ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಈಗ ಮತ್ತೆ ಸಿನಿಮಾವನ್ನು ರೀ-ರಿಲೀಸ್ ಮಾಡುತ್ತಿದ್ದಾರೆ ಅಂತ ಕೇಳಿಪಟ್ಟೆ...ಈಗ ಆ 20 ನಿಮಿಷವನ್ನು ಸೇರಿಸುತ್ತಿದ್ದೀರಿ ಆದರೆ ಆಗ ಯಾಕೆ ತೆಗೆದಿದ್ದು? ಏಕೆಂದರೆ ನನ್ನ ಪಾತ್ರಕ್ಕೆ ಈ ವರ್ಷ ತುಂಬಾನೇ ಹೈಪ್ ಇತ್ತು ದೊಡ್ಡ ಮಟ್ಟದಲ್ಲಿ ಅನೌನ್ಸ್‌ಮೆಂಟ್ ಆಗಿದೆ. ನಾನು ಇಲ್ಲಿ ಇಲ್ಲದೇ ಇರುವ ಸಮಯದಲ್ಲಿ ಸಿನಿಮಾ ರಿಲೀಸ್ ಮತ್ತು ಪ್ರಮೋಷನ್ ನಡೆದಿದೆ. ಇದೆಲ್ಲಾ ಕರ್ಮ...ಕೆಟ್ಟ ಪ್ರಪಂಚದಲ್ಲಿ ನಾವು ಒಳ್ಳೆಯವರಾಗಿದ್ದೀವಿ ಅಷ್ಟೇ. ಯಾಕೆ 20 ನಿಮಿಷ ಸೀಟ್ ಡಿಲೀಟ್ ಮಾಡಿದ್ದು ಎಂದು ನಾನು ಪ್ರಶ್ನೆ ಮಾಡಿಲ್ಲ ಏಕೆಂದರೆ ಸಿನಿಮಾದಲ್ಲಿ ನಟಿಸಿರುವ ಕಲಾವಿದರಿಗೆ ನೀವು ಬೆಲೆ ಕೊಡಲು ಆಗಿಲ್ಲ. ಮೋಹನ್‌ಲಾಲ್ ಸರ್ ಜೊತೆ ದೊಡ್ಡ ಸಿನಿಮಾ ಮಾಡುತ್ತಿದ್ದೀನಿ ನಾನು ತುಂಬಾ ಬ್ಯುಸಿಯಾಗಿದ್ದೀನಿ. ನನಗೆ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನಾನು ದೊಡ್ಡವರು ಎಂದು ಮಾತನಾಡುವುದಕ್ಕಿಂತ ಕೆಲಸ ಮಾಡಿ ತೋರಿಸುವುದ ಬೆಸ್ಟ್ ಅನಿಸುತ್ತದೆ' ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಇದ್ದಕ್ಕಿದ್ದಂತೆ 'ಸೀತಾರಾಮ' ಧಾರಾವಾಹಿಯಿಂದ ಹೊರ ನಡೆಯಲು ಕಾರಣ ಬಿಚ್ಚಿಟ್ಟ ಡಾಕ್ಟರ್ ಶ್ಯಾಮ್!