ಕಸ್ಟಮ್ ಡಿಸೈನ್ ಮಾಡಿಸಿದ್ದರೂ ಹಾಸಿಗೆ ಬಳಸಿಲ್ಲ ನಮ್ರತಾ ಗೌಡ. ರೂಮ್ ನೋಡಿ ಶಾಕ್ ಆದ ನೆಟ್ಟಿಗರು.... 

ಕನ್ನಡ ಕಿರುತೆರೆ ಜನಪ್ರಿಯ ನಟಿ ನಮ್ರತಾ ಗೌಡ ಕೆಲವು ದಿನಗಳ ಹಿಂದೆ ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು. ಶೂಟಿಂಗ್, ಅಡುಗೆ, ಪ್ರವಾಸ, ಬಟ್ಟೆ, ಬ್ಯೂಟಿ ಪ್ರತಿಯೊಂದರ ಬಗ್ಗೆ ವಿಡಿಯೋ ಮಾಡುತ್ತಾರೆ. ಈ ಸಲ ಡಿಫರೆಂಟ್ ಆಗಿರಲಿ ಎಂದು ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿರುವ ಮನೆ ಟೂರ್ ಮಾಡಿದ್ದಾರೆ. ಎರಡು ಭಾಗಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ನಟಿ, ಎರಡನೇ ಭಾಗದಲ್ಲಿ ತಮ್ಮ ಬೆಡ್‌ರೂಮ್ ತೋರಿಸಿದ್ದಾರೆ. ಮೆಚ್ಚುಗೆಗಿಂತ ನೆಟ್ಟಿಗರ ಟೀಕೆ ಹೆಚ್ಚಾಗಿದೆ. 

ಹೌದು! ಅಪಾರ್ಟ್‌ಮೆಂಟ್‌ನಲ್ಲಿ ನಮತ್ರಾ ಗೌಡ ಸಿಂಗಲ್‌ ಬೆಡ್‌ರೂಮ್‌ ಇರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಒಂದು ಹಾಲ್, ಒಂದು ಅಡುಗೆ ಮನೆ, ಒಂದು ದೇವರ ಮನೆ, ಒಂದು ಬೆಡ್‌ರೂಮ್, ಒಂದು ಬಾತ್‌ರೂಮ್‌ ಹಾಗೂ ಒಂದು ಯುಟಿಲಿಟಿ ರೂಮ್‌ ಇರುವ ಜಾಗವಿದು. ಇಲ್ಲಿ ನಮ್ರತಾ ವಾಸವಿಲ್ಲ ಆದರೆ ಸಿನಿಮಾ ಮತ್ತು ಧಾರಾವಾಹಿ ಕಥೆ ಹೇಳುವುದು, ಯುಟ್ಯೂಬ್ ಚಿತ್ರೀಕರಣ ಮಾಡುವುದು ಎಲ್ಲಾ ಇಲ್ಲೇ ನಡೆಸುವುದು. ಇಡೀ ಮನೆ ಹೈಲೈಟ್‌ ಬಂದು ದೇವರ ಕೋಣೆ, ಸಿಂಪಲ್ ಆಂಡ್ ಪಾಸಿಟಿವ್ ಆಗಿದೆ. 

ನಂಬರ್ ದೇವರಾಣೆ ಕೊಡಲ್ಲ; ಮದುವೆ ಆಗುವ ಹುಡುಗನ ಬಗ್ಗೆ ಸುಳಿವು ಕೊಟ್ಟ ಕಿರುತೆರೆ ನಟಿ ನಮ್ರತಾ ಗೌಡ

ಇನ್ನು ನಮ್ರತಾ ಬೆಡ್‌ರೂಮ್‌ ಕೂಡ ತುಂಬಾ ಕ್ಲೀನ್ ಆಗಿದೆ. ಡಬಲ್ ಬೆಸ್ ಹಾಸಿಗೆ ಹಾಕಿ ಅದರ ಮೇಲೆ ಸ್ಟಾರ್ ಫಿಶ್ ಬೊಂಬೆ ಇಟ್ಟಿದ್ದಾರೆ. ಈ ಹಾಸಿಗೆ ಮತ್ತು ಬೆಡ್‌ನ ಕಸ್ಟಮ್‌ ಡಿಸೈನ್ ಮಾಡಿಸಿರುವುದು ಆದರೆ ಒಂದು ದಿನವೂ ಬಳಸಿಕೊಲ್ಲ ಎಂದು ಹೇಳಿದ್ದಾರೆ. ತಮ್ಮ ಮೇಕಪ್‌ಗಳನ್ನು ಇಡಲು ಜಾಗಬೇಕು ಎಂದು ಅದಕ್ಕೂ ಒಂದು ಬಾಕ್ಸ್‌ ಮಾಡಿಸಿದ್ದಾರೆ. ಇಡೀ ಮನೆಗೆ ಇರುವ ಒಂದು ಕಬೋರ್ಡ್‌ನಲ್ಲಿ ನಮ್ರತಾ ಗೌಡ ದುಬಾರಿ ಮತ್ತು ಡಿಸೈನ್ ಮಾಡಿರುವ ಬಟ್ಟೆಗಳನ್ನು ಇಟ್ಟಿದ್ದಾರೆ. ಅಭಿಮಾನಿಗಳು ತಮ್ಮ ಬಳಿ ಇರುವ ಬಟ್ಟೆಗಳನ್ನು ತೋರಿಸಿ ಎಂದು ಒತ್ತಾಯ ಮಾಡುತ್ತಿರುವುದಕ್ಕೆ ಮತ್ತೊಂದು ವಿಡಿಯೋ ಮಾಡುವುದಾಗಿ ಹೇಳಿದ್ದಾರೆ. 

'ಸಾಮಾನ್ಯಾವಾಗಿ ಹೊಸ ಜಾಗದಲ್ಲಿ ಕೆಲವರಿಗೆ ನಿದ್ರೆ ಬರುವುದಿಲ್ಲ ಹಾಗೆ ನನಗೂ ಕೂಡ ನಿದ್ರೆ ಬರುವುದಿಲ್ಲ ನನಗೆ ನಂದೇ ಜಾಗ ಆಗಬೇಕು. ಇದು ನನ್ನ ಮನೆ ಆಗಿದ್ದರೂ ನಿದ್ರೆ ಬರುವುದಿಲ್ಲ. ಅಡುಗೆ ಮನೆ ತುಂಬಾ ಕ್ಲೀನ್ ಆಗಿರುವುದಕ್ಕೆ ಕಾರಣ ನಾನು ಅಡುಗೆ ಮಾಡಿಲ್ಲ ಅಡುಗೆ ಮನೆ ಬಳಸಿಲ್ಲ. ನನ್ನ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡಲು ಎರಡು ಸಲ ಬಳಸಿರುವೆ. ನನ್ನ ತಾಯಿ ಬಂದಾಗ ಗ್ಯಾಸ್‌ ಸ್ಟೋವ್ ಬಳಸಿದ್ದಾರೆ. ನನಗೆ ಕಾಫಿ ಟೀ ಕೂಡ ಮಾಡಲು ಬರುವುದಿಲ್ಲ' ಎಂದಿದ್ದಾರೆ ನಮ್ರತಾ.

ಕಳೆದ ವಿಡಿಯೋದಲ್ಲಿ ಕೊಟ್ಟ ಉತ್ತರಗಳು:

- ಈ ಕ್ಷಣ ಖುಷಿಯಾಗಿದ್ದೀರಾ?
ಹೌದು ನಾನು ಖುಷಿಯಾಗಿರುವೆ. ಇದೇ ಪ್ರಶ್ನೆ 2022ರಲ್ಲಿ ಕೇಳಿದರೆ ಅನುಮಾನದಲ್ಲಿ ಉತ್ತರ ಕೊಡಬೇಕಿತ್ತುಆದರೆ ಈ ವರ್ಷ ಖುಷಿಯಾಗಿರುವೆ.

ಕಾಶ್ಮೀರದಲ್ಲಿ ನಾಗಿಣಿ; 8 ದಿನಕ್ಕೆ 50 ಸಾವಿರ ಖರ್ಚು ಮಾಡಿದ ಕಿರುತೆರೆ ನಟಿ ನಮ್ರತಾ ಗೌಡ

- ಡ್ರೀಮ್ ಕಾರು ಅಥವಾ ಬೈಕ್?
ಇಷ್ಟು ವರ್ಷ ಹ್ಯಾರಿಯರ್‌ ಕಾರು ಡ್ರೀಮ್ ಕಾರು ಆಗಿತ್ತು ಜೀವನದಲ್ಲಿ ಚೆನ್ನಾಗಿ ಬೆಳೆದ ಮೇಲೆ ಡಿಫೆಂಡರ್ ಖರೀದಿಸಬೇಕು ಅಂತ ಆಸೆ ಇದೆ.

- ಅತಿ ಹೆಚ್ಚು ಭಯ ಪಡುವುದು
ಇದುವರೆಗೂ ನಾನು ಎಲ್ಲಿಯೂ ಹೇಳಿಕೊಂಡಿಲ್ಲ ಆದರೆ ನನಗೆ ಆಕ್ಸಿಡೆಂಟ್ ಮತ್ತು ಸ್ಪೀಡ್ ಆಗಿ ಹೋಗುವುದು ಅಂದ್ರೆ ನನಗೆ ತುಂಬಾನೇ ಭಯ ಆಗುತ್ತದೆ. ರಸ್ತೆಯಲ್ಲಿ ದೂರ ಪ್ರಯಾಣ ಮಾಡುವಾಗ ಅಥವಾ ನನ್ನ ಆಪ್ತರು ರಸ್ತೆಯಲ್ಲಿ ಪ್ರಯಾಣ ಮಾಡುತ್ತಾರೆ ಎಂದು ಗೊತ್ತಾಗುತ್ತಿದ್ದರಂತೆ ಒಂದು ರೀತಿ ಭಯ ಶುರುವಾಗುತ್ತೆ. ನನ್ನ ತಲೆಯಲ್ಲಿ ಇಮ್ಯಾಜಿನೇಷನ್ ಕ್ರಿಯೇಟ್ ಮಾಡಿಕೊಂಡು ಭಯ ಪಡುವೆ. ಎಷ್ಟೇ ಪಾಸಿಟಿವ್ ಆಗಿ ಯೋಚನೆ ಮಾಡಿದರೂ ಭಯ ಆಗುತ್ತೆ.

YouTube video player