ಜೀ ಕನ್ನಡ ಜನಪ್ರಿಯ ಧಾರಾವಾಹಿ ' ನಾಗಿಣಿ-2'ನಲ್ಲಿ ಅಭಿನಯಿಸುತ್ತಿರುವ ಮುನಿರಾಜು ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಮಿಂಚಿರುವ  ಮುನಿರಾಜು ಅವರಗೆ ಜೀ ಕುಟುಂಬ ಅವಾರ್ಡ್ ನಾಮಿನೇಷನ್ ಕಾರ್ಯಕ್ರಮದಲ್ಲಿ ಅವರ ಪುತ್ರನ ಜೊತೆಗಿರುವ ಬಾಂಧವ್ಯದ ಬಗ್ಗೆ ಕೇಳಿ ವೀಕ್ಷಕರೂ ಕಣ್ಣೀರಿಟ್ಟಿದ್ದಾರೆ.  ಆದರೆ ಇಷ್ಟು ವರ್ಷದ ಜರ್ನಿ ಹಿಂದಿರುವ ಅವರ ಕಷ್ಟಗಳು ಏನು ಗೊತ್ತಾ?

'ಮಹಾನಾಯಕ'ನಿಗೆ ಬೆದರಿಕೆ ಬಂದಾಗ 'ರಾಕ್'ನಂತೆ ಬೆಂಬಲಿಸಿದ ಸ್ಟಾರ್! 

ಬಿಎ ಪದವೀಧರ ಮುನಿರಾಜು ಕೆಲವು ವರ್ಷಗಳ ಕಾಲ ಕಾಲೇಜ್‌ವೊಂದರಲ್ಲಿ ಲ್ಯಾಬ್‌ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ. ನಾಟಕ, ಅಭಿನಯದ ಕಡೆ ಹೆಚ್ಚಿನ ಆಸಕ್ತಿ ಇರುವ ಕಾರಣ  ಕೆಲಸ ಬಿಟ್ಟು ಬಣ್ಣದ ಲೋಕವನ್ನೇ ಜೀವನಕ್ಕೆ ನೆಚ್ಚಿಕೊಂಡರು. 'ಮಾಂಗಲ್ಯ' ಧಾರಾವಾಹಿಯಲ್ಲಿ ನರಸಿಂಹನ ಪಾತ್ರ ಇವರ ವೃತ್ತಿ  ಜೀವನದ ಬಿಗ್ ಬ್ರೇಕಿಂಗ್ ಪಾಯಿಂಟ್ ಆಗಿತ್ತು.  

ಮಗನ ಮಾತು ಕೇಳಿ ಕಣ್ಣೀರಿಟ್ಟ ನಟ:
ಮುನಿರಾಜು ಅವರ ಪುತ್ರ ಜೀ ನಾಮಿನೇಷನ್ ಸ್ಪೆಷಲ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 'ಚಿಕ್ಕ ವಯಸ್ಸಿನಿಂದ ಅಪ್ಪ ನನ್ನನ್ನು ತುಂಬಾ ಪ್ರೀತಿಸಿದ್ದಾರೆ. ಒಂದು ದಿನವೂ ನನಗೆ ಹೊಡೆದಿಲ್ಲ, ಬೈದಿಲ್ಲ. ಫ್ಯಾಮಿಲಿಗೋಸ್ಕರ ತುಂಬಾ ಕಷ್ಟ ಪಡುತ್ತಾರೆ. ಯಾವಾಗ ನೋಡಿದರೂ ಕೆಲಸ, ಕೆಲಸ ಅಂತಾರೆ. ಮನೆಯಲ್ಲಿದ್ದರೂ ಕನ್ನಡಿ ಮುಂದೆ ನಿಂತು ಸ್ಕ್ರಿಪ್ಟ್ ಓದುತ್ತಿರುತ್ತಾರೆ. ನನಗೆ ಒಂದೇ ಆಸೆ ಎಂದರೆ ಅಪ್ಪನ ಜೊತೆ ಸಮಯ ಕಳೆಯಬೇಕು ಅಂತ. ಒಂದೊಂದು ಸಲ ಅವರ ಜೊತೆ ಸಿನಿಮಾಗೆ ಹೋಗಬೇಕು ಅನ್ಸುತ್ತೆ, ಶಾಪಿಂಗ್ ಹೋಗಬೇಕು ಅನ್ಸುತ್ತೆ, ಡಿನ್ನರ್‌ಗೆ ಹೋಗಬೇಕು ಅನ್ಸುತ್ತೆ,' ಎಂದು ಪುತ್ರ ಮಾತನಾಡಿದ್ದಾರೆ.

ಹುಂಡೈ ಕಾರು ಖರೀದಿಸಿದ 'ಪಾರು' ನಟಿ ಮೋಕ್ಷಿತಾ ಪೈ!

ವಿಡಿಯೋ ನೋಡುತ್ತಲೇ ಮುನಿರಾಜು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. 'ನನ್ನ ಕುಟುಂಬದವರಿಗೆ ಒಳ್ಳೆಯದಾಗಬೇಕು ಅಂತಲೇ ನಾನು ಮಾಡಿರುವುದು ಇವೆಲ್ಲ. ಇನ್ನು ಮುಂದೆ ಹಾಗೆ ಆಗದಂತೆ ನೋಡಿ ಕೊಳ್ಳುತ್ತೇನೆ. ನನಗೆ ನನ್ನ ಮಗನೇ ಎಲ್ಲ. ಯಾರೇ ತಂದೆ ತಾಯಿಯಾದರೂ  ಇಷ್ಟೆಲ್ಲಾ ಕಷ್ಟ ಪಡುವುದು ಅವರ ಮಕ್ಕಳಿಗಾಗಿ. ನಮ್ಮ ತಂದೆ-ತಾಯಿಯೂ ನಮಗೋಸ್ಕರ ಅವರು ಶ್ರಮಿಸಿದ್ದರು. ಸಾರಿ ಮಗನೇ ನಿನ್ನ ಜೊತೆ ಜಾಸ್ತಿ ಟೈಂ ಸ್ಪೆಂಡ್ ಮಾಡ್ತೀನಿ, ಪ್ರಾಮಿಸ್,' ಎಂದು ಮುನಿರಾಜು ವೇದಿಕೆ ಮೇಲೆಯೇ ಮಗನ ಮನಸ್ಸನ್ನ ಅರ್ಥ ಮಾಡಿಕೊಂಡು, ಭರವಸೆ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ 'ಅಂದರ್‌ ಬಹರ್' ಆಡಿ 'ರಾಜ ರಾಜೇಂದ್ರ'ನಾದ ನಟ ಶ್ರೀ ಹರಿ!

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದಂತೆ ಮುನಿರಾಜು ಅವರ ಬಗ್ಗೆ ವೀಕ್ಷಕರಲ್ಲಿ ಅಭಿಪ್ರಾಯ ಬದಲಾಗಿದೆ. ಬರೀ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಟ ಈಗ ಎಲ್ಲರ ಮುಂದೆ ಹೀರೋ ಆಗಿದ್ದಾರೆ. ನಾವು ಆನ್‌ ಸ್ಕ್ರೀನ್ ಮೇಲೆ ನೋಡುವುದು, ನಿಜವಲ್ಲ ಅವರು ಬೇರೇಯೇ ವ್ಯಕ್ತಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.