ಲಾಕ್‌ಡೌನ್‌ ಸಮಯದಲ್ಲಿ ಅನೇಕ ಹಿಂದಿ ಧಾರಾವಾಹಿಗಳು ಕನ್ನಡಕ್ಕೆ ಡಬ್‌ ಮಾಡಿ ಪ್ರಸಾರವಾಗಿದ್ದವು. ಅವುಗಳ ಪೈಕಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂಬೇಡ್ಕರ್ ಜೀವನ ಕಥೆ 'ಮಹಾನಾಯಕ' ವೀಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.  

ಸಾರ್ವಜನಿಕ ಸ್ಥಳದಲ್ಲಿ LED ಪರದೆಯಲ್ಲಿ ಮಹಾನಾಯಕ ವೀಕ್ಷಿಸಿದ ಬಿಜೆಪಿ ಮುಖಂಡ 

ಮಹಾನಾಯಕ ಧಾರಾವಾಹಿಯಲ್ಲಿ ಅಂಬೇಡ್ಕರ್ ವಿದ್ಯಾಭ್ಯಾಸ ಹಾಗೂ ಜೀವನದ ಹಕ್ಕು ಪಡೆಯಲು ಪಡುವ ಕಷ್ಟಗಳನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಆದರೆ ಇದರಲ್ಲಿ ಜಾತಿಗಳ ಬಗ್ಗೆ ತಪ್ಪಾಗಿ ಅರ್ಥೈಸಿಲಾಗಿದೆ, ಎಂದು ಕೆಲವು ಕಿಡಿಕೇಡಿಗಳು ಜೀ ಕನ್ನಡ ಬ್ಯುಸನೆಸ್ ಹೆಡ್‌ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ ಎಲ್ಲ ಅಡೆ ತಡೆಗಳನ್ನು ಎದರಿಸುತ್ತಲೇ ಈಗಲೂ ಧಾರಾವಾಹಿ ಪ್ರಸಾರವಾಗುತ್ತಿದೆ.

ಸ್ಟಾರ್ ನಟನ ಸಾಥ್:
ಮಹಾನಾಯಕ ಪ್ರಸಾರ ನಿಲ್ಲಿಸುವಂತೆ ರಾಘವೇಂದ್ರ ಅವರಿಗೆ ಒತ್ತಾಯ ಹಾಗೂ ಬೆದರಿಕೆ ಕರೆ ಬಂದಾಗ ಸಾಥ್ ಕೊಟ್ಟಿದ್ದು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್. ಇದರ ಬಗ್ಗೆ ವೀಕೆಂಡ್‌ನಲ್ಲಿ ಪ್ರಸಾರವಾಗಲಿರುವ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ರಾಘವೇಂದ್ರ ಅವರು ಮಾತನಾಡಿದ್ದಾರೆ. ಪ್ರೋಮೋ ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಿವೆ. 

 

'ಮಹಾನಾಯಕ ಧಾರಾವಾಹಿ ಪ್ರಸಾರ ಮಾಡಲು ಆರಂಭಿಸಿದ ಮೇಲೆ ನನಗೆ ಕೊಲೆ, ಬೆದರಿಕೆ ಕರೆಗಳು ಬರುತ್ತವೆ. ಆದರೆ ನನಗೆ ನಟರೊಬ್ಬರು ಕಾಲ್ ಮಾಡಿ ಏನಾಗಲ್ಲ ಚಿನ್ನ, ನೋಡೋಣ ಅಂತ ಹೇಳ್ತಾರೆ. ಅವರು ಬೇರೆ ಯಾರೂ ಅಲ್ಲ ಯಶ್,' ಎಂದು ಹೇಳಿದ್ದಾರೆ.

ಮಹಾನಾಯಕ ಧಾರಾವಾಹಿ ಸ್ಥಗಿತಕ್ಕೆ ಬೆದರಿಕೆ : ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

'ಅಂತ ಮಹಾನ್ ನಾಯಕನ ಬಗ್ಗೆ ಧಾರಾವಾಹಿ ಮಾಡಿ ಇಂಥ ಸಣ್ಣ ಪುಟ್ಟ ತೊಂದರೆಗಳು ಬಂದಾಗ ಹೆಸರು ಬಿಟ್ಟರೆ ಅವರ ಬದುಕಿಗೆ ಅರ್ಥಾನೇ ಇರೋಲ್ಲ. ಎಲ್ಲರೂ ಅನುಮಾನ ಪಡುತ್ತಿರುವಾಗ ಅವರ ಎದುರಿಗೆ ಎದ್ದು, ಗೆದ್ದು ಅವರಿಂದಾನೇ ಚಪ್ಪಾಳೆ ತೆಗೆದುಕೊಳ್ಳುವ  ಮಜಾ ಇದೆಯಲ್ಲ, ಅದರಿಂದ ಅವರು ಹೋಗಿ ಎಷ್ಟು ವರ್ಷ ಆದರೂ ಅವರನ್ನು ಸೆಲೆಬ್ರೇಟ್ ಮಾಡೋ ಹಾಗಿಟ್ಟಿದೆ,' ಎಂದು ಯಶ್ ಕೂಡ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.