ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿನ ಧಾರಾವಾಹಿ 'ಮಹಾನಾಯಕ' ಸೆಪ್ಟೆಂಬರ್ 20ರಂದು ಪ್ರಸಾರವಾಗದ ಕಾರಣ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹೀಗೆ ಮಾಡಲು ಕಾರಣವೇನೆಂದು ಪ್ರಶ್ನಸಿದ್ದಾರೆ.

ಮಹಾನಾಯಕ ಧಾರಾವಾಹಿ ಸ್ಥಗಿತಕ್ಕೆ ಬೆದರಿಕೆ : ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಈ ಹಿಂದೆ ಧಾರಾವಾಹಿ ಪ್ರಸಾರ ನಿಲ್ಲಿಸಬೇಕೆಂದು ಜೀ ಕನ್ನಡ ಬ್ಯುಸನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಅವರಿಗೆ ಕೆಲವರು ಜೀವ ಬೆದರಿಕೆ ಕರೆ ಮಾಡುತ್ತಿದ್ದರು. ಅದರಿಂದ ಹೀಗೆ ಆಗಿರಬಹುದಾ ಎಂದೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರ ನಿಜವಾದ ಕಾರಣವೇ ಬೇರೆ ಇದೆ...

ಪಾಪ್‌ಕಾರ್ನ್‌ ಅಡ್ಡಿ:
ದುನಿಯ ಸೂರಿ ನಿರ್ದೇಶನದ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಈ ಧಾರಾವಾಹಿ ಪ್ರಸಾರವಾಗುವ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಕಾರಣ ಧಾರಾವಾಹಿಯ ಭಾನುವಾರದ ಸಂಚಿಕೆ ಮುಂದಿನ ವಾರಕ್ಕೆ ಮುಂದೂಡಲಾಗಿದೆ, ಎನ್ನಲಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6ಕ್ಕೆ ಪ್ರಸಾರವಾಗುತ್ತಿದ್ದ ಧಾರಾವಾಹಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಜೀ ವಾಹಿನಿ ಭರವಸೆ ನೀಡಿದೆ. 

ಪತಿಯ ಜೊತೆ ಸೇರಿ ತಮ್ಮ ಮನೆಗೇ ಕನ್ನ ಹಾಕಿದ ಕಿರುತೆರೆ ನಟಿ! 

ಈ ಧಾರಾವಾಹಿ ನಿಲ್ಲಿಸುವಂತೆ ಕೆಲವರು ಜೀ ಬ್ಯುಸಿನೆಸ್ ಹೆಡ್‌ಗೆ ಕರೆ ಮಾಡಿ, ಬೆದರಿಕೆ ಹಾಕಿದ್ದರಂತೆ. ಆದರೆ, ಎಂಥದ್ದೇ ಪರಿಸ್ಥಿತಿ ಎದುರಾದರೂ ಧಾರಾವಾಹಿ ನಿಲ್ಲಿಸುವುದಿಲ್ಲವೆಂದ ರಾಘವೇಂದ್ರ ಅವರು ಭರವಸೆ ನೀಡಿದ್ದರು. 'ಇದು ಜಾತಿಗಳಿಗೂ ಮೀರಿದ ಪ್ರಾಜೆಕ್ಟ್‌. ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಬೇಕು. ಇದು ತುಂಬಾನೇ ಸೂಕ್ಷ್ಮ ವಿಚಾರ.  ಬೆದರಿಕೆ ಕರೆ ಮಾಡುವವರಿಗೆ ನನಗೆ ಉತ್ತರಿಸಿಲು ಮನಸ್ಸಿಲ್ಲ,' ಎಂದು ಸೋಷಿಯಲ್ ಮೀಡಿಯಾ ಮೂಲಕ ರಾಘವೇಂದ್ರ ಅವರು ಸ್ಪಷ್ಟನೆ ನೀಡಿದ್ದರು.

ಕರುನಾಡ ಸೇವಕರು ಸಂಘಟನೆಯ ರೂಪೇಶ್ ರಾಜಣ್ಣ ರಾಘವೇಂದ್ರ ಹುಣಸೂರು ಅವರಿಗೆ ಸಾಥ್ ನೀಡಿದ್ದರು. 'ಜೀ ಕನ್ನಡ ಮುಖ್ಯಸ್ಥರು ಮಾನ್ಯ ರಾಘವೇಂದ್ರ ಹುಣಸೂರು ಅವರ ಬಳಿ ಮಾತನಾಡಿ ಅವರಿಗೆ ಬೆಂಬಲ ನೀಡಿದ್ದೇವೆ. ಮಹಾನಾಯಕ ಧಾರಾವಾಹಿ ಯಾವುದೇ ಕಾರಣಕ್ಕೂ ನಿಲ್ಲೋದು ಬೇಡ. ಸುಂದರ ಸಮಾಜ ಬಯಸುವ ಸಮಸ್ತ ಕನ್ನಡಿಗರು, ಸದಾ ನಿಮ್ಮೊಂದಿಗೆ ಇದ್ದೇವೆ,' ಎಂದು ಜೀ ವಾಹಿನಿಯನ್ನು ಬೆಂಬಲಿಸಿದ್ದರು.