ಕಿರುತೆರೆಯ ಹೆಸರಾಂತ ಧಾರಾವಾಹಿ 'ದೇವಮಗಲ್' ನಟಿ ಸುಚಿತ್ರಾ ತನ್ನ ಪತಿ ಜೊತೆ ಮನೆ ದೋಚಲು ಮಾಸ್ಟರ್ ಪ್ಲ್ಯಾನ್ ಮಾಡಿ ತಮ್ಮ ಅತ್ತೆ-ಮಾವನ ಮನೆಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ದೂರು ದಾಖಲಾದ ನಂತ ಪೊಲೀಸರು ಸುಚಿತ್ರ ಪತಿಯನ್ನು ಸೆರೆ ಹಿಡಿದಿದ್ದಾರೆ. ಆದರೆ ನಟಿ ಮಾತ್ರ ಕೈಗೆ ಸಿಗುತ್ತಿಲ್ಲ ಎನ್ನಲಾಗಿದೆ.

ಕೆಬಿಸಿಯಲ್ಲಿ ಕೋಟಿ ಗೆದ್ದ ಶ್ರೀಸಾಮಾನ್ಯನ ಬಳಿ ಈ ಇರುವುದು ಎರಡೇ ಹಸು! 

ಸುಚಿತ್ರಾ ಹಾಗೂ ಪತಿ ಮಣಿಕಂದನ್ ದೇವಾಲಯದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಣಿಕಂದನ್ ಒಬ್ಬ ಸಣ್ಣ ರೈತನ ಮಗ. ಆದರೆ ಅವರ ಮನೆಯಲ್ಲಿ ಹಲವು ವರ್ಷಗಳಿಂದ ಕಷ್ಟ ಪಟ್ಟು ದುಡ್ಡಿದ ಹಣ ಹಾಗೂ ಚಿನ್ನಾಭರಣ ಇರುವುದನ್ನು ತಿಳಿದ ಸುಚಿತ್ರಾ ದರೋಡೆ ಮಾಡುವ ಯತ್ನವನ್ನು ತನ್ನ ಪತಿಯಿಂದಲೇ ಮಾಡಿಸಿದ್ದಾರೆ. 

ಒಂದು ವಾರದಿಂದ ಪತಿ ಜೊತೆ ಪ್ಲ್ಯಾನ್ ಮಾಡಿದ ಸುಚಿತ್ರಾ ಶೂಟಿಂಗ್‌ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದಾರೆ. ಪತಿ ಮನಿಕಂದನ್‌ ಮನೆಯಲ್ಲಿ ಹಣ- ಚಿನ್ನವನ್ನು ದರೋಡೆ ಮಾಡಿದ್ದಾರೆ. ವಿಚಾರ ತಿಳಿದ ಪೋಷಕರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಪತಿ  ಮನಿದಂಕನ್‌ನನ್ನು ಸೆರೆ ಹಿಡಿಸಿದ್ದಾರೆ. ವಿಚಾರ ತಿಳಿದು ಪತ್ನಿ ಸುಚಿತ್ರಾ ಪರಾರಿಯಾಗಿದ್ದಾರೆ. ಆದರೆ ಮಾಡಿದ ಪ್ಲ್ಯಾನ್ ಏನೆಂದು ಮನಿಕಂದನ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಹರ್ಷಿತಾ ವೆಂಕಟೇಶ್! 

ಬಿಗ್ ಟ್ವಿಸ್ಟ್‌:
ಕೊರೋನಾ ಲಾಕ್‌ಡೌನ್‌ನಿಂದ ಚಿತ್ರೀಕರಣವಿಲ್ಲದೆ ನಟಿ ಸುಚಿತ್ರಾ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಬೇರೆ ಕೆಲಸ ಮಾಡಬೇಕೆಂದರೂ ಹಣ ಬೇಕೆಂದು ಪತಿ ಜೊತೆ ದರೋಡೆ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಈ ಹಣದಿಂದ ಕಿರು ಚಿತ್ರ ನಿರ್ದೇಶಿಸಿ ಯುಟ್ಯೂಬ್‌ಗೆ ಅಪ್ಲೋಡ್ ಮಾಡುವ ಯೋಚನೆ ಇತ್ತು ಎಂದೂ ಮಣಿಕಂದನ್‌ ಪೊಲೀಸರಿಗೆ ಹೇಳಿದ್ದಾರೆ. ಇಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಪೊಲೀಸರ ತನಿಖೆ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ.